GLP-1 ಔಷಧಿಗಳು: ಮಧುಮೇಹ ನಿಯಂತ್ರಣದ ಜೊತೆ ಕಣ್ಣಿನ ದೃಷ್ಟಿ ಅಪಾಯ?

ತೂಕ ಇಳಿಸುವ ಮತ್ತು ಟೈಪ್-2 ಮಧುಮೇಹ ನಿಯಂತ್ರಣಕ್ಕೆ “ಅದ್ಭುತ ಔಷಧಿಗಳು” ಎಂದೇ ಪ್ರಸಿದ್ಧವಾಗಿರುವ ಜಿ.ಎಲ್.ಪಿ-1 ರಿಸೆಪ್ಟರ್ ಅಗೋನಿಸ್ಟ್‌ಗಳು ಭಾರತದಲ್ಲಿ ವೇಗವಾಗಿ ಜನಪ್ರಿಯತೆ ಪಡೆಯುತ್ತಿವೆ. ಸೆಮಾಗ್ಲುಟೈಡ್ (ಓಜೆಂಪಿಕ್/ವೆಗೋವಿ) ಮತ್ತು ಟಿರ್ಜೆಪಟೈಡ್ (ಮೌಂಜಾರೊ) ಔಷಧಿಗಳು ಹಸಿವು ಹಾಗೂ ಇನ್ಸುಲಿನ್ ನಿಯಂತ್ರಣದ ಮೂಲಕ ಮಧುಮೇಹವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದರ ಜೊತೆಗೆ ತೂಕ ಇಳಿಕೆಗೆ ಸಹಾಯ ಮಾಡುತ್ತಿವೆ.

 

ಮಾರ್ಚ್ 20, 2026ರಂದು ಸೆಮಾಗ್ಲುಟೈಡ್ ಪೇಟೆಂಟ್ ಮುಕ್ತಾಯವಾದ ಹಿನ್ನೆಲೆಯಲ್ಲಿ, ದೇಶೀಯ ಕಂಪನಿಗಳು ಕಡಿಮೆ ಬೆಲೆಯ ಜೆನೆರಿಕ್ ಔಷಧಿಗಳನ್ನು ಪರಿಚಯಿಸಲು ಸಿದ್ಧವಾಗಿವೆ. ಇದರಿಂದ ಔಷಧಿಗಳ ಬೆಲೆ ಶೇ.80ರವರೆಗೆ ಇಳಿಕೆಯಾಗುವ ಸಾಧ್ಯತೆ ಇದ್ದು, ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆಯು ಇನ್ನಷ್ಟು ಸುಲಭವಾಗಲಿದೆ.ಆದರೆ, ಈ ಸುಲಭ ಲಭ್ಯತೆಯ ಜೊತೆಗೆ ಅನಿಯಂತ್ರಿತ ಬಳಕೆ ಮತ್ತು ದುರ್ಬಳಕೆಯ ಬಗ್ಗೆ ವೈದ್ಯಕೀಯ ವಲಯದಲ್ಲಿ ಆತಂಕ ವ್ಯಕ್ತವಾಗಿದೆ. 

 

ವಿಶೇಷವಾಗಿ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಅಧ್ಯಯನಗಳ ಪ್ರಕಾರ, ಜಿ.ಎಲ್.ಪಿ-1 ಔಷಧಿಗಳನ್ನು ಆರಂಭಿಕ ಹಂತದಲ್ಲಿ ಬಳಸಿದಾಗ ಡಯಾಬಿಟಿಕ್ ರೆಟಿನೋಪತಿ ಹದಗೆಡುವ ಸಾಧ್ಯತೆ ಇದೆ. ಜೊತೆಗೆ “ಕಣ್ಣಿನ ಸ್ಟ್ರೋಕ್” ಎಂದು ಕರೆಯಲಾಗುವ ನೋನ್-ಆರ್ಟರಿಟಿಕ್ ಇಸ್ಕಿಮಿಕ್ ಆಪ್ಟಿಕ್ ನ್ಯೂರೋಪತಿ (NAION) ಎಂಬ ಅಪರೂಪದ ಸಮಸ್ಯೆಯ ಅಪಾಯವೂ ಇರಬಹುದು. ರಕ್ತದ ಸಕ್ಕರೆ ಮಟ್ಟವನ್ನು ತಕ್ಷಣ ಕಡಿಮೆ ಮಾಡುವ ಪರಿಣಾಮದಿಂದ ಕೆಲ ಸಂದರ್ಭಗಳಲ್ಲಿ ಕಣ್ಣಿನ ರೆಟಿನಾದ ಮೇಲೆ ತಾತ್ಕಾಲಿಕ ಪರಿಣಾಮ ಉಂಟಾಗಬಹುದು. ಇದರಿಂದ ದೃಷ್ಟಿ ನರಕ್ಕೆ ರಕ್ತ ಪೂರೈಕೆ ಮಾಡುವ ನಾಳಗಳ ಮೇಲೆ ಒತ್ತಡ ಬರುವ ಸಾಧ್ಯತೆ ಇದೆ.

