ಪೋಷಕರೇ ಗಮನಿಸಿ: ಮಗಳಿಗೆ 18 ವರ್ಷ ತುಂಬಿದರೆ “ಭಾಗ್ಯಲಕ್ಷ್ಮಿ ಬಾಂಡ್”ನ ₹1 ಲಕ್ಷ ಪಡೆಯಿರಿ!

ಬೆಂಗಳೂರು: ಕರ್ನಾಟಕ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ನೋಂದಾಯಿತರಾಗಿರುವ ಹೆಣ್ಣು ಮಕ್ಕಳಿಗೆ ಬಾಂಡ್ ಅವಧಿ ಪೂರ್ಣಗೊಂಡ ನಂತರ ₹1 ಲಕ್ಷ ಪಡೆಯಲು ಅಗತ್ಯವಾದ ಶರತ್ತುಗಳು ಮತ್ತು ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಬಗ್ಗೆ ಮಹತ್ವದ ಮಾಹಿತಿ ಪ್ರಕಟಿಸಲಾಗಿದೆ.

 

ಹಣ ಪಡೆಯಲು ಅಗತ್ಯ ಪ್ರಮುಖ ಶರತ್ತುಗಳು

ವಯೋಮಿತಿ: ಹೆಣ್ಣು ಮಗುವಿಗೆ ಕನಿಷ್ಠ 18 ವರ್ಷ ತುಂಬಿರಬೇಕು.

ಶಿಕ್ಷಣ: ಮಗು ಕನಿಷ್ಠ 8ನೇ ತರಗತಿವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು.

ಬಾಲ್ಯ ವಿವಾಹ ನಿಷೇಧ: 18 ವರ್ಷಕ್ಕೆ ಮುಂಚಿತವಾಗಿ ಮದುವೆಯಾಗಿರಬಾರದು.

ಬಾಲ ಕಾರ್ಮಿಕತೆ: ಮಗು ಯಾವುದೇ ಬಾಲ ಕಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು.

 

ಅಗತ್ಯ ದಾಖಲೆಗಳು

ಮೂಲ ಭಾಗ್ಯಲಕ್ಷ್ಮಿ ಬಾಂಡ್ (ಕಳೆದುಹೋಗಿದ್ದರೆ ಜೆರಾಕ್ಸ್ ಪ್ರತಿ ಮತ್ತು ಸ್ವಯಂ ಘೋಷಣಾ ಪತ್ರ)

ಮಗುವಿನ ಆಧಾರ್ ಕಾರ್ಡ್ (ಬಾಂಡ್‌ನಲ್ಲಿ ಹೆಸರಿನಂತೆಯೇ)

ತಂದೆ ಮತ್ತು ತಾಯಿಯ ಆಧಾರ್ ಕಾರ್ಡ್

ಮಗುವಿನ ಬ್ಯಾಂಕ್ ಪಾಸ್‌ಬುಕ್ ಅಥವಾ ಪೋಷಕರೊಂದಿಗೆ ಜಂಟಿ ಖಾತೆ

ಶಾಲೆಯಿಂದ ಪಡೆದ ವ್ಯಾಸಂಗ ಪ್ರಮಾಣಪತ್ರ

ಜನನ ಪ್ರಮಾಣಪತ್ರ

3–4 ಪಾಸ್‌ಪೋರ್ಟ್ ಗಾತ್ರದ ಫೋಟೋಗಳು

 

ಅರ್ಜಿಯ ವಿಧಾನ

ಅಂಗನವಾಡಿ ಮೂಲಕ: ನಿಮ್ಮ ಪ್ರದೇಶದ ಅಂಗನವಾಡಿ ಕಾರ್ಯಕರ್ತೆಗೆ ದಾಖಲೆಗಳನ್ನು ನೀಡಿ. ಅವರು ನಿಮ್ಮ ಪರವಾಗಿ ತಾಲೂಕು ಕಚೇರಿಗೆ ಸಲ್ಲಿಸುತ್ತಾರೆ.

ನೇರವಾಗಿ ಕಚೇರಿಗೆ: ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ  ಕಚೇರಿಗೆ ಭೇಟಿ ನೀಡಿ “ಭಾಗ್ಯಲಕ್ಷ್ಮಿ ಮೆಚ್ಯೂರಿಟಿ ಕ್ಲೇಮ್ ಫಾರ್ಮ್” ಭರ್ತಿ ಮಾಡಿ ಸಲ್ಲಿಸಬಹುದು.

