ಪವನ್ ಕುಮಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಂಜನ್ ಬಂಧನ: ಗುಂಡೇಟಿನಿಂದ ಗಾಯ
ಬೆಂಗಳೂರು: ರೌಡಿಶೀಟರ್ ಪವನ್ ಕುಮಾರ್ ಬರ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಂಜನ್‌ನ್ನು ಕಾಲಿಗೆ ಗುಂಡು ಹಾರಿಸುವ ಮೂಲಕ ಸಂಪಿಗೆಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಗಲೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಅಡಗಿದ್ದ ರಂಜನ್‌ನ್ನು ಬಂಧಿಸಲು ಇಂದು ಬೆಳಗ್ಗೆ ಸಂಪಿಗೆಹಳ್ಳಿ ಪೊಲೀಸರು ತೆರಳಿದ್ದರು.
ಈ ವೇಳೆ ಆರೋಪಿ ಮಾರಕಾಸ್ತ್ರ ಬಳಸಿ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ. ತಕ್ಷಣ ಎಚ್ಚೆತ್ತ ಇನ್ಸ್ಪೆಕ್ಟರ್ ವೆಂಕಟೇಶ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ರಂಜನ್‌ನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಫೆಬ್ರವರಿ 25ರ ರಾತ್ರಿ ಥಣಿಸಂದ್ರ ಸಮೀಪದ ಅಮರಜ್ಯೋತಿ ಲೇಔಟ್‌ನಲ್ಲಿ ಪವನ್ ಕುಮಾರ್ (28) ಅವರನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹೆಲ್ಮೆಟ್ ಧರಿಸಿ ಮೂರು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಿದ್ದರು.
ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ ಪವನ್ ಕುಮಾರ್, ಮೂರು ವರ್ಷಗಳ ಹಿಂದೆ ನಡೆದ ರೌಡಿಶೀಟರ್ ಕಪಿಲ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ. ಕಳೆದ ಮೇ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ, ಒಂದೂವರೆ ತಿಂಗಳ ಹಿಂದೆ ಬೇಕರಿ ಆರಂಭಿಸಿದ್ದನು.
ಕಪಿಲ್ ಹತ್ಯೆಯಾದ ಮಾದರಿಯಲ್ಲೇ ಪವನ್ ಕುಮಾರ್‌ನನ್ನೂ ಹೆಲ್ಮೆಟ್ ಧರಿಸಿದ ತಂಡ ಕೊಲೆಗೈದಿರುವುದು ಹಳೆಯ ವೈಷಮ್ಯವೇ ಕಾರಣವೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚಾಕುವಿನಿಂದ ಇರಿದು ವಿವಾಹಿತ ಪ್ರಿಯತಮೆ ಕೊಲೆಗೈದ ಪ್ರಿಯಕರ!
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ತೇಜಸ್ವಿನಿ ಎಂಬ ಮಹಿಳೆ ತ... ಓದನ್ನು ಮುಂದುವರಿಸಿ
ಲಕ್ಷ್ಮೇಶ್ವರ
ಆಸ್ತಿ ಕಲಹದಲ್ಲಿ ಮಗನಿಂದ ತಂದೆ ಕೊಲೆ – ಮದ್ಯಪಾನದ ಸಂದರ್ಭದಲ್ಲಿ ಹತ್ಯೆ
ಗದಗ: ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ಗೋವನಾಳ ಗ್ರಾಮದಲ್ಲಿ ಆಸ್ತಿ ಹಕ್ಕು ಸಂಬಂಧಿತ... ಓದನ್ನು ಮುಂದುವರಿಸಿ
ಕೌಟುಂಬಿಕ ಕಲಹದಿಂದ ಮನೋವೈದ್ಯ ತೀವ್ರ ಖಿನ್ನತೆಯಿಂದ ಆತ್ಮಹತ್ಯೆ
ಮಂಡ್ಯ, ಫೆಬ್ರವರಿ 28: ಕೆ.ಆರ್.ನಗರ ಮೂಲದ ಸುಖದೇವ್ (53), ಮೈಸೂರ... ಓದನ್ನು ಮುಂದುವರಿಸಿ
ಲಕ್ಷ್ಮೇಶ್ವರ
ಶಿಗ್ಲಿ ಗ್ರಾಮದಲ್ಲಿ ಯುವಕ ಕ್ರೂರ ಹತ್ಯೆ – ಶವ ಹೊಲದಲ್ಲಿ ಪತ್ತೆ
ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಯು... ಓದನ್ನು ಮುಂದುವರಿಸಿ
ಶ್ರೀರಂಗಪಟ್ಟಣ
ಬಲಮುರಿ ಪ್ರವಾಸದಲ್ಲಿ ನದಿ ಅಪಘಾತ : ಪ್ರವಾಸ ಮಧ್ಯೆ ನದಿ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು – ಮಂಡ್ಯ
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿಯಲ್ಲಿ ಕಾವೇರ... ಓದನ್ನು ಮುಂದುವರಿಸಿ
ಹಾಸನ: FD ಆಮಿಷದಲ್ಲಿ 3 ಕೋಟಿ ರೂ. ವಂಚನೆ – ಬ್ಯಾಂಕ್ ಮ್ಯಾನೇಜರ್ H. S. ಪೂಜಾ ಪರಾರಿಯಾಗುವ ಯತ್ನ
ಹಾಸನ: ನಿಗದಿತ ಠೇವಣಿ (FD) ಆಮಿಷದಲ್ಲಿ ವಂಚನೆ: 50ಕ್ಕೂ ಅಧಿಕ ಗ್... ಓದನ್ನು ಮುಂದುವರಿಸಿ
ಗುಂಡ್ಲುಗುರ್ಕಿ ಗ್ರಾಮದಲ್ಲಿ ವ್ಯಕ್ತಿ ಕಿಟಕಿಗೆ ನೇಣು ಬಿಗಿದು ಪತ್ತೆ – ಆತ್ಮಹತ್ಯೆ ಅಥವಾ ಕೊಲೆ?
ಚಿಕ್ಕಬಳ್ಳಾಪುರ: ಜಿಲ್ಲೆಯ ಗುಂಡ್ಲುಗುರ್ಕಿ ಗ್ರಾಮದಲ್ಲಿ ವ್ಯಕ್ತಿ... ಓದನ್ನು ಮುಂದುವರಿಸಿ
ಬಾಡಿಗೆ ಮನೆಯಲ್ಲಿ ಕೊಳೆತ ಶವ ಪತ್ತೆ: ಅನೈತಿಕ ಸಂಬಂಧಕ್ಕೆ ಸಂಬಂಧಿಸಿದ ಕೊಲೆ ಶಂಕೆ
ಬೆಂಗಳೂರು: ಬಾಗಲಗುಂಟೆ, ಮಂಜುನಾಥನಗರ 2ನೇ ರಸ್ತೆ, ವಿಜಯಲಕ್ಷ್ಮಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ವಸತಿ ಶಾಲೆಯ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಗಂಡನ ವಿಕೃತಿಗೆ ಹೆಂಡತಿ ಸಾಥ್!
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ... ಓದನ್ನು ಮುಂದುವರಿಸಿ
ಕೆಆರ್ ಪುರದಲ್ಲಿ ಬೈಕ್ ಕಳವು; ಕಳ್ಳನ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆ
ಬೆಂಗಳೂರು: ಕೆಆರ್ ಪುರದ ಕುಂದಲಹಳ್ಳಿ ಕಾಲೋನಿಯ 6ನೇ ಕ್ರಾಸ್‌ನಲ್ಲ... ಓದನ್ನು ಮುಂದುವರಿಸಿ