 

NAION ಲಕ್ಷಣಗಳು
• ಒಂದು ಕಣ್ಣಿನಲ್ಲಿ ಹಠಾತ್, ನೋವಿಲ್ಲದ ದೃಷ್ಟಿ ನಷ್ಟ
• ದೃಷ್ಟಿ ಕ್ಷೇತ್ರದಲ್ಲಿ ಭಾಗಶಃ ದೋಷಗಳು
• ಅಪರೂಪದ ಸಂದರ್ಭಗಳಲ್ಲಿ ಸಂಪೂರ್ಣ ದೃಷ್ಟಿ ನಷ್ಟ

 

ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (EMA) ಈ ಸಮಸ್ಯೆಯನ್ನು ಅಪರೂಪದ ಅಡ್ಡಪರಿಣಾಮವಾಗಿ ಗುರುತಿಸಿವೆ. ಟೈಪ್-2 ಮಧುಮೇಹಿಗಳಲ್ಲಿ ಈ ಅಪಾಯ ಎರಡು ಪಟ್ಟು ಹೆಚ್ಚಾಗಬಹುದು ಎಂದು ಸೂಚಿಸಲಾಗಿದೆ. ಆದಾಗ್ಯೂ, ಈ ಅಪಾಯ ಪ್ರತಿಯೊಬ್ಬರಿಗೂ ಇರುವುದಿಲ್ಲ. ಈಗಾಗಲೇ ಡಯಾಬಿಟಿಕ್ ರೆಟಿನೋಪತಿ, ಹೈ ಬ್ಲಡ್ ಪ್ರೆಶರ್ ಅಥವಾ ನಿದ್ರೆಯಲ್ಲಿನ ಉಸಿರಾಟ ಸಮಸ್ಯೆಗಳಿರುವವರಿಗೆ ಅಪಾಯ ಹೆಚ್ಚು ಇರಬಹುದು ಎಂದು ತಜ್ಞರು ಹೇಳಿದ್ದಾರೆ. ನಾರಾಯಣ ನೇತ್ರಾಲಯದ ನಿರ್ದೇಶಕರಾದ ಡಾ. ರೋಹಿತ್ ಶೆಟ್ಟಿ ಅವರು, “ವೈದ್ಯಕೀಯವಾಗಿ ಅಗತ್ಯವಿರುವವರಿಗೆ ಈ ಔಷಧಿಗಳನ್ನು ತಡೆಯಬಾರದು. ಆದರೆ, ರೋಗಿಗಳ ಆರೋಗ್ಯ ಸ್ಥಿತಿ ಆಧರಿಸಿ ಅಪಾಯವನ್ನು ಮೌಲ್ಯಮಾಪನ ಮಾಡಬೇಕು” ಎಂದು ತಿಳಿಸಿದ್ದಾರೆ.ಅವರು ಮತ್ತಷ್ಟು ಹೇಳುವುದೇನೆಂದರೆ, ನಿಯಮಿತ ಕಣ್ಣಿನ ತಪಾಸಣೆ ಮೂಲಕ ಆರಂಭಿಕ ಸಮಸ್ಯೆಗಳನ್ನು ಪತ್ತೆಹಚ್ಚಿ ದೃಷ್ಟಿ ನಷ್ಟವನ್ನು ತಡೆಯಬಹುದು. ಈ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ಸ್ವಯಂ ಬಳಸಬಾರದು. ಸರಿಯಾದ ವೈದ್ಯಕೀಯ ಮೇಲ್ವಿಚಾರಣೆಯಲ್ಲೇ ಬಳಸಿದರೆ ಮಾತ್ರ ಇದರ ಪ್ರಯೋಜನಗಳನ್ನು ಸುರಕ್ಷಿತವಾಗಿ ಪಡೆಯಬಹುದು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

5 hours ago

   
Image 1
Image 1
ಬೆಂಗಳೂರು ನಗರ

ಪಬ್ ಫುಡ್ ಬೆಲೆ ಶಾಕ್: ₹150ಕ್ಕೆ ಫ್ರೆಂಚ್ ಫ್ರೈಸ್!

