“ಡಿಜಿಟಲ್ ಪಾವತಿಯಲ್ಲಿ ಭಾರತ ಅಗ್ರಸ್ಥಾನ: UPI 8 ದೇಶಗಳಲ್ಲಿ, 23 ಸಹಕರಿ ಒಪ್ಪಂದ
ನವದೆಹಲಿ: ಯುಎಇ, ಸಿಂಗಾಪುರ, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್, ಮಾರಿಷಸ್ ಮತ್ತು ಕತಾರ್ ಸೇರಿದಂತೆ ಎಂಟಕ್ಕೂ ಹೆಚ್ಚು ದೇಶಗಳಲ್ಲಿ ಯುಪಿಐ (UPI) ವ್ಯವಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತದ ಡಿಜಿಟಲ್ ಪಾವತಿಗಳ ಕ್ಷೇತ್ರದಲ್ಲಿ ಜಾಗತಿಕ ಸ್ಥಾನವನ್ನು ಬಲಪಡಿಸಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ರಾಜ್ಯಸಭೆಯಲ್ಲಿ ಮಾತನಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಜಿತಿನ್ ಪ್ರಸಾದ್, ಯುಪಿಐ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇಗವಾಗಿ ವಿಸ್ತಾರಗೊಳ್ಳುತ್ತಿದ್ದು, ಹಣ ರವಾನೆ ಹಾಗೂ ವಿವಿಧ ಡಿಜಿಟಲ್ ಪಾವತಿಗಳಲ್ಲಿ ಬಳಕೆ ಹೆಚ್ಚುತ್ತಿದ್ದು, ಭಾರತದ ಫಿನ್‌ಟೆಕ್ ಕ್ಷೇತ್ರದಲ್ಲಿ ಪ್ರಭಾವ ಹೆಚ್ಚುತ್ತಿದೆ ಎಂದು ಹೇಳಿದರು.
ಸಾಮಾನ್ಯ ಜಾಗತಿಕ ಸಹಕಾರಕ್ಕಾಗಿ ಭಾರತವು 23 ದೇಶಗಳೊಂದಿಗೆ ಇಂಡಿಯಾ ಸ್ಟ್ಯಾಕ್ / ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಸಂಬಂಧಿತ ಒಪ್ಪಂದಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಒಪ್ಪಂದಗಳು ಡಿಜಿಟಲ್ ಗುರುತು, ಡಿಜಿಟಲ್ ಪಾವತಿಗಳು, ಡೇಟಾ ವಿನಿಮಯ ಮತ್ತು ಸೇವಾ ವಿತರಣಾ ವೇದಿಕೆಗಳಲ್ಲಿ ಸಹಕಾರ ನೀಡಲಿವೆ.
ಡಿಜಿಲಾಕರ್ ಸೇವೆಗೆ ಸಂಬಂಧಿಸಿ, ಕ್ಯೂಬಾ, ಕೀನ್ಯಾ, ಯುಎಇ ಮತ್ತು LPDR ಜೊತೆ ಒಪ್ಪಂದಗಳು ನಡೆದಿದ್ದು, ಭಾರತದ DPI ಪರಿಹಾರಗಳ ಯಶಸ್ಸನ್ನು ಜಾಗತಿಕವಾಗಿ ಹಂಚಿಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆ. ಇಂಡಿಯಾ ಸ್ಟ್ಯಾಕ್ ಗ್ಲೋಬಲ್ ವೇದಿಕೆಯ ಮೂಲಕ 18 ಪ್ರಮುಖ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ದೊರೆಯುತ್ತದೆ. G20 ಅಧ್ಯಕ್ಷತೆಯಲ್ಲಿ ಆರಂಭಿಸಿದ ಗ್ಲೋಬಲ್ DPI ರೆಪೊಸಿಟರಿ ಜಾಗತಿಕ ಜ್ಞಾನ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಭಾರತ ನೀಡುತ್ತಿರುವ ಪ್ರಮುಖ DPI ಮತ್ತು ಡಿಜಿಟಲ್ ಪರಿಹಾರಗಳಲ್ಲಿ ಆಧಾರ್, ಯುಪಿಐ, CoWIN, API ಸೇತು, DigiLocker, Aarogya Setu, GeM, UMANG, DIKSHA, e-Sanjeevani, PM GatiShakti ಸೇರಿವೆ. ಇದೇ ವೇಳೆ, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ದತ್ತಾಂಶದ ಪ್ರಕಾರ, ಜನವರಿಯಲ್ಲಿ ಯುಪಿಐ ವಹಿವಾಟು ಶೇ. 28ರಷ್ಟು ಏರಿಕೆಯಾಗಿದ್ದು 21.70 ಬಿಲಿಯನ್‌ಗೆ ತಲುಪಿದ್ದು, ವಹಿವಾಟಿನ ಮೊತ್ತ ಶೇ. 21ರಷ್ಟು ವಾರ್ಷಿಕ ಬೆಳವಣಿಗೆಯೊಂದಿಗೆ 28.33 ಲಕ್ಷ ಕೋಟಿ ರೂ. ದಾಖಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
