ಚುನಾಯಿತರ ಅಧಿಕಾರ ಅವಧಿ ಮುಗಿದ ಹಿನ್ನೆಲೆ-ಬೆಂಗಳೂರು ಗ್ರಾಮಾಂತರ 93 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳು ನೇಮಕ
ಜನಪ್ರತಿನಿಧಿಗಳ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 93 ಗ್ರಾಮ ಪಂಚಾಯತ್‌ಗಳಿಗೆ ತಾತ್ಕಾಲಿಕವಾಗಿ ಆಡಳಿತಾಧಿಕಾರಿಗಳು ನೇಮಕವಾಗಿದ್ದು, ಜನಪ್ರತಿನಿಧಿಗಳ ಆಯ್ಕೆಗೆ ಮುನ್ನ ಸರ್ಕಾರದ ಸೇವೆಗಳ ನಿರ್ವಹಣೆಯನ್ನು ಈ ಅಧಿಕಾರಿಗಳು ನೋಡಿಕೊಳ್ಳಲು ನಿರ್ಧರಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಪದಾವಧಿ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಕೆಲವು ಪಂಚಾಯಿತಿಗಳಲ್ಲಿ ಏಪ್ರಿಲ್ ವೇಳೆಗೆ ಅವಧಿ ಪೂರ್ಣಗೊಳ್ಳಲಿದೆ. ಈ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಆಡಳಿತ ನಿರ್ವಹಣೆಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳಾಗಿ ನೇಮಿಸಲಾಗಿದೆ.
ಶಿಕ್ಷಣ, ಕೃಷಿ, ಮೀನುಗಾರಿಕೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವ ಹಿಸಲಿದ್ದಾರೆ. ಇವರು ಗ್ರಾಮ ಪಂಚಾಯಿತಿಗಳ ದೈನಂದಿನ ಆಡಳಿತ, ಸಿಬ್ಬಂದಿ ಮೇಲ್ವಿಚಾರಣೆ, ದಾಖಲೆಗಳ ನಿರ್ವಹಣೆ ಸೇರಿದಂತೆ ಎಲ್ಲ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಮುಂದಿನ ಸೂಚನೆ ಬರುವವರೆಗೂ ಗ್ರಾಮ ಪಂಚಾಯಿತಿಗಳ ಎಲ್ಲಾ ಅಧಿಕಾರ ಹಾಗೂ ಕರ್ತವ್ಯಗಳನ್ನು ಆಡಳಿತಾಧಿಕಾರಿಗಳೇ ನಿರ್ವಹಿಸಲಿದ್ದಾರೆ. ಗ್ರಾಪಂ ಸದಸ್ಯರ ಚುನಾವಣೆ ನಡೆದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪೂರ್ಣಗೊಳ್ಳುವವರೆಗೂ ಈ ವ್ಯವಸ್ಥೆ ಜಾರಿಯಲ್ಲಿರಲಿದೆ.
ಯಾವ ಯಾವ ತಾಲೂಕುಗಳಲ್ಲಿ ನೇಮಕ?
ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ನೆಲಮಂಗಲ ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆಡಳಿತಾಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯ ದೈನಂದಿನ ಕಾರ್ಯಗಳು, ಸಿಬ್ಬಂದಿಗಳ ಮೇಲ್ವಿಚಾರಣೆ, ತೆರಿಗೆ ವಸೂಲಿ, ಅಭಿವೃದ್ಧಿ ಕಾರ್ಯಗಳ ನಿಗಾವಹಣೆ, ಸರ್ಕಾರದ ಅನುದಾನಗಳ ಸಮರ್ಪಕ ಬಳಕೆ, ಆಸ್ತಿ ದಾಖಲೆಗಳ ನಿರ್ವಹಣೆ, ಗ್ರಂಥಾಲಯಗಳ ಮೇಲ್ವಿಚಾರಣೆ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ಈ ಕ್ರಮದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಳಿತದಲ್ಲಿ ವ್ಯತ್ಯಯವಾಗದೆ ಸೇವೆಗಳು ಮುಂದುವರಿಯಲಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗುಡಿಬಂಡಾ
ಗುಡಿಬಂಡೆ ತಾಲೂಕು ಕೆಡಿಪಿ ಸಭೆ: ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲು ಶಾಸಕ ಸುಬ್ಬಾರೆಡ್ಡಿ ಸೂಚನೆ
ಗುಡಿಬಂಡೆ: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕ ಸುಬ್ಬಾ... ಓದನ್ನು ಮುಂದುವರಿಸಿ
ಗ್ರಾಮ ಪಂಚಾಯಿತಿ ಚುನಾವಣೆಗೆ ಕಹಳೆ: 2026ರ ಚುನಾವಣೆಗೆ ಸಿದ್ಧತೆ ಆರಂಭಿಸಲು ಸರ್ಕಾರ ಸೂಚನೆ
ಬೆಂಗಳೂರು: ರಾಜ್ಯದಲ್ಲಿ 2026-31ನೇ ಸಾಲಿನ ಗ್ರಾಮ ಪಂಚಾಯಿತಿಗಳ ಸ... ಓದನ್ನು ಮುಂದುವರಿಸಿ
ಚಿಕ್ಕಬಳ್ಳಾಪುರ: ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರಿದರೆ ಕಾಂಗ್ರೆಸ್‌ಗೆ ಟಫ್ ಫೈಟ್ ಕಾಯಂ...!
