ಶುಕ್ರವಾರದ ರಾಶಿ ಭವಿಷ್ಯ – 03 ಏಪ್ರಿಲ್ 2026

ಮೇಷ ರಾಶಿ ಭವಿಷ್ಯ: ಇಂದು ಮಠಾಧಿಪತಿಗಳಿಗೆ ಭಾಗ್ಯದ ಬಗ್ಗೆ ಚಿಂತೆ ಹೆಚ್ಚಾಗಬಹುದು. ವಿರೋಧಿಗಳಿಂದ ತೊಂದರೆ ಎದುರಾಗುವ ಸಾಧ್ಯತೆ ಇದ್ದು, ನಿಮ್ಮ ಪ್ರತಿಷ್ಠೆಗೆ ಧಕ್ಕೆ ಬರುವ ಸೂಚನೆಗಳಿವೆ. ಆಭರಣ ತಯಾರಿಕೆ, ಕಂಪ್ಯೂಟರ್, ಮೊಬೈಲ್ ಹಾಗೂ ಸ್ಟೇಷನರಿ ವ್ಯಾಪಾರಸ್ಥರಿಗೆ ನಿಧಾನವಾಗಿ ಲಾಭ ದೊರೆಯಲಿದೆ. ಆದರೆ ಸಂಸ್ಥೆಯ ಉಸ್ತುವಾರಿ ವಹಿಸಿರುವವರು ಅವಮಾನ ಹಾಗೂ ಅಪಮಾನವನ್ನು ಎದುರಿಸಬೇಕಾಗಬಹುದು. ಸಂಗಾತಿಯ ಭೇಟಿ ಸಂಭವಿಸಬಹುದು. ರಿಯಲ್ ಎಸ್ಟೇಟ್ ಕ್ಷೇತ್ರದವರಿಗೆ ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚು ಆಗುವ ಸಾಧ್ಯತೆ ಇದೆ. nಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಗಳು ಕಾಣಿಸಿಕೊಂಡು, ಕೆಲವರಿಗೆ ಉದ್ಯೋಗ ಬದಲಾವಣೆಯ ಯೋಚನೆ ಬರುತ್ತದೆ. ಸಂಬಂಧಿಗಳಿಂದ ಕುತಂತ್ರ ಎದುರಾಗುವ ಸೂಚನೆ ಇದೆ. ಅಮೂಲ್ಯ ವಸ್ತು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಮಾನಸಿಕ ಒತ್ತಡ ಕಡಿಮೆಯಾಗಲಾರಂಭಿಸಿದರೂ, ಮಾತಿನ ಮೇಲೆ ನಿಯಂತ್ರಣ ಇರಲಿ. ಕುಟುಂಬದಲ್ಲಿ ಕಲಹ, ವಿಶೇಷವಾಗಿ ತಾಯಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಹಿರಿಯರಿಂದ ಉಪದೇಶ ಸಿಗಲಿದೆ. ಆರೋಗ್ಯದಲ್ಲಿ ಏರುಪೇರು ಕಂಡುಬರುವ ಸಾಧ್ಯತೆ ಇದೆ. ಶೀತ ಸಂಬಂಧಿತ ರೋಗಗಳು ಕಾಡಬಹುದು. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ, ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಮನಸ್ಸು ಚಂಚಲವಾಗಿದ್ದು, ಪರಸ್ಥಳ ವಾಸದ ಯೋಗ ಕಾಣಿಸುತ್ತದೆ. ಸಹೋದ್ಯೋಗಿಗಳೊಂದಿಗೆ ವಾಗ್ವಾದ, ದಾಂಪತ್ಯ ಜೀವನದಲ್ಲಿ ವಿರಸ, ಹಾಗೂ ಹೆಚ್ಚುವರಿ ಖರ್ಚು ಕಾಣಿಸಿಕೊಳ್ಳಬಹುದು. ಕೃಷಿ ಕ್ಷೇತ್ರದಲ್ಲಿ ಲಾಭವಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಇಷ್ಟಾರ್ಥ ಸಿದ್ಧಿ, ಹಾಗೂ ಋಣಬಾಧೆಯಿಂದ ಮುಕ್ತಿ ದೊರೆಯಬಹುದು. ಮಕ್ಕಳಿಂದ ಉತ್ತಮ ಸಲಹೆ ಸಿಗುತ್ತದೆ. ಕೆಲಸಗಳಲ್ಲಿ ವಿಘ್ನಗಳು ಎದುರಾಗಬಹುದು. ಮನೆದಲ್ಲಿ ಸಂಕಷ್ಟದ ವಾತಾವರಣ ಉಂಟಾಗಬಹುದು. ಶತ್ರುಗಳ ಮೋಸದ ಜಾಲಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕು. ಆದರೆ, ಉದ್ಯೋಗದಲ್ಲಿ ಅಭಿವೃದ್ಧಿ ಸಾಧಿಸುವ ಅವಕಾಶಗಳೂ ಇವೆ. ವಾದ-ವಿವಾದಗಳಲ್ಲಿ ಭಾಗಿಯಾಗುವ ಸಂದರ್ಭಗಳು ಎದುರಾಗಬಹುದು. ಈ ದಿನ ತಾಳ್ಮೆ ಅತ್ಯಗತ್ಯ ಅನ್ಯಜನರಲ್ಲಿ ದ್ವೇಷ ಹೆಚ್ಚಾಗಬಹುದು. ಅಕಾಲ ಭೋಜನ, ಹೊಸ ಸಮಸ್ಯೆಗಳ ಉದ್ಭವ, ಕಡಿಮೆ ಆದಾಯ ಹಾಗೂ ಎಲ್ಲೆಡೆ ಅಶಾಂತಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 

