ಕ್ಯಾನ್ಸರ್‌ ವಿರುದ್ಧ ಹೋರಾಟದ ನಡುವೆ ಖಾಕಿ ಕನಸು ನನಸು: ಪುಟ್ಟ ಬಾಲಕ ‘ಒಂದು ದಿನದ ಎಸ್‌ಪಿ’

ದಾವಣಗೆರೆ, ಫೆಬ್ರವರಿ 17: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮೂರುವರೆ ವರ್ಷದ ಬಾಲಕ ಹಿತಾರ್ಥ್‌ನ ಕನಸಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಭಾವುಕ ಸ್ಪರ್ಶ ಸಿಕ್ಕಿದೆ. ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್ ಟಿ ಅವರು ಖಾಕಿ ಉಡುಪಿನಲ್ಲಿ ಬಂದಿದ್ದ ಪುಟ್ಟ ಮಗುವನ್ನು ತಮ್ಮ ಕುರ್ಚಿಯಲ್ಲಿ ಕೂರಿಸಿ ಕೆಲಕಾಲ “ಎಸ್‌ಪಿ” ಆಗುವ ಅವಕಾಶ ನೀಡಿ ಮಾನವೀಯತೆ ಮೆರೆದರು.

 

ಒಂದೂವರೆ ವರ್ಷದಲ್ಲೇ ಕ್ಯಾನ್ಸರ್ ಪತ್ತೆ

ಹೊನ್ನಾಳಿ ತಾಲೂಕಿನ ಹೊಸಳ್ಳಿ ಗ್ರಾಮದ ಪ್ರಭು–ಅನುಷಾ ದಂಪತಿಯ ಎರಡನೇ ಪುತ್ರ ಹಿತಾರ್ಥ್‌ಗೆ ಒಂದೂವರೆ ವರ್ಷ ವಯಸ್ಸಿನಲ್ಲೇ ರಕ್ತದ ಕ್ಯಾನ್ಸರ್ ಪತ್ತೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿರುವ ಬಾಲಕ, Manipal Hospitals ನಲ್ಲಿ ಎಂಟು ತಿಂಗಳು ನಿರಂತರ ಚಿಕಿತ್ಸೆ ಪಡೆದಿದ್ದಾನೆ. ಚಿಕಿತ್ಸೆ ಫಲವಾಗಿ ಶೇಕಡಾ 80ರಷ್ಟು ಚೇತರಿಕೆ ಕಂಡಿದ್ದರೂ ಕುಟುಂಬದ ಆತಂಕ ಇನ್ನೂ ಕಡಿಮೆಯಾಗಿಲ್ಲ.

 

ತಂದೆಯ ಕನಸಿಗೆ ಸ್ಪಂದನೆ

ಮಗ ಪೊಲೀಸ್ ಅಧಿಕಾರಿಯಾಗಬೇಕು ಎಂಬುದು ತಂದೆ ಪ್ರಭು ಅವರ ಕನಸು. ಮಗುವಿಗೆ ಬ್ಲಡ್ ಕ್ಯಾನ್ಸರ್ ಇದೆ ಎಂಬುದು ತಿಳಿದಾಗ ಕುಟುಂಬಕ್ಕೆ ಭಾರೀ ಆಘಾತವಾದರೂ, ಖಾಕಿ ಉಡುಪಿನಲ್ಲಿ ಮಗನನ್ನು ನೋಡಬೇಕೆಂಬ ಆಸೆ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಬಾಲಕನಿಗೆ ಪೊಲೀಸ್ ಯೂನಿಫಾರ್ಮ್ ತೊಡಿಸಿ ಎಸ್‌ಪಿ ಕಚೇರಿಗೆ ಕರೆತಂದಿದ್ದರು. ಪರಿಸ್ಥಿತಿ ಅರಿತ ಎಸ್‌ಪಿ ಶೇಖರ್ ಹೆಚ್.ಟಿ. ಅವರು ಹಿತಾರ್ಥ್‌ಗೆ ಹೂಗುಚ್ಛ ನೀಡಿ ಸ್ವಾಗತಿಸಿ, ತಮ್ಮ ಕುರ್ಚಿಯಲ್ಲಿ ಕೂರಿಸಿ ಕೆಲಕಾಲ ಅಧಿಕಾರದ ಅನುಭವ ನೀಡಿದರು. ನಗುಮುಖದಿಂದ ಎಸ್‌ಪಿ ಕುರ್ಚಿಯಲ್ಲಿ ಕುಳಿತಿದ್ದ ಬಾಲಕನ ದೃಶ್ಯ ಕಂಡು ಅಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾವುಕರಾದರು. ಎಸ್‌ಪಿ ಅವರ ಮಾನವೀಯ ನಡೆ ಸಾರ್ವಜನಿಕ ವಲಯದಲ್ಲೂ ಪ್ರಶಂಸೆಗೆ ಪಾತ್ರವಾಗಿದೆ. ಬಾಲಕನ ಕನಸಿಗೆ ಚಿಗುರುಕೊಟ್ಟ ಈ ಘಟನೆ ಅನೇಕರ ಹೃದಯ ಸ್ಪರ್ಶಿಸಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

