ಬಯಲಾಯ್ತು ಜಿಮ್ ಟ್ರೈನರ್ ಸಮೀರ್ ಕೃತ್ಯ- ಜ್ಯೂಸ್‌ನಲ್ಲಿ ಮದ್ದು ಬೆರೆಸಿ ಅತ್ಯಾಚಾರ?
ಹುಬ್ಬಳ್ಳಿ: ನಗರದಲ್ಲಿ ಸಂಚಲನ ಸೃಷ್ಟಿಸಿದ ಘಟನೆ ಒಂದರಲ್ಲಿ, ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಲವ್ ಜಿಹಾದ್’ ಆರೋಪದ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ವಿಜಯನಗರದ ನಿವಾಸಿ ಸಮೀರ್ ಎಂಬ ಜಿಮ್ ಟ್ರೈನರ್ ಯುವತಿಯನ್ನು ಪರಿಚಯ ಮಾಡಿಕೊಂಡು, ನಂತರ ಆಕೆಯೊಂದಿಗೆ ಸ್ನೇಹ ಬೆಳೆಸಿ, ಮನೆಗೆ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ. ಅಲ್ಲಿ ಜ್ಯೂಸ್‌ನಲ್ಲಿ ಮದ್ದು ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ವಿಷಯ ತಿಳಿದ ಯುವತಿಯ ಕುಟುಂಬದವರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಮೀರ್ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಮತ್ತಷ್ಟು ತೀವ್ರಗೊಂಡಿದ್ದು, ಸಮೀರ್ ಕುಟುಂಬದವರು ಯುವತಿಯ ಮನೆಗೆ ನುಗ್ಗಿ ಗಲಾಟೆ ನಡೆಸಿದ ಘಟನೆ ಕೂಡ ನಡೆದಿದೆ. ಇನ್ನೊಂದೆಡೆ, ಸಂತ್ರಸ್ತೆ ನೀಡಿದ ವಿಡಿಯೋ ಹೇಳಿಕೆಯಲ್ಲಿ, ತನ್ನ ಮೇಲೆ ಅತ್ಯಾಚಾರ ನಡೆಸಿ ಅದನ್ನು ವಿಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಸಮೀರ್ ವಿರುದ್ಧ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ಕೂಡ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಪ್ರಕರಣದ ಕುರಿತು ದೂರು ದಾಖಲಾಗಿದ್ದು, ಪೊಲೀಸರು ಎರಡೂ ಕಡೆಯವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದು ಕಾದು ನೋಡಬೇಕಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ತೀರ್ಥಹಳ್ಳಿ
ತೋಟದ ನಾಡಬಾಂಬ್ ಮನೆ ಅಂಗಳದಲ್ಲಿ ಸ್ಫೋಟ: ವೃದ್ಧೆ ಗಾಯ
ಶಿವಮೊಗ್ಗ: ನಾಡಬಾಂಬ್ ಸ್ಫೋಟಗೊಂಡ ಪರಿಣಾಮ ವೃದ್ಧೆಯೊಬ್ಬರು ಗಂಭೀರ... ಓದನ್ನು ಮುಂದುವರಿಸಿ
ಬಿಜೆಪಿಗೆ ತಿರುಗೇಟು: ‘ತಪ್ಪೊಪ್ಪಿಕೊಂಡು ಕ್ಷಮೆ ಕೇಳಲಿ’ – ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್... ಓದನ್ನು ಮುಂದುವರಿಸಿ
SSLC ನೀತಿ ವಿವಾದ: ರಾಜ್ಯಪಾಲ-ಕರವೇ ನಡುವೆ ವಾಕ್ಸಮರ-‘ನಮ್ಮ ನೆಲದಲ್ಲಿ ಸೌಲಭ್ಯ ಕೊಟ್ಟಿದ್ದೇವೆ’: ನಾರಾಯಣಗೌಡ ವಾಗ್ದಾಳಿ
ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ತೃತೀಯ ಭಾಷ... ಓದನ್ನು ಮುಂದುವರಿಸಿ
70 ಸಾವಿರ ಬಾಡಿಗೆ! ಬೆಂಗಳೂರಿನಲ್ಲಿ ವಾಸ ದುಬಾರಿ ಕನಸು
ಬೆಂಗಳೂರು: “70 ಸಾವಿರ ಬಾಡಿಗೆ!” – ಸಿಲಿಕಾನ್ ಸಿಟಿಯಲ್ಲಿ ವಾಸಿಸ... ಓದನ್ನು ಮುಂದುವರಿಸಿ
ಜನತೆಗೆ ಸ್ಪಷ್ಟ ಲೆಕ್ಕ ನೀಡಿ- ₹5,700 ಕೋಟಿ ಹಣ ಎಲ್ಲಿ? ರಾಜ್ಯ ಸರ್ಕಾರಕ್ಕೆ ಲೆಕ್ಕ ಕೇಳಿದ ಆರ್.ಅಶೋಕ್
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಆರ್ಥಿಕ... ಓದನ್ನು ಮುಂದುವರಿಸಿ
LPG ಕೊರತೆ: ಗ್ಯಾಸ್ ಇಲ್ಲದೇ ಆಟೋ ನಿಲ್ಲಿಸಿದ ಚಾಲಕರು, ಪರದಾಟ ತೀವ್ರ
ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಇಸ್ರೇಲ್–ಅಮೆ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ನಂ.1, ದೇಶದಲ್ಲಿ 3ನೇ ಸ್ಥಾನ: ಕೋರಮಂಗಲ RTO ಭರ್ಜರಿ ದಾಖಲೆ
ಬೆಂಗಳೂರು: ಸಾಮಾನ್ಯವಾಗಿ ನೆಗೆಟಿವ್ ಸುದ್ದಿಗಳಿಂದಲೇ ಗುರುತಿಸಿಕೊ... ಓದನ್ನು ಮುಂದುವರಿಸಿ
ಕಾರವಾರ
ಕೆಎಸ್ಆರ್‌ಟಿಸಿ–ಖಾಸಗಿ ಭೀಕರ ಅಪಘಾತ : ಹಲವರಿಗೆ ಗಾಯ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸ... ಓದನ್ನು ಮುಂದುವರಿಸಿ
ಕಾರವಾರ
ಡಾಂಬರ್ ಪೂರೈಕೆ ಸ್ಥಗಿತ – ಕಾರವಾರ ಬಂದರು ಚಟುವಟಿಕೆಗಳಿಗೆ ಬ್ರೇಕ್ - ಮಧ್ಯಪ್ರಾಚ್ಯ ಸಂಘರ್ಷದ ನೇರ ಪರಿಣಾಮ
ಕಾರವಾರ: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಸಂಘರ್ಷದ ನೇರ ಪ... ಓದನ್ನು ಮುಂದುವರಿಸಿ
ಮಂಡ್ಯದಲ್ಲಿ ARAI ಯೋಜನೆಗೆ ರೈತರ ಆಕ್ರೋಶ: ಭೂಮಿ ಕೊಡೋದಿಲ್ಲ ಎಂದ ಜನ
ಮಂಡ್ಯದಲ್ಲಿ ಬೃಹತ್ ಕೈಗಾರಿಕಾ ಯೋಜನೆಗೆ ಆರಂಭದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಕೇ... ಓದನ್ನು ಮುಂದುವರಿಸಿ