ವಿಕ್ಟೋರಿಯಾ ಆಸ್ಪತ್ರೆಗೆ “ಶಾಂತವೇರಿ ಗೋಪಾಲಗೌಡ” ಎಂದು ಮರುನಾಮಕರಣ – CM ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: 2026–27ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ಘೋಷಣೆಗಳನ್ನು ಮಾಡಿರುವರು. ಬೆಂಗಳೂರಿನ ಐತಿಹಾಸಿಕ Victoria Hospital ಅನ್ನು ಮುಂದಿನವರೆಗೂ “ಶಾಂತವೇರಿ ಗೋಪಾಲಗೌಡ ಆಸ್ಪತ್ರೆ” ಎಂದು ಮರುನಾಮಕರಣ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಭಾರತದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ವಿಕ್ಟೋರಿಯಾ ಆಸ್ಪತ್ರೆಗೆ 125 ವರ್ಷಗಳ ಐತಿಹಾಸಿಕ ಪಯಣವಿದೆ. 1897ರಲ್ಲಿ ಬ್ರಿಟಿಷ್ ರಾಣಿ Queen Victoria ಅವರ ಪಟ್ಟಾಭಿಷೇಕದ ನೆನಪಿಗಾಗಿ ಶಂಕುಸ್ಥಾಪನೆ ನಡೆದ ಈ ಆಸ್ಪತ್ರೆಯನ್ನು 1900ರ ಡಿಸೆಂಬರ್ 8ರಂದು ಬ್ರಿಟಿಷ್ ವೈಸರಾಯ್ Lord Curzon ಉದ್ಘಾಟನೆಗೊಳಿಸಿದ್ದರು. ಆರಂಭದಲ್ಲಿ 140 ಹಾಸಿಗೆಗಳೊಂದಿಗೆ ಆರಂಭವಾದ ಆಸ್ಪತ್ರೆ ಈಗ 1,000ಕ್ಕೂ ಅಧಿಕ ಹಾಸಿಗೆಗಳೊಂದಿಗೆ ಸೇವೆ ನೀಡುತ್ತಿದೆ. ಕರ್ನಾಟಕದಲ್ಲೇ ಮೊದಲ ದೂರವಾಣಿ ಸಂಪರ್ಕ ಪಡೆದ ಆಸ್ಪತ್ರೆ ಎಂಬ ಹೆಗ್ಗಳಿಕೆಯೂ ಇದಕ್ಕೆ ಇದೆ.
ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು, ಡಾ. ಟಿ. ಶೇಷಾಚಲಂ ಅವರ ಅಪೆಂಡಿಕ್ಸ್ ಸಂಶೋಧನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿತ್ತು. 1981ರ ವೀನಸ್ ಸರ್ಕಸ್ ಬೆಂಕಿ ದುರಂತ ಹಾಗೂ COVID-19 ಸಾಂಕ್ರಾಮಿಕದ ಸಮಯದಲ್ಲಿ ಸಾವಿರಾರು ಜೀವಗಳನ್ನು ಉಳಿಸುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರವಹಿಸಿತ್ತು.
