ಶಿಕ್ಷಕರ ನಿರ್ಲಕ್ಷ್ಯ: ಬಾಲಕಿ ಬೆರಳು ಕಟ್ – ಬಿಇಓ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್
ತುಮಕೂರು: ಜಿಲ್ಲಾ ಗ್ರಾಮಾಂತರ ಗೂಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ದುರ್ಘಟನೆ ಪೋಷಕರಲ್ಲಿ ಭಾರೀ ಆತಂಕ ಮೂಡಿಸಿದೆ. ಮಧ್ಯಾಹ್ನದ ಬಿಸಿಯೂಟ ಸಮಯದಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿದೇವಿ ಬಲಗೈಯ ಎರಡು ಬೆರಳುಗಳನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಮಧ್ಯಾಹ್ನ ಸುಮಾರು ಒಂದು ಗಂಟೆ ವೇಳೆಗೆ, ಬಿಸಿಯೂಟಕ್ಕಾಗಿ ಸಾಲಿನಲ್ಲಿ ನಿಂತಿದ್ದ ಬಾಲಕಿ, ಮೂರನೇ ತರಗತಿ ಕೊಠಡಿಯ ಬಾಗಿಲಿಗೆ ಕೈ ಇಟ್ಟುಕೊಂಡಾಗ ಮತ್ತೊಬ್ಬ ವಿದ್ಯಾರ್ಥಿ ಬಾಗಿಲು ತಳ್ಳಿದ ಪರಿಣಾಮ ಬೆರಳುಗಳು ಕಟ್ ಆಗಿವೆ ಎಂದು ತಿಳಿದುಬಂದಿದೆ.
ಪೋಷಕರು ಶಾಲೆಯ ನಿರ್ಲಕ್ಷ್ಯಕ್ಕೆ ಗಂಭೀರ ಆರೋಪ ಮಾಡಿದ್ದಾರೆ. ಗಾಯದ ಸ್ಥಳಕ್ಕೆ ತಕ್ಷಣ ಸರಿಯಾದ ಚಿಕಿತ್ಸೆ ನೀಡದೇ ನೀರು ಸುರಿದು ಬ್ಯಾಂಡೇಜ್ ಹಾಕಲಾಗಿದೆ. ಘಟನೆ ಬಗ್ಗೆ ಪ್ರಶ್ನಿಸಿದಾಗ ಶಾಲಾ ಸಿಬ್ಬಂದಿ 2000 ರೂಪಾಯಿಯನ್ನು ಫೋನ್ ಪೇ ಮೂಲಕ ಕಳುಹಿಸಿದ್ದಾರೆಯೆಂಬುದೂ ಪೋಷಕರು ಆರೋಪಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಕಟ್ ಆದ ಬೆರಳುಗಳನ್ನು ತಂದುಕೊಟ್ಟರೆ ಮರುಜೋಡಣೆ ಸಾಧ್ಯವೆಂದು ತಿಳಿಸಿದ್ದರು. ಆದರೆ ಶಾಲೆಯಲ್ಲಿ ಆ ಬೆರಳುಗಳು ಲಭ್ಯವಿಲ್ಲವೆಂದು ಶಿಕ್ಷಕರು ತಿಳಿಸಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.
ಈ ಪ್ರಕರಣ ಸಂಬಂಧ ಬಿಇಓ ಹನುಮಂತಪ್ಪ, ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕಿ ರೇಣುಕಮ್ಮ ಹಾಗೂ ಸಿಆರ್‌ಪಿ ವೆಂಕಟೇಶ್ ವಿರುದ್ಧ ತುಮಕೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತನಿಖೆ ಮುಂದುವರಿಯುತ್ತಿದೆ. “ನನ್ನ ಮಗಳಿಗೆ ನ್ಯಾಯ ಬೇಕು” ಎಂದು ತಾಯಿ ಅಂಬಿಕಾ ಆಗ್ರಹಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನೆಲಮಂಗಲ
ರಾಜತಾಂತ್ರಿಕ ಪ್ರಯತ್ನ ಫಲ: ಟೊರಾಂಟೋದಲ್ಲಿ ಹತ್ಯೆಯಾದ ಚಂದನ್ ಕುಮಾರ್ ಶರೀರ ತಾಯ್ನಾಡಿಗೆ ಆಗಮ
ನೆಲಮಂಗಲ: ಕೆನಡಾದ ಟೊರೊಂಟೊ ನಗರದಲ್ಲಿ ಫೆಬ್ರವರಿ 7ರಂದು ನಡೆದ ಶೂ... ಓದನ್ನು ಮುಂದುವರಿಸಿ
ಸಿದ್ದರಾಮಯ್ಯ ಹೊರತಾಗಿ ಯಾರೇ ಸಿಎಂ ಆದರೂ ಸರ್ಕಾರ ನಿರ್ವಹಣೆ ಸಾಧ್ಯವಿಲ್ಲ: ಅಶೋಕ್ ಪಟ್ಟಣ್
