ಸಚಿವ ಸ್ಥಾನಮಾನ ಹಿಂಪಡೆದ ಸರ್ಕಾರ: ಭೂಕಾಂತ್ ಪ್ರಕರಣಕ್ಕೆ ತೆರೆ

ಬೆಂಗಳೂರು: ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಒಟ್ಟು 54 ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿದ್ದ ರಾಜ್ಯ ಸರ್ಕಾರ, ಇದೀಗ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ನಿಯಮಿತ ಅಧ್ಯಕ್ಷ ಭೂಕಾಂತ್ ಅವರಿಗೆ ನೀಡಿದ್ದ ಸಚಿವ ಸಂಪುಟದ ಸ್ಥಾನಮಾನವನ್ನು ಹಿಂಪಡೆದಿದೆ. ಕಾಂಗ್ರೆಸ್ ಪಾಳಯದಲ್ಲಿ ವ್ಯಕ್ತವಾದ ತೀವ್ರ ಆಕ್ಷೇಪ ಹಾಗೂ ಕಾರ್ಯಕರ್ತರ ಅಸಮಾಧಾನದ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಬಿಜೆಪಿ ಹಿನ್ನೆಲೆಯ ನಾಯಕನಾದ ಭೂಕಾಂತ್ ಅವರಿಗೆ ಕಾಂಗ್ರೆಸ್ ಸರ್ಕಾರದಿಂದ ಸಚಿವ ಸ್ಥಾನಮಾನ ನೀಡಿರುವುದು ಪಕ್ಷದೊಳಗೇ ಪ್ರಶ್ನೆ ಎಬ್ಬಿಸಿತ್ತು. ಭೂಕಾಂತ್ ಅವರ ಪತ್ನಿ ಕೂಡ ಬಿಜೆಪಿಯಿಂದ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿರುವುದು ವಿವಾದಕ್ಕೆ ಮತ್ತಷ್ಟು ಇಂಧನ ನೀಡಿತ್ತು.

 

ಈವರೆಗೆ ಪ್ರಮುಖ ನಿಗಮಗಳ ಅಧ್ಯಕ್ಷರಾಗಿರುವ ಶಾಸಕರಿಗಷ್ಟೇ ಸಚಿವ ಸ್ಥಾನಮಾನ ಸೀಮಿತವಾಗಿದ್ದರೆ, ಇತ್ತೀಚೆಗೆ ಸರ್ಕಾರ ಎಲ್ಲಾ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರಿಗೆ ಈ ಸೌಲಭ್ಯ ವಿಸ್ತರಿಸುವಂತೆ ಆದೇಶ ಹೊರಡಿಸಿತ್ತು. ಆದರೆ ಬಿಜೆಪಿ ಮುಖಂಡನಿಗೆ ಈ ಸ್ಥಾನಮಾನ ನೀಡಿರುವುದು ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಮಾಜಿ ಸಂಸದ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಕೂಡ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. “ನಮ್ಮದು ಸರ್ವಧರ್ಮ ನೀತಿ. ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲರೂ ನಮ್ಮ ಪಕ್ಷದಲ್ಲೇ ಇದ್ದಾರೆ. ಹೀಗಾಗಿ ಹೊರಗಿನಿಂದ ಬಂದವರಿಗೆ ಮೊದಲ ಆದ್ಯತೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡನೇ ಆದ್ಯತೆ ನೀಡುವಂತಾಗಿದೆ,” ಎಂದು ಲೇವಡಿ ಮಾಡಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಸರ್ಕಾರ ಭೂಕಾಂತ್ ಅವರಿಗೆ ನೀಡಿದ್ದ ಸಚಿವ ಸ್ಥಾನಮಾನವನ್ನು ಹಿಂಪಡೆದಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

12 hours ago

   
Image 1
Image 1
ಬೆಂಗಳೂರು ನಗರ

ಪತ್ನಿ ದೂರವಿದ್ದಾಳೆ ಅಂದ್ರೆ ಸಾಕು? ಮಗುವಿನ ಪಿತೃತ್ವಕ್ಕೆ DNA ಪರೀಕ್ಷೆಗೆ ಹೈಕೋರ್ಟ್ ನಿರಾಕರಣೆ

ಬೆಂಗಳೂರು: ಜೀವನಾಂಶಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿ,... ಓದನ್ನು ಮುಂದುವರಿಸಿ


Edited by: ಬಾನು

38 minutes ago

   
Image 1
ಬೆಂಗಳೂರು ನಗರ

ನಾಡದ್ರೋಹಿ ಕಾಂಗ್ರೆಸ್ ಪಕ್ಷವನ್ನ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ: ತಮನ್ನಾ ಭಾಟಿಯಾ ನೇಮಕಕ್ಕೆ ಡಾ. ಕೆ. ಸುಧಾಕರ್ ಆಕ್ಷೇಪ

