“ಇದು ಖಾಲಿ ಚೊಂಬು ಅಲ್ಲ, ಭರ್ತಿ ಚೊಂಬು”: ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು, ಮಾರ್ಚ್ 25: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸುದೀರ್ಘ ಉತ್ತರ ನೀಡಲು ಆರಂಭಿಸಿದರು. ಈ ಬಾರಿ ಬಜೆಟ್ ಚರ್ಚೆಯಲ್ಲಿ ಒಟ್ಟು 50 ಸದಸ್ಯರು ಭಾಗವಹಿಸಿದ್ದು, 24 ಗಂಟೆ 45 ನಿಮಿಷಗಳ ಕಾಲ ಚರ್ಚೆ ನಡೆದಿರುವುದು ವಿಶೇಷವಾಗಿದೆ ಎಂದು ಸಿಎಂ ತಿಳಿಸಿದರು.
“ನಾನು 17 ಬಾರಿ ಬಜೆಟ್ ಮಂಡಿಸಿ ಉತ್ತರ ನೀಡಿದ್ದೇನೆ. ಆದರೆ ಇಷ್ಟು ವಿಸ್ತೃತ ಚರ್ಚೆ ನಡೆದಿರುವುದು ಇದೇ ಮೊದಲು,” ಎಂದು ಹೇಳಿದ ಅವರು, ಚರ್ಚೆಗೆ ಅವಕಾಶ ಕಲ್ಪಿಸಿದ ಸಭಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಚರ್ಚೆಯಲ್ಲಿ ಭಾಗವಹಿಸಿದ ಸದಸ್ಯರ ವಿವರಗಳನ್ನು ನೀಡಿದ ಸಿದ್ದರಾಮಯ್ಯ, ವಿರೋಧ ಪಕ್ಷದ 21 ಸದಸ್ಯರು ಒಟ್ಟು 12 ಗಂಟೆ 49 ನಿಮಿಷ ಮಾತನಾಡಿದರೆ, ಆಡಳಿತ ಪಕ್ಷದ ಸದಸ್ಯರು 8 ಗಂಟೆ 43 ನಿಮಿಷ ಹಾಗೂ ಜೆಡಿಎಸ್ ಸದಸ್ಯರು 2 ಗಂಟೆ 55 ನಿಮಿಷಗಳ ಕಾಲ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಒಬ್ಬರೇ 3 ಗಂಟೆ 6 ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದೂ ಮಾಹಿತಿ ನೀಡಿದರು.
ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ ಸಿಎಂ, “ವಿಪಕ್ಷ ನಾಯಕರು ಆಳವಾದ ಅಧ್ಯಯನ ಮಾಡಿಲ್ಲ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಶೀರ್ಷಿಕೆಗಾಗಿ ಪದಗಳನ್ನು ಬಳಸಿದ್ದಾರೆ” ಎಂದು ವ್ಯಂಗ್ಯವಾಡಿದರು. ಚರ್ಚೆಯಲ್ಲಿ ಭಾಗವಹಿಸಿದ ಆಡಳಿತ, ವಿಪಕ್ಷ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರಾದ ಸೋಮಶೇಖರ್ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಅವರು ಅಭಿನಂದನೆ ಸಲ್ಲಿಸಿದರು.
ತಮ್ಮ ಬಜೆಟ್‌ನ್ನು ಸಮರ್ಥಿಸಿಕೊಂಡ ಸಿಎಂ, “ಯಾರು ಎಷ್ಟೇ ಟೀಕೆ ಮಾಡಿದರೂ ಮಾವಿನ ಹಣ್ಣು ಬೇವಿನ ಹಣ್ಣಾಗುವುದಿಲ್ಲ. ರಾಜ್ಯದ ಜನರು ಬುದ್ಧಿವಂತರಾಗಿದ್ದಾರೆ,” ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ನಾನು ಮಾವಿನ ಹಣ್ಣು ಎಂದೇ ಹೇಳಿದ್ದೇನೆ, ಆದರೆ ಅದು ಸ್ವಲ್ಪ ಹುಳಿ ಬಂದಿದೆ ಎಂದಿದ್ದೇನೆ,” ಎಂದು ಟಾಂಗ್ ನೀಡಿದರು. ವಿಪಕ್ಷಗಳು ಬಜೆಟ್ ಅನ್ನು ‘ಕ್ರೆಡಿಟ್ ಕಾರ್ಡ್ ಬಜೆಟ್’ ಹಾಗೂ ‘ಖಾಲಿ ಚೊಂಬು’ ಎಂದು ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಇದು ಖಾಲಿ ಚೊಂಬು ಅಲ್ಲ, ಭರ್ತಿ ಚೊಂಬು. ನಮ್ಮ ಬಜೆಟ್ ತುಂಬಿದ ಕೊಡವಿನಂತೆ ಇದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
