ಫೇಕ್ ಆ್ಯಪ್ ಸ್ಕ್ಯಾಮ್: ಸ್ಕ್ಯಾನ್ ಮಾಡಿದ್ರೂ ಹಣ ಖಾತೆಗೆ ಬರಲ್ಲ! ವ್ಯಾಪಾರಸ್ಥರೇ ಎಚ್ಚರ
ಬೆಂಗಳೂರು : ಯಲಹಂಕ ನ್ಯೂಟೌನ್ ಪ್ರದೇಶದಲ್ಲಿ ಅಂಗಡಿ ಮಾಲೀಕರನ್ನು ಗುರಿಯಾಗಿಸಿಕೊಂಡು ಹೊಸ ರೀತಿಯ ಆನ್‌ಲೈನ್ ಪೇಮೆಂಟ್ ವಂಚನೆ ಬೆಳಕಿಗೆ ಬಂದಿದೆ. ಗ್ರಾಹಕರಂತೆ ಬರುವ ಖದೀಮರು ಕಾಸ್ಟ್ಲಿ ವಸ್ತುಗಳನ್ನು ಖರೀದಿಸಿ, ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ಹಣ ಪಾವತಿಸಿದಂತೆ ತೋರಿಸಿ ಅಂಗಡಿಯಿಂದ ಜೂಟ್ ಆಗುತ್ತಿದ್ದಾರೆ. ಆದರೆ ಹಣ ಮಾತ್ರ ಅಂಗಡಿ ಮಾಲೀಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿಲ್ಲ.
ಹೇಗೆ ನಡೆಯುತ್ತದೆ ವಂಚನೆ?
ಮಾಸ್ಕ್ ಧರಿಸಿ ಅಂಗಡಿಗೆ ಬರುವ ಗ್ಯಾಂಗ್, ದುಬಾರಿ ವಸ್ತುಗಳನ್ನು ಆಯ್ಕೆ ಮಾಡುತ್ತದೆ. ಬಳಿಕ ಫೋನ್ ಪೇ ಅಥವಾ ಗೂಗಲ್ ಪೇ ರೀತಿಯ ಫೇಕ್ ಆ್ಯಪ್ ಬಳಸಿ ಸ್ಕ್ಯಾನ್ ಮಾಡಿ ಪಾವತಿ ಮಾಡಿದಂತೆ ತೋರಿಸುತ್ತಾರೆ. ಕೆಲವೊಮ್ಮೆ ಸ್ಕ್ಯಾನರ್ ಸೌಂಡ್ ಬಾಕ್ಸ್‌ನಲ್ಲೂ “ಕ್ರೆಡಿಟ್” ಎಂಬ ಧ್ವನಿ ಕೇಳಿಸುತ್ತದೆ. ಹಣ ಹೋಗಿರುವಂತೆ ಮೊಬೈಲ್ ಸ್ಕ್ರೀನ್‌ನಲ್ಲಿ ಕಾಣುತ್ತದೆ. ಆದರೆ ವಾಸ್ತವದಲ್ಲಿ ಬ್ಯಾಂಕ್ ಖಾತೆಗೆ ಒಂದು ರೂಪಾಯಿಯೂ ಜಮೆಯಾಗಿರುವುದಿಲ್ಲ.
ಪ್ರಕರಣಗಳ ವಿವರ
ಕೇಸ್ ನಂ. 01
ವಿನಾಯಕ ಮೊಬೈಲ್ ಅಂಗಡಿಯಲ್ಲಿ ₹7,000 ಮೌಲ್ಯದ ವಸ್ತು ಖರೀದಿ ಮಾಡಿ, ಪಾವತಿಸಿದ್ದಾಗಿ ತೋರಿಸಿ ಗ್ಯಾಂಗ್ ಪರಾರಿಯಾಗಿದೆ.
ಕೇಸ್ ನಂ. 02
ದಿನೇಶ್ ಮೊಬೈಲ್ ಅಂಗಡಿಯಲ್ಲಿ ₹15,000 ಮೌಲ್ಯದ ಒನ್‌ಪ್ಲಸ್ ಇಯರ್‌ಬಡ್ಸ್ ಖರೀದಿಸಿ ಇದೇ ತಂತ್ರದಿಂದ ಮೋಸ ಮಾಡಲಾಗಿದೆ.
