ಬಜೆಟ್ ಮಂಡನೆಯೇ ಸರ್ಕಾರದ ಸ್ಥಿರತೆಗೆ ಸಾಕ್ಷಿ: ರಾಜಕೀಯ ಬದಲಾವಣೆ ಊಹೆ ತಪ್ಪು – ಕೆ.ಎನ್. ರಾಜಣ್ಣ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿರುವ ಊಹಾಪೋಹಗಳ ನಡುವೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಮಾಧ್ಯಮಗಳೊಂದಿಗೆ ಶಾಸಕರ ಭವನದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುತ್ತಿರುವುದೇ ಸರ್ಕಾರದ ಸ್ಥಿರತೆಯ ಸಾಕ್ಷಿ ಎಂದರು. ರಾಜಣ್ಣ ಹೇಳಿದರು, “ಮುಂದೆ ಮಹತ್ವದ ರಾಜಕೀಯ ಬದಲಾವಣೆ ಆಗಲಿದೆ ಎಂದು ಅಂದುಕೊಳ್ಳುವುದು ಸುಳ್ಳು. ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದಾರೆ ಅಂದ್ರೆ ಯಥಾಸ್ಥಿತಿ ಮುಂದುವರಿಯುತ್ತಿದೆ ಅನ್ನೋದಕ್ಕೆ ಅರ್ಥ. ಅವರು ಗಟ್ಟಿಯಾದ ವಿಶ್ವಾಸದಲ್ಲಿದ್ದಾರೆ.”

 

ವಿದೇಶ ಪ್ರವಾಸ ಮತ್ತು ರಾಜಕೀಯ ಸಂಪರ್ಕಗಳ ಕುರಿತು ಪ್ರಶ್ನೆ ಕೇಳಿದಾಗ ಅವರು ಹೇಳಿದರು, “ಸದುದ್ದೇಶದಿಂದ ವಿದೇಶಕ್ಕೆ ಹೋಗಿ ಅನುಭವ ಪಡೆದು ಬರಲಿ. ರೈತರಿಗೆ ಅನುಕೂಲವಾಗುವ ವಿಧಾನಗಳು ಯಾವ ದೇಶಗಳಲ್ಲಿ ಇವೆ ಎಂಬುದನ್ನು ಕಲಿತು ಇಲ್ಲಿ ಅಳವಡಿಸಿಕೊಂಡರೆ ರಾಜ್ಯಕ್ಕೆ ಲಾಭಕರ. ಪ್ರವಾಸವನ್ನು ತಡೆಯುವುದು ಸರಿಯಲ್ಲ; ಅದನ್ನು ರಾಜಕೀಯವಾಗಿ ಟೀಕಿಸುವುದು ತಪ್ಪು.” ರಾಜಕೀಯ ಸಂಪರ್ಕಗಳ ಬಗ್ಗೆ ಅವರು ಹೇಳಿದರು, “ವೈಯಕ್ತಿಕ ಸಮೀಪತೆ ರಾಜಕೀಯ ಮೌಲ್ಯಮಾಪನದ ಮಾನದಂಡವಲ್ಲ. ಆರು ತಿಂಗಳು ಭೇಟಿ ಆಗದಿದ್ದರೂ ಪ್ರಶ್ನೆ ಇಲ್ಲ; ದಿನವೂ ಹೋದರೂ ಪ್ರಶ್ನೆ ಇಲ್ಲ. ಕೆಲವರು ವಿದೇಶಕ್ಕೆ ಹೋಗುತ್ತಾರೆ, ಕೆಲವರು ಇಲ್ಲಿ ಬೈಠಕ್‌ಗಳಲ್ಲಿ ಸೇರಿ ದೇಶದ ಬಗ್ಗೆ ಚಿಂತನೆ ಮಾಡುತ್ತಾರೆ.”

 

ಸ್ವಂತ ಖರ್ಚಿನಲ್ಲಿ ವಿದೇಶಕ್ಕೆ ಹೋಗಿರುವ ಶಾಸಕರ ಕುರಿತು ಟೀಕೆಯನ್ನು ರಾಜಣ್ಣ ಅವರು ನಿರಾಕರಿಸಿ, “ಅಧಿಕಾರಿಗಳು ಸರ್ಕಾರಿ ವೆಚ್ಚದಲ್ಲಿ ಹೋಗುತ್ತಾರೆ. ನಾನು ಹೋದಷ್ಟು ಟ್ರಿಪ್ ಯಾರೂ ಹೋಗಿರಲಿಲ್ಲ. ಖಾಸಗಿ ವೆಚ್ಚದಲ್ಲಿ ಹೋಗಿದ್ರೆ ಅವಹೇಳನ ಮಾಡುವುದು ಯಾಕೆ? ರಾಜಕೀಯ ಅರ್ಥೈಸುವ ರೀತಿಗಳು ವಿಭಿನ್ನ; ಪಾಲಿಟಿಕ್ಸ್ ಎಲ್ಲದಲ್ಲೂ ಇರುತ್ತದೆ,” ಎಂದು ಹೇಳಿದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

9 hours ago

   
Image 1
Image 1
ಬೆಂಗಳೂರು ನಗರ

ಬಿಕ್ಲು ಶಿವ ಪ್ರಕರಣ: ವೈರಲ್ ವಿಡಿಯೋ ಕಾರಣದಿಂದ ಜಗ್ಗ-ಬಿಕ್ಲು ವೈಮನಸ್ಸು ಇದೇನಾ ಕೊಲೆಗೆ ಕಾರಣ..?

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಬಿಜೆಪಿ ವಿರುದ್ಧ ಪತ್ರಿಕೆ ಜಾಹೀರಾತು: ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ದೂರು ಹೈಕೋರ್ಟ್‌ನಲ್ಲಿ ವಜಾ

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಮುಖ ಪತ್ರ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಕಾನೂನು ಉಲ್ಲಂಘಿಸಿ 31 ನಿವೇಶನ ಪಡೆದಿದ್ದೇನೆಂದ ಕಾಂಗ್ರೆಸ್ ಮೇಲೆ ಛಲವಾದಿ ನಾರಾಯಣಸ್ವಾಮಿ ಆರೋಪ

ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಂಗಳೂರು ನಗರ

ರಾಜ್ಯಪಾಲರಿಗೆ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ KUWJ ಆಹ್ವಾನ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮಾರ್ಚ್ ಅಂತ್... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಂಗಳೂರು ನಗರ

“ನನ್ನ ಮತ್ತು ಸಿದ್ದರಾಮಯ್ಯ ನಡುವೆ ಕದ್ದುಮುಚ್ಚಿ ವ್ಯವಹಾರವಿಲ್ಲ: ಡಿ.ಕೆ. ಶಿವಕುಮಾರ್”

ಬೆಂಗಳೂರು: “ಸಚಿವ ಹೆಚ್.ಸಿ. ಮಹದೇವಪ್ಪ ಬಹಳ ದೊಡ್ಡವರು. ಈಗ ಅವರು... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಂಗಳೂರು ನಗರ

“ಕಟ್ಟಾ ಕಾಂಗ್ರೆಸಿಗರು ‘ನಿಯತ್ತಿನ ನಾಯಿಗಳು’: ಯಜಮಾನನ ಋಣ ತೀರಿಸಲು ಸದಾ ಸಿದ್ಧ” – ಡಿ.ಕೆ. ಸುರೇಶ್

ಬೆಂಗಳೂರು: “ನಿಯತ್ತಿನ ಪ್ರಾಣಿ ಎಂದರೆ ನಾಯಿ. ಕಟ್ಟಾ ಕಾಂಗ್ರೆಸಿಗ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಚಾಮರಾಜನಗರ

ಗುಂಡಾಲ್ ಡ್ಯಾಂ: ಸ್ಕೂಟರ್ ಕ್ಲಚ್ ವೈರ್ ಉರುಳಿಗೆ ಹುಲಿ ಬಲಿ; ತಪ್ಪಿತಸ್ಥರ ಪತ್ತೆಗೆ ಮುಂದಾಗಿದೆ ಅರಣ್ಯ ಇಲಾಖೆ

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಅ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ದಾವಣಗೆರೆ

ಕ್ಯಾನ್ಸರ್‌ ವಿರುದ್ಧ ಹೋರಾಟದ ನಡುವೆ ಖಾಕಿ ಕನಸು ನನಸು: ಪುಟ್ಟ ಬಾಲಕ ‘ಒಂದು ದಿನದ ಎಸ್‌ಪಿ’

ದಾವಣಗೆರೆ, ಫೆಬ್ರವರಿ 17: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ದಕ್ಷಿಣಕನ್ನಡ

ಉಡುಪಿಯಲ್ಲಿ ಏರ್ ಕ್ವಾಲಿಟಿ ತೀವ್ರ ಹಾನಿಕಾರಕ – N95 ಮಾಸ್ಕ್ ಅಗತ್ಯ

ಬೆಂಗಳೂರು, ಫೆಬ್ರವರಿ 17 : ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗು... ಓದನ್ನು ಮುಂದುವರಿಸಿ


Edited by: ಬಾನು

19 hours ago

   
Image 1
ವಿಜಯಪುರ

‘ಸಿದ್ದರಾಮಯ್ಯ ಮಗ ವಿಜಯೇಂದ್ರನಂತೆ ವಸೂಲಿಗೆ ನಿಂತಿದ್ದಾರೆ’– ಯತ್ನಾಳ್ ಖಂಡನೆ

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಮತ್ತ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1