ಸಿಸಿಟಿವಿ ದೃಶ್ಯಗಳು ಬೆಳಕು : ಫಿಲ್ಮಿ ಶೈಲಿಯ ಪೆಟ್ರೋಲ್ ಬಂಕ್ ದರೋಡೆ – ಐವರ ಬಂಧನ

ಮೈಸೂರು: ಹುಣಸೂರು ತಾಲೂಕಿನ ಕಿರುಮುದ್ದನಹಳ್ಳಿ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ನಡೆದ ಫಿಲ್ಮಿ ಶೈಲಿಯ ದರೋಡೆ ಪ್ರಕರಣವನ್ನು ಬಿಳಿಕೆರೆ ಪೊಲೀಸರು ಭೇದಿಸಿ ಐವರನ್ನು ಬಂಧಿಸಿದ್ದಾರೆ. ತನಿಖೆ ವೇಳೆ ದರೋಡೆ ಪ್ಲಾನ್ ಮಂಡ್ಯದ ಸೆಂಟ್ರಲ್ ಜೈಲಿನಲ್ಲಿ ರೂಪುಗೊಂಡಿತ್ತು ಎಂಬ ಅಚ್ಚರಿಯ ಮಾಹಿತಿ ತಿಳಿಯಿತು.

 

ಫೆಬ್ರವರಿ 12ರಂದು ರಾತ್ರಿ 10 ಗಂಟೆಯ ನಂತರ, ಪೆಟ್ರೋಲ್ ಬಂಕ್ ಮುಚ್ಚಿ ಸಿಬ್ಬಂದಿ ಹಣ ಎಣಿಸುತ್ತಿದ್ದಾಗ ಹಳೆಯ ಮಾದರಿಯ ಸ್ಕೋಡಾ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ಏಕಾಏಕಿ ಕಚೇರಿಗೆ ನುಗ್ಗಿ ಮಚ್ಚು ಮತ್ತು ಡ್ರಾಗರ್ ತೋರಿಸಿ ಸಿಬ್ಬಂದಿ ಅಜಯ್ ಕುಮಾರ್ ಹಾಗೂ ದಿನೇಶ್ ಮೇಲೆ ಹಲ್ಲೆ ನಡೆಸಿ ಹಣ ದೋಚಿದರು.

 

ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಧಾರದ ಮೇಲೆ ಮಂಡ್ಯ ಮೂಲದ ಪ್ರಮುಖ ಆರೋಪಿ ಲಕ್ಷ್ಮಣ್ ಸೇರಿದಂತೆ ಚನ್ನಪಟ್ಟಣ ಮತ್ತು ಹಾಸನ ಮೂಲದ ಒಟ್ಟು ಐವರನ್ನು ಬಂಧಿಸಲಾಗಿದೆ. ಬಂಧಿತರಿಂದ ದರೋಡೆ ಮಾಡಿದ್ದ ಹಣ ಮತ್ತು ಕೃತ್ಯಕ್ಕೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ.

 

ಪೊಲೀಸರ ಪ್ರಕಾರ, ಮುಖ್ಯ ಆರೋಪಿ ಲಕ್ಷ್ಮಣ್ ಜೈಲಿನಲ್ಲಿ ಇದ್ದಾಗಲೇ ಉಳಿದ ಆರೋಪಿಗಳ ಪರಿಚಯವಾಗಿದ್ದು, ಜೈಲಿನಿಂದ ಹೊರಬಂದ ಬಳಿಕ ದರೋಡೆಗಾಗಿ ತಂಡದೊಂದಿಗೆ ಯೋಜನೆ ರೂಪಿಸಿದ್ದರು. ಮೊದಲು ಒಬ್ಬನು ನೀರು ಕುಡಿಯುವ ನೆಪದಲ್ಲಿ ಬಂಕ್ ಪರಿಶೀಲನೆ ನಡೆಸಿ, ನಂತರ ಪೇಟಿಎಂ ಸ್ಕ್ಯಾನರ್ ಫೋಟೋ ತೆಗೆದುಕೊಂಡು ತಂಡದೊಂದಿಗೆ ಬಂದು ದರೋಡೆ ನಡೆಸಿದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

ಬಿಳಿಕೆರೆ ಪೊಲೀಸ್ ಚಾಣಾಕ್ಷ ಕಾರ್ಯಾಚರಣೆಯಿಂದ ಫಿಲ್ಮಿ ಶೈಲಿಯ ದರೋಡೆ ನಡೆಸಿದ ಆರೋಪಿಗಳು ಈಗ ಜೈಲು ಸೇರಿದ್ದು, ಜಿಲ್ಲೆಯಲ್ಲಿ ಆತಂಕಿತ ಜನರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುತ್ತಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

