ಮೋಸ್ಟ್ ವಾಂಟೆಡ್ ಉಗ್ರ ಜುನೈದ್ ಅಹ್ಮದ್ ಮಾಹಿತಿ ನೀಡಿದವರಿಗೆ ₹5 ಲಕ್ಷ ಬಹುಮಾನ-ಎನ್‌ಐಎ ಘೋಷಣೆ
ಬೆಂಗಳೂರು : ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿರುವ ಜುನೈದ್ ಅಹಮ್ಮದ್ ಕುರಿತು ಮಾಹಿತಿ ನೀಡಿದವರಿಗೆ ₹5 ಲಕ್ಷ ಬಹುಮಾನ ಘೋಷಿಸಿದೆ. ಲಷ್ಕರ್-ಎ-ತೊಯಿಬಾ (Lashkar-e-Taiba) ಸಂಪರ್ಕ ಹೊಂದಿರುವ ಶಂಕಿತ ಉಗ್ರನಿಗಾಗಿ ಎನ್‌ಐಎ ಕಳೆದ ಮೂರು ವರ್ಷಗಳಿಂದ ದೇಶದ ಒಳಗೂ ಹೊರಗೂ ಹುಡುಕಾಟ ನಡೆಸುತ್ತಿದೆ. ಇದುವರೆಗೆ ಅವನ ಸುಳಿವು ಸಿಗದ ಹಿನ್ನೆಲೆಯಲ್ಲಿ ಮಾಹಿತಿ ನೀಡುವವರಿಗೆ ನಗದು ಬಹುಮಾನ ನೀಡುವುದಾಗಿ ಪ್ರಕಟಣೆ ಹೊರಡಿಸಲಾಗಿದೆ.
ನಗರದ ಜನನಿಬಿಡ ಪ್ರದೇಶಗಳಾದ ಮೆಜೆಸ್ಟಿಕ್ ಸೇರಿದಂತೆ ವಿವಿಧ ಭಾಗಗಳಲ್ಲಿ ವಾಂಟೆಡ್ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. 2023ರಲ್ಲಿ ಸಿಸಿಬಿ ಪೊಲೀಸರು ಭೇದಿಸಿದ ಉಗ್ರ ಸಂಚು ಪ್ರಕರಣದಲ್ಲಿ ಜುನೈದ್ ಅಹಮ್ಮದ್ ಪ್ರಮುಖ ರೂವಾರಿಯಾಗಿದ್ದನೆಂದು ಆರೋಪಿಸಲಾಗಿದೆ. ಆತನ ನಿವಾಸದಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ತನಿಖಾ ಮೂಲಗಳು ತಿಳಿಸಿವೆ.
ಇನ್ನೂ, ಜುನೈದ್ ಅಹಮ್ಮದ್ ಈ ಹಿಂದೆ ರಕ್ತಚಂದನ ಪ್ರಕರಣದಲ್ಲೂ ಬಂಧನಕ್ಕೊಳಗಾಗಿದ್ದನು. ಜೈಲಿನಲ್ಲಿದ್ದ ವೇಳೆ ಟಿ. ನಾಸೀರ್ ಪ್ರೇರಣೆಯಿಂದ ಉಗ್ರ ಸಂಘಟನೆಯಲ್ಲಿ ಸೇರಿದ್ದಾನೆ ಎಂಬ ಆರೋಪವಿದೆ. ಜಾಮೀನಿನ ನಂತರ ದುಬೈಗೆ ತೆರಳಿ ಅಲ್ಲಿಂದ ಶಸ್ತ್ರಾಸ್ತ್ರ ಪೂರೈಕೆ ನಡೆಸಿದ್ದಾನೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಬೆಂಗಳೂರು ನಗರದ ನಾಗಶೆಟ್ಟಿ ಹಳ್ಳಿಯ ನಿವಾಸಿಯಾಗಿರುವ ಜುನೈದ್ ಅಹಮ್ಮದ್‌ಗಾಗಿ ಎನ್‌ಐಎ ಪೊಲೀಸರು ನಗರಾದ್ಯಂತ ಶೋಧ ಕಾರ್ಯ ಮುಂದುವರಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹೃದಯವಿದ್ರಾವಕ ಘಟನೆ: ಪೊಲೀಸಪ್ಪನ ಕಿರುಕುಳ ಆರೋಪದ ಮಧ್ಯೆ ವಿಧವಾ ಮಹಿಳೆಯ ಆತ್ಮಹತ್ಯೆ
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ... ಓದನ್ನು ಮುಂದುವರಿಸಿ
