ರಾತ್ರಿ ಹೊತ್ತು ಮೊಬೈಲ್ ಚಾರ್ಜ್ʼಗೆ ಹಾಕಿ ಮಲಗ್ತೀರಾ? ಹಾಗಾದ್ರೆ ಈ ಸ್ಟೋರಿ ಓದಲೇಬೇಕು!
ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇವುಗಳನ್ನು ಬಳಸಲು ನಾವು ಪ್ರತಿದಿನ ಚಾರ್ಜ್ ಮಾಡಬೇಕಾಗುತ್ತದೆ. ಹೀಗೆ ಫೋನ್ ಅನ್ನು ಚಾರ್ಜ್ ಮಾಡುವಾಗ ಕೆಲ ತಪ್ಪುಗಳನ್ನು ಮಾಡಿದರೆ ಅನೇಕ ತೊಂದರೆಗಳು ಉಂಟಾಗಬಹುದು. ಮೊಬೈಲ್ ಸ್ಫೋಟಗೊಳ್ಳುವ ಅಪಾಯವೂ ಇದೆ. ಗಂಭೀರವಾದ ಗಾಯ ಅಥವಾ ಸಾವುಕೂಡ ಸಂಭವಿಸಬಹುದು. ತಪ್ಪಾಗಿ ಚಾರ್ಜ್ ಮಾಡಿದರೆ ಸ್ಮಾರ್ಟ್‌ಫೋನ್ ಹಾನಿಗೊಳಗಾಗಬಹುದು. ಇದಲ್ಲದೆ, ಬ್ಯಾಟರಿಯ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ಕೆಲವು ತಪ್ಪುಗಳಿಂದಾಗಿ ಫೋನ್ ಬಿಸಿಯಾಗುವ ಸಮಸ್ಯೆಯೂ ಉದ್ಭವಿಸುತ್ತದೆ. ಹಾಗಾದರೆ ನಾವು ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ.
ಚಾರ್ಜರ್ ಸ್ವಿಚ್ ಆಫ್ ಮಾಡಿ
ಫೋನ್ ಚಾರ್ಜ್ ಆದಾಗ ಜನರು ಫೋನ್ ಅನ್ನು ಮಾತ್ರ ತೆಗೆಯುತ್ತಾರೆ. ಆದರೆ ಚಾರ್ಜರ್ ಅನ್ನು ಅನ್ನು ಅಲ್ಲೇ ಬಿಟ್ಟು ಪ್ಲಗ್ ಕೂಡ ಆಫ್ ಮಾಡುವುದಿಲ್ಲ. ಇದು ಚಾರ್ಜರ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸಬಹುದು. ಆದ್ದರಿಂದ, ಫೋನ್ ಅನ್ನು ಚಾರ್ಜ್ ಮಾಡಿದ ನಂತರ, ಸ್ವಿಚ್ ಆಫ್ ಮಾಡಿ. ಹಾಗೆಯೆ ಸ್ವಿಚ್ ಆನ್ ಮಾಡಿ ಚಾರ್ಜಿಂಗ್‌ನಲ್ಲಿ ಫೋನ್ ಬಿಡುವ ಅಭ್ಯಾಸ ಜನರಲ್ಲಿದೆ. ಫೋನ್ ಚಾರ್ಜ್ ಆದ ನಂತರವೂ ಚಾರ್ಜರ್ ಅನ್ನು ಕನೆಕ್ಟ್ ಮಾಡುವುದರಿಂದ ಬ್ಯಾಟರಿ ಬೇಗ ಹಾಳಾಗುವ ಅಪಾಯವಿದೆ.
ಸ್ಫೋಟ ಸಂಭವಿಸಬಹುದು
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಕಂಪನಿಗಳು ಮೊಬೈಲ್ಗಳೊಂದಿಗೆ ಚಾರ್ಜರ್‌ಗಳನ್ನು ಒದಗಿಸುವುದಿಲ್ಲ. ಜನರು ಪ್ರತ್ಯೇಕ ಚಾರ್ಜರ್ ಖರೀದಿಸಬೇಕು. ಈ ಚಾರ್ಜರ್‌ಗಳು ಸ್ವಲ್ಪ ದುಬಾರಿಯಾಗಿರುವುದರಿಂದ ಕೆಲವರು ಲೋಕಲ್ ಚಾರ್ಜರ್‌ಗಳನ್ನು ಖರೀದಿಸುತ್ತಾರೆ. ಆದರೆ ಹಾಗೆ ಮಾಡುವುದು ಅಪಾಯಕಾರಿ, ಏಕೆಂದರೆ, ಇದರಿಂದ ಫೋನ್ ಸ್ಫೋಟಗೊಳ್ಳುವ ಅಪಾಯವಿದೆ. ಆದ್ದರಿಂದ, ಯಾವಾಗಲೂ ಆ ಫೋನ್ಗೆ ನಿಗದಿ ಪಡಿಸಿದ ಚಾರ್ಜರ್ ಅನ್ನು ಮಾತ್ರ ಬಳಸಬೇಕು.
