ಕ್ರಿಕೆಟ್ ಆಟದ ವೇಳೆ ಸ್ಫೋಟ – ಬಂದಾರು ಗ್ರಾಮದಲ್ಲಿ ಬಾಲಕನಿಗೆ ಗಾಯ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಂದಾರು ಗ್ರಾಮದಲ್ಲಿ ಚೆಂಡಿನ ಆಕಾರದ ಸಂಶಯಾಸ್ಪದ ವಸ್ತು ಸ್ಫೋಟಗೊಂಡು ಬಾಲಕನಿಗೆ ಗಾಯವಾದ ಘಟನೆ ನಡೆದಿದೆ. ಗಾಯಗೊಂಡ ಬಾಲಕ ಅಭೀಶ್‌ನ್ನು ತಕ್ಷಣ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.

 

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಅಭೀಶ್‌ಗೆ ಚೆಂಡಿನಾಕಾರದ ವಸ್ತು ಪತ್ತೆಯಾಗಿತ್ತು. ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ಆ ವಸ್ತುವನ್ನು ಬ್ಯಾಟ್‌ನಿಂದ ಹೊಡೆದಾಗ ಏಕಾಏಕಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಫೋಟದಿಂದ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆಯ ಹಿಂದೆ ಕಾಡು ಹಂದಿ ಬೇಟೆಗಾಗಿ ಅಕ್ರಮವಾಗಿ ಇಡಲಾಗಿದ್ದ ಬಾಂಬ್ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

 

ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 9(B), 1(b) ಸ್ಫೋಟಕಗಳ ಕಾಯ್ದೆ ಹಾಗೂ 125(A) ಬಿಎನ್‌ಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

17 hours ago

   
Image 1
Image 1
ಶಿವಮೊಗ್ಗ

ಹೃದಯವಿದ್ರಾವಕ ಘಟನೆ: ಪೊಲೀಸಪ್ಪನ ಕಿರುಕುಳ ಆರೋಪದ ಮಧ್ಯೆ ವಿಧವಾ ಮಹಿಳೆಯ ಆತ್ಮಹತ್ಯೆ

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೀದರ್

ಹುಮ್ನಾಬಾದ್ ಪೊಲೀಸ್ ಕಾರ್ಯಾಚರಣೆಯಲ್ಲಿ ಹೈವೇ ದರೋಡೆಗೋರರು ಸೆರೆ

ಬೀದರ್ : ಹೈವೇ ಮೇಲೆ ಮಾರಕ ಅಸ್ತ್ರಗಳನ್ನು ಹಿಡಿದು ವಾಹನ ಚಾಲಕರನ್... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ನಗರ

ಮೋಸ್ಟ್ ವಾಂಟೆಡ್ ಉಗ್ರ ಜುನೈದ್ ಅಹ್ಮದ್ ಮಾಹಿತಿ ನೀಡಿದವರಿಗೆ ₹5 ಲಕ್ಷ ಬಹುಮಾನ-ಎನ್‌ಐಎ ಘೋಷಣೆ

ಬೆಂಗಳೂರು : ರಾಷ್ಟ್ರೀಯ ತನಿಖಾ ಸಂಸ್ಥೆ (National Investigati... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಕೊಪ್ಪಳ

ಕೊಪ್ಪಳ ಗ್ಯಾಂಗ್ ರೇಪ್ ಪ್ರಕರಣ: ಮೂವರಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಕೊಪ್ಪಳ : ಮದ್ಯ ಮತ್ತು ಮಾದಕ ವಸ್ತುಗಳ ಅಮಲಿನಲ್ಲಿದ್ದ ಮೂವರು ವ್ಯ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬಾಗಲಕೋಟೆ

ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ-ಎಸ್‌ಪಿ ಸಿದ್ದಾರ್ಥ ಗೋಯೆಲ್‌ಗೆ ಕಲ್ಲು ತಗುಲಿದ ಶಂಕೆ

ಬಾಗಲಕೋಟೆ : ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಮಂಡ್ಯ

ಮದ್ದೂರು

ಮಂಡ್ಯ: ಗೆಜ್ಜಲಗೆರೆ ಮನ್‌ಮುಲ್ ಅಧಿಕಾರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಮಂಡ್ಯ: ಮದ್ದೂರು ತಾಲೂಕಿನ ಮನ್‌ಮುಲ್ ಮೇಗಾ ಡೈರಿಯ ಉಪ ವ್ಯವಸ್ಥಾಪ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು

ಖಾಸಗಿ ಕಾಂಪೌಂಡ್‌ನಲ್ಲಿ ಶವ ಪತ್ತೆ: ಮರದಲ್ಲಿ ನೇತಾಡುತ್ತಿದ್ದ ಬುರುಡೆ

ದೊಡ್ಡಬಳ್ಳಾಪುರ : ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಬೆಂಗಳೂರು ನಗರ

ಪ್ರಿಯಕರನಿಗಾಗಿ ಕಳ್ಳತನ ಮಾಡಿದ ಪ್ರಮೀಳಾ ಅರೆಸ್ಟ್ – ಬೆಳ್ಳೂರು ಪೊಲೀಸ್ ಸಾಧನೆ

ಬೆಂಗಳೂರು: ಬಾಬುಸಾಪಾಳ್ಯ ಪ್ರದೇಶದ ಹೆಣ್ಣೂರು ಪೊಲೀಸ್ ಠಾಣೆ ಸಿಬ್... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಬೆಂಗಳೂರು ನಗರ

ಪೆರೋಲ್ ಮೇಲೆ ಬಂದ ಕಳ್ಳನ ರಾಬರಿ: ದರೋಡೆ ಮಾಡಿ ತಕ್ಷಣವೇ ಜೈಲು ಸೇರ್ಪಡೆ!

ಬೆಂಗಳೂರು : ಬ್ಯಾಡರಹಳ್ಳಿ ಪ್ರದೇಶದಲ್ಲಿ ಪೊಲೀಸ್ ಸಮವಸ್ತ್ರ ಧರಿಸ... ಓದನ್ನು ಮುಂದುವರಿಸಿ


Edited by: ಬಾನು

22 hours ago

   
Image 1
ಬೆಂಗಳೂರು ನಗರ

ಕೆಂಗೇರಿ ತಡರಾತ್ರಿ ಅಗ್ನಿ: ಮೈಲಾರಪ್ಪ ಮೃತ, ಡಿಸಿಪಿ ಅನಿತಾ ಹದ್ದಣ್ಣನವರ್ ಮಾಹಿತಿ

ಬೆಂಗಳೂರು : ಕೆಂಗೇರಿ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ... ಓದನ್ನು ಮುಂದುವರಿಸಿ


Edited by: ಬಾನು

22 hours ago

   
Image 1