ಅನರ್ಹ BPL ಕಾರ್ಡ್‌ಗಳ ಮೇಲೆ ಸರ್ಕಾರದ ಕತ್ತರಿ: 5 ತಿಂಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಶಾಕ್

ಬೆಂಗಳೂರು: ಅನರ್ಹವಾಗಿ BPL ಕಾರ್ಡ್ ಹೊಂದಿರುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಮುಂದುವರಿಸಿದೆ. ಕಳೆದ ಐದು ತಿಂಗಳಲ್ಲಿ 15.12 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಈ ಕ್ರಮದ ಪರಿಣಾಮಕ್ಕೆ ಒಳಗಾಗಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.

 

ವಿಶೇಷ ಪರಿಶೀಲನಾ ಕಾರ್ಯಾಚರಣೆ ವೇಳೆ ಸಾವಿರಾರು BPL ಕಾರ್ಡ್‌ಗಳನ್ನು ರದ್ದುಪಡಿಸಲಾಗಿದ್ದು, ಅನೇಕ ಕಾರ್ಡ್‌ಗಳನ್ನು BPLನಿಂದ APLಗೆ ಪರಿವರ್ತಿಸಲಾಗಿದೆ. ಕಳೆದ ಐದು ತಿಂಗಳ ಅಂಕಿಅಂಶಗಳ ಪ್ರಕಾರ 4.09 ಲಕ್ಷ BPL ಕಾರ್ಡ್‌ಗಳನ್ನು APLಗೆ ಬದಲಾಯಿಸಲಾಗಿದ್ದು, ಇದರಿಂದ 14,68,540 ಮಂದಿ ಪರಿಣಾಮಗೊಂಡಿದ್ದಾರೆ.

 

ಇದಲ್ಲದೆ 5,632 BPL ಕಾರ್ಡ್‌ಗಳನ್ನು ಶಾಶ್ವತವಾಗಿ ರದ್ದುಪಡಿಸಲಾಗಿದ್ದು, 9,826 ಫಲಾನುಭವಿಗಳು ಇದರ ವ್ಯಾಪ್ತಿಗೆ ಬಂದಿದ್ದಾರೆ. ಮತ್ತೊಂದೆಡೆ 23,068 ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದು, ಇದರಿಂದ 34,617 ಮಂದಿಗೆ ಪರಿಣಾಮ ಬಿದ್ದಿದೆ.

 

ಅರ್ಹ ಬಡವರಿಗೆ ಕಾರ್ಡ್ ಸಿಗದೆ ಅನರ್ಹರು ಪಡೆಯುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಕಾರು, ಬಂಗಲೆ ಹಾಗೂ ಜಮೀನು ಹೊಂದಿರುವವರೇ BPL ಕಾರ್ಡ್ ಹೊಂದಿದ್ದಾರೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ಕಾರ್ಯಾಚರಣೆ ಹೆಸರಿನಲ್ಲಿ ಬಡವರ ಕಾರ್ಡ್ ಕಿತ್ತುಕೊಳ್ಳದೆ, ಅಕ್ರಮವಾಗಿ ಪಡೆದವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

 

ಈ ಹಿಂದೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ BPL ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು ಪರಿಷ್ಕರಿಸುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿಸಿದ್ದರು. ಕೇಂದ್ರ ಸರ್ಕಾರ ನಿಗದಿಪಡಿಸಿರುವಂತೆ ವಾರ್ಷಿಕ ₹1.20 ಲಕ್ಷ ಆದಾಯ ಮಿತಿಯಿದೆ. ಆದರೆ ದಿನಗೂಲಿ ಕಾರ್ಮಿಕರ ಆದಾಯವನ್ನು ಪರಿಗಣಿಸಿದರೆ ಈ ಮಿತಿ ಮೀರಬಹುದು ಎಂಬ ಚರ್ಚೆಯೂ ಇದೆ. ಇದೀಗ ಸರ್ಕಾರ ಕೈಗೊಂಡಿರುವ ಕ್ರಮದಿಂದ ಅಕ್ರಮವಾಗಿ BPL ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 month ago