ವೃಷಭ ರಾಶಿ ಭವಿಷ್ಯ: ಇಂದು ಸಂಸ್ಥೆಯ ಉಸ್ತುವಾರಿ ವಹಿಸಿದವರಿಗೆ ಆತಂಕ ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬಂದರೂ, ಸ್ವಯಂಕೃತ ತಪ್ಪುಗಳಿಂದ ಸಮಾಜದಲ್ಲಿ ಅಪಕೀರ್ತಿ ಎದುರಾಗುವ ಸೂಚನೆಗಳಿವೆ. ಪ್ರೇಮಿಗಳ ಮನಸ್ಸು ಚಂಚಲವಾಗಿದ್ದು, ಪಶ್ಚಾತ್ತಾಪದ ಭಾವನೆ ಕಾಡಬಹುದು. ಉದ್ಯೋಗ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಅಪಮಾನ ಎದುರಾಗುವ ಸಾಧ್ಯತೆ ಇದೆ. ಆದರೆ ಕೆಲವರಿಗೆ ಕೆಲಸಕ್ಕೆ ಮರು ನೇಮಕವಾಗುವ ಯೋಗವೂ ಕಾಣಿಸುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗುವುದರಿಂದ ಮನಸ್ಸಿಗೆ ಶಾಂತಿ ಮತ್ತು ಸಮಾಧಾನ ಸಿಗಲಿದೆ. ಯಾವುದೇ ಕೆಲಸವನ್ನು ಜಾಗ್ರತೆಯಿಂದ ಹಾಗೂ ಯೋಚಿಸಿ ಮಾಡುವುದೇ ಉತ್ತಮ. ಭಾವೋದ್ರೇಕಕ್ಕೆ ಒಳಗಾಗದಿರುವುದು ಅಗತ್ಯ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚು ಗಮನ ಹರಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಹಿರಿಯರಿಗೆ ಗೌರವ ಮತ್ತು ಮಾನ್ಯತೆ ಸಿಗಲಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸಾಧ್ಯತೆ ಇದ್ದು, ಪೂರ್ವ ತಯಾರಿ ಮಾಡಿಕೊಳ್ಳುವುದು ಒಳಿತು. ಸ್ನೇಹಿತರ ಸಹಾಯದಿಂದ ಉದ್ಯೋಗ ಭಾಗ್ಯ ಲಭಿಸಬಹುದು. ಪರಿಸ್ಥಿತಿಗೆ ತಕ್ಕಂತೆ ನಡೆದುಕೊಳ್ಳುವುದು ಮುಖ್ಯ. ಸಾಲಗಾರರಿಂದ ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಕುಟುಂಬದ ಎಲ್ಲ ಸದಸ್ಯರಿಂದ ಸಹಕಾರ ದೊರೆಯಲಿದೆ. ಆದರೆ ಪ್ರೇಮ ಸಂಬಂಧಗಳಲ್ಲಿ ಹಿರಿಯರಿಂದ ವಿರೋಧ ಎದುರಾಗುವ ಸಾಧ್ಯತೆ ಇದೆ.

 

ಮಿಥುನ ರಾಶಿ ಭವಿಷ್ಯ: ಇಂದು ಮಠಾಧಿಪತಿಗಳು ಹಾಗೂ ಅರ್ಚಕರಿಗೆ ವಿರೋಧಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೃದಯ ತಜ್ಞರು ಮತ್ತು ಪ್ಯಾರಾ ಮೆಡಿಕಲ್, ನರ್ಸಿಂಗ್ ಪದವಿ ಹೊಂದಿದವರಿಗೆ ವಿದೇಶದಲ್ಲಿ ಉದ್ಯೋಗ ಅವಕಾಶಗಳು ಲಭಿಸಬಹುದು. ಪಿಟೋಪಕರಣ ತಯಾರಿಕೆಯಲ್ಲಿ ಉತ್ತಮ ಧನಲಾಭ ಕಂಡುಬರುತ್ತದೆ. ಫೋಟೋಶೂಟಿಂಗ್, ವಿಡಿಯೋಗ್ರಫಿ ಹಾಗೂ ಕಲಾರಂಗದವರಿಗೂ ಲಾಭದಾಯಕ ದಿನವಾಗಲಿದೆ. ಸಾರಿಗೆ ಸಂಸ್ಥೆ ನಡೆಸುವವರಿಗೆ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಪುಸ್ತಕ ವ್ಯಾಪಾರಿಗಳು, ಬೇಕರಿ ಮತ್ತು ಕ್ಯಾಂಟೀನ್ ನಡೆಸುವವರಿಗೆ ಲಾಭ ದೊರೆಯುತ್ತದೆ. ಸ್ಟಾಕ್ ಹಾಗೂ ಷೇರು ವ್ಯವಹಾರದಲ್ಲಿ ನಿಧಾನವಾಗಿ ಅಭಿವೃದ್ಧಿ ಕಾಣಬಹುದು. ನಿಮ್ಮ ಉದಾರ ಮನೋಭಾವದಿಂದ ಕೆಲವು ಸಮಸ್ಯೆಗಳನ್ನು ಸ್ವತಃ ನಿಮ್ಮ ಮೇಲೆ ತಂದುಕೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಹೆಚ್ಚು ಪ್ರಯತ್ನ ಮಾಡುವುದು ಅತ್ಯಗತ್ಯ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ ಉಂಟಾಗಬಹುದು. ಕುಟುಂಬದಲ್ಲಿ ಅನಿರೀಕ್ಷಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದ್ದು, ಮಧ್ಯಸ್ಥಿಕೆಯಿಂದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಅಳಿಯನ ವರ್ತನೆಯಿಂದ ಬೇಸರ ಉಂಟಾಗಬಹುದು. ಮಗನ ಭವಿಷ್ಯದ ಬಗ್ಗೆ ಚಿಂತನೆ ಹೆಚ್ಚಾಗುತ್ತದೆ. ಮಾಡಿದ ಪ್ರಯತ್ನಗಳಿಗೆ ತಕ್ಕ ಫಲ ವಿಳಂಬವಾಗಬಹುದು. ಮಗಳ ಮದುವೆ ವಿಚಾರದಲ್ಲಿ ಚಿಂತನೆ ಹೆಚ್ಚಾಗುತ್ತದೆ. ಪ್ರೇಮ ಸಂಬಂಧಗಳಲ್ಲಿ ಮೊದಲು ಇದ್ದ ಪ್ರೀತಿ ಮತ್ತು ಆಕರ್ಷಣೆ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.

