‘ಜನ ನಾಯಗನ್’ ಚಿತ್ರದ ವಿಳಂಬವು ಚಿತ್ರರಂಗಕ್ಕೆ ಬಹಳ ದೊಡ್ಡ ಆರ್ಥಿಕ ಹೊಡೆತ ನೀಡಿದೆ — ಸುಮಾರು ₹100 ಕೋಟಿ ನಷ್ಟ
ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ‘ಜನ ನಾಯಗನ್’ ಆರಂಭದಲ್ಲಿ ಜನವರಿ 10ರಂದು ತೆರೆಗೆ ಬರಬೇಕಾಗಿತ್ತು, ಆದರೆ CBFC ಪ್ರಮಾಣಪತ್ರದ ವಿಳಂಬ ಮತ್ತು ನಂತರದ ಕಾನೂನು ಚರ್ಚೆಗಳಿಂದ ಬಿಡುಗಡೆಯು ಇನ್ನೂ ಆಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ, ಚಿತ್ರ ಬಿಡುಗಡೆ ಇನ್ನೂ ತಡವಾಗುವ ಸಾಧ್ಯತೆ ಇದೆ.ಈ ವಿಳಂಬದಿಂದಾಗಿ ನಿರ್ಮಾಪಕ ಕೆವಿಎನ್‌ಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದ್ದು, ಅವರೊಂದಿಗೆ ತಮಿಳುನಾಡಿನ ಚಿತ್ರಮಂದಿರಗಳಿಗೂ ಸುಮಾರು ₹100 ಕೋಟಿ ನಷ್ಟ ಉಂಟಾಗಿದೆ ಎನ್ನಲಾಗಿದೆ.
‘ಜನ ನಾಯಗನ್’ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಚಿತ್ರಮಂದಿರಗಳು ಭಾರಿ ಜನಪ್ರವಾಹವನ್ನು ನಿರೀಕ್ಷಿಸಿದ್ದವು. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಸಾವಿರಾರು ಅಭಿಮಾನಿಗಳು ಮುಂಗಡ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಆದರೆ ಹಠಾತ್ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಥಿಯೇಟರ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ.
ತಮಿಳುನಾಡಿನ ಸಿನಿಮಾ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಈ ಕುರಿತು ಮಾತನಾಡಿ, “ವಿಜಯ್ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಚಿತ್ರಮಂದಿರಗಳಿಗೆ ಬಂಪರ್ ಲಾಭ ತಂದಿವೆ. ‘ಜನ ನಾಯಗನ್’ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಥಿಯೇಟರ್‌ಗಳು ಅಡ್ವಾನ್ಸ್ ನೀಡಿ, ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದವು. ಆದರೆ ಸಿನಿಮಾ ಬಿಡುಗಡೆಯೇ ಆಗಿಲ್ಲ. ಇದರಿಂದ ಕನಿಷ್ಠ ₹100 ಕೋಟಿ ನಷ್ಟವಾಗಿದೆ” ಎಂದು ಹೇಳಿದ್ದಾರೆ.
ಸಿಬಿಎಫ್ಸಿ ಪ್ರಮಾಣ ಪತ್ರ ನಿರಾಕರಣೆ ಸಂಬಂಧಿತ ಪ್ರಕರಣವನ್ನು ಇದೀಗ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿದೆ. ಆದರೆ ಅಲ್ಲಿ ವಿಚಾರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇರುವುದರಿಂದ, ನಿರ್ಮಾಪಕರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು, ಸಿನಿಮಾವನ್ನು ಮತ್ತೆ ಸಿಬಿಎಫ್ಸಿ ರಿವ್ಯೂ ಕಮಿಟಿಗೆ ಕಳುಹಿಸುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಅವಳಿ ಮಕ್ಕಳ ಸಂತಸದ ನಡುವೆಯಲ್ಲಿ ರಾಮ್ ಚರಣ್ ‘ಪೆದ್ದಿ’ ಚಿತ್ರಕ್ಕೆ ರಿಲೀಸ್ ದಿನಾಂಕ ಪ್ರಕಟ!
ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಇತ್ತೀಚೆಗೆ ಮತ್ತೊಮ್ಮೆ ತಂದೆಯಾಗಿದ್ದಾರೆ. ಈಗಾಗಲೇ... ಓದನ್ನು ಮುಂದುವರಿಸಿ
ಬಾಕ್ಸ್‑ಆಫೀಸ್‌ನಲ್ಲಿ ದಾಖಲೆ ಬರೆದ ರಣವೀರ್ ಸಿಂಗ್ ಅವರ ‘ಧುರಂಧರ್.. 4 ಕೋಟಿಗಿಂತ ಅಧಿಕ ಟಿಕೆಟ್ ಮಾರಾಟ
ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಬಾಕ್ಸ್‑ಆಫೀಸ... ಓದನ್ನು ಮುಂದುವರಿಸಿ
ಸಿಎಂ ಬೆಂಬಲದಿಂದ ಲ್ಯಾಂಡ್ಲಾರ್ಡ್ಗೆ ಹುರುಪು' - ತೆರಿಗೆ ವಿನಾಯಿತಿ ಸಿಕ್ಕಿದ್ದಕ್ಕೆ ದುನಿಯಾ ವಿಜಿ ಖುಷ್
ಬೆಂಗಳೂರು : ದುನಿಯಾ ವಿಜಯ್ ನಟನೆಯ ಲ್ಯಾಂಡ್ಲಾರ್ಡ್ ಸಿನಿಮಾ ಬ... ಓದನ್ನು ಮುಂದುವರಿಸಿ
ಬಿರಿಯಾನಿ ವಿವಾದ; ಊಟ.. ತಿಂಡಿ.. ಚಟ ಎಲ್ಲವೂ ನನ್ನ ಪರ್ಸನಲ್: ಡಾಲಿ ತಿರುಗೇಟು
ಬೆಂಗಳೂರು : ನಟ ಧನಂಜಯ್ ಇತ್ತೀಚಿಗಷ್ಟೇ ಬಿರಿಯಾನಿ ತಿನ್ನುವ ಮೂಲ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಮನಸೋತ ಆನೇಕಲ್ ತಾಲ್ಲೂಕಿನ ಜನತೆ
ಆನೇಕಲ್ : ತಾಲ್ಲೂಕಿನ ಸರ್ಜಾಪುರ ಹೋಬಳಿಯ ದೊಮ್ಮಸಂದ್ರದಲ್ಲ... ಓದನ್ನು ಮುಂದುವರಿಸಿ
ದರ್ಶನ್ ಕಿರಿಕ್ ಬಗ್ಗೆ ಕೊನೆಗೂ ಸತ್ಯ ಬಿಚ್ಚಿಟ್ಟ ನಿರ್ಮಾಪಕ ಭಾಮಾ ಹರೀಶ್..!
ನಟ ದರ್ಶನ್ ಚಿತ್ರರಂಗಕ್ಕೆ ಬಂದ ಆರಂಭದ ವರ್ಷಗಳಲ್ಲಿ ಮಾಡಿಕೊಂಡಿದ್ದ ಕಿರಿಕ್ ಬಗ್ಗೆ ನಿ... ಓದನ್ನು ಮುಂದುವರಿಸಿ
ಚಿಕ್ಕಣ್ಣನ ಬಳಿಕ ನಟ ಯಶಸ್ ಸೂರ್ಯಗೆ ನೋಟಿಸ್: ವಿಚಾರಣೆಗೆ ಹಾಜರಾಗಲು ಸೂಚನೆ
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತ... ಓದನ್ನು ಮುಂದುವರಿಸಿ
ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ’ ಎಂದು ಬರೆದುಕೊಂಡ ನಿರ್ಮಾಪಕ ಉಮಾಪತಿ
ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಸಕ್ಸಸ್ ಬಳಿಕ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ... ಓದನ್ನು ಮುಂದುವರಿಸಿ
ನಮ್ಮ ಬಾಸ್ ಜೈಲಿಂದ ಹೊರ ಬರದಿದ್ರೆ ನಾನು ಗ್ಯಾರಂಟಿ ಬದುಕಲ್ಲ – ದರ್ಶನ್ ಅಭಿಮಾನಿ ಅಳಲು!
ಡಿಬಾಸ್ ಜೈಲಿಂದ ಹೊರಗಡೆ ಬಂದಿಲ್ಲಾಂದ್ರೆ ನನ್ ಬದುಕಿರೋಲ್ಲ ಎಂದು ಹೇಳುವ ಮೂಲಕ ದರ್ಶನ್... ಓದನ್ನು ಮುಂದುವರಿಸಿ
ವಿಚಾರಣೆಯಲ್ಲಿ ಪಾರದರ್ಶಕತೆ ಬೇಕು.. ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ನಟ ಉಪೇಂದ್ರ ಫಸ್ಟ್ ರಿಯಾಕ್ಷನ್
ಬೆಂಗಳೂರು: ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಅ... ಓದನ್ನು ಮುಂದುವರಿಸಿ