ಮಾಗಡಿ ರಸ್ತೆ ದಂಪತಿ ಹತ್ಯೆ ಪ್ರಕರಣ ಪಿಸ್ತೂಲ್ ಖರೀದಿಗೆ ನೆರವಾದ ಮತ್ತೊಬ್ಬ ಆರೋಪಿ ಬಂಧನ

ಬೆಂಗಳೂರು: ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಪಿಸ್ತೂಲ್‌ನಿಂದ ಗುಂಡಿಟ್ಟು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಲಮುರುಗನ್‌ಗೆ ಪಿಸ್ತೂಲ್ ಖರೀದಿಸಲು ನೆರವಾಗಿದ್ದ ಉತ್ತರ ಪ್ರದೇಶ ಮೂಲದ ಅಭಿಮನ್ಯು ಸಿಂಗ್‌ನನ್ನು ಮಾಗಡಿ ರಸ್ತೆ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಡಿಸೆಂಬರ್ 23ರಂದು ಸಂಜೆ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಮುರುಗನ್ ತನ್ನ ಪತ್ನಿ ಭುವನೇಶ್ವರಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದ. ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ಇದೀಗ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಮನ್ಯು ಸಿಂಗ್‌ಗೆ ಬಾಲಮುರುಗನ್ ಪರಿಚಯವಾಗಿತ್ತು. ಮೃತ ಭುವನೇಶ್ವರಿ ಕೆಲಸ ಮಾಡುತ್ತಿದ್ದ ಬ್ಯಾಂಕ್ ಸಮೀಪದ ಜಿಮ್‌ಗೆ ಅಭಿಮನ್ಯು ಸಿಂಗ್ ಹೋಗುತ್ತಿದ್ದ ಹಿನ್ನೆಲೆಯಲ್ಲಿ, ಭುವನೇಶ್ವರಿಯ ದಿನನಿತ್ಯದ ಚಲನವಲನಗಳ ಕುರಿತು ಆತ ಬಾಲಮುರುಗನ್‌ಗೆ ಮಾಹಿತಿ ನೀಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

 

ಇದಲ್ಲದೆ, ಬಾಲಮುರುಗನ್ ಮತ್ತು ಅಭಿಮನ್ಯು ಸಿಂಗ್ ಇಬ್ಬರೂ ಬಿಹಾರಕ್ಕೆ ತೆರಳಿ ಎರಡು ಪಿಸ್ತೂಲ್‌ಗಳನ್ನು ಖರೀದಿಸಿಕೊಂಡು ಬಂದಿದ್ದರು. ಅವುಗಳಲ್ಲಿ ಒಂದನ್ನು ತಮಿಳುನಾಡಿನ ಸೇಲಂ ಮೂಲದ ಮೌಳೇಶ್ ಎಂಬ ವ್ಯಕ್ತಿಗೆ ನೀಡಿ ಭುವನೇಶ್ವರಿ ಹತ್ಯೆಗೆ ಸುಪಾರಿ ನೀಡಲಾಗಿತ್ತು. ಅದರಂತೆ ಬೆಂಗಳೂರಿಗೆ ಬಂದಿದ್ದ ಮೌಳೇಶ್, ಕೆಲ ದಿನಗಳ ಕಾಲ ಭುವನೇಶ್ವರಿ ಕೆಲಸ ಮಾಡುವ ಸ್ಥಳ ಹಾಗೂ ಸಂಚರಿಸುವ ಮಾರ್ಗಗಳನ್ನು ಗಮನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಹತ್ಯೆ ನಡೆಸಬೇಕಾದ ದಿನ ಮೌಳೇಶ್ ಕೈಕೊಟ್ಟು ತಮಿಳುನಾಡಿಗೆ ಹಿಂದಿರುಗಿದ್ದರಿಂದ ಬೇಸತ್ತ ಬಾಲಮುರುಗನ್, ಬೇರೆಯವರಿಗೆ ಹಣ ನೀಡಿ ಕಾಯುವ ಬದಲು ತಾನೇ ಪಿಸ್ತೂಲ್ ಹಿಡಿದು ಪತ್ನಿಯನ್ನು ಕೊಲ್ಲುವ ನಿರ್ಧಾರ ತೆಗೆದುಕೊಂಡಿದ್ದ. ಅಂತೆಯೇ ಆತನೇ ಭುವನೇಶ್ವರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಘಟನೆ ಬಳಿಕ ಬಾಲಮುರುಗನ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ. ಸುಪಾರಿ ಪಡೆದಿದ್ದ ಹಾಗೂ ಕೃತ್ಯದ ಕುರಿತು ಮುಂಚಿತವಾಗಿಯೇ ತಿಳಿದಿದ್ದ ಹಿನ್ನೆಲೆಯಲ್ಲಿ ಮೌಳೇಶ್‌ನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಇತ್ತೀಚೆಗೆ ತಮಿಳುನಾಡಿನಲ್ಲಿ ಮತ್ತೊಂದು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆತನನ್ನು ಬಾಡಿ ವಾರೆಂಟ್ ಮೂಲಕ ಮಾಗಡಿ ರಸ್ತೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಪಿಸ್ತೂಲ್ ಮೂಲ, ಸಹಚರರ ಪಾತ್ರ ಸೇರಿದಂತೆ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