ಇತರೆ ಫೋನ್ ಚಾರ್ಜರ್
ಇತರೆ ಫೋನ್‌ನ ಚಾರ್ಜರ್‌ನೊಂದಿಗೆ ನಿಮ್ಮ ಫೋನ್ ಚಾರ್ಜ್ ಮಾಡುವಾಗ ತುಂಬಾ ನಿಧಾನವಾಗಿ ಚಾರ್ಜ್ ಆಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಏಕೆಂದರೆ ನೀವು ಬಳಸುತ್ತಿರುವ ಚಾರ್ಜರ್ ನಿಮ್ಮ ಫೋನ್ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಫೋನ್‌ನೊಂದಿಗೆ ಒದಗಿಸಲಾದ ಚಾರ್ಜರ್‌ನೊಂದಿಗೆ ಅದನ್ನು ಚಾರ್ಜ್ ಮಾಡಿ. ನಿಮ್ಮ ಫೋನ್ 20W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಭಾವಿಸೋಣ, ಆದರೆ, ನೀವು ಕನೆಕ್ಟ್ ಮಾಡಿರುವ ಚಾರ್ಜರ್ 120W ಅಥವಾ 65W ನದ್ದಾಗಿದ್ದರೆ ಫೋನ್ ಬಿಸಿಯಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ, ಜನರ ಜೇಬಿಗೆ ಕತ್ತರಿ…! ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರ ವಿರುದ್ದ ಬಿಜೆಪಿ ಆಕ್ರೋಶ
ಬೆಂಗಳೂರು: ರಾಜ್ಯ ಸರ್ಕಾರ ಪೆಟ್ರೋಲ್- ಡೀಸೆಲ್ ಬೆಲೆಯನ್ನು ಹೆಚ್ಚ... ಓದನ್ನು ಮುಂದುವರಿಸಿ
ಟ್ರಾಫಿಕ್ನಿಂದ ಬಳಲುತ್ತಿದ್ದವರಿಗೆ ಗುಡ್ ನ್ಯೂಸ್ … ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಸಿದ್ಧ..!
ಬೆಂಗಳೂರು: ಟ್ರಾಫಿಕ್ನಿಂದ ಬಳಲುತ್ತಿದ್ದವರಿಗೆ ಗುಡ್ ನ್ಯೂಸ್ ಸ... ಓದನ್ನು ಮುಂದುವರಿಸಿ
ಕಳೆದ ಹತ್ತು ದಿನದಲ್ಲಿ ಒಂದಷ್ಟು ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ತುಸು ಏರಿಕೆ
ಬೆಂಗಳೂರು : ಕಳೆದ ಹತ್ತು ದಿನದಲ್ಲಿ ಒಂದಷ್ಟು ಇಳಿಕೆಯಾಗಿದ್ದ &nb... ಓದನ್ನು ಮುಂದುವರಿಸಿ
ವೀಕೆಂಡ್ʼನಲ್ಲಿ ಚಿನ್ನ-ಬೆಳ್ಳಿ ಬೆಲೆ ಇಳಿಕೆ! ಇಂದು ಎಷ್ಟಿದೆ ನೋಡೋಣ
ಚಿನ್ನದ ಬೆಲೆಯೂ ಕಡಿಮೆ ಆಗುವ ಸಾಧ್ಯತೆ ಇದೆ. ವಿದೇಶಗಳ ಕೆಲವೆಡೆ ಚಿನ್ನದ ಬೆಲೆ ಅಲ್ಪ ಇ... ಓದನ್ನು ಮುಂದುವರಿಸಿ
ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ
ಬೆಂಗಳೂರು: ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ... ಓದನ್ನು ಮುಂದುವರಿಸಿ
ಏಲಿಯನ್‌ಗಳು ನಮ್ಮ ನಡುವೆ ಮನುಷ್ಯರಂತೆಯೇ ಜೀವಿಸುತ್ತಿರಬಹುದು!
ಏಲಿಯನ್‌ಗಳು ಎಂದು ಕರೆಯಿಸಿಕೊಳ್ಳುವ ಈ ಅನ್ಯಗ್ರಹ ಜೀವಿಗಳು ಇರುವುದು ಹೌದೋ ಅಲ್ಲವೋ ಎಂ... ಓದನ್ನು ಮುಂದುವರಿಸಿ
ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ.. ಈ ದಿನದಂದು ರೈಲಿನ ಸಮಯ ಬದಲಾವಣೆ!
ಬೆಂಗಳೂರು: ಮೆಟ್ರೋ ಪ್ರಯಾಣಿಕರು ಗಮನಿಸಬೇಕಾದ ಸುದ್ದಿ. ಭಾನುವಾರ... ಓದನ್ನು ಮುಂದುವರಿಸಿ
ಚಿನ್ನ, ಬೆಳ್ಳಿ ಎರಡೂ ಬೆಲೆಯಲ್ಲಿ ಹೆಚ್ಚಳ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!
ಇಂದು ಚಿನ್ನ, ಬೆಳ್ಳಿ ಎರಡೂ ಬೆಲೆ ಹೆಚ್ಚಳವಾಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ... ಓದನ್ನು ಮುಂದುವರಿಸಿ
ನೀರು ಕುಡಿದ ಬಳಿಕ ಬಾಟಲ್ ನ ಕಾರಲ್ಲೇ ಬಿಡ್ತೀರಾ? ಹುಷಾರ್…
ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ಒಂದು ಕಡೆ ಮಳೆ ಸುರಿಯುತ್ತಿದ್ದರು ಮತ್ತೊಂ... ಓದನ್ನು ಮುಂದುವರಿಸಿ
HSRP ನಂಬರ್ ಪ್ಲೇಟ್ ಅಳವಡಿಸೋ ವಾಹನ ಸವಾರರಿಗೆ ಹೈಕೋರ್ಟ್ʼನಿಂದ ಸಿಹಿ ಸುದ್ದಿ!
ಬೆಂಗಳೂರು: ಏಪ್ರಿಲ್.1, 2019ಕ್ಕಿಂತ ಮೊದಲು ನೋಂದಾಯಿಸಿಕೊಂಡ ವಾಹ... ಓದನ್ನು ಮುಂದುವರಿಸಿ