 

ಕಟಕ ರಾಶಿ ಭವಿಷ್ಯ: ಇಂದು ಪ್ರೇಮಿಗಳ ಮನಸ್ಸು ಚಂಚಲವಾಗಿರುವ ಸಾಧ್ಯತೆ ಇದೆ. ರಾಜಕಾರಣಿಗಳಿಗೆ ಉತ್ತಮ ಸ್ಥಾನಮಾನ ದೊರೆಯಬಹುದು. ಸರ್ಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಬಡ್ತಿ ಯೋಗ ಕಂಡುಬರುತ್ತದೆ. ವೈದ್ಯರಿಗೆ ವಿದೇಶದಲ್ಲಿ ಹೆಚ್ಚಿನ ಅಧ್ಯಯನ ಹಾಗೂ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ. ಯಾವುದೇ ಕಾರ್ಯದಲ್ಲಿಯೂ ತಾಳ್ಮೆ ಮತ್ತು ಸಮಾಧಾನದಿಂದ ಮುಂದುವರಿಯುವುದು ಮುಖ್ಯ. ವ್ಯಾಪಾರವನ್ನು ಬಹಳ ಎಚ್ಚರಿಕೆಯಿಂದ ಮುನ್ನಡೆಸಬೇಕಾಗಬಹುದು. ವ್ಯಾಪಾರ ಹಾಗೂ ಉದ್ಯಮದಲ್ಲಿ ನಿಧಾನವಾಗಿ ಚೇತರಿಕೆ ಕಾಣಬಹುದು. ಮಕ್ಕಳ ಸ್ವಭಾವದ ಬಗ್ಗೆ ಅನುಮಾನಗಳು ಮೂಡಬಹುದು. ವಿಚ್ಛೇದಿತ ಮಕ್ಕಳ ಮರುಮದುವೆ ಕುರಿತು ಚಿಂತನೆ ಹೆಚ್ಚಾಗುತ್ತದೆ. ಕೈಕೆಳಗಿನ ಕೆಲಸಗಾರರಿಂದ ತೊಂದರೆ ಎದುರಾಗುವ ಸಾಧ್ಯತೆ ಇದೆ. ಕಚೇರಿಯಲ್ಲಿ ಕಳೆದುಹೋಗಿರುವ ಫೈಲ್‌ನಿಂದ ಸಮಸ್ಯೆ ಅನುಭವಿಸಬಹುದು. ಹಿರಿಯರ ಆರೋಗ್ಯದ ಕಾರಣದಿಂದ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿ ಸರಸ-ಸಲ್ಲಾಪಗಳಿಂದ ಮನಸ್ತಾಪ ಉಂಟಾಗಬಹುದು.

 

ಸಿಂಹ ರಾಶಿ ಭವಿಷ್ಯ: ಇಂದು ಮಠಾಧಿಪತಿಗಳು ಹಾಗೂ ಅರ್ಚಕರಿಗೆ ವಿರೋಧಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಾಜಕಾರಣಿಗಳಿಗೆ ವಿವಿಧ ಮೂಲಗಳಿಂದ ಧನಾಗಮನವಾಗುವ ಸೂಚನೆಗಳಿವೆ. ಹಿತೈಷಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸಂಗಾತಿಯೊಂದಿಗೆ ಕಿರು ಪ್ರವಾಸ ಸಂಭವಿಸಬಹುದು. ಪ್ರೇಮಿಗಳ ಯೋಚನೆಗಳು ಯಶಸ್ವಿಯಾಗುವ ಸಾಧ್ಯತೆ ಇದೆ. ಸಾಂಸಾರಿಕ ಸುಖ ಹಂತ ಹಂತವಾಗಿ ದೊರೆಯುತ್ತಿದ್ದರೂ, ಮನಸ್ಸಿಗೆ ಸಂಪೂರ್ಣ ಸಮಾಧಾನ ಸಿಗದಿರುವ ಸಾಧ್ಯತೆ ಇದೆ. ಆದರೆ ಗುರುವಿನ ಕೃಪೆಯಿಂದ ಎಲ್ಲ ಸವಾಲುಗಳನ್ನು ಎದುರಿಸಿ ಮುನ್ನಡೆಯಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುವ ಸೂಚನೆಗಳಿವೆ. ಮಧ್ಯಸ್ಥಿಕೆಯಿಂದ ಮದುವೆ ವಿಚಾರದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ನಿಮ್ಮಲ್ಲಿ ಅಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಸಹೋದರರೊಂದಿಗೆ ಉತ್ತಮ ಬಾಂಧವ್ಯ ಮರುಸ್ಥಾಪನೆ ಆಗುತ್ತದೆ. ಸಾಲ ಮರುಪಾವತಿ ಸಾಧ್ಯವಾಗುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅಗತ್ಯ. ಮುಂಜಾಗ್ರತೆಯಿಂದ ವೈದ್ಯರ ಸಲಹೆ ಪಡೆಯುವುದು ಉತ್ತಮ. ಹಳಸಿಹೋದ ಸಂಬಂಧಗಳು ಮತ್ತೆ ಸರಿ ಹೋಗಿ, ಮರುಮದುವೆ ಮಾತುಕತೆಗಳು ಯಶಸ್ವಿಯಾಗುವ ಸೂಚನೆಗಳಿವೆ.