14 hours ago

   
Image 1
Image 1
ಕೋಲಾರ

ಶ್ರೀನಿವಾಸಪುರ

ಶ್ರೀನಿವಾಸಪುರದಲ್ಲಿ ಮಾನವೀಯತೆಯನ್ನೇ ಮರೆಸುವ ಪ್ರಕರಣ: ಹೆತ್ತ ಮಗುವನ್ನು ಮಾರಾಟ ಮಾಡಿದ್ದ ದಂಪತಿ-ಮಧ್ಯವರ್ತಿ ಬಂಧನ

ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಹೆತ್ತ ಮಗುವ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಬಿಹಾರದ ರಾಜಗೀರ್‌ನಲ್ಲಿ ತುಮಕೂರಿನ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ: ಧರ್ಮಶಾಲೆ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವಗಳು ಪತ್ತೆ

ನಾಲಂದಾ: ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಒಂದೇ ಕುಟುಂಬದ ನ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಬೆಂಗಳೂರು ನಗರ

ಕೆ ಆರ್ ಪುರುಂ: ಯುವತಿ ವಿಚಾರದಲ್ಲಿ ಚಾಕು ಚಾಕು ಇರಿದ ಕಾರಣ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಕೆ ಆರ್ ಪುರುಂ ಪ್ರದೇಶದಲ್ಲಿ ಯುವತಿ ಸಂಬಂಧದ ವಿಚಾರದಲ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಬೆಂಗಳೂರು ನಗರ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಭಯೋತ್ಪಾದಕ ಸಾವು ಅನಾರೋಗ್ಯದಿಂದ ಚಿಕಿತ್ಸೆಯಲ್ಲಿದ್ದ ಸಾಧಿಕ್ ಪಾಷಾ ಮೃತ

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಬೆಂಗಳೂರು ನಗರ

ಸೈಬರ್ ವಂಚನೆಗೆ ದೊಡ್ಡ ಹೊಡೆತ: 42 ಸಾವಿರ ಮ್ಯೂಲ್ ಬ್ಯಾಂಕ್ ಖಾತೆಗಳ ಜಾಲ ಪತ್ತೆ 13 ಮಂದಿ ಬಂಧನ, 29 ಜಿಲ್ಲೆಗಳಲ್ಲಿ ಸಿಐಡಿ ಸೈಬರ್ ಕಮಾಂಡ್ ದಾಳಿ

ಬೆಂಗಳೂರು: ಸಿಐಡಿ ಸೈಬರ್ ಕಮಾಂಡ್ ವಿಭಾಗವು ರಾಜ್ಯಾದ್ಯಂತ ನಡೆಸಿದ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ಗ್ರಾಮಾಂತರ

ಹೊಸಕೋಟೆ

ಹೊಸಕೋಟೆ–ಚಿಂತಾಮಣಿ ಹೆದ್ದಾರಿ ಅಪಘಾತ: ಮಾರುತಿ ಓಮ್‌ನಿ-ಬೈಕ್ ಡಿಕ್ಕಿ, 1 ಮೃತ, ಹಲವರಿಗೆ ಗಾಯ

ಬೆಂಗಳೂರು ಗ್ರಾಮಾಂತರ: ಹೊಸಕೋಟೆ – ಚಿಂತಾಮಣಿ ರಾಷ್ಟ್ರೀಯ ಹೆದ್ದಾ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಚಿತ್ರದುರ್ಗ

ಮಾರಕಾಸ್ತ್ರ ಹಿಡಿದು ಹುಟ್ಟುಹಬ್ಬ ಕೇಕ್ ಕತ್ತರಿಸಿದ ಅರೆಸ್ಟ್

ಚಿತ್ರದುರ್ಗ:  ಚಿತ್ರದುರ್ಗದ ಭೋವಿ ಕಾಲೋನಿಯಲ್ಲಿ ಮಾರಕಾಸ್ತ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಧಾರವಾಡ

ಹುಬ್ಬಳ್ಳಿ

ಸೈಬರ್ ವಂಚನೆ ಪ್ರಕರಣ: ಹುಬ್ಬಳ್ಳಿಯಲ್ಲಿ ಒಂದೇ ಖಾತೆಯಿಂದ ಕೋಟಿ ಕೋಟಿ ಹಣ ವರ್ಗಾವಣೆ

ಹುಬ್ಬಳ್ಳಿ : ಹುಬ್ಬಳ್ಳಿಯ ನಗರದಲ್ಲಿ ನಡೆದ ಭಾರೀ ಸೈಬರ್ ವಂಚನೆಯ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ರಾಜ್ಯದಲ್ಲಿ ಸೈಬರ್ ದಂಧೆ ಜಾಲ ಭೇದಿಸಿದ ಸಿಐಡಿ: ಮ್ಯೂಲ್ ಅಕೌಂಟ್ ಕೇಸ್‌ನಲ್ಲಿ 13 ವಂಚಕರು ಅರೆಸ್ಟ್

ಬೆಂಗಳೂರು: ಸಿಐಡಿ ಸೈಬರ್ ಕ್ರೈಂ ವಿಭಾಗವು ರಾಜ್ಯಾದ್ಯಂತ ಮೆಗಾ ಕಾ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ಗ್ರಾಮಾಂತರ

ಬೆಂಗಳೂರು ಏರ್‌ ಪೋರ್ಟ್ʼ​ನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೆಂಪೇಗ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1