SC/ST ಉದ್ಯಮಿಗಳಿಗೆ ಖುಷಿಯ ಸುದ್ದಿ: ಕೈಗಾರಿಕೆ ಸ್ಥಾಪನೆಗೆ ಸರ್ಕಾರಿ ಭರ್ಜರಿ ನೆರವು!
ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೊಸ ವೇಗ ನೀಡಲು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ (SC/ST) ಉದ್ಯಮಿಗಳನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರವು ‘ಕೈಗಾರಿಕಾ ನೀತಿ 2025-30’ ಅಡಿಯಲ್ಲಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು ಅವರ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರದಲ್ಲಿ ಈ ಸೌಲಭ್ಯಗಳ ವಿವರ ಬಹಿರಂಗವಾಗಿದೆ.
ಕೈಗಾರಿಕಾ ನೀತಿಯ ಪ್ರಮುಖ ಅಂಶಗಳು
ಹೊಸ ನೀತಿಯ ಮೂಲಕ ಹೂಡಿಕೆದಾರರಿಗೆ ಆಕರ್ಷಕ ಪ್ರೋತ್ಸಾಹ ನೀಡಲಾಗುತ್ತಿದೆ. ಬಂಡವಾಳ ಹೂಡಿಕೆ ಮತ್ತು ವಹಿವಾಟಿನ ಆಧಾರದ ಮೇಲೆ ಸಹಾಯಧನ, ಮುದ್ರಾಂಕ ಮತ್ತು ನೋಂದಣಿ ಶುಲ್ಕದಲ್ಲಿ ರಿಯಾಯಿತಿ, ವಿದ್ಯುತ್ ಶುಲ್ಕದ ಮೇಲಿನ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಜೊತೆಗೆ ತಂತ್ರಜ್ಞಾನ ಅಳವಡಿಕೆ, ರಫ್ತು ಘಟಕಗಳು ಹಾಗೂ ಸುಸ್ಥಿರ ಕೈಗಾರಿಕೀಕರಣಕ್ಕೂ ವಿಶೇಷ ಪ್ರೋತ್ಸಾಹ ನೀಡಲಾಗಿದೆ.
ಎಸ್‌ಸಿ/ಎಸ್‌ಟಿ ಉದ್ಯಮಿಗಳಿಗೆ ವಿಶೇಷ ಪ್ಯಾಕೇಜ್
ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗಾಗಿ ‘ವಿಶೇಷ ಘಟಕ ಯೋಜನೆ’ ಅಡಿಯಲ್ಲಿ ಗಣನೀಯ ನೆರವು ಘೋಷಿಸಲಾಗಿದೆ. 10 ಕೋಟಿ ರೂ.ವರೆಗೆ ಹೂಡಿಕೆ ಮಾಡುವ ಘಟಕಗಳಿಗೆ ಗರಿಷ್ಠ 75 ಲಕ್ಷ ರೂ.ವರೆಗೆ ಸಾಫ್ಟ್ ಸೀಡ್ ಕ್ಯಾಪಿಟಲ್ ನೆರವು ನೀಡಲಾಗುತ್ತದೆ. ಇದಕ್ಕೆ ನಾಲ್ಕು ವರ್ಷಗಳ ಮೊರಟೋರಿಯಂ ಅವಧಿ ಹಾಗೂ ಐದು ವರ್ಷಗಳಲ್ಲಿ ಮರುಪಾವತಿ ವ್ಯವಸ್ಥೆ ಇರಲಿದೆ. ಅದೇ ರೀತಿ, KIADB ಮತ್ತು KSSIDC ಮೂಲಕ ಹಂಚಿಕೆಯಾಗುವ ಗರಿಷ್ಠ 2 ಎಕರೆ ನಿವೇಶನಗಳಿಗೆ 75% ಸಹಾಯಧನ, ಸಣ್ಣ ಕೈಗಾರಿಕೆಗಳಿಗೆ ಬ್ಯಾಂಕ್ ಸಾಲದ ಮೇಲೆ 60% ಸಹಾಯಧನ (ಗರಿಷ್ಠ 5 ಲಕ್ಷ ರೂ.) ನೀಡಲಾಗುತ್ತದೆ. ಹೊಸ ಘಟಕಗಳಿಗೆ ಮೊದಲ ಐದು ವರ್ಷಗಳ ಕಾಲ ಪ್ರತಿ ಯೂನಿಟ್‌ಗೆ ₹2ರಷ್ಟು ವಿದ್ಯುತ್ ಸಬ್ಸಿಡಿ ಲಭ್ಯವಿದೆ. ಹಣಕಾಸು ಸಂಸ್ಥೆಗಳ ಪರಿಶೀಲನಾ ಮತ್ತು ಕಾನೂನು ಶುಲ್ಕಗಳನ್ನು ಸರ್ಕಾರವೇ ಭರಿಸುವ ವ್ಯವಸ್ಥೆಯೂ ಮಾಡಲಾಗಿದೆ.
ಸಣ್ಣ ಕೈಗಾರಿಕೆಗಳಿಗೆ ಬಡ್ಡಿ ಸಹಾಯಧನ
ಕರ್ನಾಟಕ ರಾಜ್ಯ ಹಣಕಾಸು ನಿಗಮ ಮೂಲಕ ಸಾಲ ಪಡೆಯುವ ಅತೀ ಸಣ್ಣ ಮತ್ತು ಸಣ್ಣ ಉತ್ಪಾದನಾ ಘಟಕಗಳಿಗೆ 6% ಬಡ್ಡಿ ಸಹಾಯಧನ ನೀಡಲಾಗುತ್ತದೆ. ಇದು ಕಟ್ಟಡ ಮತ್ತು ಯಂತ್ರೋಪಕರಣಗಳ ಮೇಲಿನ ಹೂಡಿಕೆಗೆ ಅನ್ವಯವಾಗಲಿದೆ. ಈ ಕ್ರಮಗಳಿಂದ ರಾಜ್ಯದಲ್ಲಿ ಕೈಗಾರಿಕಾ ವೃದ್ಧಿಗೆ ಉತ್ತೇಜನ ಸಿಗುವ ಜೊತೆಗೆ, ಸಾಮಾಜಿಕವಾಗಿ ಹಿಂದುಳಿದ ವರ್ಗದ ಉದ್ಯಮಿಗಳಿಗೆ ಹೊಸ ಅವಕಾಶಗಳು ಸಿಗಲಿವೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಪಡಿತರ ಅಕ್ಕಿ ಕಳ್ಳಸಾಗಣೆ ತಡೆಯಲು 20,000 ಅಂಗಡಿಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ: ಸಚಿವ ಮುನಿಯಪ್ಪ
ಬೆಂಗಳೂರು: ಪಡಿತರ ಅಕ್ಕಿ ಕಳ್ಳ ಸಾಗಣೆ ತಡೆಯಲು ರಾಜ್ಯದ 20 ಸಾವಿರ... ಓದನ್ನು ಮುಂದುವರಿಸಿ
ಮಹಿಳೆಯರಿಗೆ ಯುಗಾದಿ ಗಿಫ್ಟ್: ಗೃಹಲಕ್ಷ್ಮಿ ಯೋಜನೆಯ 27ನೇ ಕಂತು ಬಿಡುಗಡೆ
ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮದಲ್ಲಿ ರಾಜ್ಯದ ಮಹಿಳೆಯರಿಗೆ ಸಿ... ಓದನ್ನು ಮುಂದುವರಿಸಿ
ಪೋಷಕರೇ ಗಮನಿಸಿ: ಮಗಳಿಗೆ 18 ವರ್ಷ ತುಂಬಿದರೆ “ಭಾಗ್ಯಲಕ್ಷ್ಮಿ ಬಾಂಡ್”ನ ₹1 ಲಕ್ಷ ಪಡೆಯಿರಿ!
ಬೆಂಗಳೂರು: ಕರ್ನಾಟಕ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ನ... ಓದನ್ನು ಮುಂದುವರಿಸಿ
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಿಗುತ್ತೆ ಬಡ್ಡಿ ಇಲ್ಲದೇ 1.40 ಲಕ್ಷದವರೆಗೆ ಸಾಲ..! ಅರ್ಜಿ ಸಲ್ಲಿಸುವ ವಿಧಾನ ತಿಳಿದುಕೊಳ್ಳಿ
ನವದೆಹಲಿ: ಕೇಂದ್ರ ಸರ್ಕಾರ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉತ್ತ... ಓದನ್ನು ಮುಂದುವರಿಸಿ
ಗೃಹಲಕ್ಷ್ಮಿ ಯೋಜನೆ ಗೊಂದಲ – ಸತ್ತ ಮಹಿಳೆಯ ಖಾತೆಗೆ 12 ಕೋಟಿ ರೂ. ಜಮಾ
ಬೀದರ್: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್... ಓದನ್ನು ಮುಂದುವರಿಸಿ
ಅನ್ನಭಾಗ್ಯ ಯೋಜನೆಗೆ ಹೊಸ ರೂಪ: 5 ಕೆಜಿ ಅಕ್ಕಿಯ ಬದಲು “ಇಂದಿರಾ ಆಹಾರ ಕಿಟ್” ವಿತರಣೆ – ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಲ್ಲಿ ಮಹ... ಓದನ್ನು ಮುಂದುವರಿಸಿ
ರಾಜ್ಯ ಬಜೆಟ್‌ನಲ್ಲಿ ಗೃಹಲಕ್ಷ್ಮಿಯರಿಗೆ ಸಂತಸದ ಸುದ್ದಿ: ₹28,608 ಕೋಟಿ ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅ... ಓದನ್ನು ಮುಂದುವರಿಸಿ
ಅನರ್ಹ BPL ಕಾರ್ಡ್‌ಗಳ ಮೇಲೆ ಸರ್ಕಾರದ ಕತ್ತರಿ: 5 ತಿಂಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಶಾಕ್
ಬೆಂಗಳೂರು: ಅನರ್ಹವಾಗಿ BPL ಕಾರ್ಡ್ ಹೊಂದಿರುವವರ ವಿರುದ್ಧ ರಾಜ್ಯ... ಓದನ್ನು ಮುಂದುವರಿಸಿ
ಸಿಹಿ ಸುದ್ದಿ : ಸರ್ಕಾರಿ ಕಚೇರಿಗೆ ಅಲೆದಾಡಬೇಕಿಲ್ಲ: ಜಾತಿ & ಆದಾಯ ಪ್ರಮಾಣ ಪತ್ರ ಮೊಬೈಲ್ʼನಲ್ಲೇ ಡೌನ್ ಲೋಡ್ ಮಾಡಬಹುದು..!
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: ಈಗ ಜಾತಿ ಮ... ಓದನ್ನು ಮುಂದುವರಿಸಿ
ಪ್ರಧಾನಿ ಮಾತೃ ವಂದನಾ ಯೋಜನೆ:ಸರ್ಕಾರದಿಂದ ಗರ್ಭಿಣಿ ಮಹಿಳೆಯರಿಗೆ ₹11,000 – ಈಗಲೇ ಅರ್ಜಿ ಸಲ್ಲಿಸಿ
ಬೆಂಗಳೂರು: ಕೇಂದ್ರ ಸರ್ಕಾರವು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದ... ಓದನ್ನು ಮುಂದುವರಿಸಿ