 

ಕನ್ಯಾ ರಾಶಿ ಭವಿಷ್ಯ: ಇಂದು ಸಂಘ ಸಂಸ್ಥೆಗಳ ಉಸ್ತುವಾರಿ ವಹಿಸಿರುವವರು ಇತರರ ತಪ್ಪಿಗೆ ಬಲಿಯಾಗುವ ಸಾಧ್ಯತೆ ಇದೆ. ಜೂಜಾಟ ಅಥವಾ ಅಜಾಗ್ರತೆಯಿಂದ ಹಣಕಾಸಿನ ನಷ್ಟ ಉಂಟಾಗಿ, ಮನಸ್ಸಿನಲ್ಲಿ ಬೇಸರ ಹೆಚ್ಚಾಗಬಹುದು. ಉದ್ಯಮದಾರರಿಗೆ ಆರ್ಥಿಕ ಹಿಂಜರಿತ ಆರಂಭವಾಗುವ ಸಾಧ್ಯತೆ ಇದ್ದು, ಸಾಲಬಾಧೆ ಕಾಡಬಹುದು. ದಾಂಪತ್ಯ ಜೀವನದಲ್ಲಿ ಜಗಳ ಹೆಚ್ಚಾಗಿ, ಇದರಿಂದ ತಂದೆ-ತಾಯಿಗೂ ಬೇಸರ ಉಂಟಾಗಬಹುದು. ಮಹಿಳೆಯರಿಗೆ ಕೆಲವು ಸಣ್ಣ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಕೃಷಿಯೇತರ ಚಟುವಟಿಕೆಗಳಲ್ಲಿ ವಿಳಂಬ ಕಂಡುಬರುತ್ತದೆ. ನ್ಯಾಯಾಲಯ ಸಂಬಂಧಿತ ಕಾರ್ಯಗಳಲ್ಲಿ ಹಿನ್ನಡೆ ಎದುರಾಗಬಹುದು. ಆದರೆ ಸಮಾಜದಲ್ಲಿ ಗೌರವ ಮತ್ತು ಮಾನ್ಯತೆ ದೊರೆಯುವ ಯೋಗವೂ ಇದೆ. ನಿಂತುಹೋದ ಮನೆ ಕಟ್ಟಡ ಪತ್ನಿಯ ಸಹಾಯದಿಂದ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಉದ್ಯಮ ಕ್ಷೇತ್ರದಲ್ಲಿ ಆರ್ಥಿಕ ಸಂಕಷ್ಟ ಮುಂದುವರಿಯಬಹುದು. ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ – ಉದರ ಸಂಬಂಧಿತ ಸಮಸ್ಯೆಗಳು ಹಾಗೂ ಕಣ್ಣಿನ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 

ತುಲಾ ರಾಶಿ ಭವಿಷ್ಯ: ಇಂದು ಪ್ರೇಮಿಗಳ ಯೋಚನೆಗಳು ಯಶಸ್ವಿಯಾಗುವ ಸಾಧ್ಯತೆ ಇದೆ. ಲೇವಾದೇವಿಗಾರರಿಗೆ ಹಳೆಯ ಸಾಲ ಮರುಪಾವತಿ ಆಗುವ ಸೂಚನೆಗಳಿವೆ. ಸಿದ್ಧ ಉಡುಪು ವ್ಯಾಪಾರದಲ್ಲಿ ಅನಿರೀಕ್ಷಿತ ನಷ್ಟ ಸಂಭವಿಸಬಹುದು. ಷೇರು ಮಾರುಕಟ್ಟೆಯಲ್ಲಿ ಧನನಷ್ಟದಿಂದ ಮನಸ್ಸಿಗೆ ಬೇಸರ ಉಂಟಾಗುವ ಸಾಧ್ಯತೆ ಇದೆ. ಸಹವಾಸದ ದೋಷದಿಂದ ಕೆಟ್ಟ ಅಭ್ಯಾಸಗಳಿಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸದ ಯೋಗ ಕಂಡುಬರುತ್ತದೆ. ಸಾಂಸಾರಿಕ ಜೀವನದಲ್ಲಿ ಕೆಲ ತಾಪತ್ರಯಗಳು ಎದುರಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೇ ಜಾಗ್ರತೆಯಿಂದ ಇರಬೇಕು. ಕುಟುಂಬ ಸಮೇತ ದೇವದರ್ಶನ ಭಾಗ್ಯ ದೊರೆಯುವ ಸಾಧ್ಯತೆ ಇದೆ. ಮಕ್ಕಳಿಂದ ತಕರಾರು ಉಂಟಾಗಬಹುದು. ಇತರರ ಕುಟುಂಬ ವಿಚಾರಗಳಲ್ಲಿ ತಲೆ ಹಾಕುವುದನ್ನು ತಪ್ಪಿಸುವುದು ಉತ್ತಮ. ನಿಮ್ಮ ಕುಟುಂಬದಲ್ಲಿಯೇ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ. ಸಮಾಜದ ಸಣ್ಣ ವಿಷಯಗಳಿಗೂ ಮನಸ್ತಾಪ ಉಂಟಾಗಬಹುದು. ಪ್ರೇಮಿಗಳ ಮದುವೆ ವಿಷಯದಲ್ಲಿ ಹಿರಿಯರಿಂದ ವಿರೋಧ ಎದುರಾಗುವ ಸೂಚನೆಗಳಿವೆ.

