ಅಗತ್ಯವಿದ್ದಾಗ ಮಾತ್ರ ಎಲ್‌ಪಿಜಿ ಬುಕ್ ಮಾಡಿ: ಇಂಡಿಯನ್ ಆಯಿಲ್ ಮುಂಗಡ ಬುಕ್ಕಿಂಗ್ ತಡೆಯಲು ಮನವಿ
ದೆಹಲಿ: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಸಿಲಿಂಡರ್ ಲಭ್ಯತೆ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಸಿಲಿಂಡರ್ ಬುಕ್ಕಿಂಗ್ ಕಷ್ಟವಾಗುತ್ತಿದೆ, ದರ ಏರಿಕೆಯಾಗಿದೆ ಮತ್ತು ವಿತರಣೆ ವಿಳಂಬವಾಗುತ್ತಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ, ಅಗತ್ಯವಿಲ್ಲದೆ ಮುಂಗಡ ಬುಕ್ಕಿಂಗ್ ಮಾಡಬಾರದು ಎಂದು ಜನರಿಗೆ ಮನವಿ ಮಾಡಿದ್ದು, ದೇಶಾದ್ಯಾಂತ ಅಡುಗೆ ಅನಿಲ ಲಭ್ಯತೆ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದೆ. ಕೆಲವರು ಹೆಚ್ಚಾಗಿ ಪುನರ್ಭರ್ತಿ ಬುಕ್ಕಿಂಗ್ ಮಾಡುತ್ತಿರುವುದರಿಂದ ತಾತ್ಕಾಲಿಕವಾಗಿ ಬೇಡಿಕೆ ಹೆಚ್ಚಾಗಿ ವಿತರಣೆ ವಿಳಂಬವಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಇತ್ತೀಚೆಗೆ 14.2 ಕಿಲೋ ತೂಕದ ಸಿಲಿಂಡರ್ ಬೆಲೆ 60 ರೂ ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ದರ 915.50 ರೂ ಆಗಿದೆ. ಭಾರತಕ್ಕೆ ಅಗತ್ಯವಿರುವ ಬಹುಪಾಲು ಅಡುಗೆ ಅನಿಲ ಹಾರ್ಮುಜ್ ಜಲಸಂಧಿ ಮೂಲಕ ಸಾಗಿಸಲಾಗುತ್ತಿದೆ. ಈಗಾಗಲೇ ಮೂರು ಅನಿಲ ಸಾಗಣೆ ನೌಕೆಗಳು ಭಾರತಕ್ಕೆ ತಲುಪಿದ್ದು, ಇನ್ನೊಂದು ನೌಕೆ ಬರಲು ನಿರೀಕ್ಷೆಯಲ್ಲಿದೆ.
ಇತರ ನೌಕೆಗಳು ಜಲಸಂಧಿಯಲ್ಲಿ ನಿಂತಿದ್ದು ಹಂತ ಹಂತವಾಗಿ ತಲುಪಿಸಲಾಗುತ್ತಿದೆ. ಇರಾನ್ ದೇಶದೊಂದಿಗೆ ಮಾತುಕತೆ ಮುಂದುವರಿದಿದ್ದು, ಪರ್ಷಿಯನ್ ಕೊಲ್ಲಿಯಲ್ಲಿ ಭಾರತೀಯ ಯುದ್ಧ ನೌಕೆಗಳ ಎರಡು ಕಾರ್ಯಪಡೆಗಳನ್ನು ನಿಯೋಜಿಸಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ತಂದೆಯ ಸ್ವಂತ ಸಂಪಾದನೆಯ ಆಸ್ತಿಯಲ್ಲಿ ಮಕ್ಕಳು ಪಾಲು ಕೇಳಲು ಹಕ್ಕಿಲ್ಲ: ಹೈಕೋರ್ಟ್ ಸ್ಪಷ್ಟನೆ
ತಂದೆ–ಮಕ್ಕಳ ನಡುವೆ ಆಸ್ತಿ ವಿವಾದಗಳು ಸಾಮಾನ್ಯವಾಗಿರುವುದರ ನಡುವೆ, ಕಾನೂನು ಸ್ಪಷ್ಟವಾ... ಓದನ್ನು ಮುಂದುವರಿಸಿ
ಸುಪ್ರೀಂ ಕೋರ್ಟ್: ಎಲ್ಲ ದತ್ತು ತಾಯಂದಿರಿಗೂ ಪೂರ್ಣ ಹೆರಿಗೆ ರಜೆ, ಮಗುವಿನ ವಯಸ್ಸು ಅನಿವಾರ್ಯವಲ್ಲ
