ನೀರು ಕುಡಿದ ಬಳಿಕ ಬಾಟಲ್ ನ ಕಾರಲ್ಲೇ ಬಿಡ್ತೀರಾ? ಹುಷಾರ್…

ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ಒಂದು ಕಡೆ ಮಳೆ ಸುರಿಯುತ್ತಿದ್ದರು ಮತ್ತೊಂದು ಕಡೆ ಕಡು ಬಿಸಿಲು ಜನರನ್ನು ಹೈರಾಣಾಗಿಸಿದೆ. ಇತ್ತ ತಾಪಮಾನ ಹೆಚ್ಚಳದಿಂದಾಗಿ ಅಗ್ನಿ ಅವಘಡಗಳು ಸಂಭವಿಸುತ್ತಿದ್ದು, ವಾಹನಗಳಿಗೆ ಫುಲ್​ ಟ್ಯಾಂಕ್​ ಮಾಡಿಸದಂತೆ ಎಚ್ಚರಿಕೆ ನೀಡಲಾಗಿದೆ. ಹೀಗಿರುವಾಗಲೇ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಾರೊಂದು ವಾಟರ್​ ಬಾಟಲ್​ನಿಂದ ಸುಟ್ಟು ಕರಕಲಾಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. 

 

ಕಾರು ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆದರೆ, ಕಾರು ವಾಟರ್​ ಬಾಟಲ್​ನಿಂದ ಸುಟ್ಟು ಕರಕಲಾಯ್ತು ಎಂಬ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಕಾರಿನ ಸೀಟ್​ ಮೇಲೆ ಇಡಲಾಗಿದ್ದ ಖಾಲಿ ನೀರಿನ ಬಾಟಲಿಗೆ ಸೂರ್ಯನ ಕಿರಣ ತಾಗಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಕಾರಿಗೆ ವ್ಯಾಪಿಸಿದೆ. ಘಟನೆ ನಡೆದಾಗ ಕಾರಿನಲ್ಲಿ ಯಾರು ಇರಲಿಲ್ಲ ಎಂದು ತಿಳಿದು ಬಂದಿದೆ. 

 

ವಿಚಾರ ತಿಳಿದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ಐದು ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಈ ವಿಡಿಯೋ ಅನೇಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಇನ್ನು ಮುಂದೆ ಕಾರಿನಲ್ಲಿ ವಾಟರ್​ ಬಾಟಲ್​ ಸೇರಿದಂತೆ ಕೆಲವು ವಸ್ತುಗಳನ್ನು ಇಡದಂತೆ ಇದು ಎಚ್ಚರಿಕೆ ಗಂಟೆಯ ವಿಡಿಯೋವಾಗಿದೆ.

 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

7 months ago

   
Image 1
Image 1
ಬೆಂಗಳೂರು ನಗರ

ಪೆಟ್ರೋಲ್- ಡೀಸೆಲ್‌ ಬೆಲೆ ಏರಿಕೆ, ಜನರ ಜೇಬಿಗೆ ಕತ್ತರಿ…! ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರ ವಿರುದ್ದ ಬಿಜೆಪಿ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರ ಪೆಟ್ರೋಲ್- ಡೀಸೆಲ್ ಬೆಲೆಯನ್ನು ಹೆಚ್ಚ... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1
ಬೆಂಗಳೂರು ನಗರ

ಟ್ರಾಫಿಕ್​​ನಿಂದ ಬಳಲುತ್ತಿದ್ದವರಿಗೆ ಗುಡ್ ನ್ಯೂಸ್ … ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಸಿದ್ಧ..!

ಬೆಂಗಳೂರು: ಟ್ರಾಫಿಕ್​​ನಿಂದ ಬಳಲುತ್ತಿದ್ದವರಿಗೆ ಗುಡ್ ನ್ಯೂಸ್ ಸ... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1
ಬೆಂಗಳೂರು ನಗರ

ಕಳೆದ ಹತ್ತು ದಿನದಲ್ಲಿ ಒಂದಷ್ಟು ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ತುಸು ಏರಿಕೆ

ಬೆಂಗಳೂರು : ಕಳೆದ ಹತ್ತು ದಿನದಲ್ಲಿ ಒಂದಷ್ಟು ಇಳಿಕೆಯಾಗಿದ್ದ &nb... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1

ವೀಕೆಂಡ್‌ʼನಲ್ಲಿ ಚಿನ್ನ-ಬೆಳ್ಳಿ ಬೆಲೆ ಇಳಿಕೆ! ಇಂದು ಎಷ್ಟಿದೆ ನೋಡೋಣ

ಚಿನ್ನದ ಬೆಲೆಯೂ ಕಡಿಮೆ ಆಗುವ ಸಾಧ್ಯತೆ ಇದೆ. ವಿದೇಶಗಳ ಕೆಲವೆಡೆ ಚಿನ್ನದ ಬೆಲೆ ಅಲ್ಪ ಇ... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1

ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

ಬೆಂಗಳೂರು: ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1

ಏಲಿಯನ್‌ಗಳು ನಮ್ಮ ನಡುವೆ ಮನುಷ್ಯರಂತೆಯೇ ಜೀವಿಸುತ್ತಿರಬಹುದು!

ಏಲಿಯನ್‌ಗಳು ಎಂದು ಕರೆಯಿಸಿಕೊಳ್ಳುವ ಈ ಅನ್ಯಗ್ರಹ ಜೀವಿಗಳು ಇರುವುದು ಹೌದೋ ಅಲ್ಲವೋ ಎಂ... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1
ಬೆಂಗಳೂರು ನಗರ

ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ.. ಈ ದಿನದಂದು ರೈಲಿನ ಸಮಯ ಬದಲಾವಣೆ!

ಬೆಂಗಳೂರು: ಮೆಟ್ರೋ ಪ್ರಯಾಣಿಕರು ಗಮನಿಸಬೇಕಾದ ಸುದ್ದಿ. ಭಾನುವಾರ... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1

ಚಿನ್ನ, ಬೆಳ್ಳಿ ಎರಡೂ ಬೆಲೆಯಲ್ಲಿ ಹೆಚ್ಚಳ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ಇಂದು ಚಿನ್ನ, ಬೆಳ್ಳಿ ಎರಡೂ ಬೆಲೆ ಹೆಚ್ಚಳವಾಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1

ರಾತ್ರಿ ಹೊತ್ತು ಮೊಬೈಲ್ ಚಾರ್ಜ್‌ʼಗೆ ಹಾಕಿ ಮಲಗ್ತೀರಾ? ಹಾಗಾದ್ರೆ ಈ ಸ್ಟೋರಿ ಓದಲೇಬೇಕು!

ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇವುಗಳನ್ನು ಬಳಸಲು ನಾವು ಪ್ರತ... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1

HSRP ನಂಬರ್ ಪ್ಲೇಟ್ ಅಳವಡಿಸೋ ವಾಹನ ಸವಾರರಿಗೆ ಹೈಕೋರ್ಟ್‌ʼನಿಂದ ಸಿಹಿ ಸುದ್ದಿ!

ಬೆಂಗಳೂರು: ಏಪ್ರಿಲ್.1, 2019ಕ್ಕಿಂತ ಮೊದಲು ನೋಂದಾಯಿಸಿಕೊಂಡ ವಾಹ... ಓದನ್ನು ಮುಂದುವರಿಸಿ


Edited by: ಬಾನು

7 months ago

   
Image 1