‘ಸೈಕೋ’ ವೈದ್ಯ: ಪ್ರೇಮದ ನಾಮದಲ್ಲಿ 12 ವರ್ಷದ ಕೋಮಾ – ವೈದ್ಯೆಯ ಮರಣದಿಂದ ಬಯಲು ಬರುವ ಕತ್ತಲೆ ಸತ್ಯ
ಮೈಸೂರಿ: ಪ್ರೇಮದ ಹೆಸರಿನಲ್ಲಿ ಮಹಿಳೆಯರನ್ನು ದುರ್ನೀತಿ, ಭ್ರಮೆ ಮ... ಓದನ್ನು ಮುಂದುವರಿಸಿ
ಬೆಳ್ತಂಗಡಿ ಕೊಲೆ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿಯ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ
ಬೆಂಗಳೂರು, ಮಾರ್ಚ್ 25: ಬೆಳ್ತಂಗಡಿಯ ವಿದ್ಯಾರ್ಥಿನಿ ಕೊಲೆ ಪ್ರಕರ... ಓದನ್ನು ಮುಂದುವರಿಸಿ
ಬಡವರು, ವಿಧವೆಯರು, ಅಂಗವಿಕಲರಿಗೆ ಆದ್ಯತಾ ಕಾರ್ಡ್ ವಿಶೇಷ ಗಮನ: ಕೆ.ಎಚ್. ಮುನಿಯಪ್ಪ
ಬೆಂಗಳೂರು, ಮಾರ್ಚ್ 25: ಬೆಂಗಳೂರು ನಗರದಲ್ಲಿ ಆದ್ಯತಾ ಕಾರ್ಡ್ (ಬ... ಓದನ್ನು ಮುಂದುವರಿಸಿ
ಮೆಟ್ರೋ ಮಾರ್ಗ ಅಭಿವೃದ್ಧಿ vs ಪರಿಸರ: ಹೈಕೋರ್ಟ್‌ನಲ್ಲಿ ಗಂಭೀರ ವಾದ
ಬೆಂಗಳೂರು, ಮಾರ್ಚ್ 25: ಜೆಪಿನಗರ 4ನೇ ಹಂತದಿಂದ ಮೈಸೂರು ರಸ್ತೆವರ... ಓದನ್ನು ಮುಂದುವರಿಸಿ
ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ಬದುಕುವುದು ಸುರಕ್ಷಿತವೇ? ಯುಕೆಯ ಯುವತಿಯ ಪ್ರಶ್ನೆ ವೈರಲ್
ಬೆಂಗಳೂರು, ಮಾರ್ಚ್ 25: ಉತ್ತಮ ಉದ್ಯೋಗಾವಕಾಶಗಳಿಗಾಗಿ ದೇಶ-ವಿದೇಶ... ಓದನ್ನು ಮುಂದುವರಿಸಿ
ಬಜೆಟ್ ಕೊರತೆ ಇದ್ದರೂ ಆತಂಕ ಬೇಡ: ಪಾಲಿಕೆಗಳಿಗೆ ಸರ್ಕಾರದಿಂದ ಸಹಾಯ
ಬೆಂಗಳೂರು, ಮಾರ್ಚ್ 25: ಬಜೆಟ್ ಮಂಡನೆಗೆ ಹಣಕಾಸಿನ ಕೊರತೆ ಎದುರಿಸ... ಓದನ್ನು ಮುಂದುವರಿಸಿ
ಧಾರ್ಮಿಕ ಭಾವನೆಗಳಿಗೆ ಮಾನ್ಯತೆ: ರಾಮನವಮಿಗೆ ಮಾಂಸ ಮಾರಾಟಕ್ಕೆ ಬ್ರೇಕ್
ಬೆಂಗಳೂರು, ಮಾರ್ಚ್ 25: ರಾಮನವಮಿ ಹಬ್ಬದ ಅಂಗವಾಗಿ ಮಾರ್ಚ್ 27ರಂದ... ಓದನ್ನು ಮುಂದುವರಿಸಿ
3,200 ವರ್ಷದ ಹಿಂದಿನ ಆದಿ ಮಾನವರ ಸಮಾಧಿ ಪತ್ತೆ – ಮಹತ್ವದ ಪುರಾತತ್ವ ಅವಶೇಷಗಳು ಬೆಳಕಿಗೆ
ಹಾವೇರಿ: ಹಾವೇರಿ ಜಿಲ್ಲೆಯ ಬಳಿ 3,200 ವರ್ಷಗಳ ಹಿಂದಿನ ಆದಿ ಮಾನವ... ಓದನ್ನು ಮುಂದುವರಿಸಿ
ಕೆಎಂಎಫ್ ಸಹಕಾರ: ಐಪಿಎಲ್ ವೇದಿಕೆಯಲ್ಲಿ ನಂದಿನಿ ಉತ್ಪನ್ನಗಳಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಸಾರ
ಬೆಂಗಳೂರು: Royal Challengers Bangalore ಮತ್ತು ಕರ್ನಾಟಕ ಮಿಲ... ಓದನ್ನು ಮುಂದುವರಿಸಿ
ವಿವಾಹ ಮುರಿದು ಬೀಳುವ ಪ್ರಕರಣಗಳು ಹೆಚ್ಚಾಗಿದೆ ಕೌನ್ಸೆಲಿಂಗ್ ಕೇಂದ್ರ ಬೇಕೆಂದು ಶರವಣ ಒತ್ತಾಯ
ಬೆಂಗಳೂರು: ಟಿ.ಎ. ಶರವಣ ಅವರು ಕರ್ನಾಟಕ ಅಂತರ್ಜಾತಿ ವಿವಾಹ ತಿದ್ದ... ಓದನ್ನು ಮುಂದುವರಿಸಿ