ಕೇಸ್ ನಂ. 03
ಹಿಂದೆ ಬಿರಿಯಾನಿ ಅಂಗಡಿಯಲ್ಲೂ ಇದೇ ರೀತಿ ಮೋಸ ನಡೆದಿತ್ತು. ಮತ್ತೊಮ್ಮೆ ಬಂದು ಪಾವತಿ ಮಾಡಿದಾಗ, ಹಿಂದಿನ ಹಣ ಬಂದಿಲ್ಲ ಎಂಬುದು ಬೆಳಕಿಗೆ ಬಂದಿದೆ.
10ಕ್ಕೂ ಹೆಚ್ಚು ಅಂಗಡಿಗಳಿಗೆ ವಂಚನೆ
ಯಲಹಂಕ ನ್ಯೂಟೌನ್‌ನಲ್ಲಿ 10ಕ್ಕೂ ಹೆಚ್ಚು ಅಂಗಡಿಗಳಿಗೆ ಇದೇ ರೀತಿಯಲ್ಲಿ ಮೋಸ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮೊಬೈಲ್ ಅಸೋಸಿಯೇಷನ್ ವತಿಯಿಂದ ಯಲಹಂಕ ನ್ಯೂಟೌನ್ ಠಾಣೆಗೆ ದೂರು ನೀಡಲಾಗಿದ್ದು, ಕೆಲವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಫೇಕ್ ಆ್ಯಪ್‌ನ ಅಪಾಯ
ಫೋನ್ ಪೇ ಮಾದರಿಯಂತೆ ಕಾಣುವ ಈ ನಕಲಿ ಆ್ಯಪ್, ಕೋಟಿ ರೂಪಾಯಿ ವರೆಗೆ ಪಾವತಿ ಮಾಡಿದಂತೆ ತೋರಿಸುವ ಸಾಮರ್ಥ್ಯ ಹೊಂದಿದೆ. ಆದರೆ ಅದು ಕೇವಲ ಪ್ರದರ್ಶನ ಮಾತ್ರ; ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ.
ಎಚ್ಚರಿಕೆ
ವ್ಯಾಪಾರಸ್ಥರು ದೊಡ್ಡ ಮೊತ್ತದ ಆನ್‌ಲೈನ್ ವ್ಯವಹಾರ ಮಾಡುವ ಮೊದಲು ತಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕೇವಲ ಸ್ಕ್ರೀನ್‌ಶಾಟ್ ಅಥವಾ ಸೌಂಡ್ ಬಾಕ್ಸ್ ಧ್ವನಿಯನ್ನು ನಂಬಬೇಡಿ.
ಆನ್‌ಲೈನ್ ಪೇಮೆಂಟ್ ಮಾಡುವಾಗ ಜಾಗ್ರತೆ ಇರಲಿ – ಎಚ್ಚರವೇ ಸುರಕ್ಷತೆ!
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಹಿಳೆಯರ ಉಚಿತ ಬಸ್ ಪ್ರಯಾಣ: ಹಳೆಯ ಆಧಾರ್ ಬಿಟ್ಟು ಇನ್ಮುಂದೆ ಶಕ್ತಿ ಸ್ಮಾರ್ಟ್ ಕಾರ್ಡ್!
ಬೆಂಗಳೂರು : ಕರ್ನಾಟಕ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ... ಓದನ್ನು ಮುಂದುವರಿಸಿ
ಖಾಸಗಿ ಬಸ್‌ಗಳಲ್ಲಿ ಸುರಕ್ಷತಾ ಕ್ರಮ ಕಡ್ಡಾಯ: ಫೆಬ್ರವರಿ 28ರೊಳಗೆ ಎಲ್ಲಾ ನಿಯಮ ಪಾಲನೆ ಅಗತ್ಯ
ಬೆಂಗಳೂರು: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಸೆಂಟ್ರಲ್ ಇನ... ಓದನ್ನು ಮುಂದುವರಿಸಿ
“ಪ್ರಧಾನ ಮಂತ್ರಿ ಉಜ್ವಲ ಯೋಜನೆ: ಮಹಿಳೆಯರಿಗೆ ಉಚಿತ LPG ಸ್ಟೌವ್ & ಸಿಲಿಂಡರ್! ಹೀಗೆ ಅರ್ಜಿ ಸಲ್ಲಿಸಿ.”
