ಯಕ್ಷಗಾನದಲ್ಲೊಂದು ಐತಿಹಾಸಿಕ ಮೈಲಿಗಲ್ಲು: ಜರ್ಮನ್ ಭಾಷೆಯಲ್ಲಿ ಮೊಟ್ಟ ಮೊದಲ ಯಕ್ಷಗಾನ ಪ್ರದರ್ಶನ
ಜರ್ಮನಿಯ ಮ್ಯುನಿಕ್ ನಗರದಲ್ಲಿ ಫೆಬ್ರವರಿ 28ರಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ಯುರೋಪ್ ಘಟಕದ ಕಾರ್ಯದರ್ಶಿ ಹಾಗೂ ಯಕ್ಷಗಾನ ಗುರು ಅಜಿತ್ ಪ್ರಭು ಅವರ ನೇತೃತ್ವದಲ್ಲಿ ಪುಟ್ಟ ಮಕ್ಕಳ ತಂಡವು ಮೊಟ್ಟ ಮೊದಲ ಬಾರಿಗೆ ಸಂಪೂರ್ಣ ಜರ್ಮನ್ ಭಾಷೆಯಲ್ಲಿ ಯಕ್ಷಗಾನವನ್ನು ಅದ್ಭುತವಾಗಿ ಪ್ರದರ್ಶಿಸಿ ಕರ್ನಾಟಕದ ಹೆಮ್ಮೆಯ ಕಲೆಗೆ ವಿಶ್ವಮಟ್ಟದಲ್ಲಿ ಮತ್ತೊಂದು ಗರಿಯನ್ನು ಏರಿಸಿದೆ.
ಕಾರ್ಯಕ್ರಮದ ಶುಭಾರಂಭ ಜರ್ಮನ್ ಅತಿಥಿಗಳು ದೀಪ ಬೆಳಗುವ ಮೂಲಕ ಸಾಂಸ್ಕೃತಿಕ ಏಕತೆ ಮತ್ತು ಪರಸ್ಪರ ಗೌರವದ ಸಂಕೇತವಾಗಿ ನೆರವೇರಿತು. ಬಳಿಕ “Yakshagana in Europe” ಎಂಬ 9 ನಿಮಿಷಗಳ ಯಕ್ಷಗಾನ ಡಾಕ್ಯುಮೆಂಟರಿ ಜರ್ಮನ್ ಭಾಷೆಯಲ್ಲಿ ಪ್ರದರ್ಶನಗೊಂಡು, ಯಕ್ಷಗಾನ ಕಲೆಯ ಪರಿಚಯ, ಅದರ ಮಹತ್ವ ಮತ್ತು ಇದಕ್ಕಾಗಿ ನಡೆದ ಶ್ರಮವನ್ನು ಮನಮುಟ್ಟುವ ರೀತಿಯಲ್ಲಿ ಪರಿಚಯಿಸಿತು.
ನಂತರ ಯಕ್ಷಧ್ರುವ ಯುರೋಪ್ ಪುಟ್ಟ ಮಕ್ಕಳ ತಂಡವು ಬಡಗುತಿಟ್ಟಿನ ಪ್ರತಿಷ್ಠಿತ ಹಿಮ್ಮೇಳದ ಧ್ವನಿಮುದ್ರಿತ ಸಹಾಯದೊಂದಿಗೆ ಸಂಪೂರ್ಣ ಜರ್ಮನ್ ಭಾಷೆಯ ಸಂಭಾಷಣೆಯ ಯಕ್ಷಗಾನ ಪ್ರದರ್ಶನ ನೀಡಿತು. ಕನ್ನಡದ ಪರಂಪರೆಯ ಈ ಮಹತ್ವದ ಕಲೆಯನ್ನು ಜರ್ಮನಿಯ ನೆಲದಲ್ಲಿ ಜರ್ಮನ್ ಭಾಷೆಯಲ್ಲಿ ಪ್ರದರ್ಶಿಸುವ ಮೂಲಕ ಒಂದು ಹೊಸ ಇತಿಹಾಸವೇ ಬರೆಯಲಾಯಿತು.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ತುಂಬಿದ ಸಭಾಂಗಣದಲ್ಲಿ 80 ಶೇಕಡಕ್ಕೂ ಹೆಚ್ಚು ಪ್ರೇಕ್ಷಕರು ಜರ್ಮನ್ ನಾಗರಿಕರಾಗಿದ್ದು, ಅವರು ಮೊದಲ ಬಾರಿಗೆ ಯಕ್ಷಗಾನವನ್ನು ಅನುಭವಿಸಿದರು. ಪ್ರದರ್ಶನದ ಅಂತ್ಯದಲ್ಲಿ ಪ್ರೇಕ್ಷಕರು ನಿಂತು ಕರತಾಡನ (Standing Ovation) ನೀಡಿದ್ದು, ವಿಶೇಷವಾಗಿ ಜರ್ಮನ್ ಮಕ್ಕಳಿಂದ ವ್ಯಕ್ತವಾದ ಸಂತೋಷ ಮತ್ತು ಪ್ರಶಂಸೆ ಈ ಪ್ರಯತ್ನದ ಮಹತ್ವವನ್ನು ಮತ್ತಷ್ಟು ಎತ್ತಿಹಿಡಿಯಿತು.
