ಬಡವರು, ವಿಧವೆಯರು, ಅಂಗವಿಕಲರಿಗೆ ಆದ್ಯತಾ ಕಾರ್ಡ್ ವಿಶೇಷ ಗಮನ: ಕೆ.ಎಚ್. ಮುನಿಯಪ್ಪ

ಬೆಂಗಳೂರು, ಮಾರ್ಚ್ 25: ಬೆಂಗಳೂರು ನಗರದಲ್ಲಿ ಆದ್ಯತಾ ಕಾರ್ಡ್ (ಬಿಪಿಎಲ್) ಪಡೆಯುವ ಆದಾಯ ಮಿತಿಯನ್ನು ಪರಿಷ್ಕರಿಸಲು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಭರವಸೆ ನೀಡಿದರು. ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗೆ ನೀಡಿದ ಉತ್ತರದ ಬಗ್ಗೆ ಅರ್ಧ ಗಂಟೆ ಕಾಲ ಚರ್ಚೆ ನಡೆದಿತ್ತು. 2017ರಲ್ಲಿ ಬಿಪಿಎಲ್ ಕಾರ್ಡಿನ ಆದಾಯ ಮಿತಿ 1.20 ಲಕ್ಷ ರೂ. ಆಗಿತ್ತು. ಈಗ ಅದನ್ನು ಪರಿಷ್ಕರಣೆ ಮಾಡಬೇಕಾಗಿದೆ ಎಂದು ಸಚಿವರು ಹೇಳಿದರು.

 

ಆಹಾರ ಭದ್ರತಾ ಕಾಯ್ದೆಯ ಪ್ರಕಾರ, ನಗರ ಪ್ರದೇಶದಲ್ಲಿ 50% ಜನರಿಗೆ, ಗ್ರಾಮೀಣ ಭಾಗದಲ್ಲಿ 70% ಜನರಿಗೆ ಆದ್ಯತಾ ಕಾರ್ಡ್ ನೀಡಬೇಕಾಗಿದೆ. 2011ರ ಸೆನಸ್ ಪ್ರಕಾರ ಬೆಂಗಳೂರಿನಲ್ಲಿ 83,98,537 ಜನರು ಇದ್ದರೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ರೇಷನ್ ಕಾರ್ಡ್ ಪಡೆದವರ ಸಂಖ್ಯೆ 7.10 ಲಕ್ಷ ಮಾತ್ರ, ಇದು ಇಂದಿನ ಜನಸಂಖ್ಯೆಗೆ 15% ಕೂಡ ಆಗುತ್ತಿಲ್ಲ ಎಂದು ಶಾಸಕ ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.

 

ಅವರು ಬಡವರು, ವಿಧವೆಯರು, ಅಂಗವಿಕಲರು ಮತ್ತು ಆಟೋ ಚಾಲಕರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “200 ರೂ. ಸೀರೆ ಕೊಟ್ಟರೆ ಸಾವಿರಾರು ಜನ ಕ್ಯೂನಲ್ಲಿ ನಿಂತಿದ್ದಾರೆ. ನಗರದಲ್ಲಿ 50% ಜನರಿಗೆ ಆದ್ಯತಾ ಕಾರ್ಡ್ ನೀಡಲು ಮನವಿ ಮಾಡುತ್ತೇವೆ,” ಎಂದರು.

 

ಕೆ.ಎಚ್. ಮುನಿಯಪ್ಪ ಹೇಳಿದರು, “ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬಿಪಿಎಲ್ ಹಂಚಿಕೆ 50–55% ಗಿಂತ ಹೆಚ್ಚು ಇಲ್ಲ. ಆದರೆ ಕರ್ನಾಟಕದಲ್ಲಿ 73% ಜನರಿಗೆ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ. 500 ರೂ. ಕೂಲಿ ಪಡೆಯುವ ಕಾರ್ಮಿಕರಿಗೂ ಬಿಪಿಎಲ್ ಸಿಗುತ್ತಿಲ್ಲ. ಆಡಳಿತ ಸುಧಾರಣಾ ಆಯೋಗ ಕನಿಷ್ಠ ಆದಾಯ ಮಿತಿಯನ್ನು 3 ಲಕ್ಷ ರೂ.ಗೆ ಏರಿಸಲು ಶಿಫಾರಸು ಮಾಡಿದೆ. ಆದಾಯ ಮಿತಿ ಹೆಚ್ಚಾದರೆ ಪರಿಹಾರ ಸಿಗುತ್ತದೆ.”

 

ನಗರದಲ್ಲಿ ವಿಶೇಷವಾಗಿ ವಿಧವೆಯರು, ಅಂಗವಿಕಲರು, ಬಡವರು, ಕೂಲಿ ಕಾರ್ಮಿಕರು ಮತ್ತು ಹಿರಿಯ ನಾಗರಿಕರಿಗೆ ಆದ್ಯತಾ ಕಾರ್ಡ್ ಹಕ್ಕುಪತ್ರ ಪರಿಶೀಲನೆ ನಡೆಸಲಾಗುವುದು. ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ 7.76 ಲಕ್ಷ ಅರ್ಜಿದಾರರು ಬಿಪಿಎಲ್‌ಗೆ ಅರ್ಹರಲ್ಲ, ಅವರ ಪರಿಶೀಲನೆ ನಂತರ ಅವರನ್ನು ಎಪಿಎಲ್‌ಗೆ ವರ್ಗಾಯಿಸಲು ಸೂಚನೆ ನೀಡಲಾಗುತ್ತದೆ. ಬೆಂಗಳೂರು ನಗರದ 28 ಮತ ಕ್ಷೇತ್ರಗಳಲ್ಲಿ ಪರಿಶೀಲನೆ ನಡೆಸಿ, ಎರಡು ತಿಂಗಳಲ್ಲಿ ವರದಿ ಸಲ್ಲಿಸಿ ಆದಾಯ ಮಿತಿಯನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

