ಭೀಕರ ರಸ್ತೆ ಅಪಘಾತ: ಮಂಡ್ಯ ಮದ್ದೂರು ಬಳಿ ಶಾಲಾ ಮಕ್ಕಳೊಂದಿಗೆ 6 ಮಂದಿಗೆ ಗಾಯ
ಮಂಡ್ಯ, ಮಾರ್ಚ್ 28: ಸೋಮನಹಳ್ಳಿ ಕೆಸ್ತೂರು ಅಡ್ಡರಸ್ತೆಯ ಅಡಿಗಾಸ್ ಹೋಟೆಲ್ ಬಳಿ ಶುಕ್ರವಾರ ಸಂಜೆ ಖಾಸಗಿ ಶಾಲೆ ವಾಹನ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ 14 ವಿದ್ಯಾರ್ಥಿಗಳು ಮತ್ತು 6 ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ನಗರದ ಡಾ.ಶಾಂತಾ ಹೆಚ್.ಕೆ. ಮರಿಯಪ್ಪ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಶಶಾಂಕ್ ಗೌಡ, ಹಿತಾ, ನಂದಿನಿ, ವಿಕ್ರಾಂತ್, ವಂದನಾ, ನಿಖಿತ್, ಮನ್ವಿತ್, ಹರ್ಷಿತಾ, ಹಾಗೂ ಸಾಹಿತ್ಯ ಸೇರಿದಂತೆ 14 ಮಂದಿ. ಉಡುಪಿಯ ಉದಯರಂಗ ಬಸ್ ನಲ್ಲಿ ಪ್ರಯಾಣಿಕರಾದ ಸುಶೀಲಮ್ಮ, ಗೌರಮ್ಮ, ಶಿವರಾಂ, ಶೋಭಾ, ಶಿವಮಲ್ಲು ಸೇರಿದಂತೆ 6 ಮಂದಿ ಸಹ ಗಾಯಗೊಂಡಿದ್ದು, ಸ್ಥಳೀಯ ತಾಲೂಕು ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಕ್ರಾಂತ್ ಮತ್ತು ಹರ್ಷಿತಾ ಸೇರಿದಂತೆ 6 ಮಂದಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ವಿವರಗಳು: ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದ ವೇಳೆ, ಮದ್ದೂರು ಮಾರ್ಗದಲ್ಲಿ ಉದಯರಂಗ ಖಾಸಗಿ ಬಸ್ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಕಾರಣ ಈ ದುರ್ಘಟನೆ ಸಂಭವಿಸಿದೆ. ಕದಲೀಪುರ, ಹುಳಗನಹಳ್ಳಿ, ಹೆಮ್ಮನಹಳ್ಳಿ ಗ್ರಾಮಗಳ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್, ಯಾವುದೇ ಸಾವು ಸಂಭವಿಸಿಲ್ಲ. ಪೋಷಕರು ಕೂಡ ಸ್ಥಳಕ್ಕೆ ದೌಡಾಯಿಸಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ಡಿ.ಸಿ. ತಮ್ಮಣ್ಸ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಶೋಭಾರಾಣಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಡಿವೈಎಸ್ಪಿ ಯಶವಂತ್ ಕುಮಾರ್, ಬಿಇಓ ಧನಂಜಯ, ಮತ್ತು ಕದಲೂರು ಉದಯ್ ಚಾರಿಟಬಲ್ ಟ್ರಸ್ಟಿ ಕೆ.ಎಂ. ರವಿ ಶಾಲಾ ಅಧಿಕಾರಿಗಳೊಂದಿಗೆ ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿಸಿದ್ದಾರೆ. ಮದ್ದೂರು ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಅಕ್ರಮ ಸಂಬಂಧಕ್ಕೆ ಆತಂಕ – ಪತಿಯ ಭೀಕರ ಕೊಲೆ ಮತ್ತು ಅಪಘಾತ ನಾಟಕ
