ಬಿಜೆಪಿಗೆ ಸೋಲಿನ ಭಯ – ಯತ್ನಾಳ್ ಕರೆಸಿಕೊಂಡಿದ್ದಾರೆ: ಸಿದ್ದರಾಮಯ್ಯ ವಾಗ್ದಾಳಿ

ಬಾಗಲಕೋಟೆ: ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದು, ಪಕ್ಷಕ್ಕೆ ಸೋಲಿನ ಭಯ ಎದುರಾಗಿದೆ ಎಂದು ಆರೋಪಿಸಿದರು. ಉಮೇಶ್ ಮೇಟಿ ಪರ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಗೆ ಆಗಮಿಸಿದ ಸಿಎಂ, “ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಪಕ್ಷ ಹೀನಾಯ ಸ್ಥಿತಿಗೆ ತಲುಪಿರುವುದರಿಂದಲೇ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ,” ಎಂದು ಕಿಡಿಕಾರಿದರು.

 

ಇದೇ ವೇಳೆ, “ಇನ್ನೂ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ಸಿಎಂ ಆಗಿರುವುದಿಲ್ಲ” ಎಂಬ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, “ಅವರು ನಮ್ಮ ಹೈಕಮಾಂಡ್ ಅಲ್ಲ. ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ನಾನು ಬದ್ಧ. ಅವರು ಕೆಲಸವಿಲ್ಲದ ಮಂತ್ರಿ,” ಎಂದು ತಿರುಗೇಟು ನೀಡಿದರು.

 

ಆಟೋ ಚಾಲಕರು ಮುನಿಯಪ್ಪ ಅವರ ಮನೆಗೆ ಘೇರಾವ್ ಹಾಕಿದ ವಿಚಾರಕ್ಕೂ ಪ್ರತಿಕ್ರಿಯಿಸಿ, “ಎಲ್‌ಪಿಜಿ ಪೂರೈಕೆ ಕೇಂದ್ರ ಸರ್ಕಾರದ ಹೊಣೆ. ಪ್ರತಿಭಟನೆ ಮಾಡಬೇಕಾದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನೆ ಮುಂದೆ ಮಾಡಲಿ,” ಎಂದು ಹೇಳಿದರು. ದಲಿತರಿಗೆ ಅನ್ಯಾಯ ಮಾಡಿ ಮುಸ್ಲಿಮರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಅವರು, “ಮುಸ್ಲಿಮರು ಈ ದೇಶದ ನಾಗರಿಕರಲ್ಲವೇ? ಅವರಿಗೂ ಅನುದಾನ ನೀಡುವುದು ಸರ್ಕಾರದ ಕರ್ತವ್ಯ,” ಎಂದು ಸ್ಪಷ್ಟಪಡಿಸಿದರು. ಒಟ್ಟಾರೆ, ಬಾಗಲಕೋಟೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ಚುನಾವಣೆ ರಂಗ ತೀವ್ರಗೊಳ್ಳುತ್ತಿರುವ ಸೂಚನೆ ನೀಡಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1
ಶಿವಮೊಗ್ಗ

ತೀರ್ಥಹಳ್ಳಿ

ತೋಟದ ನಾಡಬಾಂಬ್ ಮನೆ ಅಂಗಳದಲ್ಲಿ ಸ್ಫೋಟ: ವೃದ್ಧೆ ಗಾಯ

ಶಿವಮೊಗ್ಗ: ನಾಡಬಾಂಬ್ ಸ್ಫೋಟಗೊಂಡ ಪರಿಣಾಮ ವೃದ್ಧೆಯೊಬ್ಬರು ಗಂಭೀರ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

ಬಿಜೆಪಿಗೆ ತಿರುಗೇಟು: ‘ತಪ್ಪೊಪ್ಪಿಕೊಂಡು ಕ್ಷಮೆ ಕೇಳಲಿ’ – ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

SSLC ನೀತಿ ವಿವಾದ: ರಾಜ್ಯಪಾಲ-ಕರವೇ ನಡುವೆ ವಾಕ್ಸಮರ-‘ನಮ್ಮ ನೆಲದಲ್ಲಿ ಸೌಲಭ್ಯ ಕೊಟ್ಟಿದ್ದೇವೆ’: ನಾರಾಯಣಗೌಡ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ತೃತೀಯ ಭಾಷ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

70 ಸಾವಿರ ಬಾಡಿಗೆ! ಬೆಂಗಳೂರಿನಲ್ಲಿ ವಾಸ ದುಬಾರಿ ಕನಸು

ಬೆಂಗಳೂರು: “70 ಸಾವಿರ ಬಾಡಿಗೆ!” – ಸಿಲಿಕಾನ್ ಸಿಟಿಯಲ್ಲಿ ವಾಸಿಸ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

ಜನತೆಗೆ ಸ್ಪಷ್ಟ ಲೆಕ್ಕ ನೀಡಿ- ₹5,700 ಕೋಟಿ ಹಣ ಎಲ್ಲಿ? ರಾಜ್ಯ ಸರ್ಕಾರಕ್ಕೆ ಲೆಕ್ಕ ಕೇಳಿದ ಆರ್.ಅಶೋಕ್

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಆರ್ಥಿಕ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

LPG ಕೊರತೆ: ಗ್ಯಾಸ್ ಇಲ್ಲದೇ ಆಟೋ ನಿಲ್ಲಿಸಿದ ಚಾಲಕರು, ಪರದಾಟ ತೀವ್ರ

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಇಸ್ರೇಲ್–ಅಮೆ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ರಾಜ್ಯದಲ್ಲಿ ನಂ.1, ದೇಶದಲ್ಲಿ 3ನೇ ಸ್ಥಾನ: ಕೋರಮಂಗಲ RTO ಭರ್ಜರಿ ದಾಖಲೆ

ಬೆಂಗಳೂರು: ಸಾಮಾನ್ಯವಾಗಿ ನೆಗೆಟಿವ್ ಸುದ್ದಿಗಳಿಂದಲೇ ಗುರುತಿಸಿಕೊ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಉತ್ತರಕನ್ನಡ

ಕಾರವಾರ

ಕೆಎಸ್ಆರ್‌ಟಿಸಿ–ಖಾಸಗಿ ಭೀಕರ ಅಪಘಾತ : ಹಲವರಿಗೆ ಗಾಯ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಧಾರವಾಡ

ಹುಬ್ಬಳ್ಳಿ

ಬಯಲಾಯ್ತು ಜಿಮ್ ಟ್ರೈನರ್ ಸಮೀರ್ ಕೃತ್ಯ- ಜ್ಯೂಸ್‌ನಲ್ಲಿ ಮದ್ದು ಬೆರೆಸಿ ಅತ್ಯಾಚಾರ?

ಹುಬ್ಬಳ್ಳಿ: ನಗರದಲ್ಲಿ ಸಂಚಲನ ಸೃಷ್ಟಿಸಿದ ಘಟನೆ ಒಂದರಲ್ಲಿ, ಹಳೆ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಉತ್ತರಕನ್ನಡ

ಕಾರವಾರ

ಡಾಂಬರ್ ಪೂರೈಕೆ ಸ್ಥಗಿತ – ಕಾರವಾರ ಬಂದರು ಚಟುವಟಿಕೆಗಳಿಗೆ ಬ್ರೇಕ್ - ಮಧ್ಯಪ್ರಾಚ್ಯ ಸಂಘರ್ಷದ ನೇರ ಪರಿಣಾಮ

ಕಾರವಾರ: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಸಂಘರ್ಷದ ನೇರ ಪ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1