ಹುಮ್ನಾಬಾದ್ ಪೊಲೀಸ್ ಕಾರ್ಯಾಚರಣೆಯಲ್ಲಿ ಹೈವೇ ದರೋಡೆಗೋರರು ಸೆರೆ
ಬೀದರ್ : ಹೈವೇ ಮೇಲೆ ಮಾರಕ ಅಸ್ತ್ರಗಳನ್ನು ಹಿಡಿದು ವಾಹನ ಚಾಲಕರನ್... ಓದನ್ನು ಮುಂದುವರಿಸಿ
ಕೊಪ್ಪಳ ಗ್ಯಾಂಗ್ ರೇಪ್ ಪ್ರಕರಣ: ಮೂವರಿಗೆ ಮರಣದಂಡನೆ ವಿಧಿಸಿದ ಕೋರ್ಟ್
ಕೊಪ್ಪಳ : ಮದ್ಯ ಮತ್ತು ಮಾದಕ ವಸ್ತುಗಳ ಅಮಲಿನಲ್ಲಿದ್ದ ಮೂವರು ವ್ಯ... ಓದನ್ನು ಮುಂದುವರಿಸಿ
ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ-ಎಸ್‌ಪಿ ಸಿದ್ದಾರ್ಥ ಗೋಯೆಲ್‌ಗೆ ಕಲ್ಲು ತಗುಲಿದ ಶಂಕೆ
ಬಾಗಲಕೋಟೆ : ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ... ಓದನ್ನು ಮುಂದುವರಿಸಿ
ಮದ್ದೂರು
ಮಂಡ್ಯ: ಗೆಜ್ಜಲಗೆರೆ ಮನ್‌ಮುಲ್ ಅಧಿಕಾರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ಮಂಡ್ಯ: ಮದ್ದೂರು ತಾಲೂಕಿನ ಮನ್‌ಮುಲ್ ಮೇಗಾ ಡೈರಿಯ ಉಪ ವ್ಯವಸ್ಥಾಪ... ಓದನ್ನು ಮುಂದುವರಿಸಿ
ಮಂಗಳೂರು
ಕ್ರಿಕೆಟ್ ಆಟದ ವೇಳೆ ಸ್ಫೋಟ – ಬಂದಾರು ಗ್ರಾಮದಲ್ಲಿ ಬಾಲಕನಿಗೆ ಗಾಯ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಂದಾ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಖಾಸಗಿ ಕಾಂಪೌಂಡ್‌ನಲ್ಲಿ ಶವ ಪತ್ತೆ: ಮರದಲ್ಲಿ ನೇತಾಡುತ್ತಿದ್ದ ಬುರುಡೆ
ದೊಡ್ಡಬಳ್ಳಾಪುರ : ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟ... ಓದನ್ನು ಮುಂದುವರಿಸಿ
ಪ್ರಿಯಕರನಿಗಾಗಿ ಕಳ್ಳತನ ಮಾಡಿದ ಪ್ರಮೀಳಾ ಅರೆಸ್ಟ್ – ಬೆಳ್ಳೂರು ಪೊಲೀಸ್ ಸಾಧನೆ
ಬೆಂಗಳೂರು: ಬಾಬುಸಾಪಾಳ್ಯ ಪ್ರದೇಶದ ಹೆಣ್ಣೂರು ಪೊಲೀಸ್ ಠಾಣೆ ಸಿಬ್... ಓದನ್ನು ಮುಂದುವರಿಸಿ
ಪೆರೋಲ್ ಮೇಲೆ ಬಂದ ಕಳ್ಳನ ರಾಬರಿ: ದರೋಡೆ ಮಾಡಿ ತಕ್ಷಣವೇ ಜೈಲು ಸೇರ್ಪಡೆ!
ಬೆಂಗಳೂರು : ಬ್ಯಾಡರಹಳ್ಳಿ ಪ್ರದೇಶದಲ್ಲಿ ಪೊಲೀಸ್ ಸಮವಸ್ತ್ರ ಧರಿಸ... ಓದನ್ನು ಮುಂದುವರಿಸಿ
ಕೆಂಗೇರಿ ತಡರಾತ್ರಿ ಅಗ್ನಿ: ಮೈಲಾರಪ್ಪ ಮೃತ, ಡಿಸಿಪಿ ಅನಿತಾ ಹದ್ದಣ್ಣನವರ್ ಮಾಹಿತಿ
ಬೆಂಗಳೂರು : ಕೆಂಗೇರಿ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ... ಓದನ್ನು ಮುಂದುವರಿಸಿ