ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ: 15 ತಿಂಗಳ ಬಳಿಕ ಯಾವಾಗ ಬೇಕಾದರೂ ಸಾಧ್ಯ – ಹೈಕೋರ್ಟ್ ಸ್ಪಷ್ಟನೆ
ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಬಳಿಕ ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ ಮೊದಲ 15 ತಿಂಗಳುಗಳನ್ನು ಹೊರತುಪಡಿಸಿ, ಬಳಿಕ ಯಾವುದೇ ಸಮಯದಲ್ಲಾದರೂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಚಲ್ಡಿಗಾನಹಳ್ಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎನ್. ಶ್ರೀನಿವಾಸ್ ಅವರು, ತಮ್ಮ ವಿರುದ್ಧ ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ಮನವಿಯ ಮೇರೆಗೆ ಉಪವಿಭಾಗಾಧಿಕಾರಿ ಸಭೆ ದಿನಾಂಕ ನಿಗದಿಪಡಿಸಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಪೀಠ, ಅರ್ಜಿಯನ್ನು ವಜಾಗೊಳಿಸಿ ಮಹತ್ವದ ಆದೇಶ ನೀಡಿದೆ. ನ್ಯಾಯಪೀಠದ ಅಭಿಪ್ರಾಯದಂತೆ, ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ ಆರಂಭಿಕ 15 ತಿಂಗಳ ಅವಧಿಯಲ್ಲಿ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ. ಆದರೆ 15 ತಿಂಗಳುಗಳು ಪೂರ್ಣಗೊಂಡ ಬಳಿಕ ಯಾವುದೇ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಅಧ್ಯಕ್ಷರ ಅವಧಿಯ ಕೊನೆಯ ಹಂತದಲ್ಲಿ ನಿರ್ಣಯ ಮಂಡಿಸಿದರೂ ಅದನ್ನು ಅಧಿಕಾರ ದುರುಪಯೋಗವೆಂದು ಪರಿಗಣಿಸಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಸದಸ್ಯರ ಮನವಿಯ ಮೇರೆಗೆ ಸಭೆ ನಡೆಸಲು ಉಪವಿಭಾಗಾಧಿಕಾರಿ ದಿನಾಂಕ ನಿಗದಿಪಡಿಸಿರುವುದರಲ್ಲಿ ಯಾವುದೇ ದೋಷವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಇದೇ ವೇಳೆ, ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಮಾಡಿರುವ ಆರೋಪಗಳ ಪರಿಶೀಲನೆಗಾಗಿ ವಿಷಯವನ್ನು ಸಕ್ಷಮ ಪ್ರಾಧಿಕಾರಕ್ಕೆ ರವಾನಿಸಲು ಗ್ರಾಮ ಪಂಚಾಯತ್‌ಗೆ ಸೂಚಿಸಲಾಗಿದೆ. ಆದೇಶದ ಪ್ರತಿ ಲಭಿಸಿದ ಏಳು ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.
ಚಲ್ಡಿಗಾನಹಳ್ಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುವಂತೆ ಸದಸ್ಯರು ಮನವಿ ಸಲ್ಲಿಸಿದ್ದರು. ಈ ಮನವಿಯ ಆಧಾರದಲ್ಲಿ ಕೋಲಾರ ಉಪವಿಭಾಗಾಧಿಕಾರಿ 2025ರ ಡಿಸೆಂಬರ್ 20ರಂದು ನೋಟಿಸ್ ಜಾರಿ ಮಾಡಿ, 2026ರ ಜನವರಿ 7ರಂದು ಸಭೆ ನಡೆಸಲು ದಿನಾಂಕ ನಿಗದಿಪಡಿಸಿದ್ದರು.ಇದನ್ನು ಪ್ರಶ್ನಿಸಿ ಅಧ್ಯಕ್ಷರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ, ಪಂಚಾಯತ್‌ನಲ್ಲಿರುವ 65 ಲಕ್ಷ ರೂ. ಬಿಡುಗಡೆಗೆ ಸಂಬಂಧ ಕೆಲವು ಸದಸ್ಯರು ಒತ್ತಡ ಹೇರಿದ್ದು, ಅದಕ್ಕೆ ಒಪ್ಪದ ಕಾರಣವೇ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದಾರೆ ಎಂದು ಅರ್ಜಿದಾರರ ಪರ ವಾದಿಸಲಾಯಿತು. ಆದರೆ ಈ ವಾದವನ್ನು ನ್ಯಾಯಪೀಠ ತಳ್ಳಿ ಹಾಕಿ ಅರ್ಜಿಯನ್ನು ವಜಾಗೊಳಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗ್ರಾ.ಪಂ. ಸಿಬ್ಬಂದಿಗೆ ಗುಡ್ ನ್ಯೂಸ್: ಪ್ರೋತ್ಸಾಹಧನಕ್ಕೆ ಸರ್ಕಾರ ಮಹತ್ವದ ಆದೇಶ!
