ಜಿಬಿಎ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಏರಿಕೆ – 3 ಹೊಸ ಸ್ವಚ್ಛತಾ ರಾಯಭಾರಿಗಳು ನೇಮಕ
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಕಡಿಮೆ ಮೌಲ್ಯದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಜನರಲ್ಲಿ ಕಸ ವಿಂಗಡಣೆ, ವಿಲೇವಾರಿ ಮತ್ತು ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (ಜಿಬಿಎ) ಮೂವರು ರಾಯಭಾರಿಗಳನ್ನು ನೇಮಿಸಿದೆ.
ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಅಂಗವಾಗಿ ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ, ಚಲನಚಿತ್ರ ನಟ ಅನಿರುದ್ಧ ಜಟ್ಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಅರುಣ್ ಪೈ ಅವರನ್ನು ಸ್ವಚ್ಛತಾ ರಾಯಭಾರಿಗಳಾಗಿ ಆಯ್ಕೆ ಮಾಡಲಾಗಿದೆ. ಈ ಸಂಬಂಧ ಮಾರ್ಚ್ 9ರಂದು ಟೌನ್ ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದಲ್ಲಿ ಪ್ರತಿದಿನ ಸರಾಸರಿ 6,000 ಮೆಟ್ರಿಕ್ ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, 520 ಮೆಟ್ರಿಕ್ ಟನ್ ಕಡಿಮೆ ಮೌಲ್ಯದ ಪ್ಲಾಸ್ಟಿಕ್ ತ್ಯಾಜ್ಯವನ್ನೇ ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು 1,000 ಮೆಟ್ರಿಕ್ ಟನ್‌ಗೆಯವರೆಗೆ ಹೆಚ್ಚಿಸುವ ಗುರಿಯಿದೆ. ಮಾಹಿತಿ–ಶಿಕ್ಷಣ–ಸಂವಹನ ಕಾರ್ಯಕ್ರಮಗಳ ಪರಿಣಾಮವಾಗಿ ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಹೆಚ್ಚಿದ್ದು, ಲ್ಯಾಂಡ್‌ಫಿಲ್‌ಗೆ ಸಾಗುವ ಕಸದ ಪ್ರಮಾಣ ಕಡಿಮೆಯಾಗುತ್ತಿದೆ.
ರಸ್ತೆಬದಿ ಕಸ ಬಿಸಾಡುವ ಅಥವಾ ಕಸ ವಿಂಗಡಿಸದೆ ನೀಡುವವರಿಂದ ಪ್ರತಿಮೆ ತಿಂಗಳು ಸರಾಸರಿ ರೂ.60 ಲಕ್ಷ ದಂಡ ಸಂಗ್ರಹಿಸಲಾಗುತ್ತಿದೆ. ಈ ದಂಡದ ಹಣದಿಂದ ಪ್ರತಿಧಿನ ವಿಧಾನಸಭಾ ಕ್ಷೇತ್ರಕ್ಕೆ ಒಂದು ಟ್ರ್ಯಾಕ್ಟರ್ ಖರೀದಿಸಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ 6,000 ಮೆಟ್ರಿಕ್ ಟನ್‌ಗಿಂತ ಹೆಚ್ಚು ಬಲ್ಕ್ ವೇಸ್ಟ್ ಸಂಗ್ರಹಿಸಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಳ ಹೋಬಳಿ ಹಾಗೂ ಬೆಂಗಳೂರು ದಕ್ಷಿಣದ ಗೊಲ್ಲಹಳ್ಳಿ ಪ್ರದೇಶಗಳಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣಾ ಯೋಜನೆಗೆ ಪ್ರತಿ ತಲಾ 100 ಎಕರೆಗೂ ಭೂಮಿ ಗುರುತಿಸಲಾಗಿದೆ. ಭೂ ಪರಿಹಾರ ನೀಡಿದ ನಂತರ ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು.
ಜಿಬಿಎ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಎದುರಾಗಿದಲ್ಲಿ ಸಹಾಯ 2.0 ತಂತ್ರಾಂಶ, ಜಿಬಿಎ ಸಹಾಯವಾಣಿ 1533 ಅಥವಾ ವಾಟ್ಸಪ್ ಚಾಟ್‌ಬಾಟ್ 9448197197 ಮೂಲಕ ದೂರು ನೀಡಬಹುದು. ಸಂಬಂಧಿತ ಅಧಿಕಾರಿಗಳು ತ್ವರಿತವಾಗಿ ಸಮಸ್ಯೆ ಪರಿಹರಿಸುತ್ತಾರೆ ಎಂದು ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಇರಾನ್ ನಾಯಕನ ಹತ್ಯೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ಯತ್ನಾಳ್ ದೇಶದ್ರೋಹ ಟೀಕೆ
ವಿಜಯಪುರ: ಕರ್ನಾಟಕದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್... ಓದನ್ನು ಮುಂದುವರಿಸಿ
ಹುಬ್ಬಳ್ಳಿ ಎನ್‌ಕೌಂಟರ್: ಹೈಕೋರ್ಟ್ ಸ್ವತಂತ್ರ ನ್ಯಾಯಾಂಗ ತನಿಖೆಗೆ ಆದೇಶ
ಬೆಂಗಳೂರು: ಹುಬ್ಬಳ್ಳಿ ನಗರದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾ... ಓದನ್ನು ಮುಂದುವರಿಸಿ
ಸಿಎಂ–ಡಿಸಿಎಂ ಬೆಂಬಲಿಗರ ಕಚ್ಚಾಟ; ಆಡಳಿತ ಕುಸಿತ.. ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ ಅವರು ರಾಜ್ಯದಲ್ಲಿ ಸಿ... ಓದನ್ನು ಮುಂದುವರಿಸಿ
ಫೀಸ್ ವಿಚಾರಕ್ಕೆ ವಿದ್ಯಾರ್ಥಿನಿಗೆ ಪರೀಕ್ಷೆ ನಿರಾಕರಣೆ: ರಾಣೇಬೆನ್ನೂರಿನಲ್ಲಿ ಶಿಕ್ಷಕಿ ಅಮಾನತು
ಹಾವೇರಿ: ರಾಣೇಬೆನ್ನೂರಿನ ಬಿಎಜೆಎಸ್‌ಎಸ್ ಕಾಲೇಜುನಲ್ಲಿ ಶನಿವಾರ (... ಓದನ್ನು ಮುಂದುವರಿಸಿ
ಚಂದ್ರಗ್ರಹಣದ ದಿನವೂ ದರ್ಶನಕ್ಕೆ ಅವಕಾಶ: ಶ್ರೀ ಮಲೆ ಮಹದೇಶ್ವರ ದೇವಸ್ಥಾನ ಸ್ಪಷ್ಟನೆ
ಚಾಮರಾಜನಗರ: ಮಾರ್ಚ್ 3ರಂದು ಮಧ್ಯಾಹ್ನದ ಬಳಿಕ ಚಂದ್ರಗ್ರಹಣ ಇರುವ... ಓದನ್ನು ಮುಂದುವರಿಸಿ
ಬಳ್ಳಾರಿಯ 35 ಮಂದಿ ದುಬೈನಲ್ಲಿ ಸೇಫ್: ಶಾಸಕ ಭರತ್ ರೆಡ್ಡಿ ಭರವಸೆ
ಬಳ್ಳಾರಿ/ದುಬೈ: ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ದು... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಭೀಕರ ಅಪಘಾತ: ಬುಲೆರೋ–ಬೈಕ್ ಡಿಕ್ಕಿ, ಹಲವರಿಗೆ ಗಂಭೀರ ಗಾಯ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ... ಓದನ್ನು ಮುಂದುವರಿಸಿ
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕುಮಾರಸ್ವಾಮಿ ಕಾರಣ? ಮದ್ದೂರು ಶಾಸಕ ಉದಯ್ ಅಚ್ಚರಿ ಹೇಳಿಕೆ
ಮಂಡ್ಯ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕುಮ್ಮಕ್ಕಿನಿಂ... ಓದನ್ನು ಮುಂದುವರಿಸಿ
ಇರಾನ್–ಇಸ್ರೇಲ್ ಯುದ್ಧ ಹಿನ್ನಲೆ: ಸಂಕಷ್ಟದಲ್ಲಿರುವವರ ನೆರವಿಗೆ ಸರ್ಕಾರ ಸಜ್ಜು-ಸಚಿವ ಕೃಷ್ಣ ಭೈರೇಗೌಡ
ಬೆಂಗಳೂರು: ಇರಾನ್–ಇಸ್ರೇಲ್ ಯುದ್ಧ ಪರಿಸ್ಥಿತಿಯಿಂದ ಮಧ್ಯಪ್ರಾಚ್ಯ... ಓದನ್ನು ಮುಂದುವರಿಸಿ
ಬಿಪಿಎಲ್ ಕುಟುಂಬಗಳಿಗೆ ಮಾತ್ರ ಗ್ಯಾರಂಟಿ ಲಾಭ: ಶ್ರೀಮಂತರು ಸ್ವಯಂ ತ್ಯಜಿಸಬೇಕು – ಪಾಟೀಲ್
ಬೆಂಗಳೂರು: ವಿಜಯಪುರದ ಆಲಮಟ್ಟಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಎಂ... ಓದನ್ನು ಮುಂದುವರಿಸಿ