ಬೆಂಗಳೂರು: ನಗರದಲ್ಲಿ ಪಬ್‌ಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಬೇಸಿಗೆಯಲ್ಲಿ ತುಳಸಿ ಗಿಡ ಉಳಿಸೋದು ಹೇಗೆ? ಇಲ್ಲಿದೆ ಟಿಪ್ಸ್

ಬೆಂಗಳೂರು: ತುಳಸಿ ಗಿಡವು ಮನೆಗಳಲ್ಲಿ ಧಾರ್ಮಿಕ ಹಾಗೂ ಔಷಧೀಯ ಮಹತ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಕುತ್ತಿಗೆ ಕಪ್ಪಾಗ್ತಿದೆಯಾ? ನಿರ್ಲಕ್ಷ್ಯ ಮಾಡ್ಬೇಡಿ! ತಜ್ಞರ ಎಚ್ಚರಿಕೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿಯಲ್ಲಿ ಗಲ್ಲ ಮತ್ತು... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಹಸಿ ಮಾವಿನಕಾಯಿ ಆರೋಗ್ಯಕ್ಕೆ ಎಷ್ಟು ಉಪಕಾರಿ ಗೊತ್ತಾ?

ಬೆಂಗಳೂರು: ಬೇಸಿಗೆ ಕಾಲದಲ್ಲಿ ಸಿಗುವ ಹಸಿ ಮಾವಿನಕಾಯಿ ಕೇವಲ ರುಚಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಫ್ಯಾಟಿ ಲಿವರ್ ಅಪಾಯ ಹೆಚ್ಚುತ್ತಿದೆ – ವೈದ್ಯರ ಎಚ್ಚರಿಕೆ

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಕಿಡ್ನಿ ಕಲ್ಲು ಸಮಸ್ಯೆ ಇದೆಯಾ? ಈ ಹಣ್ಣು ತಿನ್ನಿದ್ರೆ ಕರಗಿ ಹೋಗುತ್ತೆ!

ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಕಲ್ಲು (Kidney Stones) ಸಮಸ್ಯೆ ಹೆಚ್ಚಾಗುತ್ತಿರ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಮನೆಯಲ್ಲಿ ಪೊರಕೆ ಇಡುವ ದಿಕ್ಕು ತಪ್ಪಿದ್ರೆ ಅಪಾಯ! ವಾಸ್ತು ಎಚ್ಚರಿಕೆ

ಭಾರತೀಯ ಸಂಪ್ರದಾಯದಲ್ಲಿ ಪೊರಕೆಯನ್ನು ಕೇವಲ ಕಸ ಗುಡಿಸುವ ಸಾಧನವಾಗಿ ಮಾತ್ರವಲ್ಲದೆ, ಲಕ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ನಂದಿನಿ ಹಾಲಿನಿಂದಲೇ 1 ಕೆಜಿ ಬೆಣ್ಣೆ! ಈ ಸಿಂಪಲ್ ಟ್ರಿಕ್ ನಿಮಗೆ ಗೊತ್ತಾ?

ದಿನನಿತ್ಯ ಉಪಾಹಾರದಲ್ಲಿ ಬಳಸುವ ಬೆಣ್ಣೆಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ಬೇಸಿಗೆ ಕಾಲದಲ್ಲಿ ಎಸಿ ಬಳಕೆ: ತಲೆನೋವು, ಮೂಗು ಬ್ಲಾಕ್‌ಗಿಂತ ಎಚ್ಚರಿಕೆ

ತಜ್ಞರ ಪ್ರಕಾರ, ಹೆಚ್ಚು ಸಮಯ ತಣ್ಣನೆಯ ವಾತಾವರಣದಲ್ಲಿ ಇರಬೇಕು ಎನ್ನುವ ಎಸಿ ಬಳಕೆಯಿಂದ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಹಣ್ಣು-ತರಕಾರಿಗಳನ್ನು ಒಟ್ಟಿಗೆ ಇಡಬೇಡಿ, ಬೇಗ ಹಾಳಾಗುತ್ತವೆ: ತಜ್ಞರ ಎಚ್ಚರಿಕೆ

ಬೆಂಗಳೂರು: ಹಣ್ಣು-ತರಕಾರಿಗಳನ್ನು ಮಾರುಕಟ್ಟೆಯಿಂದ ತರಿಸಿ ಒಟ್ಟಿಗ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1