 

ವೃಶ್ಚಿಕ ರಾಶಿ ಭವಿಷ್ಯ: ಇಂದು ಪರಸ್ತ್ರೀ-ಪುರುಷ ಸ್ನೇಹದ ಪರಿಣಾಮವಾಗಿ ಕೌಟುಂಬಿಕ ಕಲಹಗಳು ಮುಂದುವರಿಯುವ ಸಾಧ್ಯತೆ ಇದೆ. ನೂತನ ಮನೆ ಖರೀದಿ ಯೋಚನೆಗಳು ಮೂಡಬಹುದಾದರೂ, ಹೊಸ ವ್ಯಾಪಾರ ಆರಂಭಿಸುವಲ್ಲಿ ತಟಸ್ಥತೆಯಿರಬೇಕು. ಹೊಸ ಹೋಟೆಲ್ ಖರೀದಿಗೆ ಇದು ಸೂಕ್ತ ಸಮಯವಲ್ಲ. ಧಾರ್ಮಿಕ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗಬಹುದು. ನೀವು ನೀಡಿರುವ ಹಣಕಾಸು ಜಾಮೀನಿಗೆ ನೀವೇ ಮರುಪಾವತಿ ಮಾಡುವ ಪರಿಸ್ಥಿತಿ ಎದುರಾಗಬಹುದು. ಕಾರ್ಮಿಕ ವರ್ಗದವರಿಗೆ ಗೊಂದಲದ ಪರಿಸ್ಥಿತಿ ಕಂಡುಬರುತ್ತದೆ. ಮಧ್ಯಸ್ಥಿಕೆಯಿಂದ ಕೆಲಸ ಕಳೆದುಕೊಳ್ಳುವ ಭೀತಿ ಉಂಟಾಗಬಹುದು. ಬಂಧುಗಳಿಂದ ವಿರೋಧ ಎದುರಾಗಬಹುದು. ಆಸ್ತಿ ವಿಚಾರದಲ್ಲಿ ಗೊಂದಲಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಹೋದರ-ಸಹೋದರಿಯರೊಂದಿಗೆ ಮನಸ್ತಾಪ ಉಂಟಾಗಬಹುದು. ಆದರೆ, ಆಸ್ತಿ ಖರೀದಿಯಲ್ಲಿ ಯಶಸ್ಸು ದೊರೆಯುವ ಯೋಗವಿದೆ. ಮಕ್ಕಳಿಂದ ಸಂತೋಷ ಸಿಗಲಿದೆ. ಸ್ವಂತ ಪ್ರಯತ್ನದಿಂದ ಹಣಕಾಸಿನಲ್ಲಿ ಪ್ರಗತಿ ಕಾಣುವಿರಿ. ಪತ್ನಿಯ ಮಾರ್ಗದರ್ಶನವನ್ನು ಪಡೆದು ಮುಂದುವರಿದರೆ ಉತ್ತಮ ಫಲಿತಾಂಶ ಪಡೆಯಬಹುದು.

 