14 hours ago

   
Image 1
Image 1
ಬೆಂಗಳೂರು ನಗರ

ಬಿಕ್ಲು ಶಿವ ಪ್ರಕರಣ: ವೈರಲ್ ವಿಡಿಯೋ ಕಾರಣದಿಂದ ಜಗ್ಗ-ಬಿಕ್ಲು ವೈಮನಸ್ಸು ಇದೇನಾ ಕೊಲೆಗೆ ಕಾರಣ..?

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಬಿಜೆಪಿ ವಿರುದ್ಧ ಪತ್ರಿಕೆ ಜಾಹೀರಾತು: ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ದೂರು ಹೈಕೋರ್ಟ್‌ನಲ್ಲಿ ವಜಾ

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಮುಖ ಪತ್ರ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಬಜೆಟ್ ಮಂಡನೆಯೇ ಸರ್ಕಾರದ ಸ್ಥಿರತೆಗೆ ಸಾಕ್ಷಿ: ರಾಜಕೀಯ ಬದಲಾವಣೆ ಊಹೆ ತಪ್ಪು – ಕೆ.ಎನ್. ರಾಜಣ್ಣ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿರುವ ಊಹಾಪೋಹಗಳ ನಡ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಕಾನೂನು ಉಲ್ಲಂಘಿಸಿ 31 ನಿವೇಶನ ಪಡೆದಿದ್ದೇನೆಂದ ಕಾಂಗ್ರೆಸ್ ಮೇಲೆ ಛಲವಾದಿ ನಾರಾಯಣಸ್ವಾಮಿ ಆರೋಪ

ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ರಾಜ್ಯಪಾಲರಿಗೆ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ KUWJ ಆಹ್ವಾನ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮಾರ್ಚ್ ಅಂತ್... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

“ನನ್ನ ಮತ್ತು ಸಿದ್ದರಾಮಯ್ಯ ನಡುವೆ ಕದ್ದುಮುಚ್ಚಿ ವ್ಯವಹಾರವಿಲ್ಲ: ಡಿ.ಕೆ. ಶಿವಕುಮಾರ್”

ಬೆಂಗಳೂರು: “ಸಚಿವ ಹೆಚ್.ಸಿ. ಮಹದೇವಪ್ಪ ಬಹಳ ದೊಡ್ಡವರು. ಈಗ ಅವರು... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

“ಕಟ್ಟಾ ಕಾಂಗ್ರೆಸಿಗರು ‘ನಿಯತ್ತಿನ ನಾಯಿಗಳು’: ಯಜಮಾನನ ಋಣ ತೀರಿಸಲು ಸದಾ ಸಿದ್ಧ” – ಡಿ.ಕೆ. ಸುರೇಶ್

ಬೆಂಗಳೂರು: “ನಿಯತ್ತಿನ ಪ್ರಾಣಿ ಎಂದರೆ ನಾಯಿ. ಕಟ್ಟಾ ಕಾಂಗ್ರೆಸಿಗ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಚಾಮರಾಜನಗರ

ಗುಂಡಾಲ್ ಡ್ಯಾಂ: ಸ್ಕೂಟರ್ ಕ್ಲಚ್ ವೈರ್ ಉರುಳಿಗೆ ಹುಲಿ ಬಲಿ; ತಪ್ಪಿತಸ್ಥರ ಪತ್ತೆಗೆ ಮುಂದಾಗಿದೆ ಅರಣ್ಯ ಇಲಾಖೆ

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಅ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ದಕ್ಷಿಣಕನ್ನಡ

ಉಡುಪಿಯಲ್ಲಿ ಏರ್ ಕ್ವಾಲಿಟಿ ತೀವ್ರ ಹಾನಿಕಾರಕ – N95 ಮಾಸ್ಕ್ ಅಗತ್ಯ

ಬೆಂಗಳೂರು, ಫೆಬ್ರವರಿ 17 : ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗು... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ವಿಜಯಪುರ

‘ಸಿದ್ದರಾಮಯ್ಯ ಮಗ ವಿಜಯೇಂದ್ರನಂತೆ ವಸೂಲಿಗೆ ನಿಂತಿದ್ದಾರೆ’– ಯತ್ನಾಳ್ ಖಂಡನೆ

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಮತ್ತ... ಓದನ್ನು ಮುಂದುವರಿಸಿ


Edited by: ಬಾನು

22 hours ago

   
Image 1