ಫೆ.28ರಿಂದ ದ್ವಿತೀಯ ಪಿಯುಸಿ, ಮಾ.18ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸಚಿವ ಮಧು ಬಂಗಾರಪ್ಪ ವೇಳಾಪಟ್ಟಿ ಪ್ರಕಟ
ಬೆಂಗಳೂರು, ಫೆಬ್ರವರಿ 17: ರಾಜ್ಯದ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ದಿನಾಂಕಗಳನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆಯಲಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿವೆ ಎಂದು ತಿಳಿಸಿದ್ದಾರೆ. ಸಚಿವರ ಮಾಹಿತಿ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:15ರವರೆಗೆ ನಡೆಯಲಿವೆ.
ದ್ವಿತೀಯ ಪಿಯುಸಿ ಪರೀಕ್ಷೆ 1 ವೇಳಾಪಟ್ಟಿ
ಫೆಬ್ರವರಿ 28: ಕನ್ನಡ, ಅರೇಬಿಕ್
ಮಾರ್ಚ್ 2: ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
ಮಾರ್ಚ್ 3: ಇಂಗ್ಲಿಷ್
ಮಾರ್ಚ್ 4: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 5: ಇತಿಹಾಸ
ಮಾರ್ಚ್ 6: ಭೌತಶಾಸ್ತ್ರ
ಮಾರ್ಚ್ 7: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ
ಮಾರ್ಚ್ 9: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾರ್ಚ್ 10: ಅರ್ಥಶಾಸ್ತ್ರ
ಮಾರ್ಚ್ 11: ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 12: ಹಿಂದಿ
ಮಾರ್ಚ್ 13: ರಾಜ್ಯಶಾಸ್ತ್ರ
ಮಾರ್ಚ್ 14: ಲೆಕ್ಕಶಾಸ್ತ್ರ, ಗಣಿತ
ಮಾರ್ಚ್ 16: ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
ಮಾರ್ಚ್ 17: ಹಿಂದುಸ್ತಾನಿ, ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ವೇಳಾಪಟ್ಟಿ
ಮಾರ್ಚ್ 18: ಪ್ರಥಮ ಭಾಷೆ
ಮಾರ್ಚ್ 23: ವಿಜ್ಞಾನ
ಮಾರ್ಚ್ 25: ದ್ವಿತೀಯ ಭಾಷೆ
ಮಾರ್ಚ್ 28: ಗಣಿತ
ಮಾರ್ಚ್ 30: ತೃತೀಯ ಭಾಷೆ
ಏಪ್ರಿಲ್ 2: ಸಮಾಜ ವಿಜ್ಞಾನ
ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ವೇಳಾಪಟ್ಟಿ
ಮೇ 18: ಪ್ರಥಮ ಭಾಷೆ
ಮೇ 19: ವಿಜ್ಞಾನ
ಮೇ 20: ದ್ವಿತೀಯ ಭಾಷೆ
ಮೇ 21: ಗಣಿತ
ಮೇ 22: ತೃತೀಯ ಭಾಷೆ
ಮೇ 23: ಸಮಾಜ ವಿಜ್ಞಾನ
ವಿದ್ಯಾರ್ಥಿಗಳು ಪರೀಕ್ಷೆಗಳಿಗಾಗಿ ಸಮರ್ಪಕವಾಗಿ ಸಿದ್ಧರಾಗುವಂತೆ ಸಚಿವರು ಸಲಹೆ ನೀಡಿದರು. ಪರೀಕ್ಷಾ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಪೂರ್ವತಯಾರಿ ನಡೆಸುವಂತೆ ಅವರು ಮನವಿ ಮಾಡಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಯುಜಿಸಿಇಟಿ 2026: ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಫೆ.27ಕ್ಕೆ ವಿಸ್ತರಣೆ
ಬೆಂಗಳೂರು : ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಿಗೆ... ಓದನ್ನು ಮುಂದುವರಿಸಿ
ಅರ್ಜುನ ಸಂಸ್ಥೆ ವಿದ್ಯಾರ್ಥಿಗಳ ಸಾಧನೆ: JEE ಮೇನ್ʼನಲ್ಲಿ 99+ ಶೇ. ಅಂಕಗಳೊಂದಿಗೆ ಧಾರವಾಡಕ್ಕೆ ಕೀರ್ತಿ
ಧಾರವಾಡ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಜೆಇಇ ಮುಖ್... ಓದನ್ನು ಮುಂದುವರಿಸಿ
ಬಿಬಿಎಂಪಿ ಶಾಲೆಗಳ ದಾಖಲಾತಿಯಲ್ಲಿ ಏಕಾಏಕಿ ಶೇ 40 ರಷ್ಟು ಕುಸಿತ!