ಯಾದಗಿರಿ : ಜಿಲ್ಲೆಯಲ್ಲಿ ಸುಖವಾಗಿದ್ದ ಕುಟುಂಬದಲ್ಲಿ ಅಕ್ರಮ ಸಂಬಂ... ಓದನ್ನು ಮುಂದುವರಿಸಿ
ಫೋಟೋಶೂಟ್ ತಂಡದ ಮೇಲೆ ಮಾರಣಾಂತಿಕ ದಾಳಿ ಕೈಮುಗಿದರೂ ಬಿಡದ ಕಿಡಿಗೇಡಿಗಳು
ಹಾಸನ : ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪ್ರಸಿದ್ಧ ಭೈರವೇಶ್ವರ ದೇ... ಓದನ್ನು ಮುಂದುವರಿಸಿ
ಮಂಗಳೂರು
ಬಾವಿ ನಿರ್ಮಾಣ ವೇಳೆ ದಾರುಣ ದುರ್ಘಟನೆ-30 ಅಡಿ ಎತ್ತರದಿಂದ ಬಕೆಟ್ ಬಿದ್ದು ಕಾರ್ಮಿಕ ಸಾವು
ಮಂಗಳೂರು: ಮಂಗಳೂರಿನ ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನ... ಓದನ್ನು ಮುಂದುವರಿಸಿ
ಮಸ್ಕಿ ತಾಲೂಕು
ಮಸ್ಕಿ ತಾಲ್ಲೂಕಿನಲ್ಲಿ ಶೋಕ: ನಕಲಿ ವೈದ್ಯನ ಇಂಜೆಕ್ಷನ್‌ನಿಂದ 14 ವರ್ಷದ ವಿದ್ಯಾರ್ಥಿನಿ ಮರಣ
ರಾಯಚೂರು: ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮದಲ್ಲಿ ನಕಲಿ ವೈದ್ಯನ... ಓದನ್ನು ಮುಂದುವರಿಸಿ
ಗೌರಿಬಿದನೂರು
ಗೌರಿಬಿದನೂರಲ್ಲಿ ಭೀಕರ ಹತ್ಯೆ: ಮಂಚದಿಂದ ಬಿದ್ದನೆಂಬ ಸುಳ್ಳು, ಕ್ರೂರ ಕೊಲೆ ಬಯಲು!
ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯಲ್ಲಿ ಭ... ಓದನ್ನು ಮುಂದುವರಿಸಿ
ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು
ಚಿತ್ರದುರ್ಗ: ಶುಕ್ರವಾರ ರಾತ್ರಿ ಕುಂಚಿಗನಾಳ್ ಕಣಿವೆ ಬಳಿ ರಸ್ತೆ... ಓದನ್ನು ಮುಂದುವರಿಸಿ
ಅಫ್ಜಲ್ ಪುರ
ಕಲಬುರಗಿ ಹತ್ಯೆ ಪ್ರಕರಣ : ವರದಕ್ಷಿಣೆ ಕಿರುಕುಳ ಬಲಿಯಾದ ಪತ್ನಿ, ಪತಿ-ತಾಯಿ-ತಂದೆ ಬಂಧನ
ಕಲಬುರಗಿ: ಅಫಜಲಪುರ ತಾಲ್ಲೂಕಿನ ಬಳ್ಳೂರಗಿಯ ಸಮೀಪ ನಡೆದ ಸಯಾಲಿ ಜಾ... ಓದನ್ನು ಮುಂದುವರಿಸಿ
153 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಮತ್ತು ದಕ್ಷತೆ... ಓದನ್ನು ಮುಂದುವರಿಸಿ
ಎಲೆಕ್ಟ್ರಾನಿಕ್ ಸಿಟಿ ಭಯೋತ್ಪಾದಕ ಘಟನೆ - ಕಾಣೆಯಾದ ಬಾಲಕಿ ನಗ್ನ ಶವವಾಗಿ ಪತ್ತೆ
ಬೆಂಗಳೂರು: ರಾಜಧಾನಿಯ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಾನವ... ಓದನ್ನು ಮುಂದುವರಿಸಿ
ನೈಟ್ ರೈಡ್ ದುರಂತ: ಲಾರಿಗೆ ಬೈಕ್ ಡಿಕ್ಕಿ – ಇಬ್ಬರು ಯುವಕರು ಸ್ಥಳದಲ್ಲೇ ಸಾವು, ಓರ್ವ ಗಂಭೀರವಾಗಿ ಗಾಯ
ರಾಮನಗರ, ಮಾರ್ಚ್ 28: ನೈಟ್ ರೈಡ್‌ಗೆ ತೆರಳಿದ್ದ ಮೂವರು ಯುವಕರ ಕನ... ಓದನ್ನು ಮುಂದುವರಿಸಿ