ಎಲ್ಲೋಡು ಬೆಟ್ಟದಲ್ಲಿ ಅದ್ದೂರಿ ಲಕ್ಷ್ಮೀ ಆದಿನಾರಾಯಣಸ್ವಾಮಿ ಜಾತ್ರೆ.-ಭಕ್ತಿಭಾವ, ಸಂಪ್ರದಾಯ ಹಾಗೂ ಜನಸಾಗರದೊಂದಿಗೆ ಮಹೋತ್ಸವ ಸಂಭ್ರಮ.

ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಬೆಟ್ಟದಲ್ಲಿರುವ ಸುಮಾರು 450 ವರ್ಷಗಳ ಇತಿಹಾಸ ಹೊಂದಿದ ಪ್ರಸಿದ್ಧ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವಾಲಯದಲ್ಲಿ ಈ ವರ್ಷದ ಮಾಘ ಮಾಸದ ಜಾತ್ರಾ ಮಹೋತ್ಸವವು ಭಕ್ತಿಭಾವ, ಸಂಪ್ರದಾಯ ಮತ್ತು ಅಪಾರ ಜನಸಾಗರದೊಂದಿಗೆ ಶಿಸ್ತಿನಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.

 

ಕೂರ್ಮ ಮಹರ್ಷಿ ತಪಸ್ಸು ಮಾಡಿದ ಪವಿತ್ರ ಕ್ಷೇತ್ರವೆಂದು ನಂಬಲಾಗಿರುವ ಕೂರ್ಮಗಿರಿಯ ಮೇಲಿನ ಗುಹಾಂತರ ದೇವಾಲಯದಲ್ಲಿರುವ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿಯ ಉದ್ಭವ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ಸೇವೆಗಳು ನೆರವೇರಿದವು. ಪುರಾಣಗಳ ಪ್ರಕಾರ ದಟ್ಟ ಅರಣ್ಯದಲ್ಲಿ ತಪಸ್ಸು ಮಾಡುತ್ತಿದ್ದ ಕೂರ್ಮ ಮಹರ್ಷಿಗೆ ಮಹಾವಿಷ್ಣು ಗುಹೆಯಲ್ಲಿ ದರ್ಶನ ನೀಡಿದನೆಂಬ ಉಲ್ಲೇಖವಿದ್ದು, ಈ ಹಿನ್ನೆಲೆ ಈ ಕ್ಷೇತ್ರಕ್ಕೆ ಅಪಾರ ಧಾರ್ಮಿಕ ಮಹತ್ವವಿದೆ ಎಂದು ಗ್ರಾಮಸ್ಥರು ನಂಬುತ್ತಾರೆ.

 

ಸ್ಥಳೀಯ ಇತಿಹಾಸಕಾರರ ಅಭಿಪ್ರಾಯದಂತೆ, ಸುಮಾರು 450 ವರ್ಷಗಳ ಹಿಂದೆ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಉಂಟಾದ ಭೀಕರ ಜಲಕ್ಷಾಮದ ಸಂದರ್ಭದಲ್ಲಿ ಯರ್ರಪ್ಪರೆಡ್ಡಿ ಹಾಗೂ ಚಿನ್ನಪ್ಪರೆಡ್ಡಿ ಎಂಬ ಸಹೋದರರು ತಮ್ಮ ಪರಿವಾರದೊಂದಿಗೆ ಕೂರ್ಮಗಿರಿ ಪ್ರದೇಶಕ್ಕೆ ವಲಸೆ ಬಂದು, ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ನೆಲೆಸಿದ್ದು, ನಂತರ ಯಲವಲೋಡು ಗ್ರಾಮವನ್ನು ಸ್ಥಾಪಿಸಿದರು ಎನ್ನಲಾಗುತ್ತದೆ.

 

13 ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದ ಅವಧಿಯಲ್ಲಿ ಪ್ರತಿದಿನವೂ ವಿಶೇಷ ಪೂಜೆ, ಮಹಾಮಂಗಳಾರತಿ, ನಾಮಸ್ಮರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಪೂರ್ಣ ವಾತಾವರಣದಲ್ಲಿ ನೆರವೇರಿದವು. ಬೆಳಗಿನ ಜಾವದಿಂದ ರಾತ್ರಿ ತನಕ “ಗೋವಿಂದಾ ಗೋವಿಂದಾ” ಎಂಬ ನಾಮಘೋಷಣೆಗಳು ಕೂರ್ಮಗಿರಿಯನ್ನು ಮೊಳಗಿಸಿವೆ. ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಬ್ರಹ್ಮರಥೋತ್ಸವವು ಅಪಾರ ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಭಕ್ತರು ದೇವರ ನಾಮಜಪ ಮಾಡುತ್ತಾ ರಥವನ್ನು ಎಳೆಯುವ ಮೂಲಕ ತಮ್ಮ ಹರಕೆ, ಸಂಕಷ್ಟ ಹಾಗೂ ಇಷ್ಟಾರ್ಥಗಳನ್ನು ದೇವರ ಪಾದಗಳಲ್ಲಿ ಅರ್ಪಿಸಿದರು. ರಥದ ಮೇಲೆ ಬಾಳೆಹಣ್ಣು ಎಸೆಯುವ ಸಂಪ್ರದಾಯವೂ ಭಕ್ತಿಭಾವದಿಂದ ನೆರವೇರಿತು.

