ಆನ್‌ಲೈನ್ ಟ್ರೇಡಿಂಗ್ ಮೋಸ: ಪ್ರೀತಿಯಿಂದ ಹಣ ಕಸಿದ ಮಹಿಳೆ

ಬೆಂಗಳೂರು: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನಡೆಯುವ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ನಡುವೆ, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬಳು ಸಾಫ್ಟ್‌ವೇರ್ ಎಂಜಿನಿಯರ್‌ನಿಂದ ₹18 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವ ಘಟನೆ ನ್ಯೂ ತಿಪ್ಪಸಂದ್ರದಲ್ಲಿ ನಡೆದಿದೆ. 2025ರ ನವೆಂಬರ್‌ನಲ್ಲಿ Flutrr ಡೇಟಿಂಗ್ ಆಪ್ ಮೂಲಕ 29 ವರ್ಷದ ಎಂಜಿನಿಯರ್‌ಗೆ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಆಕೆ ತನ್ನನ್ನು ಮುಂಬೈ ಮೂಲದ ಅಂಜಲಿ ಕುಶ್ಲಾನಿ ಎಂದು ಪರಿಚಯಿಸಿಕೊಂಡು ಬಳಿಕ ವಾಟ್ಸಾಪ್ ಮೂಲಕ ಸಂಪರ್ಕದಲ್ಲಿದ್ದಳು.

 

ಕಾಲಕ್ರಮೇಣ ಪ್ರೀತಿಯ ಹೆಸರಿನಲ್ಲಿ ಆತನ ವಿಶ್ವಾಸ ಗಳಿಸಿ, ಭವಿಷ್ಯದ ಕನಸುಗಳನ್ನು ಮೂಡಿಸಿದ್ದಳು. ಇದನ್ನೇ ಆಧಾರ ಮಾಡಿಕೊಂಡು ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಳು. ಆರಂಭದಲ್ಲಿ ₹40,000 ಹೂಡಿಕೆ ಮಾಡಿದ ಎಂಜಿನಿಯರ್‌ಗೆ ಸ್ವಲ್ಪ ಲಾಭ ದೊರೆತ ಹಿನ್ನೆಲೆಯಲ್ಲಿ ಆಕೆಯ ಮೇಲೆ ಹೆಚ್ಚಿನ ವಿಶ್ವಾಸ ಬೆಳೆದಿತ್ತು.

 

ನಂತರ ಹೆಚ್ಚಿನ ಮೊತ್ತಗಳನ್ನು ಹೂಡಿಕೆ ಮಾಡಲು ಒತ್ತಾಯಿಸಿದ ಪರಿಣಾಮ, ಎಂಜಿನಿಯರ್ ಸ್ನೇಹಿತರಿಂದ ಹಾಗೂ ಸಾಲಗಳ ಮೂಲಕ ಹಣ ಪಡೆದು ಹೂಡಿಕೆ ಮಾಡುತ್ತಿದ್ದ. ಡಿಸೆಂಬರ್ ವೇಳೆಗೆ ₹5.6 ಲಕ್ಷ ಹೂಡಿಕೆ ಮಾಡಿದ ಈತ, ಬಳಿಕ ಹಂತ ಹಂತವಾಗಿ ಒಟ್ಟು ₹18.7 ಲಕ್ಷ ಹೂಡಿಕೆ ಮಾಡಿದ್ದಾನೆ. ಇದರಲ್ಲಿ ಸುಮಾರು ₹10 ಲಕ್ಷ ಸಾಲವಾಗಿರುವುದಾಗಿ ತಿಳಿದುಬಂದಿದೆ.