ಚಿಕ್ಕಬಳ್ಳಾಪುರ : ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಸಲು ನೀಡಿದ ಬ... ಓದನ್ನು ಮುಂದುವರಿಸಿ
ಕಡಬ ತಾಲೂಕು
ಲಂಚಕ್ಕಾಗಿ ಅಲೆದಾಡಿಸಿದ ಪ. ಪಂ ಮಹಿಳಾ ಸಿಬ್ಬಂದಿ - ದಾಖಲೆ ಪತ್ರಕ್ಕಾಗಿ ಕಛೇರಿಗೆ ಬಂದ ವ್ಯಕ್ತಿಯನ್ನು ಸತಾಯಿಸಿದ ಅಧಿಕಾರಿ
ಕಡಬ: ಬ್ಯಾಂಕ್ ಲೋನ್ ಪಡೆದು ಮನೆ ಕಟ್ಟುವ ಸಲುವಾಗಿ ಅಗತ್ಯ ದಾಖಲೆ... ಓದನ್ನು ಮುಂದುವರಿಸಿ
ಯಲಹಂಕ
ರಾಜಾನುಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಚನ್ನಮ್ಮ
ಯಲಹಂಕ: ರಾಜಾನುಕುಂಟೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಚನ್... ಓದನ್ನು ಮುಂದುವರಿಸಿ
ಕಿತ್ತೂರು
ಕಿತ್ತೂರು ತಾ.ಪಂ ಕಚೇರಿಗೆ ಜಿ.ಪಂ ಸಿಇಒ ರಾಹುಲ್ ಶಿಂಧೆ ಭೇಟಿ - ಸಾಂಕ್ರಾಮಿಕ ರೋಗ ಬಾರದಂತೆ ಮುಂಜಾಗ್ರತ ಕ್ರಮಕ್ಕೆ ಸೂಚನೆ
ಕಿತ್ತೂರು: ಮಳೆಗಾಲ ಆರಂಭವಾಗಿದ್ದು ಸಾಂಕ್ರಾಮಿಕ ಕಾಯಿಲೆಗಳು ಉಲ್ಬ... ಓದನ್ನು ಮುಂದುವರಿಸಿ
ಕಾರ್ಕಳ
ಇನ್ನಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ 8 ಟವರ್ ನಿರ್ಮಾಣ – ಗ್ರಾಮಸ್ಥರ ಆಕ್ರೋಶ
ಕಾರ್ಕಳ : ಉಡುಪಿ ಜಿಲ್ಲೆಯ ಎಲ್ಲೂರು ಗ್ರಾಮದ ನಂದಿಕೂರಿನಿಂದ ಕೇರಳ... ಓದನ್ನು ಮುಂದುವರಿಸಿ
ನೀರಿಗಾಗಿ ಹಾಹಾಕಾರದ ನಡುವೆ ಫ್ಲೋರೈಡ್ ಯುಕ್ತ ನೀರು ಪೂರೈಕೆ : ಗ್ರಾಮ ಪಂಚಾಯತಿ ವಿರುಧ್ಧ ಗ್ರಾಮಸ್ಥರ ಆಕ್ರೋಶ
ಗದಗ: ನೀರಿಗಾಗಿ ಹಾಹಾಕಾರದ ನಡುವೆ ಫ್ಲೋರೈಡ್ ಯುಕ್ತ ನೀರು ಪೂರೈಕೆ... ಓದನ್ನು ಮುಂದುವರಿಸಿ
ಚಾಮರಾಜನಗರ: ಪಂಚಾಯಿತಿಯಿಂದ ಆಶ್ರಯ ಮನೆ ಕೊಡಿಸುವುದಾಗಿ ಪುಸಲಾಯಿಸಿ ವಿವಾಹಿತೆ ಮೇಲೆ ಅತ್ಯಾಚಾರ!
ಚಾಮರಾಜನಗರ: ಆಶ್ರಯ ಮನೆ ಕೊಡಿಸುವುದಾಗಿ ಪುಸಲಾಯಿಸಿ ವಿವಾಹಿತೆ ಮೇ... ಓದನ್ನು ಮುಂದುವರಿಸಿ
ಹೆಬ್ಬಸೂರು ಗ್ರಾ. ಪಂ ವ್ಯಾಪ್ತಿಯ ಹಿತ್ತಲಗುಡ್ಡ ಗ್ರಾಮದ ಸೋಲಿಗರ ಕಾಲನಿಯ ದುಸ್ಥಿತಿ... ಸೋರುವ ಸೂರಿನಲ್ಲಿ ಸೋಲಿಗರ ಜೀವನ
ಚಾಮರಾಜನಗರ : ಒಂದೆಡೆ ಹೊಸ ಮನೆ ನಿರ್ಮಾಣಗೊಳ್ಳುವವರೆಗೂ ಜೋಪಡಿ, ಶ... ಓದನ್ನು ಮುಂದುವರಿಸಿ