 

ಗುಡಿಬಂಡೆ ತಾಲ್ಲೂಕಿನಷ್ಟೇ ಅಲ್ಲದೆ, ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ, ಧರ್ಮವರಂ, ಕದಿರಿ, ಲೇಪಾಕ್ಷಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಹಾಗೂ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುಣ್ಯಲಾಭ ಪಡೆದರು. ಭಕ್ತರ ಅನುಕೂಲಕ್ಕಾಗಿ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಸಮರ್ಪಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಪ್ರತಿದಿನ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ವಿದ್ಯುತ್ ಹಾಗೂ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗಿತ್ತು.

 

(ವರದಿ ಮೊಹಮ್ಮದ್ ನಾಸೀರ್ ಗುಡಿಬಂಡೆ )


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

6 hours ago

   
Image 1
Image 1
ಗದಗ

ಜುಮ್ಮಾ ಮಸೀದಿ ಬಳಿ ಚಿನ್ನದ ಅಂಗಡಿ ಮಾಲೀಕನ ಸ್ಕೂಟಿ ಬೆಂಕಿಗಾಹುತಿ – ಯಾರಿಗೂ ಗಾಯವಿಲ್ಲ

ಗದಗ : ಗದಗ ನಗರದಲ್ಲಿ ಜುಮ್ಮಾ ಮಸೀದಿ ಬಳಿ ಚಿನ್ನದ ಅಂಗಡಿಯ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಚಾಮರಾಜನಗರ

ಗುಂಡ್ಲುಪೇಟೆ

ಕ್ರಷರ್ ಪಾಲುದಾರಿಕೆಯಲ್ಲಿ ಗನ್ ಬೆದರಿಕೆ – ಹೈ ಡ್ರಾಮಾ ಮೆಟ್ಟಿಲು

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸಮೀಪದ ಹಿರಿಕಾಟಿ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ವಿಜಯಪುರ

ಖಾಸಗಿ ಜೆಟ್ ವಿಮಾನ ಧರೆಗೆ ಉರುಳಿಕೆ – ಇಬ್ಬರಿಗೆ ಗಾಯ

ವಿಜಯಪುರ:  ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಮಂಗಳೂ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಕಲ್ಬುರ್ಗಿ

ಮೆಟ್ರೋ ದರ ಪರಿಷ್ಕರಣೆ ವಿಚಾರದಲ್ಲಿ ಬಿಜೆಪಿ ಗೂಬೆ ಕೂರಿಸುತ್ತಿದೆ – ದಿನೇಶ್ ಗುಂಡೂರಾವ್

ಕಲಬುರಗಿ:  ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ವಿಚಾರದಲ್ಲಿ ಬಿ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ತುಮಕೂರು

ಕುಣಿಗಲ್

ಮದುವೆ ಮಂಟಪದಲ್ಲೇ ಹೈಡ್ರಾಮಾ – ತಾಳಿ ಕಟ್ಟುವ ಕ್ಷಣದಲ್ಲಿ ಮೊದಲ ಪತ್ನಿ ಎಂಟ್ರಿ

ತುಮಕೂರು: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಸ್‌ಎಲ್‌ಎನ್ ಕನ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಕೊಪ್ಪಳ

ಪಾರ್ಟಿ ಬಳಿಕ ಸ್ಪೀರಿಟ್ ಸೇವನೆ – ಇಬ್ಬರು ಯುವಕರ ಸಾವು

ಕೊಪ್ಪಳ: ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಫೆಬ್ರವರಿ 4ರ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬಳ್ಳಾರಿ

ಅಕ್ರಮ ಜೋಳ ಸಂಗ್ರಹ – ಎರಡು ಗೋಡೌನ್‌ಗಳ ಮೇಲೆ ಎಸಿ ದಾಳಿ

ಬಳ್ಳಾರಿ: ಬಳ್ಳಾರಿಯಲ್ಲಿ ಅಕ್ರಮವಾಗಿ ಜೋಳ ಸಂಗ್ರಹಿಸಿದ್ದ ಎರಡು ಗ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬಳ್ಳಾರಿ

ಯೂರಿಯಾ ಅಕ್ರಮ ಸಂಗ್ರಹ ಜಾಲ ಬಯಲು?

ಬಳ್ಳಾರಿ :  ಅಕ್ರಮ ಅದಿರು ಸಂಗ್ರಹ, ಮರಳು–ಗ್ರ್ಯಾವೆಲ್ ಸ್ಟ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬಳ್ಳಾರಿ

ರಾಜಕೀಯ ಬೆಳವಣಿಗೆಗಳ ಕುರಿತು ಸಚಿವ ಶ್ರೀರಾಮುಲು ತೀಕ್ಷ್ಣ ಹೇಳಿಕೆ

ಬಳ್ಳಾರಿ: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬಳ್ಳಾರಿ

ರಾಜಕೀಯ ಬೆಳವಣಿಗೆಗಳ ಕುರಿತು ಶ್ರೀರಾಮುಲು ತೀಕ್ಷ್ಣ ಹೇಳಿಕೆ

ಬಳ್ಳಾರಿ: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1