ಇರಾನ್ ಯುದ್ಧ ನಡುವೆ ಎಲ್‌ಪಿಜಿ ದರ ದಿಢೀರ್ ಏರಿಕೆ: ಬೆಂಗಳೂರಿನಲ್ಲಿ ಹೊಸ ದರ ಎಷ್ಟು?
ನವದೆಹಲಿ: ಕೊಲ್ಲಿ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮವಾಗಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಏರಿಕೆ ಕಂಡುಬಂದಿದೆ. ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು 60 ರೂಪಾಯಿ ಹೆಚ್ಚಿಸಲಾಗಿದ್ದು, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರವನ್ನು 115 ರೂಪಾಯಿ ಏರಿಸಲಾಗಿದೆ.
ಪರಿಷ್ಕೃತ ದರಗಳು ಶನಿವಾರದಿಂದಲೇ ಜಾರಿಗೆ ಬಂದಿವೆ. ದರ ಏರಿಕೆಯಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಸಣ್ಣ ವಾಣಿಜ್ಯ ಸಂಸ್ಥೆಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ದರ ಏರಿಕೆಗೆ ಮೊದಲು ಬೆಂಗಳೂರಿನಲ್ಲಿ ಗೃಹ ಬಳಕೆಯ ಸಿಲಿಂಡರ್ ದರ 855.50 ರೂಪಾಯಿ ಇತ್ತು. ಈಗ ಅದು 915.50 ರೂಪಾಯಿಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಸಿಲಿಂಡರ್ ದರ 913 ರೂಪಾಯಿ, ಮುಂಬೈನಲ್ಲಿ 912.50 ರೂಪಾಯಿ ಹಾಗೂ ಚೆನ್ನೈನಲ್ಲಿ 928.50 ರೂಪಾಯಿಗೆ ಏರಿಕೆಯಾಗಿದೆ.
ಏಪ್ರಿಲ್ 2025ರಿಂದ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ಆಗಿರಲಿಲ್ಲ. ಈ ನಡುವೆ ಜನವರಿಯಿಂದ ಅಮೆರಿಕದಿಂದ ಭಾರತಕ್ಕೆ ಎಲ್‌ಪಿಜಿ ಆಮದು ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
2025ರ ನವೆಂಬರ್‌ನಲ್ಲಿ ಭಾರತೀಯ ಪಿಎಸ್‌ಯು ತೈಲ ಕಂಪನಿಗಳು 2026ರ ಒಪ್ಪಂದ ವರ್ಷಕ್ಕೆ ಅಮೆರಿಕದ ಗಲ್ಫ್ ಕರಾವಳಿಯಿಂದ ಸುಮಾರು 2.2 ಮಿಲಿಯನ್ ಟನ್ ಎಲ್‌ಪಿಜಿ ಆಮದು ಮಾಡಲು ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ತಿಳಿದುಬಂದಿದೆ
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮನೆ ಬಳಕೆಯ LPG ಗ್ರಾಹಕರಿಗೆ ಮೊದಲ ಆದ್ಯತೆ, ಬುಕ್ಕಿಂಗ್ ಅವಧಿ 25 ದಿನಕ್ಕೆ ಹೆಚ್ಚಳ
ದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಎಲ್‌ಪಿಜಿ (LPG) ಸಿಲಿಂಡರ್... ಓದನ್ನು ಮುಂದುವರಿಸಿ
ಇದು ಸರಿಯಲ್ಲ": LPG ದರ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಬೆಂಗಳೂರು : ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡ... ಓದನ್ನು ಮುಂದುವರಿಸಿ
ಗಲ್ಫ್ ಯುದ್ಧದ ಎಫೆಕ್ಟ್: ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ – ಹೋಟೆಲ್ ಬಂದ್ ಭೀತಿಯ ಎಚ್ಚರಿಕೆ
ಬೆಂಗಳೂರು : ನಗರದಲ್ಲಿ ಗಲ್ಫ್ ರಾಷ್ಟ್ರಗಳ ಯುದ್ಧದ ಪರಿಣಾಮ... ಓದನ್ನು ಮುಂದುವರಿಸಿ
ಇರಾನ್–ಇಸ್ರೇಲ್ ಉದ್ವಿಗ್ನತೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 21 ಅಂತಾರಾಷ್ಟ್ರೀಯ ವಿಮಾನ ರದ್ದು
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಲ್... ಓದನ್ನು ಮುಂದುವರಿಸಿ
ಗುಡ್ ನ್ಯೂಸ್: ಚಿನ್ನದ ಬೆಲೆ ಭರ್ಜರಿ ಕುಸಿತ.. ಗೋಲ್ಡ್ ಖರೀದಿಗೆ ತಕ್ಕ ಸಮಯ!