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) – ಸಂಕ್ಷಿಪ್ತ ಮಾಹಿತಿ
... ಓದನ್ನು ಮುಂದುವರಿಸಿ
ಮೈಸೂರು–ಅರಸೀಕೆರೆ ರೈಲುಗಳಲ್ಲಿ ಕಾಲುವೆ ಕಾಮಗಾರಿಯ ಕಾರಣ ವಿಲಂಬ, ಕೆಲವು ರೈಲುಗಳು ರದ್ದು
ಮೈಸೂರು: ಫೆಬ್ರವರಿ 16ರ ಸೋಮವಾರ, ಹಬ್ಬನಘಟ್ಟ ಮತ್ತು ಅರಸೀಕೆರೆ ನ... ಓದನ್ನು ಮುಂದುವರಿಸಿ
ಸರ್ಜಾಪುರ–ಹೆಬ್ಬಾಳ ರೆಡ್ ಲೈನ್‌ಗೆ ಕೇಂದ್ರದ ಆಕ್ಷೇಪ: ಡಬಲ್ ಡೆಕ್ಕರ್ ಮಾದರಿಗೆ ವಿರೋಧ
ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ರಾಜ್ಯ–ಕ... ಓದನ್ನು ಮುಂದುವರಿಸಿ
ಹೆಬ್ಬಾಳ–ಸರ್ಜಾಪುರ ಮೆಟ್ರೋ ಕಾರಿಡಾರ್‌ಗೆ ತಡೆ: ಡಬಲ್ ಡೆಕ್ಕರ್ ಯೋಜನೆ ಮರುಪರಿಶೀಲನೆಗೆ ಕೇಂದ್ರ ಸೂಚನೆ
ಬೆಂಗಳೂರು: ಹೆಬ್ಬಾಳ–ಸರ್ಜಾಪುರ ಮೆಟ್ರೋ ಕಾರಿಡಾರ್ ಯೋಜನೆಗೆ ಕೇಂದ... ಓದನ್ನು ಮುಂದುವರಿಸಿ
ಬೆಂಗಳೂರಿಗರಿಗೆ ಸಿಕ್ತು ಸಿಹಿಸುದ್ದಿ! ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ತೊಂದರೆಗೆ ತೆರೆ: ಬೆಂಗಳೂರಿಗೆ 1750 ಹೊಸ ಎಲೆಕ್ಟ್ರಿಕ್ ಬಸ್‌ಗಳು!
ಬೆಂಗಳೂರು: ಶಕ್ತಿ ಯೋಜನೆ ಆರಂಭವಾದ ಬಳಿಕ ಬಿಎಂಟಿಸಿ ಬಸ್‌ಗಳಲ್ಲಿ... ಓದನ್ನು ಮುಂದುವರಿಸಿ
ವ್ಯಾಲೆಂಟೈನ್ಸ್ ಡೇಗೆ ಮಹಿಳೆಯರಿಗೆ ಗುಡ್ ನ್ಯೂಸ್ ..! ಬೆಂಗಳೂರಿನಲ್ಲಿ ಮಹಿಳೆಯರಿಗೆ ವಿಶೇಷ ‘ಸಖಿ ಆಟೋ’ ಸೇವೆ ಪ್ರಾರಂಭ
ಬೆಂಗಳೂರು: ಪ್ರೇಮಿಗಳ ದಿನದಂದು ಬೆಂಗಳೂರಿನಲ್ಲಿ ಮಹಿಳೆಯರಿಗೆ ವಿಶ... ಓದನ್ನು ಮುಂದುವರಿಸಿ
ಕೇಂದ್ರ ಸರ್ಕಾರ ಪಡಿತರಕ್ಕೆ ನಗದು ವರ್ಗಾವಣೆ ವ್ಯವಸ್ಥೆ: ಫಲಾನುಭವಿಗಳಿಗೆ ನೇರ ಲಾಭ
ಇಲ್ಲಿಯವರೆಗೆ ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳನ್ನು ಪಡಿತರ ಅಂಗಡಿಗಳ ಮೂಲಕ ವಿತರಿಸಲಾ... ಓದನ್ನು ಮುಂದುವರಿಸಿ
ಎಲಾನ್ ಮಸ್ಕ್ ಘೋಷಣೆ: ಮುಂದಿನ 10 ವರ್ಷಗಳಲ್ಲಿ ಚಂದ್ರನ ಮೇಲೆ ಸ್ವಾಯತ್ತ ನಗರ ನಿರ್ಮಾಣ
ಜಗತ್ತಿನಲ್ಲಿ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭೂಮಿಯ ಮೇಲೆ ವಾಸಕ... ಓದನ್ನು ಮುಂದುವರಿಸಿ