 

ಹಣ ಜಮೆಯಾಗುವ ಪ್ರಕ್ರಿಯೆ

ಅರ್ಜಿ ಸಲ್ಲಿಸಿದ ನಂತರ ದಾಖಲೆಗಳ ಪರಿಶೀಲನೆ ನಡೆಯುತ್ತದೆ. ಎಲ್ಲ ದಾಖಲೆಗಳು ಸರಿಯಾಗಿದ್ದರೆ ಸುಮಾರು 1–2 ತಿಂಗಳೊಳಗೆ ಬಾಂಡ್ ಮೊತ್ತ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಮಗು 18 ವರ್ಷ ಮುಂಚಿತವಾಗಿ ಮರಣ ಹೊಂದಿದರೆ ಹಣ ದೊರೆಯುವುದಿಲ್ಲ, ಆದರೆ 18 ವರ್ಷ ಪೂರ್ಣವಾದ ನಂತರ ಮರಣವಾದರೆ ಪೋಷಕರು ಹಣ ಪಡೆಯಲು ಅರ್ಹರಾಗುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯನ್ನು ಸಂಪರ್ಕಿಸಲು ಅಧಿಕಾರಿಗಳು ಸೂಚಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 month ago

   
Image 1
Image 1
ಬೆಂಗಳೂರು ನಗರ

ರೆಫರಲ್ ಇಲ್ಲದೆ : ಆಯುಷ್ಮಾನ್ ಯೋಜನೆಡಿ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ನೇರ ಉಚಿತ ಚಿಕಿತ್ಸೆ

ಬೆಂಗಳೂರು: ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1
ಬೆಂಗಳೂರು ನಗರ

ಪರಿಶಿಷ್ಟ ಜಾತಿ ಯುವಕರಿಗೆ ಸುವರ್ಣಾವಕಾಶ – ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ-ಸಬ್ಸಿಡಿ ಯೋಜನೆಗಳು

ಬೆಂಗಳೂರು: ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕರು, ಯುವತಿಯರು ಮತ... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1
ಬೆಂಗಳೂರು ನಗರ

SC/ST ಉದ್ಯಮಿಗಳಿಗೆ ಖುಷಿಯ ಸುದ್ದಿ: ಕೈಗಾರಿಕೆ ಸ್ಥಾಪನೆಗೆ ಸರ್ಕಾರಿ ಭರ್ಜರಿ ನೆರವು!

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೊಸ ವೇಗ ನೀಡಲು... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೆಂಗಳೂರು ನಗರ

ಪಡಿತರ ಅಕ್ಕಿ ಕಳ್ಳಸಾಗಣೆ ತಡೆಯಲು 20,000 ಅಂಗಡಿಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ: ಸಚಿವ ಮುನಿಯಪ್ಪ

ಬೆಂಗಳೂರು: ಪಡಿತರ ಅಕ್ಕಿ ಕಳ್ಳ ಸಾಗಣೆ ತಡೆಯಲು ರಾಜ್ಯದ 20 ಸಾವಿರ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೆಂಗಳೂರು ನಗರ

ಮಹಿಳೆಯರಿಗೆ ಯುಗಾದಿ ಗಿಫ್ಟ್: ಗೃಹಲಕ್ಷ್ಮಿ ಯೋಜನೆಯ 27ನೇ ಕಂತು ಬಿಡುಗಡೆ

ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮದಲ್ಲಿ ರಾಜ್ಯದ ಮಹಿಳೆಯರಿಗೆ ಸಿ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಿಗುತ್ತೆ ಬಡ್ಡಿ ಇಲ್ಲದೇ 1.40 ಲಕ್ಷದವರೆಗೆ ಸಾಲ..! ಅರ್ಜಿ ಸಲ್ಲಿಸುವ ವಿಧಾನ ತಿಳಿದುಕೊಳ್ಳಿ

ನವದೆಹಲಿ: ಕೇಂದ್ರ ಸರ್ಕಾರ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉತ್ತ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೀದರ್

ಗೃಹಲಕ್ಷ್ಮಿ ಯೋಜನೆ ಗೊಂದಲ – ಸತ್ತ ಮಹಿಳೆಯ ಖಾತೆಗೆ 12 ಕೋಟಿ ರೂ. ಜಮಾ

ಬೀದರ್: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೆಂಗಳೂರು ನಗರ

ಅನ್ನಭಾಗ್ಯ ಯೋಜನೆಗೆ ಹೊಸ ರೂಪ: 5 ಕೆಜಿ ಅಕ್ಕಿಯ ಬದಲು “ಇಂದಿರಾ ಆಹಾರ ಕಿಟ್‌” ವಿತರಣೆ – ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಲ್ಲಿ ಮಹ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೆಂಗಳೂರು ನಗರ

ರಾಜ್ಯ ಬಜೆಟ್‌ನಲ್ಲಿ ಗೃಹಲಕ್ಷ್ಮಿಯರಿಗೆ ಸಂತಸದ ಸುದ್ದಿ: ₹28,608 ಕೋಟಿ ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೆಂಗಳೂರು ನಗರ

ಅನರ್ಹ BPL ಕಾರ್ಡ್‌ಗಳ ಮೇಲೆ ಸರ್ಕಾರದ ಕತ್ತರಿ: 5 ತಿಂಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಶಾಕ್

ಬೆಂಗಳೂರು: ಅನರ್ಹವಾಗಿ BPL ಕಾರ್ಡ್ ಹೊಂದಿರುವವರ ವಿರುದ್ಧ ರಾಜ್ಯ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1