ದೆಹಲಿ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ, ದತ್ತು ಪಡೆದ ತಾಯಂದಿರಿಗೆ ಮಗುವಿನ... ಓದನ್ನು ಮುಂದುವರಿಸಿ
ಅಲಿ ಲಾರಿಜಾನಿ ಹತ್ಯೆ ಆರೋಪ – ಇಸ್ರೇಲ್ ಹೇಳಿಕೆ, ಜಾಗತಿಕ ಆತಂಕ ಹೆಚ್ಚಳ
ಟೆಹ್ರಾನ್: ಇರಾನ್‌ನ ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸ... ಓದನ್ನು ಮುಂದುವರಿಸಿ
4 ವರ್ಷದ ಮಗುವಿನ ಹತ್ಯೆ – ಮಗುವನ್ನು ಹೊಡೆದು, ಕ್ರೂರವಾಗಿ ಸುಟ್ಟು ಕೊಂದ ತಂದೆ, ಮಲತಾಯಿ!
ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಭೀಕರ ಘಟನೆ ಸಾರ್ವಜನಿ... ಓದನ್ನು ಮುಂದುವರಿಸಿ
ಐಸಿಸ್ ಸಂಪರ್ಕ ಆರೋಪ – ದಂತ ವೈದ್ಯಕೀಯ ವಿದ್ಯಾರ್ಥಿ ಬಂಧನ
ಲಕ್ನೋ: ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಆನ್‌ಲೈನ್ ಮೂಲ... ಓದನ್ನು ಮುಂದುವರಿಸಿ
ಎಲ್ಪಿಜಿ ಸಾಗಣೆ ಹಡಗುಗಳು ಆಗಮನ – ಅನಿಲ ಕೊರತೆ ನಿವಾರಣೆಗೆ ಭರವಸೆ
ಗಾಂಧಿನಗರ: ದೇಶದಲ್ಲಿ ಉಂಟಾಗಿರುವ ಅಡುಗೆ ಅನಿಲ ಕೊರತೆಯನ್ನು ಭಾಗಶ... ಓದನ್ನು ಮುಂದುವರಿಸಿ
ಪತಿಯ ಮುಂದೆ ಪತ್ನಿ ಆತ್ಮಹತ್ಯೆ : ತಮಾಷೆ ಅಂತ ಎಡವಟ್ಟು ಮಾಡ್ಕೊಂಡ ಗಂಡ!
ಅಮರಾವತಿ: ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬೋಯಿನಪಲ್ಲಿ ಗ್ರಾ... ಓದನ್ನು ಮುಂದುವರಿಸಿ
ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ—ಸಂಸದರು, ಸಚಿವರು ಸಭೆ
ದೆಹಲಿ: ಕರ್ನಾಟಕದ ತಂಬಾಕು ಬೆಳೆಗಾರರ ಸಮಸ್ಯೆಗಳಿಗೆ ಕೇಂದ್... ಓದನ್ನು ಮುಂದುವರಿಸಿ
ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ—ಸುಪ್ರೀಂ ಕೋರ್ಟ್ ಆಲೋಚನೆ
ನವದೆಹಲಿ: ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಸಿಜೆಐ ಸೂರ್ಯ ಕಾಂತ್ ಹಾ... ಓದನ್ನು ಮುಂದುವರಿಸಿ
ಎಲ್ಪಿಜಿ ಪೂರೈಕೆ ಸಮಸ್ಯೆ ಹಿನ್ನೆಲೆಯಲ್ಲಿ ಮನೆಗಳಲ್ಲಿ ಸೀಮೆಎಣ್ಣೆ ಬಳಕೆಗೆ ಮತ್ತೆ ಅನುಮತಿ
ನವದೆಹಲಿ : ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆ ತಾತ್ಕಾಲಿಕ ಸ... ಓದನ್ನು ಮುಂದುವರಿಸಿ