ಸರ್ಕಾರಿ ಕಚೇರಿಯಲ್ಲೇ ದಲಿತ ಮಹಿಳೆ ಅವಮಾನ ಆರೋಪ: 3 MSIL ಅಧಿಕಾರಿಗಳ ವಿರುದ್ಧ ಪ್ರಕರಣ
ಬೆಂಗಳೂರು: MSIL ಚಿಟ್ ಫಂಡ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಮಹಿಳೆ ಮೇಲೆ ಗಂಭೀರ ಅವಮಾನ ಹಾಗೂ ಕಿರುಕುಳ ಆರೋಪ ಕೇಳಿಬಂದಿದ್ದು, ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಸಂತ್ರಸ್ತೆ ಕಳೆದ 8 ವರ್ಷಗಳಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸಂಸ್ಥೆಯ ಕೆಲವು ಹಿರಿಯ ಅಧಿಕಾರಿಗಳು ಪಿತೂರಿ ನಡೆಸಿ ಕೆಲಸದಿಂದ ತೆಗೆದುಹಾಕಲು ಸಂಚು ರೂಪಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
2025 ಸೆಪ್ಟೆಂಬರ್ 23ರಂದು “ಚೆಕ್ ಬುಕ್ ಕಳೆದುಹೋಗಿದೆ” ಎಂಬ ನೆಪದಲ್ಲಿ ವಿಚಾರಣೆಗಾಗಿ ಸಂಜೆ ವೇಳೆ ಕರೆದೊಯ್ಯಲಾಗಿದೆ. ಈ ವೇಳೆ ಸೆಕ್ಯೂರಿಟಿ ಸಿಬ್ಬಂದಿ ಮೂಲಕ ಪ್ರತ್ಯೇಕ ಕೋಣೆಗೆ ಕರೆದೊಯ್ದು, ಅವರ ಇಚ್ಛೆಗೆ ವಿರುದ್ಧವಾಗಿ ತಪಾಸಣೆ ನಡೆಸಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ಹಲವು ಗಂಟೆಗಳ ಕಾಲ ಅಕ್ರಮವಾಗಿ ಅಲ್ಲೇ ಇರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಮಹಿಳೆ ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಜಾತಿ ನಿಂದನೆ ಮಾಡಲಾಗಿದೆ ಎಂದು ಅವರು ದೂರಿದ್ದಾರೆ. “ನಾವು ಹೇಳಿದಂತೆ ಕೇಳಿದರೆ ಮಾತ್ರ ಕೆಲಸ ಮುಂದುವರಿಯುತ್ತದೆ” ಎಂದು ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ಹೇಳಿದ್ದಾರೆ. ಇದೇ ವೇಳೆ ಲೈಂಗಿಕ ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡಲಾಗಿದೆ ಎಂಬ ಆರೋಪವೂ ಹೊರಬಿದ್ದಿದೆ.
