ಪರಪ್ಪನ ಅಗ್ರಹಾರ ಜೈಲಿಯಲ್ಲಿ ಮೊಬೈಲ್ ವಿಡಿಯೋ ವೈರಲ್: DGP ಅಲೋಕ್ ಕುಮಾರ್ ಹೆಸರಿಗೆ ಮಸಿ ಬಳಿಯೋ ಶಂಕೆ
ಬೆಂಗಳೂರು, ಮಾ. 29: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಸಿಕೊಂಡು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಡ್ರಗ್ಸ್ ಮತ್ತು ಮೊಬೈಲ್ ಪತ್ತೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ಕೈಗೊಂಡ ಕಟ್ಟುನಿಟ್ಟಾದ ಕ್ರಮಗಳಿಗೆ ಪ್ರಶ್ನೆ ಎತ್ತಿದ್ದು, ಜೈಲಿನೊಳಗಿನ ಭದ್ರತಾ ಖಾತರಿಯ ಮೇಲೆ ಗಮನ ಸೆಳೆದಿದೆ.
ವೈರಲ್ ಆದ ವಿಡಿಯೋದಲ್ಲಿ ಕೈದಿಗಳು ಜೈಲಿನಲ್ಲಿ ಮೊಬೈಲ್, ಟಿವಿ ಮತ್ತು ನೆಟ್‌ಫ್ಲಿಕ್ಸ್ ಸೌಲಭ್ಯಗಳಿವೆ ಎಂದು ಹೇಳಿದ್ದು, ಡಿಜಿಪಿ ಅಲೋಕ್ ಕುಮಾರ್ ಅವರೇ ಮೊಬೈಲ್ ಒದಗಿಸಿದ್ದೆಂಬ ಆರೋಪವನ್ನೂ ಮಾಡಿದ್ದಾರೆ. ಈ ವಿಡಿಯೋ ನಿಜವಾಗಿಯೇ ಜೈಲಿನೊಳಗೇ ಚಿತ್ರೀಕರಿಸಲ್ಪಟ್ಟಿದೆಯೋ ಅಥವಾ ಬೇರೆಡೆ ಸೆಟಪ್ ಮಾಡಲಾಗಿದೆಯೋ ಎಂಬ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಡಿಯೋ ವೈರಲ್ ಆದ ತಕ್ಷಣ, ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ 9ನೇ ಬ್ಯಾರಕ್ನಲ್ಲಿ ಡ್ರೇನೇಜ್ ಮಾರ್ಗದಿಂದ ಹಾಲಿನ ಪ್ಯಾಕೆಟ್‌ಗಳಲ್ಲಿ ಅಡಗಿಸಲಾಗಿದ್ದ ಮೊಬೈಲ್ ಪತ್ತೆ ಮಾಡಿ ಕೈದಿಗಳಿಂದ ವಶಪಡಿಸಿಕೊಂಡಿದ್ದಾರೆ. ತನಿಖೆಯಲ್ಲಿ ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ಕೈದಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ತೋರಿಯಾಗಿದೆ. ಮೂವರು ಕೈದಿಗಳು ಹಿಂದೆ ನಡೆದ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಬೇರೆ ಬ್ಯಾರಕ್‌ಗೆ ಸ್ಥಳಾಂತರಗೊಂಡಿದ್ದರಿಂದ ಅಸಮಾಧಾನದಿಂದ ಡಿಜಿಪಿ ಅಲೋಕ್ ಕುಮಾರ್ ಅವರ ಹೆಸರಿಗೆ ಚ್ಯುತಿ ತರಲು ವಿಡಿಯೋ ವೈರಲ್ ಮಾಡಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ಸಂಬಂಧಿತ ಪ್ರಕರಣವನ್ನು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆದಲ್ಲಿ ದಾಖಲಿಸಿ, ಮೂವರು ಕೈದಿಗಳನ್ನು ಕ್ವಾರಂಟೈನ್ ಸೆಲ್ಗೆ ಸ್ಥಳಾಂತರಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆಯು ಡಿಜಿಪಿ ಅಲೋಕ್ ಕುಮಾರ್ ಆದೇಶದ ಮೇರೆಗೆ ವಾರ್ಡರ್‌ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್ ಮತ್ತು ಹನುಮಂತಪ್ಪ ಹಡಪದ್ ಅವರನ್ನು ಅಮಾನತು ಮಾಡಿದ್ದು, ಜೈಲರ್ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇದೇ ವೇಳೆ, ಜೈಲಿನ ಕೆಲವು ಭಾಗಗಳಲ್ಲಿ ಏರ್‌ಟೆಲ್ ಸಿಗ್ನಲ್ ಲಭ್ಯತೆ ಪತ್ತೆಯಾಗಿದ್ದು, ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನೆಲಮಂಗಲ
ನೆಲಮಂಗಲ–ಕುಣಿಗಲ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಬಸ್-ಕಾರ್ ಡಿಕ್ಕಿ ಎರಡು ಕಾರುಗಳು ಜಖಂ!