ಕೊಪ್ಪಳ: “ಸಿದ್ದರಾಮಯ್ಯ ಮಾತ್ರವೇ ಸರ್ಕಾರವನ್ನು ಸಮರ್ಪಕವಾಗಿ ನಿರ... ಓದನ್ನು ಮುಂದುವರಿಸಿ
ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ – ಕಿಡ್ನಿ ಝೀರೋ ಟ್ರಾಫಿಕ್‌ಗೆ ರವಾನೆ
ವಿಜಯಪುರ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಂಗಾಂಗ ದಾನದ ಮೂಲಕ ಜೀವ ರ... ಓದನ್ನು ಮುಂದುವರಿಸಿ
ಪರಿಹಾರ ಹಣ ಕ್ಲೈಮ್ ಆಗದೇ ಚಿಕ್ಕಮಗಳೂರು ಬಸ್‌ಗಳು ಸೀಜ್ – ಪ್ರಯಾಣಿಕರು ನಡುರಸ್ತೆಗೆ ಇಳಿದರು
ಹಾಸನ: ಬೆಂಗಳೂರಿನಿಂದ ಶೃಂಗೇರಿ ಕಡೆಗೆ ಹೊರಟಿದ್ದ ಚಿಕ್ಕಮಗಳೂರು ಡ... ಓದನ್ನು ಮುಂದುವರಿಸಿ
89 ಪಿಜಿಗಳಿಗೆ ₹61 ಸಾವಿರ ದಂಡ, 19 ಕಿಚನ್‌ಗಳಿಗೆ ಬೀಗ – ಬಿಬಿಎಂಪಿ ಭರ್ಜರಿ ಕಾರ್ಯಾಚರಣೆ
ಬೆಂಗಳೂರು : ನಿಯಮ ಪಾಲಿಸದ ಪೇಯಿಂಗ್ ಗೆಸ್ಟ್ (PG) ವಸತಿಗೃಹಗಳ ವಿ... ಓದನ್ನು ಮುಂದುವರಿಸಿ
BPL ಕಾರ್ಡ್‌ದಾರರು, ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ.. 4 ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ
ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿರುವವರು ಹಾಗೂ ಸರ್ಕಾರಿ ನೌಕರರ... ಓದನ್ನು ಮುಂದುವರಿಸಿ
ಉದ್ಯಮಿ ಕಾಲಿಗೆ ಬೀಳುವಂತೆ ಬೆದರಿಕೆ ಆರೋಪ: HAL Police Station ಇನ್ಸ್‌ಪೆಕ್ಟರ್ ವಿರುದ್ಧ Karnataka High Courtಗೆ ಪ್ರಮಾಣಪತ್ರ
ಬೆಂಗಳೂರು: ಉದ್ಯಮಿ ಅರವಿಂದ್ ರೆಡ್ಡಿ ಅವರ ಕಾಲಿಗೆ ಬೀಳುವಂತೆ HAL... ಓದನ್ನು ಮುಂದುವರಿಸಿ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: Greater Bengaluru Authority ಆದೇಶ
ಬೆಂಗಳೂರು : ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಫೆಬ್ರವರಿ 15ರಂದು ನ... ಓದನ್ನು ಮುಂದುವರಿಸಿ
ರಬಕವಿ ಬನಹಟ್ಟಿ
“ಸಿಎಂ ಅಧಿಕಾರದಲ್ಲಿ ಕಳೆಯುವ ದಿನಗಳಿಗಿಂತ, ಜನರಿಗೆ ನೀಡಿದ ಫಲಿತಾಂಶವೇ ಮುಖ್ಯ: ಬಿವೈ ವಿಜಯೇಂದ್ರ”
ಬಾಗಲಕೋಟೆ: ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬನಹಟ್ಟಿ ನ... ಓದನ್ನು ಮುಂದುವರಿಸಿ
ನಾಳೆ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ವಿದ್ಯುತ್ ಕಡಿತ – ಬೆಸ್ಕಾಂ ಎಚ್ಚರಿಕೆ
ಬೆಂಗಳೂರು: ಬೆಸ್ಕಾಂ ನಾಳೆ ಫೆಬ್ರವರಿ 13ರಂದು ತುರ್ತು ನಿರ್ವಹಣಾ... ಓದನ್ನು ಮುಂದುವರಿಸಿ