ಧನುಸ್ಸು ರಾಶಿ ಭವಿಷ್ಯ: ಇಂದು ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಹಳೆಯ ಸಾಲ ಮರುಪಾವತಿ ಆಗುವ ಸೂಚನೆಗಳಿವೆ. ರಾಜಕಾರಣಿಗಳು ಹಾಗೂ ಸಮಾಜ ಸೇವಕರಿಗೆ ವಿವಿಧ ಮೂಲಗಳಿಂದ ಧನಾಗಮನವಾಗಬಹುದು. ಹೆಣ್ಣು ಮಕ್ಕಳಿಗೆ ಗರ್ಭಾಶಯ ಸಂಬಂಧಿತ ತೊಂದರೆಗಳಿಂದ ಸಂತಾನದ ವಿಷಯದಲ್ಲಿ ಆತಂಕ ಎದುರಾಗುವ ಸಾಧ್ಯತೆ ಇದೆ. ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೆಲವರಿಗೆ ಅಪಜಯ ಕಂಡುಬರಬಹುದು. ಕುಟುಂಬದ ಪ್ರೇರಣೆಯಿಂದ ಹೊಸ ಉದ್ಯೋಗ ಅಥವಾ ವ್ಯವಹಾರ ಆರಂಭಿಸುವ ಯೋಚನೆ ಮೂಡಬಹುದು. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಲಭಿಸಬಹುದು. ಶುಭಮಂಗಳ ಕಾರ್ಯಗಳನ್ನು ಸ್ವಲ್ಪ ಮುಂದೂಡುವುದು ಒಳಿತು. ಪಾಲು ಬಂಡವಾಳ ವ್ಯವಹಾರಗಳಲ್ಲಿ ಗೊಂದಲಗಳು ಕಂಡುಬರಬಹುದು. ಹಣಕಾಸಿನ ವ್ಯವಹಾರಗಳಿಂದ ನಿಧಾನವಾಗಿ ಪ್ರಗತಿ ಕಾಣಬಹುದು. ಹೊಸ ವಸ್ತುಗಳ ಖರೀದಿ ಹೆಚ್ಚಾಗುವ ಸಾಧ್ಯತೆ ಇದೆ. ದೀರ್ಘಕಾಲದ ಸಮಸ್ಯೆಗೆ ಪರಿಹಾರ ದೊರೆಯುವ ಯೋಗವಿದೆ. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ದಾಂಪತ್ಯ ಜೀವನದಲ್ಲಿ ವಿರಸ ಕಾಣಿಸಿಕೊಳ್ಳಬಹುದು. ಮಕ್ಕಳ ನಡೆನುಡಿ ಮತ್ತು ಶಿಕ್ಷಣದ ಬಗ್ಗೆ ಬೇಸರ ಉಂಟಾಗಬಹುದು. ಕುಟುಂಬದಲ್ಲಿ ಹೊಸ ಸದಸ್ಯರ ಸೇರ್ಪಡೆ ಸಾಧ್ಯತೆ ಇದೆ. ಪತ್ನಿ ತವರು ಮನೆಗೆ ಹೋಗುವ ಸಂಭವವೂ ಇದೆ. ಪ್ರೇಮಿಗಳ ಮದುವೆ ವಿಚಾರದಲ್ಲಿ ಅಡೆತಡೆಗಳು ಎದುರಾಗುವ ಸೂಚನೆಗಳಿವೆ.

 

ಮಕರ ರಾಶಿ ಭವಿಷ್ಯ: ಇಂದು ಉದ್ಯೋಗದಲ್ಲಿ ಜಿಗುಪ್ಸೆ ಹಾಗೂ ಅಸಮಾಧಾನ ಕಾಣಿಸಿಕೊಳ್ಳಬಹುದು. ಪತಿ-ಪತ್ನಿಯರು ಸಂತಾನದ ವಿಚಾರವನ್ನು ಮುಂದೂಡುವುದು ಒಳಿತಲ್ಲ ಎಂಬ ಸೂಚನೆಗಳಿವೆ. ವಾದ-ವಿವಾದಗಳಲ್ಲಿ ಅಪಜಯ ಎದುರಾಗುವ ಸಾಧ್ಯತೆ ಇದೆ. ಸಾಲಬಾಧೆ ಹೆಚ್ಚಾಗಬಹುದು. ಕಾನೂನು ಸಂಬಂಧಿತ ವಿಷಯಗಳಲ್ಲಿ ಹಿನ್ನಡೆ ಅಥವಾ ಸೋಲು ಕಂಡುಬರಬಹುದು. ವ್ಯಾಪಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದ್ದು, ಸ್ತ್ರೀಪಕ್ಷದಿಂದ ಕಿರಿಕಿರಿ ಎದುರಾಗಬಹುದು. ವ್ಯವಹಾರದಲ್ಲಿ ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗಬಹುದು. ರಾಜಕೀಯ ಕ್ಷೇತ್ರದವರಲ್ಲಿ ಕೆಲವರು ಹಿಂಜರಿಯುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಹೊಸ ಉದ್ಯಮ ಆರಂಭಿಸುವಾಗ ಹಣ ಹೂಡಿಕೆಯಲ್ಲಿ ಎಚ್ಚರಿಕೆ ಅಗತ್ಯ. ಮಾತಾ-ಪಿತೃಗಳ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು, ಆದ್ದರಿಂದ ಸೂಕ್ತ ವೈದ್ಯರ ಸಲಹೆ ಪಡೆಯುವುದು ಉತ್ತಮ. ತಲೆಸುತ್ತು ಹಾಗೂ ನರ ಸಂಬಂಧಿತ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತದೆ. ಮಧ್ಯಸ್ಥಿಕೆವಹಿಸಿ ಹಣ ಕೊಡುವುದನ್ನು ತಪ್ಪಿಸುವುದು ಒಳಿತು, ಇಲ್ಲದಿದ್ದರೆ ಧನಹಾನಿ ಹಾಗೂ ಮಾನಹಾನಿ ಸಂಭವಿಸಬಹುದು. ಪ್ರೇಮಿಗಳಲ್ಲಿ ಮದುವೆ ಕುರಿತು ಚಿಂತನೆಗಳು ಹೆಚ್ಚಾಗುವ ಸಾಧ್ಯತೆ ಇದೆ.

 