ನೆಲಮಂಗಲ: ಭಾನುವಾರ ಸಂಜೆ ನೆಲಮಂಗಲ–ಕುಣಿಗಲ್ ರಾಷ್ಟ್ರೀಯ ಹೆದ್ದಾರ... ಓದನ್ನು ಮುಂದುವರಿಸಿ
ಫ್ಲೈಓವರ್‌ನಲ್ಲಿ ಭೀಕರ ಅಪಘಾತ: ಲಾರಿಗೆ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು
ಬೆಂಗಳೂರು: ನಗರದ ಕೊಡಿಗೆಹಳ್ಳಿ ಫ್ಲೈಓವರ್ ಮೇಲೆ ಇಂದು ಬೆಳಿಗ್ಗೆ... ಓದನ್ನು ಮುಂದುವರಿಸಿ
ಪರಿಶೀಲನೆಗೆ ಹೋಗಿದ್ದ ಪೊಲೀಸ್ರ ಮೇಲೆ ಹೌಹಾರಿದ ಮಾಜಿ ರೌಡಿಶೀಟರ್ ಪಟಾಲಂ!
ಬೆಂಗಳೂರು, ಮಾ. 29: ನಗರದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ... ಓದನ್ನು ಮುಂದುವರಿಸಿ
ಮಚ್ಚು ಹಿಡಿದು “ಅಣ್ಣಮ್ಮ” ಸಾಂಗ್‌ಗೆ ರೌಡಿಶೀಟರ್ ಡ್ಯಾನ್ಸ್: ಇಬ್ಬರ ಬಂಧನ
ಬೆಂಗಳೂರು, ಮಾ. 29: ನಗರದ ಬ್ಯಾಟರಾಯನಪುರದಲ್ಲಿ ರೌಡಿಶೀಟರ್‌ರೊಬ್... ಓದನ್ನು ಮುಂದುವರಿಸಿ
ಹುಯಿಲಗೋಳದಲ್ಲಿ ಯುವಕ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ – ಕೊಲೆ ಅನುಮಾನ
ಗದಗ: ತಾಲ್ಲೂಕಿನ ಹುಯಿಲಗೋಳ ಗ್ರಾಮದ ಒಂದು ಸೇತುವೆಯ ಕೆಳಭಾಗದಲ್ಲಿ... ಓದನ್ನು ಮುಂದುವರಿಸಿ
ಅಕ್ರಮ ಸಂಬಂಧಕ್ಕೆ ಆತಂಕ – ಪತಿಯ ಭೀಕರ ಕೊಲೆ ಮತ್ತು ಅಪಘಾತ ನಾಟಕ
ಯಾದಗಿರಿ : ಜಿಲ್ಲೆಯಲ್ಲಿ ಸುಖವಾಗಿದ್ದ ಕುಟುಂಬದಲ್ಲಿ ಅಕ್ರಮ ಸಂಬಂ... ಓದನ್ನು ಮುಂದುವರಿಸಿ
ಫೋಟೋಶೂಟ್ ತಂಡದ ಮೇಲೆ ಮಾರಣಾಂತಿಕ ದಾಳಿ ಕೈಮುಗಿದರೂ ಬಿಡದ ಕಿಡಿಗೇಡಿಗಳು
ಹಾಸನ : ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪ್ರಸಿದ್ಧ ಭೈರವೇಶ್ವರ ದೇ... ಓದನ್ನು ಮುಂದುವರಿಸಿ
ಮಂಗಳೂರು
ಬಾವಿ ನಿರ್ಮಾಣ ವೇಳೆ ದಾರುಣ ದುರ್ಘಟನೆ-30 ಅಡಿ ಎತ್ತರದಿಂದ ಬಕೆಟ್ ಬಿದ್ದು ಕಾರ್ಮಿಕ ಸಾವು
ಮಂಗಳೂರು: ಮಂಗಳೂರಿನ ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನ... ಓದನ್ನು ಮುಂದುವರಿಸಿ
ಮಸ್ಕಿ ತಾಲೂಕು
ಮಸ್ಕಿ ತಾಲ್ಲೂಕಿನಲ್ಲಿ ಶೋಕ: ನಕಲಿ ವೈದ್ಯನ ಇಂಜೆಕ್ಷನ್‌ನಿಂದ 14 ವರ್ಷದ ವಿದ್ಯಾರ್ಥಿನಿ ಮರಣ
ರಾಯಚೂರು: ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮದಲ್ಲಿ ನಕಲಿ ವೈದ್ಯನ... ಓದನ್ನು ಮುಂದುವರಿಸಿ
ಗೌರಿಬಿದನೂರು
ಗೌರಿಬಿದನೂರಲ್ಲಿ ಭೀಕರ ಹತ್ಯೆ: ಮಂಚದಿಂದ ಬಿದ್ದನೆಂಬ ಸುಳ್ಳು, ಕ್ರೂರ ಕೊಲೆ ಬಯಲು!
ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯಲ್ಲಿ ಭ... ಓದನ್ನು ಮುಂದುವರಿಸಿ