 

ಹೂಡಿಕೆ ಮಾಡಿದ ಹಣವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದಾಗ ಅನುಮಾನಗೊಂಡ ಎಂಜಿನಿಯರ್ ವಿಚಾರಿಸಿದಾಗ, ಆರೋಪಿ ಮಹಿಳೆ ಸಂಪರ್ಕ ಕಡಿತಗೊಳಿಸಿದ್ದಾಳೆ. ಬಳಿಕ ಮೋಸವಾಗಿರುವುದು ಅರಿತ ಅವರು ಪೂರ್ವ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಐಟಿ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

5 hours ago

   
Image 1
Image 1
ತುಮಕೂರು

ನಕಲಿ ಸ್ಲಿಂ ಪೌಡರ್ ದಂಧೆ ಬಯಲು: ತುಮಕೂರು ಪೊಲೀಸರ ದೊಡ್ಡ ದಾಳಿ

ತುಮಕೂರು: ಡುಪ್ಲಿಕೇಟ್ ಬ್ರ್ಯಾಂಡಿಂಗ್ ಮೂಲಕ ತೂಕ ಇಳಿಕೆ ಪೌಡರ್ ಸ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಬೆಂಗಳೂರು ನಗರ

ಸೈಬರ್ ಕ್ರೈಂ ಹೆಚ್ಚಳ: ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು: ಸೈಬರ್ ಅಪರಾಧಗಳು ಸೇರಿದಂತೆ ವಿವಿಧ ಅಪರಾಧಗಳಲ್ಲಿ ರಾಜ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಬೆಂಗಳೂರು ನಗರ

ಹಣದ ವಿಚಾರಕ್ಕೆ ಹೆಂಡ್ತಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ ಗಂಡ!

ಬೆಂಗಳೂರು: ನಗರದ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಶಿವಮೊಗ್ಗ

ಸಾಗರ

ಹಣಕಾಸು ವಿವಾದ: ಹೋಟೆಲ್ ಮಾಲೀಕನಿಂದ ಕಾರ್ಮಿಕನ ಹತ್ಯೆ

ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ರೂ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಚಾಮರಾಜನಗರ

ಹನೂರು

ಪೋಷಕರ ವಿರೋಧ ತಾಳಲಾರದೆ ಪ್ರೇಮಿಗಳು ಆತ್ಮಹತ್ಯೆ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಪ್... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಬಕೆಟ್‌ಗೆ ಬಿದ್ದು ಮಗು ಸಾವು - ಮಗುವಿನ ಅಕಾಲಿಕ ಸಾವು ತಾಳಲಾರದೆ ತಾಯಿ ಆತ್ಮಹತ್ಯೆ

ಬೆಂಗಳೂರು: ನಗರದ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಚಿಕ್ಕಬಳ್ಳಾಪುರ

ಟೆಂಪೋದಲ್ಲೇ ಶವವಾಗಿ ಪತ್ತೆಯಾದ ಚಾಲಕ: ಸಾವಿನ ಸುತ್ತ ಅನುಮಾನಗಳ ಮಳೆ

ಚಿಕ್ಕಬಳ್ಳಾಪುರ: ಬಾಡಿಗೆಗೆ ತೆರಳಿದ ಟೆಂಪೋ ಚಾಲಕನೊಬ್ಬ, ತನ್ನದೇ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬೆಂಗಳೂರು ನಗರ

ಕಾಫಿ ಶಾಪ್ ಬಳಿ ಡ್ರಗ್ಸ್ ಆರೋಪ: ಸಿಬ್ಬಂದಿ-ಯುವಕರ ನಡುವೆ ಭಾರಿ ಗಲಾಟೆ

ಬೆಂಗಳೂರು: ನಗರದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಸಿ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ

ದೇಗುಲ ವಿವಾದ: ಎರಡು ಗುಂಪುಗಳ ನಡುವೆ ಘರ್ಷಣೆ ಪೊಲೀಸರಿಂದ ಲಾಠಿ ಪ್ರಹಾರ

ಬೆಂಗಳೂರು ಗ್ರಾಮಾಂತರ: ದೇಗುಲದ ಅಸ್ತಿತ್ವದ ವಿಚಾರವಾಗಿ ಎರಡು ಗುಂ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ತುಮಕೂರು

ಕಾರು ಬೆಂಕಿಗಾಹುತಿಯಾಗಿ ಮೂವರು ಸಾವು – ಓರ್ವ ಗಂಭೀರ ಗಾಯ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1