ಬೆಂಗಳೂರು: 2024-25ನೇ ಶೈಕ್ಷಣಿಕ ಸಾಲಿನ ಬಿಬಿಎಂಪಿ ಶಾಲೆಗಳ ದಾಖಲ... ಓದನ್ನು ಮುಂದುವರಿಸಿ
ಆಹಾರ ತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿ ಪಡೆದವರಿಗಿದೆ ಉತ್ತಮ ಉದ್ಯೋಗಾವಕಾಶ !
ಆಹಾರ ಪದಾರ್ಥಗಳು, ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳ ಪೌಷ್ಟಿಕಾಂಶದ ಮೌಲ್ಯವನ್ನು... ಓದನ್ನು ಮುಂದುವರಿಸಿ
ಕೋರ್ ಇಂಜಿನಿಯರಿಂಗ್ ಕೋರ್ಸ್ ಉತ್ತೇಜಿಸಲಿದೆ ಈ ವಿದ್ಯಾರ್ಥಿ ವೇತನ
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಮ್... ಓದನ್ನು ಮುಂದುವರಿಸಿ
ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ !
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಂದು ತನ್ನ ನಾಗರಿಕ ಸೇವೆಗಳ ಪೂರ್ವಭಾವಿ... ಓದನ್ನು ಮುಂದುವರಿಸಿ
ತರಗತಿ ಶುರುವಾದ್ರೂ ಪಾಲಿಕೆ ಶಾಲೆಗಳಿಗಿಲ್ಲ ಶಿಕ್ಷಕರ ನೇಮಕ! ಶಿಕ್ಷಣದ ಗುಣಮಟ್ಟ ಕುಸಿಯೋ ಆತಂಕ
ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ತರಗತಿಗಳು ಶುರುವಾದ್ರೂ ಇನ್ನೂ... ಓದನ್ನು ಮುಂದುವರಿಸಿ
ವೈದ್ಯಕೀಯ ವ್ಯಾಸಂಗಕ್ಕಾಗಿ ಫಿಲಿಪೈನ್ಸ್‌ಗೆ ಹೋಗುವ ವಿದ್ಯಾರ್ಥಿಗಳಿಗಿದೆ ವಿಶೇಷ ಸಲಹೆ
ಉನ್ನತ ವ್ಯಾಸಂಗಕ್ಕಾಗಿ ಫಿಲಿಪೈನ್ಸ್‌ಗೆ ಹೋಗಲು ಯೋಜಿಸುತ್ತಿರುವ ವೈದ್ಯಕೀಯ ಆಕಾಂಕ್ಷಿಗ... ಓದನ್ನು ಮುಂದುವರಿಸಿ
ಐಸಿಎಐ ಸಿಎ ಫೌಂಡೇಶನ್ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ !
ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ (ICAI) ಜೂನ್ ಸಿಎ ಫೌಂ... ಓದನ್ನು ಮುಂದುವರಿಸಿ
ನೀಟ್ ಯುಜಿ ಪರೀಕ್ಷೆ ಮರು ನಡೆಸುವಂತೆ ಆಗ್ರಹ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ
ನೀಟ್ ಯುಜಿ 2024 ಪತ್ರಿಕೆ ಸೋರಿಕೆಯ ಸುದ್ದಿಯನ್ನು ಗಮನದಲ್ಲಿಟ್ಟುಕೊಂಡು, ಕೆಲವು ಅಭ್ಯ... ಓದನ್ನು ಮುಂದುವರಿಸಿ