ನಟ ದರ್ಶನ್ ಅವರನ್ನು ನೋಡಲು ಹೋದ ಯಲಹಂಕ ಮೂಲದ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಅವರಿಗೆ ಸಾಥ್ ನೀಡಿದ ಜೈಲು ವಾರ್ಡನ್
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ಹಾಗೂ ಆರೋಪಿ ದರ್ಶನ್ ಅವರನ್ನು ನೋಡಲು ಹೋದ ಯಲಹಂಕ ಮೂಲದ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಅವರಿಗೆ ಸಾಥ್ ನೀಡಿದ ಜೈಲು ವಾರ್ಡನ್ ವಿರುದ್ಧ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಜನವರಿ 24 ರಂದು ಯಲಹಂಕ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ಬೇರೊಂದು ಪ್ರಕರಣದ ಆರೋಪಿಗಳನ್ನು ಜೈಲಿಗೆ ಬಿಡಲು ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು. ಈ ವೇಳೆ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ವಾರ್ಡರ್ ಪ್ರಭಾಕರ್ ಚೌಹಾನ್ ಬಳಿ, "ನನಗೆ ನಟ ದರ್ಶನ್ ಅವರನ್ನು ನೋಡಬೇಕು, ತೋರಿಸಿ" ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಪ್ರಭಾಕರ್, ಸಿಸಿಟಿವಿ ಕ್ಯಾಮರಾಗಳ ಕಣ್ಣು ತಪ್ಪಿಸಿ ರಹಸ್ಯವಾಗಿ ಪೇದೆಯನ್ನು ದರ್ಶನ್ ಇದ್ದ ಬ್ಯಾರಕ್ ಬಳಿ ಕರೆದೊಯ್ದಿದ್ದಾರೆ.
ಕಳೆದ ಜನವರಿ 26 ರಂದು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ದರ್ಶನ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, "ಯಾರೋ ಖಾಕಿ ಬಟ್ಟೆ ಹಾಕಿಕೊಂಡವರು ಬಂದು ನನ್ನನ್ನು ನೋಡಿ ಹೋದರು" ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ಡಿಜಿಪಿ, ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಪೊಲೀಸರ ಈ ಕಳ್ಳಾಟ ಬಯಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪೇದೆಯ ಚಲನವಲನ ಹಾಗೂ ವಾರ್ಡರ್ ಪ್ರಭಾಕರ್ ಆತನಿಗೆ ಸಹಾಯ ಮಾಡುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಜೈಲಿನ ನಿಯಮಗಳನ್ನು ಗಾಳಿಗೆ ತೂರಿದ ಹಿನ್ನೆಲೆಯಲ್ಲಿ ವಾರ್ಡರ್ ಪ್ರಭಾಕರ್ ಚೌಹಾನ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಚಾಮರಾಜನಗರ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಅವರ ವಿರುದ್ಧ ಇಲಾಖಾ ತನಿಖೆಗೂ ಆದೇಶಿಸಲಾಗಿದೆ.
ಕೇವಲ ಜೈಲು ಸಿಬ್ಬಂದಿ ಮಾತ್ರವಲ್ಲದೆ, ಅನಧಿಕೃತವಾಗಿ ದರ್ಶನ್ ನೋಡಲು ಹೋದ ಯಲಹಂಕದ ಪೊಲೀಸ್ ಪೇದೆಯ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವಂತೆ ಈಶಾನ್ಯ ವಿಭಾಗದ ಡಿಸಿಪಿಗೆ ಅಲೋಕ್ ಕುಮಾರ್ ಅವರು ಖಡಕ್ ಸೂಚನೆ ನೀಡಿದ್ದಾರೆ. ಜೈಲಿನೊಳಗೆ ಎಷ್ಟೇ ದೊಡ್ಡ ಸೆಲೆಬ್ರಿಟಿ ಇದ್ದರೂ ನಿಯಮಗಳು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಡಿಜಿಪಿ ಅಲೋಕ್ ಕುಮಾರ್ ಈ ಕ್ರಮದ ಮೂಲಕ ರವಾನಿಸಿದ್ದಾರೆ. ಈ ಘಟನೆಯು ಪೊಲೀಸ್ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ತನಿಖೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ 'SIT' ರಚನೆ
ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ ರಾಯ್ ಅವರ ಆತ್ಮಹತ್ಯ... ಓದನ್ನು ಮುಂದುವರಿಸಿ
ಮತ್ತೊಂದು ಲೋಕಾಯುಕ್ತ ಟ್ರ್ಯಾಪ್ - 1 ಲಕ್ಷ ಲಂಚಕ್ಕೆ ಬೇಡಿಕೆ, 40 ಸಾವಿರಕ್ಕೆ ಫೈನಲ್ - ಬಲೆಗೆ ಬಿದ್ದ ತುಮಕೂರು ಗ್ರಾಮಾಂತರ ಪಿಎಸ್ಐ ಚೇತನ್
ತುಮಕೂರು : ಬೆಂಗಳೂರು ಮೂಲದ ವ್ಯಕ್ತಿಗೆ 1 ಲಕ್ಷಕ್ಕೆ ಬೇಡಿಕೆ ಇಟ್... ಓದನ್ನು ಮುಂದುವರಿಸಿ
ಇನ್ಮುಂದೆ ಪೊಲೀಸ್ ಸಿಬ್ಬಂದಿಗಳಿಗೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ: ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗಳಿಗೆ ಭರ್ಜರಿ... ಓದನ್ನು ಮುಂದುವರಿಸಿ
ಕೊಟ್ಟೂರು
ಮಗನಿಂದಲೇ ತಂದೆ, ತಾಯಿ, ಸಹೋದರಿಯ ಬರ್ಬರ ಹತ್ಯೆ
ವಿಜಯನಗರ: ಮಗನೇ ತಂದೆ, ತಾಯಿ ಹಾಗೂ ಸಹೋದರಿ ಮೂವರನ್ನು ಹತ್ಯೆಗೈರು... ಓದನ್ನು ಮುಂದುವರಿಸಿ
ಲಂಚ ಪಡೆವಾಗ ಲೋಕಾಯುಕ್ತ ದಾಳಿ: ಇನ್ಸ್ ಪೆಕ್ಟರ್ ಹೈಡ್ರಾಮಾ, ಪೊಲೀಸರ ವಿರುದ್ಧವೇ ಕೂಗಾಡಿ ರಂಪಾಟ,
ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಅಧ... ಓದನ್ನು ಮುಂದುವರಿಸಿ
ಸಿರವಾರ
ಗರ್ಭಿಣಿ ಸೊಸೆಯ ಕತ್ತು ಸೀಳಿ ಕೊಂದ ಪಾಪಿ ಮಾವ! ಮನುಕುಲವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆ
ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ, ಹೆತ್ತ ಮಗಳಂತಿರಬೇಕಾದ... ಓದನ್ನು ಮುಂದುವರಿಸಿ
ಪೊಲೀಸ್ರ ಮುಂದೆ ಸುಸ್ತು, ನಿಶಕ್ತಿ ಅಂತಾ ನಾಟಕ ಮಾಡಿದ್ಲಾ ಪವಿತ್ರಗೌಡ..!
ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯ ತನಿಖೆಯಲ್ಲಿ ಎ1... ಓದನ್ನು ಮುಂದುವರಿಸಿ
ಮತ್ತೆ ಮತ್ತೆ ಪುರುಷತ್ವ ಪರೀಕ್ಷೆ ಮಾಡಿಸಲು ತುಂಬಾ ಮುಜುಗರ ಆಗತ್ತೆ: ಜಡ್ಜ್ ಮುಂದೆ ಪ್ರಜ್ವಲ್ ಅಳಲು
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ... ಓದನ್ನು ಮುಂದುವರಿಸಿ
ದರ್ಶನ್ ತಂಗಿದ ಮೈಸೂರಿನ ಹೋಟೆಲ್ ನಲ್ಲೂ ಸ್ಥಳ ಮಹಜರು: ಆರೋಪಿಗಳನ್ನು ಕರೆದೊಯ್ಯದ ಪೊಲೀಸರು
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಟ ದರ್ಶನ್ ಹಾಗೂ ಇತರ ಆರೋಪಿಗ... ಓದನ್ನು ಮುಂದುವರಿಸಿ
ರೇಣುಕಾಸ್ವಾಮಿ ಕೊಲೆ ಪ್ರಕರಣ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರಿಂದ ಸುದ್ದಿಗೋಷ್ಠಿ
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17ಮಂದಿ... ಓದನ್ನು ಮುಂದುವರಿಸಿ