ಪೋಷಕರ ವಿರೋಧ ತಾಳಲಾರದೆ ಪ್ರೇಮಿಗಳು ಆತ್ಮಹತ್ಯೆ
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಪ್ರೇಮ ಸಂಬಂಧಕ್ಕೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಲೆ, ಮನನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ದುಃಖದ ಘಟನೆ ನಡೆದಿದೆ. ಮೃತರನ್ನು ನದಿಯಾ (19) ಮತ್ತು ನಾಗೇಂದ್ರ (21) ಎಂದು ಗುರುತಿಸಲಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಇತ್ತೀಚೆಗೆ ಮನೆಬಿಟ್ಟು ತೆರಳಿದ್ದರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಮಿಸ್ಸಿಂಗ್ ದೂರು ದಾಖಲಿಸಿದ್ದರು.
ನಾಗೇಂದ್ರ ತನ್ನ ಅಜ್ಜನ ಊರಾದ ಪೊನ್ನಾಚಿಗೆ ನದಿಯಾಳನ್ನು ಕರೆದುಕೊಂಡು ಹೋಗಿದ್ದಾನೆ ಎಂಬ ಮಾಹಿತಿ ದೊರೆತಿದೆ. ಇತ್ತ ನದಿಯಾ ಕುಟುಂಬಸ್ಥರು ಹುಡುಕಾಟ ನಡೆಸಿದರೂ ಪತ್ತೆಯಾಗದೇ ಇದ್ದುದರಿಂದ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಪ್ರಕರಣ ದಾಖಲಾಗಿರುವ ವಿಚಾರ ತಿಳಿದ ಬಳಿಕ, ಮುಂದೆ ಏನಾಗಬಹುದು ಎಂಬ ಭಯದಿಂದ ಆತಂಕಗೊಂಡಿದ್ದ ಪ್ರೇಮಿಗಳು ಆತ್ಮಹತ್ಯೆ ನಿರ್ಧಾರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಬ್ಬರೂ ನೇಣು ಬಿಗಿದುಕೊಂಡು ಜೀವತ್ಯಾಗ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಘಟನೆ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನಕಲಿ ಸ್ಲಿಂ ಪೌಡರ್ ದಂಧೆ ಬಯಲು: ತುಮಕೂರು ಪೊಲೀಸರ ದೊಡ್ಡ ದಾಳಿ
ತುಮಕೂರು: ಡುಪ್ಲಿಕೇಟ್ ಬ್ರ್ಯಾಂಡಿಂಗ್ ಮೂಲಕ ತೂಕ ಇಳಿಕೆ ಪೌಡರ್ ಸ... ಓದನ್ನು ಮುಂದುವರಿಸಿ
ಸೈಬರ್ ಕ್ರೈಂ ಹೆಚ್ಚಳ: ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ
ಬೆಂಗಳೂರು: ಸೈಬರ್ ಅಪರಾಧಗಳು ಸೇರಿದಂತೆ ವಿವಿಧ ಅಪರಾಧಗಳಲ್ಲಿ ರಾಜ... ಓದನ್ನು ಮುಂದುವರಿಸಿ
ಆನ್‌ಲೈನ್ ಟ್ರೇಡಿಂಗ್ ಮೋಸ: ಪ್ರೀತಿಯಿಂದ ಹಣ ಕಸಿದ ಮಹಿಳೆ
ಬೆಂಗಳೂರು: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನಡೆಯುವ ವಂಚನೆ ಪ್ರಕರ... ಓದನ್ನು ಮುಂದುವರಿಸಿ
ಹಣದ ವಿಚಾರಕ್ಕೆ ಹೆಂಡ್ತಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ ಗಂಡ!
ಬೆಂಗಳೂರು: ನಗರದ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್... ಓದನ್ನು ಮುಂದುವರಿಸಿ
ಸಾಗರ
ಹಣಕಾಸು ವಿವಾದ: ಹೋಟೆಲ್ ಮಾಲೀಕನಿಂದ ಕಾರ್ಮಿಕನ ಹತ್ಯೆ
ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ರೂ... ಓದನ್ನು ಮುಂದುವರಿಸಿ
ಬಕೆಟ್‌ಗೆ ಬಿದ್ದು ಮಗು ಸಾವು - ಮಗುವಿನ ಅಕಾಲಿಕ ಸಾವು ತಾಳಲಾರದೆ ತಾಯಿ ಆತ್ಮಹತ್ಯೆ
ಬೆಂಗಳೂರು: ನಗರದ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರ... ಓದನ್ನು ಮುಂದುವರಿಸಿ
ಟೆಂಪೋದಲ್ಲೇ ಶವವಾಗಿ ಪತ್ತೆಯಾದ ಚಾಲಕ: ಸಾವಿನ ಸುತ್ತ ಅನುಮಾನಗಳ ಮಳೆ
ಚಿಕ್ಕಬಳ್ಳಾಪುರ: ಬಾಡಿಗೆಗೆ ತೆರಳಿದ ಟೆಂಪೋ ಚಾಲಕನೊಬ್ಬ, ತನ್ನದೇ... ಓದನ್ನು ಮುಂದುವರಿಸಿ
ಕಾಫಿ ಶಾಪ್ ಬಳಿ ಡ್ರಗ್ಸ್ ಆರೋಪ: ಸಿಬ್ಬಂದಿ-ಯುವಕರ ನಡುವೆ ಭಾರಿ ಗಲಾಟೆ
ಬೆಂಗಳೂರು: ನಗರದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಸಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ದೇಗುಲ ವಿವಾದ: ಎರಡು ಗುಂಪುಗಳ ನಡುವೆ ಘರ್ಷಣೆ ಪೊಲೀಸರಿಂದ ಲಾಠಿ ಪ್ರಹಾರ
ಬೆಂಗಳೂರು ಗ್ರಾಮಾಂತರ: ದೇಗುಲದ ಅಸ್ತಿತ್ವದ ವಿಚಾರವಾಗಿ ಎರಡು ಗುಂ... ಓದನ್ನು ಮುಂದುವರಿಸಿ
ಕಾರು ಬೆಂಕಿಗಾಹುತಿಯಾಗಿ ಮೂವರು ಸಾವು – ಓರ್ವ ಗಂಭೀರ ಗಾಯ
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪ... ಓದನ್ನು ಮುಂದುವರಿಸಿ