ಮಾರ್ಚ್ 9, 2026, ಸೋಮವಾರ: ಮಾರ್ಚ್ ಮೊದಲ ವಾರದ ಆರಂಭದಲ್ಲಿ ಚಿನ್... ಓದನ್ನು ಮುಂದುವರಿಸಿ
ಅಮೆರಿಕ–ಇರಾನ್ ಯುದ್ಧ: ಕೋವಿಡ್ ನಂತರ ಕಚ್ಚಾ ತೈಲ ಬೆಲೆ ಭಾರೀ ಏರಿಕೆ
ಲಂಡನ್: United States ಮತ್ತು Iran ನಡುವೆ ಯುದ್ಧದ ಪರಿಣಾಮ ಜಾಗ... ಓದನ್ನು ಮುಂದುವರಿಸಿ
ವಂದೇ ಭಾರತ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ: ಮಾ.15ರಿಂದ ಜಾರಿ
ಬೆಂಗಳೂರು: South Western Railway ಕೆಲ ವಂದೇ ಭಾರತ್ ಎಕ್ಸ್‌ಪ್... ಓದನ್ನು ಮುಂದುವರಿಸಿ
ಗುಡ್ ನ್ಯೂಸ್: 20 ಲಕ್ಷ ಮನೆಗಳಿಗೆ ಉಚಿತ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಮುಂದಾದ ಸರ್ಕಾರ!
ತೆಲಂಗಾಣ: ರಾಜ್ಯ ಸರ್ಕಾರ ಬಡವರ ಮನೆಗಳಿಗೆ ಉಚಿತ ಮೇಲ್ಛಾವಣಿ ಸೌರ... ಓದನ್ನು ಮುಂದುವರಿಸಿ
ಬೆಡ್‌ರೂಮ್ ಕ್ಷಣಗಳು, ಖಾಸಗಿ ದೃಶ್ಯಗಳು ಮೆಟಾ ಟೆಕ್ ದೃಷ್ಟಿಯಲ್ಲಿ? AI ಗ್ಲಾಸ್ ಹಗರಣ ಸೃಷ್ಟಿ!
ಧರಿಸಬೇಕಾದಂತೆ ಸ್ಟೈಲಿಷ್ ತೋರುತ್ತಿರುವ ಮೆಟಾ ರೇ-ಬಾನ್Meta ಸ್ಮಾರ್ಟ್ ಗ್ಲಾಸ್‌ಗಳು,... ಓದನ್ನು ಮುಂದುವರಿಸಿ
ಮಧ್ಯಪ್ರಾಚ್ಯದ ಉದ್ವಿಗ್ನತೆ : ಹೋಟೆಲ್-ವ್ಯಾಪಾರಿಗಳಿಗೆ ಶಾಕ್: ವಾಣಿಜ್ಯ LPG ಸಿಲಿಂಡರ್ʼಗಳಿಗೆ ನೀಡಲಾಗಿದ್ದ ರಿಯಾಯಿತಿ ರದ್ದು!
ದೆಹಲಿ/ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನ... ಓದನ್ನು ಮುಂದುವರಿಸಿ