ಈ ವರ್ಷ ಪಿಯುಸಿ ಫಲಿತಾಂಶದಲ್ಲಿ ಭಾರೀ ಏರಿಕೆ – ಶಿಕ್ಷಣ ಸಚಿವರ ಸಂತಸ

ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಪ್ರಕಟಗೊಂಡಿದ್ದು, ನಂತರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದರು. ಈ ಬಾರಿ ದಾಖಲೆ ಮಟ್ಟದ ಫಲಿತಾಂಶ ಬಂದಿದೆ. ಒಟ್ಟು 7,10,363 ವಿದ್ಯಾರ್ಥಿಗಳಲ್ಲಿ ಸುಮಾರು 6.10 ಲಕ್ಷ ಮಂದಿ ಉತ್ತೀರ್ಣರಾಗಿದ್ದು, ಶೇ.86.48 ಫಲಿತಾಂಶ ದಾಖಲಾಗಿದೆ. ಹಿಂದಿನ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ, ಈ ಬಾರಿ ಗಣನೀಯ ಏರಿಕೆ ಕಂಡುಬಂದಿದೆ. ಈ ವರ್ಷವೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇ.88.07 ವಿದ್ಯಾರ್ಥಿನಿಯರು ಪಾಸಾದರೆ, ವಿದ್ಯಾರ್ಥಿಗಳಲ್ಲಿ ಶೇ.83.65 ಪಾಸ್ ಆಗಿದ್ದಾರೆ.

 

ವಿಭಾಗವಾರು ಫಲಿತಾಂಶದಲ್ಲಿ ವಿಜ್ಞಾನ ವಿಭಾಗ ಶೇ.91.69ರೊಂದಿಗೆ ಮೊದಲ ಸ್ಥಾನದಲ್ಲಿದ್ದು, ವಾಣಿಜ್ಯ ವಿಭಾಗ ಶೇ.88.04 ಮತ್ತು ಕಲಾ ವಿಭಾಗ ಶೇ.72.86 ಫಲಿತಾಂಶ ಪಡೆದಿವೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ.96.39ರೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಶೇ.96.35ರೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಉತ್ತರ ಕನ್ನಡ ಶೇ.91.78 ಮೂರನೇ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆ ಶೇ.71.21ರೊಂದಿಗೆ ಕೊನೆಯ ಸ್ಥಾನದಲ್ಲಿದೆ.

 

ಇನ್ನಿತರ ಪ್ರಮುಖ ಜಿಲ್ಲೆಗಳ ಫಲಿತಾಂಶ ಹೀಗಿದೆ: ಬೆಂಗಳೂರು ದಕ್ಷಿಣ – ಶೇ.90.55, ಕೊಡಗು – ಶೇ.92.34, ಬೆಂಗಳೂರು ಉತ್ತರ – shೇ.90.05, ಹಾಸನ – ಶೇ.89.71, ಮೈಸೂರು – ಶೇ.84.80 ಮತ್ತು ಬಾಗಲಕೋಟೆ – ಶೇ.84.12. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಫಲಿತಾಂಶವನ್ನು ವಿದ್ಯಾರ್ಥಿಗಳ ಪರಿಶ್ರಮದ ಫಲವೆಂದು ಶ್ಲಾಘಿಸಿದ್ದು, ರಾಜ್ಯದ ಶೈಕ್ಷಣಿಕ ಗುಣಮಟ್ಟದಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 months ago

   
Image 1
Image 1
ದಕ್ಷಿಣಕನ್ನಡ

ಮಂಗಳೂರು

600/600 ಅಂಕ, ನೋವಿನ ನಡುವೆಯೂ ಶಿಖರ: ತಾಯಿಯನ್ನು ಕಳೆದುಕೊಂಡರೂ ರಾಜ್ಯ ಪ್ರಥಮ ಸ್ಥಾನ ಪಡೆದ ದಿಶಾ

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ವಾಣಿಜ್ಯ ವ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

2nd PUC ಫಲಿತಾಂಶ ಪ್ರಕಟ – ಫೇಲ್ ಆದವರಿಗೆ ಮತ್ತೊಂದು ಚಾನ್ಸ್, ಪರೀಕ್ಷೆ-2 ದಿನಾಂಕ ಘೋಷಣೆ!

ಬೆಂಗಳೂರು: 2025-26ನೇ ಸಾಲಿನ ಕರ್ನಾಟಕದ ದ್ವಿತೀಯ ಪಿಯುಸಿ ಮೊದಲ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ದಕ್ಷಿಣಕನ್ನಡ

ಮಂಗಳೂರು

2nd PUC ಟಾಪರ್ ದಿಶಾ : 600ಕ್ಕೆ 600 ಅಂಕ: ದಕ್ಷಿಣ ಕನ್ನಡದ ದಿಶಾ ರಾಜ್ಯ ಟಾಪರ್

ಮಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ಕರ್ನಾಟಕ 2nd PUC ಫಲಿತಾಂಶ ಪ್ರಕಟ: 7 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ

ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ (2nd PUC) ಪರೀಕ್ಷೆಯ ಫಲಿ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ಪಿಯುಸಿ ಫಲಿತಾಂಶ ವಿಳಂಬ – ವಿದ್ಯಾರ್ಥಿಗಳಿಗೆ ನಿರಾಸೆ, ಏಪ್ರಿಲ್ 9ಕ್ಕೆ ಸಾಧ್ಯತೆ

ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ಇಂದು ದ್ವಿತೀಯ ಪಿಯುಸಿ ಫಲಿತಾಂಶ? ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಕುತೂಹಲ

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

2ನೇ ಪಿಯುಸಿ ಫಲಿತಾಂಶ ಮುಂದೂಡಿಕೆ – ನಾಳೆ ಪ್ರಕಟವಾಗುವುದಿಲ್ಲ!

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದ ದ್ವ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ಹೊಸ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ನಿಯಮ: ಸ್ವಂತ ಜಾಗ ಅಥವಾ 15 ವರ್ಷ ಲೀಸ್ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿ ಹೊಸ ಖಾಸಗಿ ಶಾಲೆಗಳ ಆರಂಭ, ಮಾನ್ಯತೆ ಮತ್... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ಎಸ್‌ಎಸ್‌ಎಲ್‌ಸಿ ಅಂಕಪದ್ದತಿಯಲ್ಲಿ ದೊಡ್ಡ ಬದಲಾವಣೆ: ಈ ವರ್ಷದಿಂದ SSLC ಪರೀಕ್ಷೆ ಅಂಕ 625 ಅಲ್ಲ 525 ಮಾತ್ರ! ಹಿಂದಿ ಅಂಕಕ್ಕೆ ಕೋಕ್

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ಪೋಷಕರಿಗೆ ಗುಡ್ ನ್ಯೂಸ್: ಒಂದನೇ ತರಗತಿಯ ದಾಖಲೆಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ

ಬೆಂಗಳೂರು: ರಾಜ್ಯ ಸರ್ಕಾರವು 2026-27ನೇ ಶೈಕ್ಷಣಿಕ ವರ್ಷದಲ್ಲಿ ಒ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1