   
Image 1
Image 1
ಬೆಂಗಳೂರು ನಗರ

ರೆಫರಲ್ ಇಲ್ಲದೆ : ಆಯುಷ್ಮಾನ್ ಯೋಜನೆಡಿ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ನೇರ ಉಚಿತ ಚಿಕಿತ್ಸೆ

ಬೆಂಗಳೂರು: ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1
ಬೆಂಗಳೂರು ನಗರ

ಪರಿಶಿಷ್ಟ ಜಾತಿ ಯುವಕರಿಗೆ ಸುವರ್ಣಾವಕಾಶ – ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ-ಸಬ್ಸಿಡಿ ಯೋಜನೆಗಳು

ಬೆಂಗಳೂರು: ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕರು, ಯುವತಿಯರು ಮತ... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1
ಬೆಂಗಳೂರು ನಗರ

SC/ST ಉದ್ಯಮಿಗಳಿಗೆ ಖುಷಿಯ ಸುದ್ದಿ: ಕೈಗಾರಿಕೆ ಸ್ಥಾಪನೆಗೆ ಸರ್ಕಾರಿ ಭರ್ಜರಿ ನೆರವು!

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೊಸ ವೇಗ ನೀಡಲು... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೆಂಗಳೂರು ನಗರ

ಪಡಿತರ ಅಕ್ಕಿ ಕಳ್ಳಸಾಗಣೆ ತಡೆಯಲು 20,000 ಅಂಗಡಿಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ: ಸಚಿವ ಮುನಿಯಪ್ಪ

ಬೆಂಗಳೂರು: ಪಡಿತರ ಅಕ್ಕಿ ಕಳ್ಳ ಸಾಗಣೆ ತಡೆಯಲು ರಾಜ್ಯದ 20 ಸಾವಿರ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೆಂಗಳೂರು ನಗರ

ಮಹಿಳೆಯರಿಗೆ ಯುಗಾದಿ ಗಿಫ್ಟ್: ಗೃಹಲಕ್ಷ್ಮಿ ಯೋಜನೆಯ 27ನೇ ಕಂತು ಬಿಡುಗಡೆ

ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮದಲ್ಲಿ ರಾಜ್ಯದ ಮಹಿಳೆಯರಿಗೆ ಸಿ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೆಂಗಳೂರು ನಗರ

ಪೋಷಕರೇ ಗಮನಿಸಿ: ಮಗಳಿಗೆ 18 ವರ್ಷ ತುಂಬಿದರೆ “ಭಾಗ್ಯಲಕ್ಷ್ಮಿ ಬಾಂಡ್”ನ ₹1 ಲಕ್ಷ ಪಡೆಯಿರಿ!

ಬೆಂಗಳೂರು: ಕರ್ನಾಟಕ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ನ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಿಗುತ್ತೆ ಬಡ್ಡಿ ಇಲ್ಲದೇ 1.40 ಲಕ್ಷದವರೆಗೆ ಸಾಲ..! ಅರ್ಜಿ ಸಲ್ಲಿಸುವ ವಿಧಾನ ತಿಳಿದುಕೊಳ್ಳಿ

ನವದೆಹಲಿ: ಕೇಂದ್ರ ಸರ್ಕಾರ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉತ್ತ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೀದರ್

ಗೃಹಲಕ್ಷ್ಮಿ ಯೋಜನೆ ಗೊಂದಲ – ಸತ್ತ ಮಹಿಳೆಯ ಖಾತೆಗೆ 12 ಕೋಟಿ ರೂ. ಜಮಾ

ಬೀದರ್: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೆಂಗಳೂರು ನಗರ

ಅನ್ನಭಾಗ್ಯ ಯೋಜನೆಗೆ ಹೊಸ ರೂಪ: 5 ಕೆಜಿ ಅಕ್ಕಿಯ ಬದಲು “ಇಂದಿರಾ ಆಹಾರ ಕಿಟ್‌” ವಿತರಣೆ – ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಲ್ಲಿ ಮಹ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೆಂಗಳೂರು ನಗರ

ರಾಜ್ಯ ಬಜೆಟ್‌ನಲ್ಲಿ ಗೃಹಲಕ್ಷ್ಮಿಯರಿಗೆ ಸಂತಸದ ಸುದ್ದಿ: ₹28,608 ಕೋಟಿ ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1