ಫೋನ್ ಕರೆ ಹಿನ್ನೆಲೆ ಗಂಡ-ಹೆಂಡತಿ ಜಗಳ ದುರಂತ ಅಂತ್ಯ – 25 ವರ್ಷದ ವರಲಕ್ಷ್ಮಿ ಸಾವು

ಚಿಕ್ಕಬಳ್ಳಾಪುರ: ಸ್ನೇಹಿತೆಯ ಪ್ರಿಯಕರ ಮಾಡಿದ ಫೋನ್ ಕರೆ ಹಿನ್ನೆಲೆ ಗಂಡ-ಹೆಂಡತಿ ನಡುವೆ ಉಂಟಾದ ಗಲಾಟೆ ದುರಂತ ಅಂತ್ಯ ಕಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಆರ್. ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ 25 ವರ್ಷದ ವರಲಕ್ಷ್ಮಿ ಮೃತಪಟ್ಟಿದ್ದಾರೆ.

 

ಮಾಹಿತಿ ಪ್ರಕಾರ, ಮೃತ ವರಲಕ್ಷ್ಮಿಯ ಸ್ನೇಹಿತೆ ಶ್ರಾವಣಿಯ ಪ್ರಿಯಕರ ವರಲಕ್ಷ್ಮಿಯ ಮೊಬೈಲ್‌ಗೆ ಕರೆ ಮಾಡಿದ್ದಾನೆ. ಆದರೆ ಆ ಕರೆವನ್ನು ವರಲಕ್ಷ್ಮಿಯ ಗಂಡ ಗಂಗರಾಜ್ ರಿಸೀವ್ ಮಾಡಿದ್ದಾನೆ. ಈ ವೇಳೆ ಗಂಗರಾಜ್, ಪ್ರೇಮಿಗಳ ನಡುವೆ ಮಧ್ಯಸ್ಥಿಕೆ ವಹಿಸಬಾರದು ಎಂದು ಹೆಂಡತಿಗೆ ಬುದ್ಧಿವಾದ ಹೇಳಿ ಬೈದಿದ್ದಾನೆ ಎಂದು ತಿಳಿದುಬಂದಿದೆ.

 

ಈ ವಿಚಾರವಾಗಿ ದಂಪತಿ ನಡುವೆ ಗಲಾಟೆ ತಾರಕಕ್ಕೇರಿದ ಬಳಿಕ ವರಲಕ್ಷ್ಮಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಘಟನೆಯಿಂದ ಮೃತಳ ಕುಟುಂಬಸ್ಥರು ಆಕ್ರಂದನ ವ್ಯಕ್ತಪಡಿಸಿದ್ದಾರೆ.

 

ಇದೇ ವೇಳೆ ಗಂಗರಾಜನೇ ವರಲಕ್ಷ್ಮಿಯನ್ನು ನೇಣಿಗೆ ಹಾಕಿ ಕೊಲೆ ಮಾಡಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಮೃತಳ ಶವವನ್ನು ಸಕಾಲಕ್ಕೆ ತೋರಿಸಲಿಲ್ಲ ಎಂದು ಆರೋಪಿಸಿ ಪೆರೇಸಂದ್ರ ಪೊಲೀಸ್ ಠಾಣೆ ಹಾಗೂ ಗುಡಿಬಂಡೆ ತಾಲೂಕು ಆಸ್ಪತ್ರೆ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

11 hours ago

   
Image 1
Image 1
ಬೆಂಗಳೂರು ನಗರ

6 ಸಾವಿರ ರೂ. ಲಂಚ ಸ್ವೀಕರಿಸುವಾಗ ನೇತ್ರ ವೈದ್ಯೆ ಲೋಕಾಯುಕ್ತ ಬಲೆಗೆ

ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ನೇತ್ರ ಚಿಕಿತ್ಸಕಿಯಾಗಿ ಕಾರ್ಯನಿ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಸ್ಕೂಟರ್ ವಿಚಾರಕ್ಕೆ ಜಗಳ – ಯುವತಿ ಹಾಗೂ ಪೋಷಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪಿ ಬಂಧನ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ತಾರಕಕ್ಕೇರಿ, ಯುವ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಕಾರಾಗೃಹಗಳಲ್ಲಿ ಕೈದಿಗಳ ವಿಶೇಷ ಸಂದರ್ಶನಕ್ಕೆ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳನ್ನು ಭೇಟಿ ಮಾಡುವ ವಿ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಯಾದಗಿರಿ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಪ್ರಕರಣ: ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ವಜಾ

ಯಾದಗಿರಿ: ಯಾದಗಿರಿ ಜಿಲ್ಲಾ ವಿಶೇಷ ಸತ್ರ ನ್ಯಾಯಾಲಯವು ಮಲ್ಲಿಕಾರ್... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಳಗಾವಿ

ಅಂತಾರಾಷ್ಟ್ರೀಯ ಕಳ್ಳರ ಗ್ಯಾಂಗ್ ಹೈ-ಪ್ರೊಫೈಲ್ ಕಾರ್ಯಾಚರಣೆ – 21 ವಾಹನಗಳು ಜಪ್ತಿ

ಬೆಳಗಾವಿ: ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಅಂತಾರಾಷ್... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಮಂಡ್ಯ

ಕೌಟುಂಬಿಕ ಕಲಹಕ್ಕೆ ದಂಪತಿ ಆತ್ಮಹತ್ಯೆ – ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ ಮಗು ಪಾರು

ಮಂಡ್ಯ: ಕೌಟುಂಬಿಕ ಕಲಹದಿಂದ ಮನನೊಂದ ದಂಪತಿ ತಮ್ಮ ಎರಡು ವರ್ಷದ ಮಗ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಶವ ಪತ್ತೆ – ಪೊಲೀಸ್ ತನಿಖೆ

ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

“ನನಗೆ ಜೀವನ ಸಾಕಾಗಿದೆ”: ಚನ್ನಗಿರಿ ಶಾಸಕರ ಪಿಎ ಆತ್ಮಹತ್ಯೆ

ಬೆಂಗಳೂರು: ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ಶಿವಗಂಗಾ ಅವರ ವೈ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ತಾಲ್ಲೂಕು

ರಿಯಲ್ ಎಸ್ಟೇಟ್ ಏಜೆಂಟ್ ಅಪಹರಣ – ಮೂವರು ವಶಕ್ಕೆ, 7 ವಿಶೇಷ ತಂಡಗಳಿಂದ ಶೋಧ

ಆನೇಕಲ್: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಕರ್ಪೂರು ಗೇ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬಳ್ಳಾರಿ

ಬಳ್ಳಾರಿ ಖಾಸಗಿ ಶಾಲೆ ಹಾಸ್ಟೆಲ್‌ನಲ್ಲಿ ಭಯಂಕರ ಘಟನೆ: ವಿದ್ಯಾರ್ಥಿ ಕೊಲೆ, ಆರೋಪಿ ನಾಪತ್ತೆ

.ಬಳ್ಳಾರಿ : ನಗರದಖಾಸ್ತಿ ಶಾಲೆಯ ಹಾಸ್ಟೆಲ್‌ನಲ್ಲಿ ಭಯಂಕರ ಘಟನೆ ಸ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1