ಬೆಂಗಳೂರು: ಪ್ರಸಿದ್ಧ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಪ್ರತಿನಿಧಿ... ಓದನ್ನು ಮುಂದುವರಿಸಿ


Edited by: ಬಾನು

44 minutes ago

   
Image 1
ಬೆಂಗಳೂರು ನಗರ

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ: ಭಾರತೀಯ ರೈತರಿಗೆ “ಗಲ್ಲು ಶಿಕ್ಷೆ” – ಆಮ್ ಆದ್ಮಿ ಪಕ್ಷ ಟೀಕೆ

ಬೆಂಗಳೂರು: ಆಮ್ ಆದ್ಮಿ ಪಕ್ಷವು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

49 minutes ago

   
Image 1
ಬೆಂಗಳೂರು ನಗರ

ಅರಣ್ಯ ಪ್ರದೇಶದಲ್ಲಿ ಅಕ್ರಮ ಸಾಗಣೆ ಬಯಲು: 2,500 ಟನ್ ಕಬ್ಬಿಣದ ಅದಿರು ಜಪ್ತಿ!

ಬೆಂಗಳೂರು: ಕೇಂದ್ರ ಸರ್ಕಾರದ ಸ್ವಾಮ್ಯದ ಎನ್‌ಎಂಡಿಸಿ ಸಂಸ್ಥೆಗೆ ಸ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಚಾಮರಾಜನಗರ

ಹನೂರು

ಮಾದಪ್ಪನ ಭಕ್ತನ ಮೇಲೆ ಚಿರತೆ ದಾಳಿ: ಪ್ರಾಣಾಪಾಯದಿಂದ ಪಾರದ ಬಾಲಕ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಪೊನ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಗದಗ

ಲಕ್ಕುಂಡಿ ಪುರಾತನ ದೇವಸ್ಥಾನ ಆವರಣದಲ್ಲಿ ನಿಜ ನಾಗಸರ್ಪ ಪತ್ತೆ; ಕಾರ್ಮಿಕರಲ್ಲಿ ಆತಂಕ!

ಗದಗ: ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪುರಾತನ ದೇ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಮೈಸೂರು

ಯತೀಂದ್ರ ನಡೆಗಳಿಂದ ಸಿದ್ದರಾಮಯ್ಯ ಹೆಜ್ಜೆ ಹೆಜ್ಜೆಗೆ ಮುಜುಗರಕ್ಕೆ ಒಳಗಾಗಿದ್ದಾರೆ: ಪ್ರತಾಪ್ ಸಿಂಹ

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಶಿವಮೊಗ್ಗ

ಶಿಕಾರಿಪುರ

ಚಕ್ರ ತುಂಡಾಗಿ ತೋಟಕ್ಕೆ ನುಗ್ಗಿದ ಖಾಸಗಿ ಬಸ್; ಸ್ವಲ್ಪದರಲ್ಲೇ ಪಾರಾದ 25ಕ್ಕೂ ಹೆಚ್ಚು ಪ್ರಯಾಣಿಕರು!

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ಗ್ರಾಮದಲ್ಲಿ ಖಾಸಗಿ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಚಿಕ್ಕಬಳ್ಳಾಪುರ

17 ವರ್ಷದ ಬಾಲಕಿ ಕಲ್ಯಾಣಿಯ ನಿಗೂಢ ಸಾವು; ಸ್ಮಶಾನ ಸೇರಬೇಕಿದ್ದ ಶವ ಆಸ್ಪತ್ರೆಯ ಶವಗಾರಕ್ಕೆ ಹೋಗಿದ್ದೇಕೆ?

ಚಿಕ್ಕಬಳ್ಳಾಪುರ: ಜಿಲ್ಲಾ ಚಿಕ್ಕಬಳ್ಳಾಪುರದಲ್ಲಿ 17 ವರ್ಷದ ಬಾಲಕಿ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಮೈಸೂರು

ನಂಜನಗೂಡು

“ಗ್ರಾಮ ದೇವತೆ ಜಾತ್ರೆ: ಮಹಿಳೆಯರ ವಿಡಿಯೋ ಚಿತ್ರೀಕರಣ, ಕುಡಿದು ಗಲಾಟೆ ಮಾಡಿದ್ರೆ ₹30,000 ದಂಡ”

ಮೈಸೂರು: ನಂಜನಗೂಡು ತಾಲ್ಲೂಕಿನ ಗೋಳೂರು ಗ್ರಾಮದಲ್ಲಿ ನಡೆಯಲಿರುವ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1