ಬಜೆಟ್‌ನಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಕಾರವಾರ ಮತ್ತು ಯಾದಗಿರಿಯಲ್ಲಿ ತಲಾ ₹100 ಕೋಟಿ ವೆಚ್ಚದಲ್ಲಿ ಎರಡು ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಹಾಗು ಹೊಸದೂರ–ಟಿ.ಬಿ ಡ್ಯಾಂ ಪ್ರದೇಶದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಯ ಯೋಜನೆ ಪ್ರಕಟಿಸಲಾಗಿದೆ. ಈ ಕ್ರಮಗಳ ಮೂಲಕ ರಾಜ್ಯದಾದ್ಯಂತ ಆರೋಗ್ಯ ಸೇವೆಗಳ ಪ್ರವೇಶ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಗುರಿಯಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಜನತೆಗೆ ಸ್ಪಷ್ಟ ಲೆಕ್ಕ ನೀಡಿ- ₹5,700 ಕೋಟಿ ಹಣ ಎಲ್ಲಿ? ರಾಜ್ಯ ಸರ್ಕಾರಕ್ಕೆ ಲೆಕ್ಕ ಕೇಳಿದ ಆರ್.ಅಶೋಕ್
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಆರ್ಥಿಕ... ಓದನ್ನು ಮುಂದುವರಿಸಿ
LPG ಕೊರತೆ: ಗ್ಯಾಸ್ ಇಲ್ಲದೇ ಆಟೋ ನಿಲ್ಲಿಸಿದ ಚಾಲಕರು, ಪರದಾಟ ತೀವ್ರ
ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಇಸ್ರೇಲ್–ಅಮೆ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ನಂ.1, ದೇಶದಲ್ಲಿ 3ನೇ ಸ್ಥಾನ: ಕೋರಮಂಗಲ RTO ಭರ್ಜರಿ ದಾಖಲೆ
ಬೆಂಗಳೂರು: ಸಾಮಾನ್ಯವಾಗಿ ನೆಗೆಟಿವ್ ಸುದ್ದಿಗಳಿಂದಲೇ ಗುರುತಿಸಿಕೊ... ಓದನ್ನು ಮುಂದುವರಿಸಿ
ಕಾರವಾರ
ಕೆಎಸ್ಆರ್‌ಟಿಸಿ–ಖಾಸಗಿ ಭೀಕರ ಅಪಘಾತ : ಹಲವರಿಗೆ ಗಾಯ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಬಯಲಾಯ್ತು ಜಿಮ್ ಟ್ರೈನರ್ ಸಮೀರ್ ಕೃತ್ಯ- ಜ್ಯೂಸ್‌ನಲ್ಲಿ ಮದ್ದು ಬೆರೆಸಿ ಅತ್ಯಾಚಾರ?
ಹುಬ್ಬಳ್ಳಿ: ನಗರದಲ್ಲಿ ಸಂಚಲನ ಸೃಷ್ಟಿಸಿದ ಘಟನೆ ಒಂದರಲ್ಲಿ, ಹಳೆ... ಓದನ್ನು ಮುಂದುವರಿಸಿ
ಕಾರವಾರ
ಡಾಂಬರ್ ಪೂರೈಕೆ ಸ್ಥಗಿತ – ಕಾರವಾರ ಬಂದರು ಚಟುವಟಿಕೆಗಳಿಗೆ ಬ್ರೇಕ್ - ಮಧ್ಯಪ್ರಾಚ್ಯ ಸಂಘರ್ಷದ ನೇರ ಪರಿಣಾಮ
ಕಾರವಾರ: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಸಂಘರ್ಷದ ನೇರ ಪ... ಓದನ್ನು ಮುಂದುವರಿಸಿ
ಮಂಡ್ಯದಲ್ಲಿ ARAI ಯೋಜನೆಗೆ ರೈತರ ಆಕ್ರೋಶ: ಭೂಮಿ ಕೊಡೋದಿಲ್ಲ ಎಂದ ಜನ
ಮಂಡ್ಯದಲ್ಲಿ ಬೃಹತ್ ಕೈಗಾರಿಕಾ ಯೋಜನೆಗೆ ಆರಂಭದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಕೇ... ಓದನ್ನು ಮುಂದುವರಿಸಿ
ಬಿಜೆಪಿಗೆ ಸೋಲಿನ ಭಯ – ಯತ್ನಾಳ್ ಕರೆಸಿಕೊಂಡಿದ್ದಾರೆ: ಸಿದ್ದರಾಮಯ್ಯ ವಾಗ್ದಾಳಿ
ಬಾಗಲಕೋಟೆ: ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ... ಓದನ್ನು ಮುಂದುವರಿಸಿ
ಭಾಷಣ ವೇಳೆ ಕುಸಿದ ನಿವೃತ್ತ ನ್ಯಾಯಮೂರ್ತಿಸಂತೋಷ್ ಹೆಗ್ಡೆ ಅಸ್ವಸ್ಥ
ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಕಾರ್ಯಕ... ಓದನ್ನು ಮುಂದುವರಿಸಿ
ಮೈಲ್ಸಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್ ದುರಂತ ಮನೆಯಲ್ಲಿದ್ದ ವಸ್ತುಗಳು ಚಿದ್ರಚಿದ್ರ
ಬೆಂಗಳೂರು: ನಗರದ ಬೇಗುರ್ ಪೋಸ್ಟ್ ವ್ಯಾಪ್ತಿಯ ಮೈಲ್ಸಂದ್ರ ಪ್ರದೇಶದಲ್ಲಿ ಶಾರ್ಟ್ ಸರ್ಕ... ಓದನ್ನು ಮುಂದುವರಿಸಿ