ಪ್ರಶ್ನೆಗಳಿಗೆ ವಿಳಂಬ ಉತ್ತರ – ಅಧಿಕಾರಿಗಳಿಗೆ ಸಭಾಧ್ಯಕ್ಷ ಯು.ಟಿ. ಖಾದರ್ ಸೂಚನೆ
ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ಸರ್ಕಾರದ ಗಮನ ಸೆಳೆಯಲು ಶಾಸಕರು ಸಲ್ಲಿಸುವ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ನಿಗದಿತ ಸಮಯದಲ್ಲಿ ಉತ್ತರಗಳನ್ನು ನೀಡುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಉತ್ತರಗಳನ್ನು ಸಲ್ಲಿಸುವಂತೆ ಸಭಾಧ್ಯಕ್ಷ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ನಡೆದ ಕಲಾಪದ ವೇಳೆ ವಿವಿಧ ಇಲಾಖೆಗಳ ಉತ್ತರಗಳ ಸ್ಥಿತಿಗತಿಯನ್ನು ಸಭಾಧ್ಯಕ್ಷರು ಸದನಕ್ಕೆ ವಿವರಿಸಿದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 22 ಗಮನ ಸೆಳೆಯುವ ಸೂಚನೆಗಳಲ್ಲಿ ಕೇವಲ 6ಕ್ಕೆ ಮಾತ್ರ ಉತ್ತರ ನೀಡಿದೆ. ಆರ್ಥಿಕ ಇಲಾಖೆ 33ರಲ್ಲಿ 6ಕ್ಕೆ ಉತ್ತರ ನೀಡಿದ್ದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇಲಾಖೆ 9ರಲ್ಲಿ ಒಂದಕ್ಕೂ ಉತ್ತರ ನೀಡಿಲ್ಲ.
ಯುವ ಸಬಲೀಕರಣ ಇಲಾಖೆ 10 ಪ್ರಶ್ನೆಗಳಿಗೆ ಒಂದೂ ಉತ್ತರ ನೀಡದಿರುವುದು ಗಮನಾರ್ಹ. ಸಹಕಾರ ಇಲಾಖೆ 12ರಲ್ಲಿ ಒಂದಕ್ಕೂ ಉತ್ತರ ನೀಡಿಲ್ಲ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾತ್ರ ಒಂದು ಪ್ರಶ್ನೆಗೆ ಒಂದು ಉತ್ತರ ನೀಡಿದೆ.
ಇನ್ನು ಜಲಸಂಪನ್ಮೂಲ ಇಲಾಖೆ 33ರಲ್ಲಿ 4ಕ್ಕೆ, ನಗರಾಭಿವೃದ್ಧಿ ಇಲಾಖೆ 23ರಲ್ಲಿ 8ಕ್ಕೆ ಉತ್ತರ ನೀಡಿದೆ. ಒಳಾಡಳಿತ ಇಲಾಖೆ 35ರಲ್ಲಿ 26ಕ್ಕೆ, ಕಾನೂನು ಇಲಾಖೆ 5ರಲ್ಲಿ 3ಕ್ಕೆ ಉತ್ತರ ನೀಡಿದೆ. ಪ್ರವಾಸೋದ್ಯಮ ಇಲಾಖೆ 25ರಲ್ಲಿ ಕೇವಲ ಒಂದಕ್ಕೆ ಮಾತ್ರ ಉತ್ತರ ನೀಡಿದ್ದರೆ, ಸಣ್ಣ ನೀರಾವರಿ ಇಲಾಖೆ 19ರಲ್ಲಿ 13ಕ್ಕೆ ಉತ್ತರ ನೀಡಿದೆ.
