ಗರ್ಭಿಣಿ ಸೊಸೆಯ ಕತ್ತು ಸೀಳಿ ಕೊಂದ ಪಾಪಿ ಮಾವ! ಮನುಕುಲವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆ
ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ, ಹೆತ್ತ ಮಗಳಂತಿರಬೇಕಾದ ಸೊಸೆಯನ್ನ ಮಾವನೊಬ್ಬ ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಚಿಕ್ಕಹಣಗಿ ಗ್ರಾಮದಲ್ಲಿ ನಡೆದಿದೆ. ಮನುಕುಲವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಯಾಗಿದೆ. ಮೃತ ದುರ್ದೈವಿಯನ್ನು ರೇಖಾ (25) ಎಂದು ಗುರುತಿಸಲಾಗಿದ್ದು, ಈಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಇತ್ತೀಚೆಗೆ ತವರು ಮನೆಗೆ ಬಂದಿದ್ದಳು. ರೇಖಾ ಅವರ ಮಾವ ಸಿದ್ದಪ್ಪ (50) ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಆರೋಪಿ. ಸಿದ್ದಪ್ಪ ಸೊಸೆಯ ಜೊತೆಗಿನ ಕೌಟುಂಬಿಕ ಕಲಹವನ್ನು ಮನಸ್ಸಿನಲ್ಲಿಟ್ಟುಕೊಂಡು, ಆಕೆಯನ್ನು ಮುಗಿಸಲು ಸಂಚು ರೂಪಿಸಿ ಸಿರವಾರ ತಾಲೂಕಿನ ಅಣಗಿ ಗ್ರಾಮದ ಆಕೆಯ ತವರು ಮನೆಗೆ ತೆರಳಿದ್ದಾನೆ.

ಮನೆಯಲ್ಲಿ ರೇಖಾ ಒಬ್ಬಳೇ ಇರುವುದನ್ನು ಗಮನಿಸಿದ ಸಿದ್ದಪ್ಪ, ಒಳ ನುಗ್ಗಿ ರೇಖಾ ಟಿವಿ ನೋಡುತ್ತಾ ಮಲಗಿದ್ದ ವೇಳೆ ಹರಿತವಾದ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿದ್ದಾನೆ. ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ರೇಖಾ, ಪ್ರಾಣ ಉಳಿಸಿಕೊಳ್ಳಲು ತೀವ್ರವಾಗಿ ಪ್ರಯತ್ನಿಸಿದ್ದಾಳೆ. ರಕ್ತದ ಮಡುವಿನಲ್ಲಿಯೇ ಮನೆಯಿಂದ ಹೊರಗೆ ಓಡಿಬಂದ ರೇಖಾ, ರಸ್ತೆಯಲ್ಲಿ ನರಳಾಡಿ ಕೊನೆಯುಸಿರೆಳೆದಿದ್ದಾರೆ. ಆಕೆಯ ಈ ಆರ್ತನಾದ ಮತ್ತು ಕೊನೆಯ ಕ್ಷಣದ ಹೋರಾಟ ನೆರೆಹೊರೆಯವರ ಕರುಳು ಹಿಂಡುವಂತಿತ್ತು.ಸೊಸೆಯನ್ನು ಕೊಂದ ನಂತರ ಮಾವ ಸಿದ್ದಪ್ಪ ಸ್ಥಳದಿಂದ ಪರಾರಿಯಾಗಿದ್ದ. ಈ ಕುರಿತು ಮಾಹಿತಿ ತಿಳಿದ ತಕ್ಷಣ ಕವಿತಾಳ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಆರೋಪಿ ಸಿದ್ದಪ್ಪನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ನಾಲ್ಕು ತಿಂಗಳ ಗರ್ಭಿಣಿ ಎಂಬ ಕನಿಷ್ಠ ಮಾನವೀಯತೆಯೂ ಇಲ್ಲದೆ ಸಿದ್ದಪ್ಪ ಇಂತಹ ಘೋರ ಕೃತ್ಯ ಎಸಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಜೀವದ ಜೊತೆಗೆ ಹುಟ್ಟಲಿರುವ ಮಗುವನ್ನೂ ಕೊಂದ ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಸದ್ಯ ಕವಿತಾಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಸಿದ್ದಪ್ಪನ ವಿಚಾರಣೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹಕ್ಕೆ ಬಲಿಯಾದ ರೇಖಾ ಅವರ ಸಾವು ಇಡೀ ಗ್ರಾಮದಲ್ಲಿ ಶೋಕದ ವಾತಾವರಣವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ತನಿಖೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ 'SIT' ರಚನೆ
ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ ರಾಯ್ ಅವರ ಆತ್ಮಹತ್ಯ... ಓದನ್ನು ಮುಂದುವರಿಸಿ
ಮತ್ತೊಂದು ಲೋಕಾಯುಕ್ತ ಟ್ರ್ಯಾಪ್ - 1 ಲಕ್ಷ ಲಂಚಕ್ಕೆ ಬೇಡಿಕೆ, 40 ಸಾವಿರಕ್ಕೆ ಫೈನಲ್ - ಬಲೆಗೆ ಬಿದ್ದ ತುಮಕೂರು ಗ್ರಾಮಾಂತರ ಪಿಎಸ್ಐ ಚೇತನ್
ತುಮಕೂರು : ಬೆಂಗಳೂರು ಮೂಲದ ವ್ಯಕ್ತಿಗೆ 1 ಲಕ್ಷಕ್ಕೆ ಬೇಡಿಕೆ ಇಟ್... ಓದನ್ನು ಮುಂದುವರಿಸಿ
ಇನ್ಮುಂದೆ ಪೊಲೀಸ್ ಸಿಬ್ಬಂದಿಗಳಿಗೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ: ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗಳಿಗೆ ಭರ್ಜರಿ... ಓದನ್ನು ಮುಂದುವರಿಸಿ
ಕೊಟ್ಟೂರು
ಮಗನಿಂದಲೇ ತಂದೆ, ತಾಯಿ, ಸಹೋದರಿಯ ಬರ್ಬರ ಹತ್ಯೆ
ವಿಜಯನಗರ: ಮಗನೇ ತಂದೆ, ತಾಯಿ ಹಾಗೂ ಸಹೋದರಿ ಮೂವರನ್ನು ಹತ್ಯೆಗೈರು... ಓದನ್ನು ಮುಂದುವರಿಸಿ
ಲಂಚ ಪಡೆವಾಗ ಲೋಕಾಯುಕ್ತ ದಾಳಿ: ಇನ್ಸ್ ಪೆಕ್ಟರ್ ಹೈಡ್ರಾಮಾ, ಪೊಲೀಸರ ವಿರುದ್ಧವೇ ಕೂಗಾಡಿ ರಂಪಾಟ,
ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಅಧ... ಓದನ್ನು ಮುಂದುವರಿಸಿ
ನಟ ದರ್ಶನ್ ಅವರನ್ನು ನೋಡಲು ಹೋದ ಯಲಹಂಕ ಮೂಲದ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಅವರಿಗೆ ಸಾಥ್ ನೀಡಿದ ಜೈಲು ವಾರ್ಡನ್
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ಹಾಗೂ ಆರೋಪಿ ದರ್... ಓದನ್ನು ಮುಂದುವರಿಸಿ
ಪೊಲೀಸ್ರ ಮುಂದೆ ಸುಸ್ತು, ನಿಶಕ್ತಿ ಅಂತಾ ನಾಟಕ ಮಾಡಿದ್ಲಾ ಪವಿತ್ರಗೌಡ..!
ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯ ತನಿಖೆಯಲ್ಲಿ ಎ1... ಓದನ್ನು ಮುಂದುವರಿಸಿ
ಮತ್ತೆ ಮತ್ತೆ ಪುರುಷತ್ವ ಪರೀಕ್ಷೆ ಮಾಡಿಸಲು ತುಂಬಾ ಮುಜುಗರ ಆಗತ್ತೆ: ಜಡ್ಜ್ ಮುಂದೆ ಪ್ರಜ್ವಲ್ ಅಳಲು
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ... ಓದನ್ನು ಮುಂದುವರಿಸಿ
ದರ್ಶನ್ ತಂಗಿದ ಮೈಸೂರಿನ ಹೋಟೆಲ್ ನಲ್ಲೂ ಸ್ಥಳ ಮಹಜರು: ಆರೋಪಿಗಳನ್ನು ಕರೆದೊಯ್ಯದ ಪೊಲೀಸರು
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಟ ದರ್ಶನ್ ಹಾಗೂ ಇತರ ಆರೋಪಿಗ... ಓದನ್ನು ಮುಂದುವರಿಸಿ
ರೇಣುಕಾಸ್ವಾಮಿ ಕೊಲೆ ಪ್ರಕರಣ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರಿಂದ ಸುದ್ದಿಗೋಷ್ಠಿ
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17ಮಂದಿ... ಓದನ್ನು ಮುಂದುವರಿಸಿ