ಇದಕ್ಕೆ ಪ್ರತಿಯಾಗಿ MSIL ಅಧಿಕಾರಿಗಳೂ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಚೆಕ್ ದುರುಪಯೋಗ ಮಾಡಿಕೊಂಡು ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಸಂತ್ರಸ್ತೆ DCRE ಗೆ ದೂರು ನೀಡಿದ್ದು, ವಿಧಾನಸೌಧ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಇನ್ನೂ ಹೊರಬರಬೇಕಿದ್ದು, ತನಿಖೆ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಾಣಿಕ್ಯಧಾರಾ ದುರಂತ: 3 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತ... ಓದನ್ನು ಮುಂದುವರಿಸಿ
ಮದ್ದೂರು
ರೌಡಿಶೀಟರ್ ಯಶ್ವಂತ್ ಹತ್ಯೆ: ಆರೋಪಿಗಳ ಹೆಡೆಮುರಿ ಕಟ್ಟಿದ ಮದ್ದೂರು ಪೊಲೀಸರು
ಮದ್ದೂರು: ಸಿಗರೇಟ್ ಎಂಬ ಸಾಮಾನ್ಯ ವಿಷಯದಿಂದ ಆರಂಭವಾದ ಗಲಾಟೆ ಕೊಲ... ಓದನ್ನು ಮುಂದುವರಿಸಿ
ಕಳ್ಳತನಕ್ಕೂ ಮುನ್ನ ದೇವರಿಗೆ ನಮಸ್ಕಾರ: ದೇವಾಲಯದ ಹುಂಡಿ ಕಳವು ಸಿಸಿಟಿವಿಯಲ್ಲಿ ಸೆರೆ
ಚಾಮರಾಜನಗರ: ಕಳ್ಳರಿಗೆ ಭಯವೇ ಇಲ್ಲ ಎಂಬ ಮಾತು ಸಾಮಾನ್ಯ. ಆದರೆ ಗು... ಓದನ್ನು ಮುಂದುವರಿಸಿ
“ಝಾಂಬಿ ಡ್ರಗ್” ಸುಳ್ಳು ವಿಡಿಯೋ ವೈರಲ್: ದುನಿಯಾ ವಿಜಯ್ ಸೇರಿದಂತೆ 25 ಮಂದಿಗೆ ಪೊಲೀಸರ ನೋಟಿಸ್
ಬೆಂಗಳೂರು: “ಝಾಂಬಿ ಡ್ರಗ್” ಹೆಸರಿನಲ್ಲಿ ವೈರಲ್ ಆದ ವಿಡಿಯೋಗೆ ಸಂ... ಓದನ್ನು ಮುಂದುವರಿಸಿ
6 ವರ್ಷದ ಪ್ರೀತಿ ಅಂತ್ಯ – ಮದುವೆ ನಿರಾಕರಣೆಗೆ ಯುವಕ ಆತ್ಮಹತ್ಯೆ
ಬೆಂಗಳೂರು: ಪ್ರೀತಿಯ ವಿಚಾರದಲ್ಲಿ ಮನನೊಂದು ಯುವಕ ಆತ್ಮಹತ್ಯೆ ಮಾಡ... ಓದನ್ನು ಮುಂದುವರಿಸಿ
‘ಜೋಂಬಿ ಡ್ರಗ್’ ಆರೋಪಕ್ಕೆ ಬ್ರೇಕ್ – ಪೊಲೀಸರಿಂದ ಸ್ಪಷ್ಟನೆ
ಬೆಂಗಳೂರು: ನಗರದಲ್ಲಿ ‘ಜೋಂಬಿ ಡ್ರಗ್’ ನಶೆಯಲ್ಲಿ ವ್ಯಕ್ತಿ ತೇಲಾಡ... ಓದನ್ನು ಮುಂದುವರಿಸಿ
ಅಪ್ರಾಪ್ತೆಯ ಮೇಲಿನ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಮಂಡ್ಯ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲ... ಓದನ್ನು ಮುಂದುವರಿಸಿ
ಆನೇಕಲ್ ಜಾತ್ರೆಯಲ್ಲಿ ಅಪಘಾತ : ಪಲ್ಲಕ್ಕಿ ಟ್ರ್ಯಾಕ್ಟರ್ ಹರಿದು ಯುವಕ ಸಾವು
ಆನೇಕಲ್: ತಾಲೂಕಿನ ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
“ಬಾಲ ಬಿಚ್ಚಿದರೆ ಗುಂಡಾ ಕಾಯ್ದೆ” – 450ಕ್ಕೂ ಹೆಚ್ಚು ರೌಡಿಗಳಿಗೆ ಕಮಿಷನರ್ ಶಶಿಕುಮಾರ್ ಖಡಕ್ ವಾರ್ನಿಂಗ್
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪುಡಿ ರೌಡಿಗಳ ಚಟುವಟಿ... ಓದನ್ನು ಮುಂದುವರಿಸಿ
ಪ್ರೇಯಸಿ ಸಾವಿನ ಸುದ್ದಿ ಕೇಳಿ ಪ್ರಿಯಕರ ಆತ್ಮಹತ್ಯೆ
ಬಾಗಲಕೋಟೆ: ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿ... ಓದನ್ನು ಮುಂದುವರಿಸಿ