ಮಾಹಿತಿ ತಂತ್ರಜ್ಞಾನ ಇಲಾಖೆ ಮಾತ್ರ 2 ಪ್ರಶ್ನೆಗಳಿಗೆ 2ಕ್ಕೂ ಉತ್ತರ ನೀಡಿರುವುದಾಗಿ ಸಭಾಧ್ಯಕ್ಷರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ನಿಗದಿತ ಸಮಯಕ್ಕೆ ಉತ್ತರಗಳನ್ನು ನೀಡಲು ಹೆಚ್ಚಿನ ಗಮನಹರಿಸಬೇಕೆಂದು ಅವರು ಸೂಚಿಸಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚೀಲದಲ್ಲಿ ವೃದ್ಧನನ್ನು ತುಂಬಿಕೊಂಡು ಬಂದ ಅನುಮಾನಾಸ್ಪದರು..! ಪಾರ್ಸಲ್ ಮಾಡಿಸಲು ಒತ್ತಾಯ ಬೆಚ್ಚಿಬಿದ್ದ ಸಿಬ್ಬಂದಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಚ್ಚರಿಯ ಘಟನೆ ಬೆಳಕಿಗೆ ಬಂ... ಓದನ್ನು ಮುಂದುವರಿಸಿ
ಮದ್ದೂರು
“ಪ್ರತಿಭಟನೆ ಕೈ ಬಿಡುವ ಪ್ರಶ್ನೆಯೇ ಇಲ್ಲ”: ಮದ್ದೂರು ತಾಲ್ಲೂಕು ಆಡಳಿತಕ್ಕೆ ಗ್ರಾಮಸ್ಥರ ಎಚ್ಚರಿಕೆ
ಮಂಡ್ಯ: ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮ ಪಂಚಾಯಿತಿ ಕಚೇರ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ರೈಲ್ವೆ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ಇಲ್ಲ: ಕರವೇ ಪ್ರತಿಭಟನೆಯ ಹಿನ್ನೆಲೆ ಪರೀಕ್ಷೆ ಮುಂದೂಡಿಕೆ
ಹುಬ್ಬಳ್ಳಿ: ಭಾರತೀಯ ರೈಲ್ವೆ ಇಲಾಖೆಯ ಗ್ರೂಪ್ ‘ಸಿ’ ಮತ್ತು ‘ಡಿ’... ಓದನ್ನು ಮುಂದುವರಿಸಿ
ಕೋಲಾರದಲ್ಲಿ ಹಾಲು ಬೆಲೆ ಹೆಚ್ಚಳ: ಯುಗಾದಿ ಹಬ್ಬಕ್ಕೆ ಪ್ರೋತ್ಸಾಹ ಧನ ಘೋಷಣೆ
ಕೋಲಾರ: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾ ಸಹಕಾರಿ ಹ... ಓದನ್ನು ಮುಂದುವರಿಸಿ
ಬೆಳಗಾವಿ ತಂತ್ರಜ್ಞಾನ ಹಬ್: ಐಟಿ–ಸೆಮಿಕಂಡಕ್ಟರ್ ಪಾರ್ಕ್ ನಿರ್ಮಾಣದಿಂದ ಉದ್ಯೋಗಾವಕಾಶ ವೃದ್ಧಿ
ಬೆಂಗಳೂರು: ರಾಜ್ಯದ ಎರಡನೇ ರಾಜಧಾನಿಯೆಂದು ಪರಿಗಣಿಸಲ್ಪಟ್ಟಿರುವ ಬ... ಓದನ್ನು ಮುಂದುವರಿಸಿ
ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದ: ಸರ್ಕಾರ ಪರಿಗಣನೆ – ಶಿವಾನಂದ ಪಾಟೀಲ
ಬೆಂಗಳೂರು: ಮುಂದಿನ ಕಬ್ಬು ನುರಿಸುವ ಹಂಗಾಮಿನಿಂದ ಸಕ್ಕರೆ ಕಾರ್ಖಾ... ಓದನ್ನು ಮುಂದುವರಿಸಿ
ರಾಯಚೂರು-ಯಾದಗಿರಿ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ತಡೆಯಲು ಸರ್ಕಾರ ಪರಿಶೀಲನೆ: ಅಬಕಾರಿ ಸಚಿವರ ಹೇಳಿಕೆ
ಬೆಂಗಳೂರು: ರಾಜ್ಯಾದ್ಯಂತ ಅಕ್ರಮ ಮದ್ಯ ಮಾರಾಟ ಮತ್ತು ತಯಾರಿಕೆ ತಡ... ಓದನ್ನು ಮುಂದುವರಿಸಿ
ರಾಯಚೂರು ಜಿಲ್ಲೆಯಲ್ಲಿ ಹೊಸ KSRP ಪಡೆ ಸ್ಥಾಪನೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪರಿಶೀಲನೆ
ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಹೊಸ ಕೆ.ಎಸ್.ಆರ್.ಪಿ (KSRP) ಪ... ಓದನ್ನು ಮುಂದುವರಿಸಿ
ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಆಲಿಕಲ್ಲು ಮಳೆ: ಬಿಸಿಲಿಗೆ ಬ್ರೇಕ್, ಬೆಳೆಗಾರರಿಗೆ ಸಂಕಷ್ಟ
ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಗುಡುಗು, ಸಿ... ಓದನ್ನು ಮುಂದುವರಿಸಿ
“ಈ ಸರ್ಕಾರಕ್ಕೆ ನಾಚಿಕೆಯಾಗಬೇಕು”: ಸಣ್ಣ ಕೈಗಾರಿಕೆಗಳ ದತ್ತಾಂಶ ಇಲ್ಲದ ಕಾರಣ ಸರ್ಕಾರಕ್ಕೆ ಟಿ.ಎ. ಶರವಣರಿಂದ ಪರಿಷತ್‌ನಲ್ಲಿ ಕಿಡಿ
ವಿಧಾನ ಪರಿಷತ್‌ನಲ್ಲಿ, ಶಾಸಕ ಟಿ.ಎ. ಶರವಣ ಅವರು ಸಣ್ಣ ಕೈಗಾರಿಕೆಗಳ ಬಗ್ಗೆ ಸರ್ಕಾರದ ನ... ಓದನ್ನು ಮುಂದುವರಿಸಿ