8 hours ago

   
Image 1
Image 1
ಮೈಸೂರು

‘ಸೈಕೋ’ ವೈದ್ಯ: ಪ್ರೇಮದ ನಾಮದಲ್ಲಿ 12 ವರ್ಷದ ಕೋಮಾ – ವೈದ್ಯೆಯ ಮರಣದಿಂದ ಬಯಲು ಬರುವ ಕತ್ತಲೆ ಸತ್ಯ

ಮೈಸೂರಿ: ಪ್ರೇಮದ ಹೆಸರಿನಲ್ಲಿ ಮಹಿಳೆಯರನ್ನು ದುರ್ನೀತಿ, ಭ್ರಮೆ ಮ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

ಬೆಳ್ತಂಗಡಿ ಕೊಲೆ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿಯ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ

ಬೆಂಗಳೂರು, ಮಾರ್ಚ್ 25: ಬೆಳ್ತಂಗಡಿಯ ವಿದ್ಯಾರ್ಥಿನಿ ಕೊಲೆ ಪ್ರಕರ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಮೆಟ್ರೋ ಮಾರ್ಗ ಅಭಿವೃದ್ಧಿ vs ಪರಿಸರ: ಹೈಕೋರ್ಟ್‌ನಲ್ಲಿ ಗಂಭೀರ ವಾದ

ಬೆಂಗಳೂರು, ಮಾರ್ಚ್ 25: ಜೆಪಿನಗರ 4ನೇ ಹಂತದಿಂದ ಮೈಸೂರು ರಸ್ತೆವರ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

“ಇದು ಖಾಲಿ ಚೊಂಬು ಅಲ್ಲ, ಭರ್ತಿ ಚೊಂಬು”: ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು, ಮಾರ್ಚ್ 25: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ಬದುಕುವುದು ಸುರಕ್ಷಿತವೇ? ಯುಕೆಯ ಯುವತಿಯ ಪ್ರಶ್ನೆ ವೈರಲ್

ಬೆಂಗಳೂರು, ಮಾರ್ಚ್ 25: ಉತ್ತಮ ಉದ್ಯೋಗಾವಕಾಶಗಳಿಗಾಗಿ ದೇಶ-ವಿದೇಶ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಬಜೆಟ್ ಕೊರತೆ ಇದ್ದರೂ ಆತಂಕ ಬೇಡ: ಪಾಲಿಕೆಗಳಿಗೆ ಸರ್ಕಾರದಿಂದ ಸಹಾಯ

ಬೆಂಗಳೂರು, ಮಾರ್ಚ್ 25: ಬಜೆಟ್ ಮಂಡನೆಗೆ ಹಣಕಾಸಿನ ಕೊರತೆ ಎದುರಿಸ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಧಾರ್ಮಿಕ ಭಾವನೆಗಳಿಗೆ ಮಾನ್ಯತೆ: ರಾಮನವಮಿಗೆ ಮಾಂಸ ಮಾರಾಟಕ್ಕೆ ಬ್ರೇಕ್

ಬೆಂಗಳೂರು, ಮಾರ್ಚ್ 25: ರಾಮನವಮಿ ಹಬ್ಬದ ಅಂಗವಾಗಿ ಮಾರ್ಚ್ 27ರಂದ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಹಾವೇರಿ

3,200 ವರ್ಷದ ಹಿಂದಿನ ಆದಿ ಮಾನವರ ಸಮಾಧಿ ಪತ್ತೆ – ಮಹತ್ವದ ಪುರಾತತ್ವ ಅವಶೇಷಗಳು ಬೆಳಕಿಗೆ

ಹಾವೇರಿ: ಹಾವೇರಿ ಜಿಲ್ಲೆಯ ಬಳಿ 3,200 ವರ್ಷಗಳ ಹಿಂದಿನ ಆದಿ ಮಾನವ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1
ಬೆಂಗಳೂರು ನಗರ

ಕೆಎಂಎಫ್ ಸಹಕಾರ: ಐಪಿಎಲ್ ವೇದಿಕೆಯಲ್ಲಿ ನಂದಿನಿ ಉತ್ಪನ್ನಗಳಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಸಾರ

ಬೆಂಗಳೂರು: Royal Challengers Bangalore ಮತ್ತು ಕರ್ನಾಟಕ ಮಿಲ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ವಿವಾಹ ಮುರಿದು ಬೀಳುವ ಪ್ರಕರಣಗಳು ಹೆಚ್ಚಾಗಿದೆ ಕೌನ್ಸೆಲಿಂಗ್ ಕೇಂದ್ರ ಬೇಕೆಂದು ಶರವಣ ಒತ್ತಾಯ

ಬೆಂಗಳೂರು: ಟಿ.ಎ. ಶರವಣ ಅವರು ಕರ್ನಾಟಕ ಅಂತರ್ಜಾತಿ ವಿವಾಹ ತಿದ್ದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1