6 hours ago

   
Image 1
Image 1
ಬೆಂಗಳೂರು ನಗರ

ರೋಚಕ ಕಳ್ಳತನ : 3 ಕೋಟಿ ಚಿನ್ನ ಕಳ್ಳತನ ಅಮೆರಿಕ ಮಾಲೀಕರ ಮನೆ ತಿನ್ನಾಟ 6 ತಿಂಗಳ ಸ್ಕೆಚ್ ಐನಾತಿ ಆರೋಪಿ ಬಂಧನ

ಬೆಂಗಳೂರು: ಸಿನಿಮಾ ಶೈಲಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಬೆಳಗಾವಿ

ಫೇಸ್ಬುಕ್ ಮೂಲಕ ಶ್ರೀಮಂತರನ್ನು ಗುರಿ ಮಾಡಿ ಹನಿಟ್ರ್ಯಾಪ್ ನಡೆಸಿದ ಮಹಿಳೆ ಬಂಧನ

ಬೆಳಗಾವಿ: ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತ ವ್ಯಕ್ತಿಗಳನ್ನು ಬಲ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಚಿಕ್ಕಬಳ್ಳಾಪುರ

ಪ್ರೇಮ ವಿವಾಹ ಅಸಮಾಧಾನಕ್ಕೆ 40 ದಿನದ ಮಗುವನ್ನು ಕೊಲೆ ಮಾಡಿದ ಅಜ್ಜಿ

ಚಿಕ್ಕಬಳ್ಳಾಪುರ: ಕೇವಲ 40 ದಿನದ ಹಸುಗೂಸನ್ನು ಕತ್ತು ಹಿಸುಕಿ ಹತ್... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ರಾಯಚೂರು

ಬಟ್ಟೆ ಖರೀದಿಗೆ ಹೋದ ಬಾಲಕಿಗೆ ವಿದ್ಯುತ್ ಶಾಕ್: : ಭಯದಿಂದ ಶವವನ್ನು ಕೆರೆಗೆ ಎಸೆದ ಸ್ನೇಹಿತರು

ರಾಯಚೂರು: ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭದ ಹಿನ್ನಲೆಯಲ್ಲಿ, ಗುಂ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

ಚಿನ್ನಾಭರಣ ದೋಚಿದ ಕ್ಯಾಬ್ ಚಾಲಕ ಹೆಬ್ಬಾಳದಲ್ಲಿ ಬಂಧಿತ

ಬೆಂಗಳೂರು: ಹೆಬ್ಬಾಳ ಪೊಲೀಸರು ತಮ್ಮ ಮನೆಗೆ ನುಗ್ಗಿ ಚಿನ್ನಾಭರಣ ಕ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ತಾಲ್ಲೂಕು

ಆನೇಕಲ್‌ನಲ್ಲಿ ಅಪಹರಣಗೊಂಡ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಬರ್ಬರ ಹತ್ಯೆ – ತಮಿಳುನಾಡಿನಲ್ಲಿ ಶವ ಪತ್ತೆ

ಆನೇಕಲ್: ಆನೇಕಲ್‌ನಲ್ಲಿ ಅಪಹರಣಗೊಂಡಿದ್ದ ರಿಯಲ್ ಎಸ್ಟೇಟ್ ಏಜೆಂಟ್... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ಬೆಂಗಳೂರು ನಗರ

6 ಸಾವಿರ ರೂ. ಲಂಚ ಸ್ವೀಕರಿಸುವಾಗ ನೇತ್ರ ವೈದ್ಯೆ ಲೋಕಾಯುಕ್ತ ಬಲೆಗೆ

ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ನೇತ್ರ ಚಿಕಿತ್ಸಕಿಯಾಗಿ ಕಾರ್ಯನಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಸ್ಕೂಟರ್ ವಿಚಾರಕ್ಕೆ ಜಗಳ – ಯುವತಿ ಹಾಗೂ ಪೋಷಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪಿ ಬಂಧನ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ತಾರಕಕ್ಕೇರಿ, ಯುವ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಕಾರಾಗೃಹಗಳಲ್ಲಿ ಕೈದಿಗಳ ವಿಶೇಷ ಸಂದರ್ಶನಕ್ಕೆ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳನ್ನು ಭೇಟಿ ಮಾಡುವ ವಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಯಾದಗಿರಿ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಪ್ರಕರಣ: ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ವಜಾ

ಯಾದಗಿರಿ: ಯಾದಗಿರಿ ಜಿಲ್ಲಾ ವಿಶೇಷ ಸತ್ರ ನ್ಯಾಯಾಲಯವು ಮಲ್ಲಿಕಾರ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1