ಯಲ್ಲಾಪುರ: ಚಂದಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲೆ, ರಸ್ತೆ, ಪಶು ಚಿಕಿತ್ಸಾಲಯ ಸೇರಿ ಮೂಲಸೌಕರ್ಯಗಳ ಕೊರತೆ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಚಂದಗುಳಿ (ಉಪಳೇಶ್ವರ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲೆ, ರಸ್ತೆ, ಪಶು ಚಿಕಿತ್ಸಾಲಯ ಸೇರಿ ಸೌಕರ್ಯಗಳ ಬರವಿದೆ. 2015ಕ್ಕೆ ಮೊದಲು ನಂದೊಳ್ಳಿ ಗ್ರಾಮ ಪಂಚಾಯಿತಿ ಭಾಗವಾಗಿದ್ದ ಚಂದಗುಳಿ, ಹುತ್ಕಂಡ, ಮಳಲಗಾಂವ ಗ್ರಾಮಗಳನ್ನು ಬೇರ್ಪಡಿಸಿ ರಚಿಸಲಾದ ಚಂದಗುಳಿ ಗ್ರಾಮ ಪಂಚಾಯಿತಿಗೆ 2018ರಲ್ಲಿ ಪಟ್ಟಣ ಪಂಚಾಯ್ತಿಯ ಭಾಗವಾಗಿದ್ದ ಸಹಸ್ರಳ್ಳಿ ಮತ್ತು ಕೊಂಡೆಮನೆ ಗ್ರಾಮವನ್ನೂ ಸೇರಿಸಲಾಗಿದೆ.
ಕಬ್ಬಿನಗದ್ದೆ ರಸ್ತೆಯನ್ನು ಕಾಂಕ್ರೀಟ್ ರಸ್ತೆ ಮಾಡುವಂತೆ ಈ ಹಿಂದೆ ಪ್ರತಿಭಟನೆ ನಡೆದಿತ್ತಾದರೂ ಅದು ಈಡೇರಿಲ್ಲ ಎನ್ನುತ್ತಾರೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿ.ಎಸ್. ಭಟ್ ಉಪಳೇಶ್ವರ. ‘ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿದ್ದರೂ ಈಚಿನ ವರ್ಷಗಳಲ್ಲಿ ಈ ಭಾಗದ ಯಾವುದೇ ರಸ್ತೆಗೆ ಹೇಳಿಕೊಳ್ಳುವಂತ ದೊಡ್ಡ ಪ್ರಮಾಣದ ಅನುದಾನ ಬಂದಿಲ್ಲ ಎಂದರು.
ಐದು ಗ್ರಾಮಗಳನ್ನು ಹೊಂದಿರುವ ಚಂದಗುಳಿ ಗ್ರಾಮ ಪಂಚಾಯಿತಿಗೆ ಉಪಳೇಶ್ವರ ಕೇಂದ್ರ ಸ್ಥಳ. ಯಲ್ಲಾಪುರ–ಶಿರಸಿ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹರಡಿಕೊಂಡಿರುವ ಈ ಪಂಚಾಯಿತಿಯ ಒಂದು ಕಡೆ ನಂದೊಳ್ಳಿ, ಇನ್ನೊಂದು ಕಡೆ ಮದನೂರು ಗ್ರಾಮ ಪಂಚಾಯಿತಿ ಜತೆ ಗಡಿ ಹಂಚಿಕೊಂಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರೌಢಶಾಲೆ, ಪಶು ಚಿಕಿತ್ಸಾಲಯ ಇಲ್ಲ. ಚಿಕ್ಕಪುಟ್ಟ ಚಿಕಿತ್ಸೆಗೂ ಜನರು ಯಲ್ಲಾಪುರ ಅಥವಾ ಮಂಚಿಕೇರಿಯ ಆಸ್ಪತ್ರೆಗೆ ಹೋಗುತ್ತಾರೆ.
ಉಬೆಗಾಳಿ, ಪಟ್ಟಿಗದ್ದೆ ಭಾಗದ ವಿದ್ಯಾರ್ಥಿಗಳು ಪ್ರೌಢಶಿಕ್ಷಣ, ಕಾಲೇಜು ಶಿಕ್ಷಣಕ್ಕೆ ನಾಲ್ಕಾರು ಕಿ.ಮೀ ನಡೆದು ಬಸ್ ಹತ್ತಿ ಯಲ್ಲಾಪುರಕ್ಕೆ ಹೋಗಬೇಕಿದೆ. ‘ಗ್ರಾಮದ ಒಳ ಭಾಗದ ರಸ್ತೆಗಳು ಸರಿಯಾಗಿಲ್ಲ.
‘ಉಪಳೇಶ್ವರದಿಂದ ಮಳಲಗಾಂ-ಚಂದಗುಳಿ ರಸ್ತೆಯನ್ನು ಕೂಡಿಸುವ ದೇಸಾಯಿಮನೆ (ಬುಗಡಿಪಾಲ್) ಹಳ್ಳಕ್ಕೆ ಕಾಲು ಸೇತುವೆ ನಿರ್ಮಿಸಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಮಳೆ ಆರಂಭವಾಗುವುದರ ಒಳಗೆ ಇಲ್ಲಿ ತಡೆಗೋಡೆ ನಿರ್ಮಿಸದಿದ್ದಲ್ಲಿ ಹಾಕಲಾದ ಮಣ್ಣು ಕೊಚ್ಚಿ ಹೋಗಿ ಸಂಚಾರ ಕಷ್ಟಕರವಾಗಲಿದೆ’ ಎಂದರು. ಸಹಸ್ರಳ್ಳಿ ಹೊರತು ಪಡಿಸಿ ಉಳಿದ ಕಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ಬೇಡಿಕೆಯನ್ನು ಗಮನಿಸಿ ಸಹಸ್ರಳ್ಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಚಂದಗುಳಿ ಗ್ರಾಮ ಪಂಚಾಯಿತಿ ಪಿಡಿಒ ರಾಜೇಶ ಪಿ.ಶೇಟ್ ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೊಡ್ಡಬಳ್ಳಾಪುರ ತಾಲೂಕು
“ದಲಿತರ ಕಾಲೋನಿಗೆ ಇಲ್ಲ ಚರಂಡಿ: ಪಂಚಾಯತಿ ಮುಂದೆ ಕೊಳಚೆ ನೀರನ್ನ ಸಿಂಧಿಸಿ ಪ್ರತಿಭಟನೆ!”
ದೊಡ್ಡಬಳ್ಳಾಪುರ: ತಾಲೂಕಿನ ಹಾದ್ರೀಪುರ ಕಾಲೋನಿಯಲ್ಲಿ ಒಳಚರಂಡಿ ಸಮ... ಓದನ್ನು ಮುಂದುವರಿಸಿ
‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ₹4.91 ಕೋಟಿ ವಂಚನೆ: ಹಿರಿಯ ಸಂಶೋಧಕ ಬಲಿ
ಬೆಂಗಳೂರು: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಹಿರಿಯ ಸಂಶೋಧಕನನ್ನ... ಓದನ್ನು ಮುಂದುವರಿಸಿ
ಹುಳಿಯಾರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು: ಕಾಂತರಾಜು ಪ್ರಕರಣ ಸಿಐಡಿಗೆ ಹಸ್ತಾಂತರ
ತುಮಕೂರು: ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆ... ಓದನ್ನು ಮುಂದುವರಿಸಿ
ಚಿಕ್ಕತೊಟ್ಲುಕೆರೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಗಬ್ಬೆದ್ದು ನಾರುತಿರುವ ಚರಂಡಿ
ತುಮಕೂರು : ಜಿಲ್ಲೆ, ತುಮಕೂರು ತಾಲೂಕಿನ ಕೋರ ಹೋಬಳಿಯ ಚಿಕ್ಕತೊಟ್ಲ... ಓದನ್ನು ಮುಂದುವರಿಸಿ
ಶಿಗ್ಗಾಂವ
ಅಡವಿಸೋಮಾಪುರ ದನಗಳ ನೀರಿನ ತೊಟ್ಟಿ ಸ್ವಚ್ಛತೆ ಆರಂಭ: ಸುದ್ದಿ ಹಿನ್ನಲೆ ಗ್ರಾಮಸ್ಥರಿಗೆ ಸಿಕ್ಕ ಫಲ.!!
ಶಿಗ್ಗಾಂವಿ : ಕುನ್ನೂರ ಪಂಚಾಯಿತಿ ವ್ಯಾಪ್ತಿಯ ಅಡವಿಸೋಮಾಪುರ ಗ್ರಾ... ಓದನ್ನು ಮುಂದುವರಿಸಿ
ದೇವನಹಳ್ಳಿ
ದುಬೈನಿಂದ 200ಕ್ಕೂ ಹೆಚ್ಚು ಕನ್ನಡಿಗರು ಸುರಕ್ಷಿತವಾಗಿ ದೇವನಹಳ್ಳಿಗೆ ವಾಪಸ್
ಬೆಂಗಳೂರು ಗ್ರಾಮಾಂತರ : ಇತ್ತೀಚೆಗೆ ದುಬೈನಿಂದ 200ಕ್ಕೂ ಹೆಚ್ಚು... ಓದನ್ನು ಮುಂದುವರಿಸಿ
ಕೊಪ್ಪಳ ಪ.ಪಂ ಸಭೆ ಗಲಾಟೆ : ಸದಸ್ಯರ, ಪತ್ರಕರ್ತರ ಮೇಲೆ ಗುಂಪಿನ ಹಲ್ಲೆ ಯತ್ನ
ಕೊಪ್ಪಳ: ಜಿಲ್ಲೆಯ ಕನಕಗಿರಿ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ... ಓದನ್ನು ಮುಂದುವರಿಸಿ
ಶಿಗ್ಗಾಂವ
ಅಡವಿಸೋಮಾಪುರದಲ್ಲಿ ದನಗಳ ನೀರಿನ ತೊಟ್ಟಿ ನಿರ್ಲಕ್ಷ್ಯ: ಗ್ರಾಮಸ್ಥರ ಆಕ್ರೋಶ
ಶಿಗ್ಗಾಂವಿ: ಕುನ್ನೂರ ಪಂಚಾಯತಿಯ ವ್ಯಾಪ್ತಿಯ ಅಡವಿಸೋಮಾಪುರ ಗ್ರಾಮ... ಓದನ್ನು ಮುಂದುವರಿಸಿ
ಮಾಹಿತಿ ತಡಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ₹50,000 ದಂಡ”
ಕಲಬುರಗಿ: ಮಾಹಿತಿ ಹಕ್ಕು ಅಧಿನಿಯಮ, 2005 ರ ಕಲಂ 18(3) ಮತ್ತು 2... ಓದನ್ನು ಮುಂದುವರಿಸಿ
4 ಗ್ರಾಮ ಪಂಚಾಯಿತಿಗಳನ್ನು ಕೈ ಬಿಡದಿದ್ದರೆ ಗೆಜ್ಜಲಗೆರೆದಿಂದ ವಿಧಾನಸೌಧದವರೆಗೆ ಪಾದಯಾತ್ರೆ – ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ
ಮಂಡ್ಯ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮದ್ದೂರು ನಗರಸಭೆಯ... ಓದನ್ನು ಮುಂದುವರಿಸಿ