ಈ ಐತಿಹಾಸಿಕ ಪ್ರದರ್ಶನಕ್ಕೆ ಪ್ರತ್ಯಕ್ಷವಾಗಿಯೂ ಹಾಗೂ ಪರೋಕ್ಷವಾಗಿಯೂ ಸಹಕರಿಸಿದ ಮಕ್ಕಳ ಪೋಷಕರು, ಸ್ವಯಂಸೇವಕರು, ಬೆಂಬಲಿಗರು, ಹಿಮ್ಮೇಳದ ಕಲಾವಿದರು ಮತ್ತು ಹಿತೈಷಿಗಳಿಗೆ ಯಕ್ಷಧ್ರುವ ಯುರೋಪ್ ತಂಡವು ತನ್ನ ಆಳವಾದ ಕೃತಜ್ಞತೆಗಳನ್ನು ಸಲ್ಲಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬಿಹಾರ ರಾಜಕೀಯ ಶಾಕ್: ನಿತೀಶ್ ಕುಮಾರ್ CM ಹುದ್ದೆ ತ್ಯಜಿಸಿ ರಾಜ್ಯಸಭೆಗೆ?
ನವದೆಹಲಿ: ಬಿಹಾರ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಸಂಭವಿಸಬಹುದೆಂದ... ಓದನ್ನು ಮುಂದುವರಿಸಿ
ಅಮೆರಿಕ ಭೂಆಧಾರಿತ ICBM ಪರೀಕ್ಷೆ: ಜಾಗತಿಕ ಉದ್ವಿಗ್ನತೆ – 3ನೇ ಮಹಾಯುದ್ಧ ಭಯ?
ವಾಷಿಂಗ್ಟನ್: ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸ... ಓದನ್ನು ಮುಂದುವರಿಸಿ
ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆ ಮುಳುಗಿದ್ದು, ಕನಿಷ್ಠ 87 ಮೃತರು
ಕೊಲಂಬೋ: ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ದಾಳಿ ಜಾಗ... ಓದನ್ನು ಮುಂದುವರಿಸಿ
ಪಾಕಿಸ್ತಾನ ಇರಾನ್‌ಗೆ ಎಚ್ಚರಿಕೆ : ಸೌದಿ ಅರೇಬಿಯಾ ಮೇಲೆ ದಾಳಿ ಮಾಡಿದರೆ ಸುಮ್ಮನಿರಲ್ಲ
ಇಸ್ಲಾಮಾಬಾದ್: ಸೌದಿ ಅರೇಬಿಯಾ ಮೇಲೆ ದಾಳಿ ನಡೆದರೆ ಪಾಕಿಸ್ತಾನ ಸು... ಓದನ್ನು ಮುಂದುವರಿಸಿ
ಸಾಜಿದ್ ತರಾರ್ ವಿವಾದಿತ ಹೇಳಿಕೆ: “ಜಗತ್ತು ಇಸ್ರೇಲ್‌ನಿಂದ ಆರಂಭ, ಮುಸ್ಲಿಂ ರಾಷ್ಟ್ರಗಳು ಶರಣಾಗಬೇಕು
ಇಸ್ಲಾಮಾಬಾದ್: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ದಿನೇದಿನೇ... ಓದನ್ನು ಮುಂದುವರಿಸಿ
ಯುದ್ಧದ ಮಧ್ಯೆ ಭೂಕಂಪ: ಟೆಹ್ರಾನ್‌ನಲ್ಲಿ 4.3 ತೀವ್ರತೆಯ ಕಂಪನ, ಉದ್ವಿಗ್ನತೆ ಹೆಚ್ಚಳ
ಟೆಹ್ರಾನ್: ಇರಾನ್–ಇಸ್ರೇಲ್ ಸಂಘರ್ಷದ ತೀವ್ರತೆಯ ಮಧ್ಯದಲ್ಲಿ ಟೆಹ್... ಓದನ್ನು ಮುಂದುವರಿಸಿ
ಟ್ರಂಪ್ ಸುಂಕ ನೀತಿಗೆ ಸುಪ್ರೀಂ ಕೋರ್ಟ್ ಬ್ರೇಕ್; ಅಮೆರಿಕದಲ್ಲಿ ರಾಜಕೀಯ-ಆರ್ಥಿಕ ಚರ್ಚೆ ತೀವ್ರ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗೆ ಕಾನೂನು ಹಿನ್ನಡೆ ಎದುರ... ಓದನ್ನು ಮುಂದುವರಿಸಿ
ಯುದ್ಧ ಸಂಕಷ್ಟದಲ್ಲಿ ಕನ್ನಡಿಗರಿಗೆ ನೆರವು: ದುಬೈನಲ್ಲಿ ತುರ್ತು ಹೆಲ್ಪ್‌ಲೈನ್ ಕಾರ್ಯಾಚರಣೆ
ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಯುನೈಟೆಡ್ ಅರಬ್... ಓದನ್ನು ಮುಂದುವರಿಸಿ
ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ವಿದ್ಯಾರ್ಥಿನಿ ಸೇರಿ ಇಬ್ಬರ ಹತ್ಯೆ, 14ಕ್ಕೂ ಹೆಚ್ಚು ಗಾಯ
ನ್ಯೂಯಾರ್ಕ್: ಆಸ್ಟಿನ್‌ನಲ್ಲಿ ಭೀಕರ ಗುಂಡಿನ ದಾಳಿಯಲ್ಲಿ ಭಾರತೀಯ... ಓದನ್ನು ಮುಂದುವರಿಸಿ
ಮಧ್ಯಪ್ರಾಚ್ಯ ಉದ್ವಿಗ್ನತೆ: ಅಮೆರಿಕ-ಇಸ್ರೇಲ್ ಸೇನೆಗಳು ಇರಾನ್ 131 ನಗರಗಳಿಗೆ ದಾಳಿ ನಡೆಸಿ 742 ನಾಗರಿಕರ ಮೇಲೆ ಪರಿಣಾಮ
ಟೆಹ್ರಾನ್ / ಟೆಲ್ ಅವೀವ್: ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಇರಾ... ಓದನ್ನು ಮುಂದುವರಿಸಿ