ಬೆಂಗಳೂರು: ಮೃತ ಖಾತೆದಾರರ ವಾರಸುದಾರರಿಗೆ ಪಹಣಿ ದಾಖಲಿಸಲು... ಓದನ್ನು ಮುಂದುವರಿಸಿ
ಗುಡಿಬಂಡಾ
ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷರ ಅವಧಿ ಅಂತ್ಯ; ಆಡಳಿತಾಧಿಕಾರಿಗಳ ನೇಮಕ.
ಗುಡಿಬಂಡೆ: ಗುಡಿಬಂಡೆ ತಾಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಗ್ರಾಮ... ಓದನ್ನು ಮುಂದುವರಿಸಿ
ಮಂಗಳೂರು
ಕುಪ್ಪೆಪದವು: ನಿವೇಶನ ರಹಿತರ ಗುಡಸಿಲು ಪ್ರತಿಭಟನೆ ಫೆಬ್ರವರಿ 16ರಂದು
ಮಂಗಳೂರು : ಕುಪ್ಪೆಪದವು ಗ್ರಾಮಪಂಚಾಯತ್ ವ್ಯಾಪ್ತಿಯ 80 ವಸತಿ ರಹಿ... ಓದನ್ನು ಮುಂದುವರಿಸಿ
ಗ್ರಾಮ ಪಂಚಾಯಿತಿ ವಿದ್ಯಾರ್ಥಿ ವೇತನ ಯೋಜನೆ: ₹10,000 ವರೆಗೆ ವಿದ್ಯಾರ್ಥಿ ಸಹಾಯಕ್ಕೆ ಅರ್ಜಿಗಳನ್ನು ಆಹ್ವಾನ
ಬೆಂಗಳೂರು: ಕರ್ನಾಟಕದ ಗ್ರಾಮ ಪಂಚಾಯಿತಿಗಳು ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತ... ಓದನ್ನು ಮುಂದುವರಿಸಿ
ಸೋನೆವಾಡಿ ಪಂಚಾಯತ್ ಅಧಿವೇಶನದಲ್ಲಿ ಪುರುಷ ವಿಧವೆಗಳಿಗೆ ಸಹ ಸರ್ಕಾರಿ ಯೋಜನೆ ನೀಡುವ ನಿರ್ಣಯ
ಮುಂಬೈ: ಮಹಾರಾಷ್ಟ್ರ ರಾಜ್ಯದ ಕೋಪರ್ಗಾಂವ್ ತಾಲೂಕಿನ ಸೋನೆವಾಡಿ ಗ್... ಓದನ್ನು ಮುಂದುವರಿಸಿ
4 ದಶಕಗಳ ನಂತರ ಜಿಲ್ಲಾ ಪಂಚಾಯತಿಗೆ ಸ್ವಂತ ಕಟ್ಟಡ – 49.65 ಕೋಟಿ ರೂ. ಅನುದಾನ ಅನುಮೋದನೆ
ಕಲಬುರಗಿ: 1986ರಿಂದ ಸ್ವಂತ ಕಟ್ಟಡವಿಲ್ಲದೆ, ಹಳೇ ಜಿಲ್ಲಾಧ... ಓದನ್ನು ಮುಂದುವರಿಸಿ
ಗುಡಿಬಂಡಾ
ಗುಡಿಬಂಡೆ ತಾಲೂಕು ಕೆಡಿಪಿ ಸಭೆ: ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲು ಶಾಸಕ ಸುಬ್ಬಾರೆಡ್ಡಿ ಸೂಚನೆ
ಗುಡಿಬಂಡೆ: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕ ಸುಬ್ಬಾ... ಓದನ್ನು ಮುಂದುವರಿಸಿ
ಚುನಾಯಿತರ ಅಧಿಕಾರ ಅವಧಿ ಮುಗಿದ ಹಿನ್ನೆಲೆ-ಬೆಂಗಳೂರು ಗ್ರಾಮಾಂತರ 93 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳು ನೇಮಕ
ಜನಪ್ರತಿನಿಧಿಗಳ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ... ಓದನ್ನು ಮುಂದುವರಿಸಿ
ಗ್ರಾಮ ಪಂಚಾಯಿತಿ ಚುನಾವಣೆಗೆ ಕಹಳೆ: 2026ರ ಚುನಾವಣೆಗೆ ಸಿದ್ಧತೆ ಆರಂಭಿಸಲು ಸರ್ಕಾರ ಸೂಚನೆ
ಬೆಂಗಳೂರು: ರಾಜ್ಯದಲ್ಲಿ 2026-31ನೇ ಸಾಲಿನ ಗ್ರಾಮ ಪಂಚಾಯಿತಿಗಳ ಸ... ಓದನ್ನು ಮುಂದುವರಿಸಿ
ಚಿಕ್ಕಬಳ್ಳಾಪುರ: ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರಿದರೆ ಕಾಂಗ್ರೆಸ್‌ಗೆ ಟಫ್ ಫೈಟ್ ಕಾಯಂ...!
ಚಿಕ್ಕಬಳ್ಳಾಪುರ : ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಸಲು ನೀಡಿದ ಬ... ಓದನ್ನು ಮುಂದುವರಿಸಿ