ಮುಸ್ಲಿಂ ಮಹಿಳೆಯೊಂದಿಗೆ ಇದ್ದೆಂದು ತಪ್ಪಾಗಿ ಭಾವಿಸಿ ಹಿಂದೂ ಯುವಕನ ಮೇಲೆ ಹಲ್ಲೆ

ಕೊಪ್ಪಳ : ಜಿಲ್ಲೆಯ ಗಂಗಾವತಿ ಬಸ್ ನಿಲ್ದಾಣದಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಇದ್ದ ಹಿಂದೂ ಯುವಕನನ್ನು ಗಮನಿಸಿದ ಕೆಲ ಮುಸ್ಲಿಂ ಯುವಕರು ಆತನ ಮೇಲೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಹಲ್ಲೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರಕರಣದಲ್ಲಿ ಹಲ್ಲೆಗೊಳಗಾದ ಯುವಕನನ್ನು ವೆಂಕಟೇಶ್ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

 

ಪೊಲೀಸ್ ಮಾಹಿತಿ ಪ್ರಕಾರ, ಬಸಾಪಟ್ಟಣ ಗ್ರಾಮದ ಅಜ್ಮೀರ್ ಮತ್ತು ಆಫೀಯಾ ದಂಪತಿ ನಡುವೆ ಜಗಳ ನಡೆದಿತ್ತು. ಈ ವೇಳೆ ಪಕ್ಕದ ಮನೆಯಲ್ಲಿ ವಾಸವಿದ್ದ ವೆಂಕಟೇಶ್ ಜಗಳ ಬಗೆಹರಿಸಲು ಮಧ್ಯಪ್ರವೇಶಿಸಿದ್ದರು. ಗಂಡನೊಂದಿಗೆ ಜಗಳವಾಡಿ ಮನೆಬಿಟ್ಟು ಮಕ್ಕಳ ಸಮೇತ ಹೊರಟಿದ್ದ ಆಫೀಯಾರನ್ನು ಮನವೊಲಿಸಿ ಕರೆತರಲು ಅಜ್ಮೀರ್, ವೆಂಕಟೇಶ್‌ಗೆ ಮನವಿ ಮಾಡಿದ್ದ ಎನ್ನಲಾಗಿದೆ.

 

ಅದನ್ನು ಅನುಸರಿಸಿ ವೆಂಕಟೇಶ್ ಆಫೀಯಾ ಮತ್ತು ಮಕ್ಕಳನ್ನು ಮನವೊಲಿಸಲು ಗಂಗಾವತಿ ಬಸ್ ನಿಲ್ದಾಣಕ್ಕೆ ತೆರಳಿದ ವೇಳೆ, ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಆಫೀಯಾ ಜೊತೆ ಕಂಡ ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಜಗಳ ತೀವ್ರಗೊಂಡಾಗ, ಅಜ್ಮೀರ್–ಆಫೀಯಾ ಕುಟುