ಬಳ್ಳಾರಿಯ 35 ಮಂದಿ ದುಬೈನಲ್ಲಿ ಸೇಫ್: ಶಾಸಕ ಭರತ್ ರೆಡ್ಡಿ ಭರವಸೆ

ಬಳ್ಳಾರಿ/ದುಬೈ: ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ದುಬೈನಲ್ಲಿ ಇರುವ ಬಳ್ಳಾರಿ ಶಾಸಕ ಭರತ್ ರೆಡ್ಡಿ ವಿಡಿಯೋ ಸಂದೇಶ ಬಿಡುಗಡೆ ಮಾಡಿ ಆತಂಕಗೊಂಡ ಜನತೆಗೆ ಧೈರ್ಯ ತುಂಬಿದ್ದಾರೆ.

 

“ಕಳೆದ ಎರಡು ದಿನಗಳಿಂದ ಯುದ್ಧಭೂಮಿಯಲ್ಲಿ ಸಿಲುಕಿದ್ದೀರಿ ಎಂಬ ಸುದ್ದಿ ಹರಿದಾಡುತ್ತಿದೆ. ಸಾವಿರಾರು ಸ್ನೇಹಿತರು ಮತ್ತು ಹಿತೈಷಿಗಳು ಕರೆ ಮಾಡಿ ನನ್ನ ಸುರಕ್ಷತೆ ಬಗ್ಗೆ ವಿಚಾರಿಸಿದ್ದಾರೆ. ಆದರೆ ಯಾರೂ ಆತಂಕಪಡಬೇಡಿ. ನಾನು ಹಾಗೂ ನನ್ನ ಕುಟುಂಬಸ್ಥರು ಸಂಪೂರ್ಣ ಸುರಕ್ಷಿತರಾಗಿದ್ದೇವೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

ಬಳ್ಳಾರಿಯಿಂದ ದುಬೈ ಪ್ರವಾಸಕ್ಕೆ ಬಂದಿದ್ದ 35 ಮಂದಿ ಕೂಡ ಸುರಕ್ಷಿತರಾಗಿದ್ದು, ಎಲ್ಲರೂ ನಮ್ಮ ನಿಗಾದಲ್ಲಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯವಾಗಿ ಇಬ್ಬರು ಸಿಬ್ಬಂದಿಗಳನ್ನು ಅವರೊಂದಿಗೆ ನಿರಂತರ ಸಂಪರ್ಕದಲ್ಲಿರಲು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

 

ಕರ್ನಾಟಕ ಸರ್ಕಾರವೂ ತಕ್ಷಣ ಕ್ರಮ ಕೈಗೊಂಡಿದ್ದು, ಬಳ್ಳಾರಿಯ 35 ಜನರ ಪಟ್ಟಿಯನ್ನು ರಾಯಭಾರಿಗೆ ಕಳುಹಿಸಲಾಗಿದೆ. ವಿಮಾನ ನಿಲ್ದಾಣ ಸಾರ್ವಜನಿಕರಿಗೆ ತೆರೆಯುತ್ತಿದ್ದಂತೆಯೇ ಅವರನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

 

ಇನ್ನೊಂದೆಡೆ, ಮಧ್ಯಪ್ರಾಚ್ಯದ ಯುದ್ಧಪೀಡಿತ ದೇಶಗಳಲ್ಲಿ ಸಿಲುಕಿರುವ ಸುಮಾರು 109 ಕನ್ನಡಿಗರ ರಕ್ಷಣೆಗೆ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿ, “ವಿದೇಶಾಂಗ ಸಚಿವಾಲಯದೊಂದಿಗೆ ನೇರ ಸಂಪರ್ಕದಲ್ಲಿದ್ದೇವೆ. ಸಿಎಂ ಸೂಚನೆಯ ಮೇರೆಗೆ ವಿಪತ್ತು ನಿರ್ವಹಣೆ ವಿಭಾಗ ಶನಿವಾರ ರಾತ್ರಿಯಿಂದಲೇ ಕಾರ್ಯಾರಂಭಿಸಿದೆ,” ಎಂದಿದ್ದಾರೆ.

 

ಕದನ ವಿರಾಮವಾಗುವವರೆಗೂ ವಿಮಾನ ಹಾರಾಟ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿರುವ ಸಚಿವರು, “ಈ ಸಂದರ್ಭದಲ್ಲಿ ವಿಮಾನ ಹಾರಾಟ ಅಪಾಯಕಾರಿ. ಜನರು ಶಾಂತವಾಗಿರಬೇಕು,” ಎಂದು ಮನವಿ ಮಾಡಿದ್ದಾರೆ. ಕದನ ವಿರಾಮದ ಬಳಿಕ ವಿಶೇಷ ವಿಮಾನ ಕಳುಹಿಸುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ.

 

ಸರ್ಕಾರ ಆರಂಭಿಸಿರುವ ಸಹಾಯವಾಣಿ ಸಂಖ್ಯೆ 22253707ಗೆ ಕರೆಮಾಡಿ ಮಾಹಿತಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

11 hours ago

   
Image 1
Image 1
ಬೆಂಗಳೂರು ನಗರ

ಜಿಬಿಎ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಏರಿಕೆ – 3 ಹೊಸ ಸ್ವಚ್ಛತಾ ರಾಯಭಾರಿಗಳು ನೇಮಕ

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಕಡಿಮೆ ಮೌಲ್ಯದ ಪ್ಲಾಸ್ಟಿಕ್ ತ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ವಿಜಯಪುರ

ಇರಾನ್ ನಾಯಕನ ಹತ್ಯೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ಯತ್ನಾಳ್ ದೇಶದ್ರೋಹ ಟೀಕೆ

ವಿಜಯಪುರ: ಕರ್ನಾಟಕದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಹುಬ್ಬಳ್ಳಿ ಎನ್‌ಕೌಂಟರ್: ಹೈಕೋರ್ಟ್ ಸ್ವತಂತ್ರ ನ್ಯಾಯಾಂಗ ತನಿಖೆಗೆ ಆದೇಶ

ಬೆಂಗಳೂರು: ಹುಬ್ಬಳ್ಳಿ ನಗರದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಸಿಎಂ–ಡಿಸಿಎಂ ಬೆಂಬಲಿಗರ ಕಚ್ಚಾಟ; ಆಡಳಿತ ಕುಸಿತ.. ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ ಅವರು ರಾಜ್ಯದಲ್ಲಿ  ಸಿ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಹಾವೇರಿ

ಫೀಸ್ ವಿಚಾರಕ್ಕೆ ವಿದ್ಯಾರ್ಥಿನಿಗೆ ಪರೀಕ್ಷೆ ನಿರಾಕರಣೆ: ರಾಣೇಬೆನ್ನೂರಿನಲ್ಲಿ ಶಿಕ್ಷಕಿ ಅಮಾನತು

ಹಾವೇರಿ: ರಾಣೇಬೆನ್ನೂರಿನ ಬಿಎಜೆಎಸ್‌ಎಸ್ ಕಾಲೇಜುನಲ್ಲಿ ಶನಿವಾರ (... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಚಾಮರಾಜನಗರ

ಚಂದ್ರಗ್ರಹಣದ ದಿನವೂ ದರ್ಶನಕ್ಕೆ ಅವಕಾಶ: ಶ್ರೀ ಮಲೆ ಮಹದೇಶ್ವರ ದೇವಸ್ಥಾನ ಸ್ಪಷ್ಟನೆ

ಚಾಮರಾಜನಗರ: ಮಾರ್ಚ್ 3ರಂದು ಮಧ್ಯಾಹ್ನದ ಬಳಿಕ ಚಂದ್ರಗ್ರಹಣ ಇರುವ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು

ಭೀಕರ ಅಪಘಾತ: ಬುಲೆರೋ–ಬೈಕ್ ಡಿಕ್ಕಿ, ಹಲವರಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಮಂಡ್ಯ

ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕುಮಾರಸ್ವಾಮಿ ಕಾರಣ? ಮದ್ದೂರು ಶಾಸಕ ಉದಯ್ ಅಚ್ಚರಿ ಹೇಳಿಕೆ

ಮಂಡ್ಯ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕುಮ್ಮಕ್ಕಿನಿಂ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ನಗರ

ಇರಾನ್–ಇಸ್ರೇಲ್ ಯುದ್ಧ ಹಿನ್ನಲೆ: ಸಂಕಷ್ಟದಲ್ಲಿರುವವರ ನೆರವಿಗೆ ಸರ್ಕಾರ ಸಜ್ಜು-ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ಇರಾನ್–ಇಸ್ರೇಲ್ ಯುದ್ಧ ಪರಿಸ್ಥಿತಿಯಿಂದ ಮಧ್ಯಪ್ರಾಚ್ಯ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ನಗರ

ಬಿಪಿಎಲ್ ಕುಟುಂಬಗಳಿಗೆ ಮಾತ್ರ ಗ್ಯಾರಂಟಿ ಲಾಭ: ಶ್ರೀಮಂತರು ಸ್ವಯಂ ತ್ಯಜಿಸಬೇಕು – ಪಾಟೀಲ್

ಬೆಂಗಳೂರು: ವಿಜಯಪುರದ ಆಲಮಟ್ಟಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಎಂ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1