ಕುಂಭ ರಾಶಿ ಭವಿಷ್ಯ: ಇಂದು ಅರ್ಚಕರು ಮತ್ತು ಮಠಾಧಿಪತಿಗಳಿಗೆ ನೆಮ್ಮದಿ ಭಂಗವಾಗುವ ಸಾಧ್ಯತೆ ಇದೆ. ನಿವೃತ್ತರಾದವರು ಜೀವನ ಹಾಗೂ ಕುಟುಂಬದ ಬಗ್ಗೆ ಸ್ವಲ್ಪ ಬೇಸರ ಅನುಭವಿಸಬಹುದು. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಸಹಾಯ ದೊರೆಯುವುದರಿಂದ ಚೇತರಿಕೆ ಕಾಣಬಹುದು. ಪ್ರೇಮಿಗಳಲ್ಲಿ ಮಾನಸಿಕ ಗೊಂದಲಗಳಿದ್ದರೂ, ಕೊನೆಯಲ್ಲಿ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಧನಾಗಮನ ಇದ್ದರೂ, ನಿಮ್ಮದೇ ನಿರ್ಧಾರಗಳಿಂದ ಹಣ ವ್ಯಯವಾಗುವ ಸಂಭವ ಇದೆ. ಎಷ್ಟೇ ಪ್ರಯತ್ನಪಟ್ಟರೂ ಗುರಿ ತಲುಪಲು ವಿಳಂಬವಾಗಬಹುದು, ಆದರೂ ಪುನಃ ಪ್ರಯತ್ನಿಸುವುದು ಅಗತ್ಯ. ನಿಮ್ಮ ಜೊತೆ ಮೋಜುಮಸ್ತಿ ಮಾಡಿದವರು ಕಷ್ಟದಲ್ಲಿ ಸಹಾಯ ಮಾಡದೇ ದೂರ ಸರಿಯುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡರೆ ಲಾಭವಾಗುತ್ತದೆ. ನಿಮ್ಮ ಯೋಜನೆಗಳನ್ನು ಪತ್ನಿಯೊಂದಿಗೆ ಚರ್ಚಿಸಿ ಮುಂದುವರಿಯುವುದು ಉತ್ತಮ. ಮಕ್ಕಳಿಂದ ಮನಸ್ತಾಪ ಉಂಟಾಗಬಹುದು. ಬಂಧುಬಾಂಧವರೊಂದಿಗೆ ವಿಶ್ವಾಸದಿಂದ ವರ್ತಿಸುವುದು ಒಳಿತು. ಬಂಡವಾಳ ಹೂಡಿದ ವ್ಯಾಪಾರಸ್ಥರಿಗೆ ತಾತ್ಕಾಲಿಕ ಹಿನ್ನಡೆ ಕಂಡುಬಂದರೂ, ನಷ್ಟವಿಲ್ಲ; ಮುಂದಿನ ದಿನಗಳಲ್ಲಿ ಲಾಭ ಸಾಧ್ಯತೆ ಇದೆ. ಪ್ರೇಮಿಗಳ ಮಧ್ಯೆ ವಿರಸ ಉಂಟಾಗಬಹುದು. ಆರ್ಥಿಕವಾಗಿ ಉಳಿತಾಯ ಹೆಚ್ಚಿಸಲು ಗಮನಹರಿಸಬೇಕು. ವಿದ್ಯಾರ್ಥಿಗಳು ತಮ್ಮ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ. ವೈದ್ಯಕೀಯ ಹಾಗೂ ವಾಣಿಜ್ಯ ಶಿಕ್ಷಣದಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರೆಯುವ ಸೂಚನೆಗಳಿವೆ.

 

ಮೀನ ರಾಶಿ ಭವಿಷ್ಯ: ಇಂದು ನಿಮ್ಮ ಜೀವನದಲ್ಲಿ ಹೊಸ ಸದಸ್ಯರ ಸೇರ್ಪಡೆ ಸಂಭವಿಸಬಹುದು. ಶಿಕ್ಷಕರಿಗೆ ಅನುಕೂಲಕರ ಸಮಯವಾಗಿದ್ದು, ಸಿಹಿ ಸುದ್ದಿಗಳು ಲಭಿಸುವ ಸಾಧ್ಯತೆ ಇದೆ. ಶುಭ ಸಮಾರಂಭಗಳಲ್ಲಿ ಆಭರಣ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಅಕ್ಕಪಕ್ಕದಲ್ಲಿ ಹಿತಶತ್ರುಗಳ ಕಾಟ ಎದುರಾಗಬಹುದು. ಯುವಕ-ಯುವತಿಯರಿಗೆ ಮದುವೆ ಯೋಗ ಕಾಣಿಸುತ್ತದೆ. ವಾಸ್ತು ದೋಷದಿಂದ ಮನಸ್ತಾಪ ಉಂಟಾಗಬಹುದು. ಪತಿ-ಪತ್ನಿಗಳ ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಕಿರುಕುಳ ಹೆಚ್ಚಾಗಬಹುದು. ಅಂಗಡಿ ಮಾಲಕರಿಗೆ ಆಭರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ವಿದೇಶದಲ್ಲಿ ನೆಲೆಸಿದವರಿಗೆ ಉತ್ತಮ ಬದಲಾವಣೆ ಹಾಗೂ ಹೊಸ ಉದ್ಯೋಗ ಅವಕಾಶಗಳು ದೊರೆಯಬಹುದು. ಸಾಂಸಾರಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ನಿಮ್ಮ ದೃಢ ನಿರ್ಧಾರದಿಂದಲೇ ಕಾರ್ಯಸಿದ್ಧಿ ಸಾಧ್ಯ. ಆದರೆ ನಿಮ್ಮ ನಿಲುವಿಗೆ ಅತಿಯಾಗಿ ಅಂಟಿಕೊಳ್ಳದೇ, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದು ಅಗತ್ಯ. ಕೌಟುಂಬಿಕ ಹೊಣೆಗಾರಿಕೆ ಹೆಚ್ಚಾಗುತ್ತದೆ. ನಿಮ್ಮ ಯೋಜನೆಗಳು ಉತ್ತಮವಾಗಿದ್ದರೂ, ಇತರರಿಂದ ಸಹಕಾರ ಸಿಗದೇ ವಿಳಂಬವಾಗಬಹುದು. ಹಿತಶತ್ರುಗಳ ಮುಂದೆ ನಿಮ್ಮ ಯೋಜನೆಗಳನ್ನು ಹಂಚಿಕೊಳ್ಳಬೇಡಿ, ಇಲ್ಲವಾದರೆ ಹಿನ್ನಡೆ ಎದುರಾಗಬಹುದು. ಕೆಲವರು ನಿಮ್ಮನ್ನು ತಮ್ಮ ಕೆಲಸಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ – ಅಂತಹವರಿಂದ ದೂರವಿರುವುದು ಒಳಿತು. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸಗಳನ್ನು ಇತರರಿಗೆ ವಹಿಸಿದರೂ, ಮೇಲ್ವಿಚಾರಣೆ ಮಾಡುವುದು ಅಗತ್ಯ. ವಿನಾಕಾರಣ ನಿಂದನೆ ಎದುರಾದರೆ ಅದನ್ನು ನಿರ್ಲಕ್ಷಿಸದೇ ಧೈರ್ಯದಿಂದ ಎದುರಿಸಬೇಕು. ಕೆಲ ಬಂಧುಗಳಿಂದ ಕಿರಿಕಿರಿ ಉಂಟಾಗಬಹುದು – ಅವರಿಂದ ದೂರವಿರುವುದು ಉತ್ತಮ. ಪ್ರೀತಿಸಿ ಮದುವೆಯಾದವರ ಜೀವನದಲ್ಲಿ ಸಮರಸತೆ ಕಡಿಮೆಯಾಗುವ ಸಾಧ್ಯತೆ ಇದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 hour ago

   
Image 1
Image 1

ಗುರುವಾರದ ರಾಶಿ ಭವಿಷ್ಯ – 02 ಏಪ್ರಿಲ್ 2026

ಮೇಷ ರಾಶಿ ಭವಿಷ್ಯ: ಕಂಪನಿ ವತಿಯಿಂದ ವಿದೇಶ ಪ್ರವಾಸದ ಅವಕಾಶಗಳು ಲ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಬುಧವಾರದ ರಾಶಿ ಭವಿಷ್ಯ – 01 ಏಪ್ರಿಲ್ 2026

ಮೇಷ ರಾಶಿ ಇಂದಿನ ಭವಿಷ್ಯ

ಅಡುಗೆ ಗುತ್ತಿಗೆದಾರರಿಗೆ ಇಂದು... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಮಂಗಳವಾರದ ರಾಶಿ ಭವಿಷ್ಯ – 31 ಮಾರ್ಚ್ 2026

ಮೇಷ ರಾಶಿ: ನಿಮ್ಮ ವ್ಯವಹಾರಗಳಲ್ಲಿ ಉಂಟಾಗುತ್ತಿರುವ ನಷ್ಟಕ್ಕೆ ಅಕ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಸೋಮವಾರದ ರಾಶಿ ಭವಿಷ್ಯ 30 ಮಾರ್ಚ್ 2026

ಮೇಷ ರಾಶಿ 

ಮೇಷ ರಾಶಿಯವರಿಗೆ ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಭಾನುವಾರದ ರಾಶಿ ಭವಿಷ್ಯ – 29 ಮಾರ್ಚ್ 2026

ಮೇಷ ರಾಶಿ

ಮೇಷ ರಾಶಿಯವರೇ, ಇಂದಿನ ದಿನ ಮಿಶ್ರ ಫಲ ನೀಡುವ ಸ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

ಶನಿವಾರದ ರಾಶಿ ಭವಿಷ್ಯ – 28 ಮಾರ್ಚ್ 2026

 ಮೇಷ ರಾಶಿ ದಿನ ಭವಿಷ್ಯ

ಮೇಷ ರಾಶಿಯವರಿಗೆ ಇಂದಿನ ದಿ... ಓದನ್ನು ಮುಂದುವರಿಸಿ


Edited by: ಬಾನು

6 days ago

   
Image 1

ಶುಕ್ರವಾರದ ರಾಶಿ ಭವಿಷ್ಯ – 27 ಮಾರ್ಚ್ 2026

ಮೇಷ ರಾಶಿ: ಆರ್ಥಿಕ ಚೇತರಿಕೆಯಿಂದ ಉತ್ಸಾಹ, ಕುಟುಂಬದಲ್ಲಿ ಮಿಶ್ರ ಫಲಗಳುಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಗುರುವಾರದ ರಾಶಿ ಭವಿಷ್ಯ – 26 ಮಾರ್ಚ್ 2026

ಮೇಷ ರಾಶಿ ಭವಿಷ್ಯ: ಗುರುಸ್ವಾಮಿ ಅನುಗ್ರಹದಿಂದ ಶುಭ ಫಲಗಳು

ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಧವಾರದ ರಾಶಿ ಭವಿಷ್ಯ – 25 ಮಾರ್ಚ್ 2026

ಮೇಷ ರಾಶಿ ಭವಿಷ್ಯ 

ಇಂದು ಮೇಷ ರಾಶಿಯವರಿಗೆ ಮಿಶ್ರ ಫ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಮಂಗಳವಾರದ ರಾಶಿ ಭವಿಷ್ಯ – 24 ಮಾರ್ಚ್ 2026

ಮೇಷ ರಾಶಿ – ದಿನಭವಿಷ್ಯ 

ಇಂದು ಮೇಷ ರಾಶಿಯವರ ದಿನವು... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

© 2024 Panchayat News

Disclaimer: The content and images featured on this platform are not our own. If you believe any content infringes upon your rights, please report it, and we will promptly remove it.