‘ಗೃಹಲಕ್ಷ್ಮಿ’ ಯೋಜನೆಯ ಹಣದ ದುರುಪಯೋಗ ತಡೆಯಲು ಹೊಸ ನಿಯಮ ಜಾರಿ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜ... ಓದನ್ನು ಮುಂದುವರಿಸಿ
ಸೋಮವಾರದಿಂದ ಜಾರಿಗೆ ಬರುವ ಮೆಟ್ರೋ ಟಿಕೆಟ್ ದರ ಏರಿಕೆಗೆ ತಾತ್ಕಾಲಿಕ ತಡೆ
ಬೆಂಗಳೂರು:-ಮೆಟ್ರೋ ಪ್ರಯಾಣಿಕರಿಗೆ ಶುಭವಾರ্তা: ಬೆಂಗಳೂರಿನ ಮೆಟ್... ಓದನ್ನು ಮುಂದುವರಿಸಿ
MSMEಗೆ 20 ಲಕ್ಷದವರೆಗೂ ಅಡಮಾನ ರಹಿತ ಸಾಲ; ಸೈಬರ್ ವಂಚನೆಗೆ 25 ಸಾವಿರ ಪರಿಹಾರ – RBI ಪ್ರಸ್ತಾವನೆ
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ತನ್ನ ದ್ವೈಮಾ... ಓದನ್ನು ಮುಂದುವರಿಸಿ
ನಮ್ಮ ಮೆಟ್ರೋ ನಂತರ ಕಾವೇರಿ ನೀರು ಇನ್ನೂ ಬೆಳೆದಿದೆ! ಏಪ್ರಿಲ್ 1 ರಿಂದ 3% ದರ ಏರಿಕೆ
ಬೆಂಗಳೂರು: ಮೆಟ್ರೋ ಟಿಕೆಟ್ ದರವನ್ನು ಏರಿಸಿದ ನಂತರ, ಬೆಂಗಳೂರಿನ... ಓದನ್ನು ಮುಂದುವರಿಸಿ
ಕ್ಷಣದಲ್ಲಿ ಕೋಟೀಶ್ವರ! ಉಡುಪಿಯ ಶಂತನಿಗೆ UAE ಲಾಟರಿಯಲ್ಲಿ 49 ಕೋಟಿ ರೂಪಾಯಿ ಜ್ಯಾಕ್‌ಪಾಟ್
ಉಡುಪಿ: ಓಮನ್ನಲ್ಲಿ ರಿಟೇಲ್ ವಲಯದಲ್ಲಿ ಉದ್ಯೋಗ ನಿರ್ವಹಿಸುತ್ತಿದ್... ಓದನ್ನು ಮುಂದುವರಿಸಿ
ಚಿನ್ನದ ಬೆಲೆ ಇಳಿಯುತ್ತಿದೆ: ಮರುಬೆಲೆ ಏರಿದ ಮೇಲೂ ತಡಮಾಡದೇ ಖರೀದಿ ಮಾಡಿ!”
ಬೆಂಗಳೂರು : ಚಿನ್ನದ ದರವು ಇತ್ತೀಚೆಗೆ ಕಡಿಮೆ ಆಗುತ್ತಿದೆ... ಓದನ್ನು ಮುಂದುವರಿಸಿ
“ಪಿತ್ರಾರ್ಜಿತ ಆಸ್ತಿ ಪಡೆಯಲು: ವಂಶವೃಕ್ಷದ ಜೊತೆಗೆ ಈ ದಾಖಲೆಗಳು ಕಡ್ಡಾಯ!”
ನವದೆಹಲಿ: ಭಾರತದಲ್ಲಿ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಸ್ಪಷ್ಟ ಕ... ಓದನ್ನು ಮುಂದುವರಿಸಿ
“ಒಮ್ಮೆ ಹೂಡಿಕೆ, ತಿಂಗಳಿಗೆ ₹5,500 ಗ್ಯಾರಂಟಿ! – ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ: ಸೂಪರ್ ಸ್ಕೀಮ್”
ನವದೆಹಲಿ: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS) ಸರ್ಕಾರದಿಂದ... ಓದನ್ನು ಮುಂದುವರಿಸಿ
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಪಡೆಯುವುದು ಹೇಗೆ: ಸಂಪೂರ್ಣ ಮಾರ್ಗದರ್ಶಿ
ಬೆಂಗಳುರು : ಕೆಲವರು ಆರ್ಥಿಕ ತೊಂದರೆ, ವೈದ್ಯಕೀಯ ಚಿಕಿತ್ಸಾ ವೆಚ್... ಓದನ್ನು ಮುಂದುವರಿಸಿ
ಅಲರ್ಟ್ ಬೆಂಗಳೂರು! ಇಂದಿನಿಂದ 5 ದಿನ ವಿದ್ಯುತ್ ಕಡಿತ – ನಿವಾಸಿಗಳಿಗೆ ದೊಡ್ಡ ತಲೆನೋವು
ಬೆಂಗಳೂರು : ಬೆಂಗಳೂರಿನ ಹಲವೆಡೆ ಇಂದಿನಿಂದ 5 ದಿನ ಪವರ್ ಕಟ್ ಇರಲ... ಓದನ್ನು ಮುಂದುವರಿಸಿ