ಪೋಷಕರಿಗೆ ಗುಡ್ ನ್ಯೂಸ್: ಒಂದನೇ ತರಗತಿಯ ದಾಖಲೆಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ
ಬೆಂಗಳೂರು: ರಾಜ್ಯ ಸರ್ಕಾರವು 2026-27ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ದಾಖಲಾತಿಗಾಗಿ ವಿಧಿಸಿರುವ “ಆರು ವರ್ಷ ವಯಸ್ಸು ಕಡ್ಡಾಯ” ನಿಯಮದಲ್ಲಿ 60 ದಿನಗಳ ವಿನಾಯಿತಿ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಧಾನಸಭೆಯಲ್ಲಿ ಘೋಷಣೆ ಮಾಡಿದಂತೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದಂತೆ, ಈ ವರ್ಷ 5 ವರ್ಷ 10 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳು ಒಂದನೇ ತರಗತಿಗೆ ದಾಖಲಾತಿ ಮಾಡಿಸಬಹುದು. ಈ ಸಡಿಲಿಕೆ ಎಲ್‌ಕೆಜಿ, ಯುಕೆಜಿ ಮತ್ತು ಒಂದನೇ ತರಗತಿಗೆ ಅನ್ವಯಿಸುತ್ತದೆ.
ಪೋಷಕರು ಈ ವಯೋಮಿತೆಯ ಸಡಿಲಿಕೆಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಸಿಎಂ, ಡಿಸಿಎಂ ಹಾಗೂ ಶಿಕ್ಷಣ ಸಚಿವರ ನಿವಾಸಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದರಿಂದ, ಸರ್ಕಾರದ ಈ ನಿರ್ಧಾರವು ಪೋಷಕರಿಗೆ ನಿರಾಳತೆ ನೀಡಿದೆ. ಪ್ರತಿ ವರ್ಷ ಈ ಸಮಸ್ಯೆ ಮರುಕಳಿಸುತ್ತಿರುವುದರಿಂದ, ಶಾಶ್ವತ ಪರಿಹಾರಕ್ಕಾಗಿ ಸರ್ಕಾರವು ಹೊಸ ಕಾನೂನು ರೂಪಿಸುವುದಾಗಿ ಘೋಷಿಸಿದೆ. ಇದುವರೆಗೆ ಎಲ್‌ಕೆಜಿ ಮತ್ತು ಯುಕೆಜಿ ದಾಖಲಾತಿಗೆ ಸ್ಪಷ್ಟ ನಿಯಮಗಳಿರಲಿಲ್ಲ. ಮುಂದಿನ ದಿನಗಳಲ್ಲಿ, ಈ ಹಂತದಲ್ಲೇ ವಯೋಮಿತಿಯನ್ನು ನಿಗಧಿಪಡಿಸುವ ಮೂಲಕ ಸ್ಪಷ್ಟತೆ ತರಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧದ ಮಸೂದೆಯನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಗಳೂರು
2nd PUC ಟಾಪರ್ ದಿಶಾ : 600ಕ್ಕೆ 600 ಅಂಕ: ದಕ್ಷಿಣ ಕನ್ನಡದ ದಿಶಾ ರಾಜ್ಯ ಟಾಪರ್
ಮಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ... ಓದನ್ನು ಮುಂದುವರಿಸಿ
ಕರ್ನಾಟಕ 2nd PUC ಫಲಿತಾಂಶ ಪ್ರಕಟ: 7 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ
ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ (2nd PUC) ಪರೀಕ್ಷೆಯ ಫಲಿ... ಓದನ್ನು ಮುಂದುವರಿಸಿ
ಪಿಯುಸಿ ಫಲಿತಾಂಶ ವಿಳಂಬ – ವಿದ್ಯಾರ್ಥಿಗಳಿಗೆ ನಿರಾಸೆ, ಏಪ್ರಿಲ್ 9ಕ್ಕೆ ಸಾಧ್ಯತೆ
ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ... ಓದನ್ನು ಮುಂದುವರಿಸಿ
ಇಂದು ದ್ವಿತೀಯ ಪಿಯುಸಿ ಫಲಿತಾಂಶ? ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಕುತೂಹಲ
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್... ಓದನ್ನು ಮುಂದುವರಿಸಿ
2ನೇ ಪಿಯುಸಿ ಫಲಿತಾಂಶ ಮುಂದೂಡಿಕೆ – ನಾಳೆ ಪ್ರಕಟವಾಗುವುದಿಲ್ಲ!
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದ ದ್ವ... ಓದನ್ನು ಮುಂದುವರಿಸಿ
ಹೊಸ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ನಿಯಮ: ಸ್ವಂತ ಜಾಗ ಅಥವಾ 15 ವರ್ಷ ಲೀಸ್ ಕಡ್ಡಾಯ
ಬೆಂಗಳೂರು: ರಾಜ್ಯದಲ್ಲಿ ಹೊಸ ಖಾಸಗಿ ಶಾಲೆಗಳ ಆರಂಭ, ಮಾನ್ಯತೆ ಮತ್... ಓದನ್ನು ಮುಂದುವರಿಸಿ
ಎಸ್ಎಸ್ಎಲ್ಸಿ ಅಂಕಪದ್ದತಿಯಲ್ಲಿ ದೊಡ್ಡ ಬದಲಾವಣೆ: ಈ ವರ್ಷದಿಂದ SSLC ಪರೀಕ್ಷೆ ಅಂಕ 625 ಅಲ್ಲ 525 ಮಾತ್ರ! ಹಿಂದಿ ಅಂಕಕ್ಕೆ ಕೋಕ್
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕ... ಓದನ್ನು ಮುಂದುವರಿಸಿ
ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆ ಮುಂದೂಡಿಕೆ – ಮಾರ್ಚ್ 31ಕ್ಕೆ ಮರುನಿಗದಿ
ಬೆಂಗಳೂರು: ಮಾರ್ಚ್ 30ರಂದು ನಡೆಯಬೇಕಿದ್ದ ಎಸ್ಎಸ್ಎಲ್ಸಿ ತೃತೀಯ ಭ... ಓದನ್ನು ಮುಂದುವರಿಸಿ
ಪೌಷ್ಟಿಕ ಆಹಾರ ಯೋಜನೆ : ಇನ್ಮುಂದೆ ಶಾಲೆಗಳಲ್ಲಿ ಮೊಟ್ಟೆ ಬೇಯಿಸುವ ಕಾರ್ಯ ಶಿಕ್ಷಕರ ಹೊಣೆ!
ಬೆಂಗಳೂರು, ಮಾರ್ಚ್ 25: ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಶಾಲೆ... ಓದನ್ನು ಮುಂದುವರಿಸಿ
ಮುಂಡರಗಿ
ಕೂಲಿ ಕೆಲಸಕ್ಕೆ ಹೋದ ವಿದ್ಯಾರ್ಥಿನಿ ಮತ್ತೆ ಪರೀಕ್ಷಾ ಹಾಲ್‌ಗೆ - ಬಡತಿ ಮೀರಿ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಅವಕಾಶ ಪಡೆದು ಯಶಸ್ವಿ”
ಗದಗ: ಬಡತನದ ಹೊಡೆತಕ್ಕೆ ಸಿಲುಕಿ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿ... ಓದನ್ನು ಮುಂದುವರಿಸಿ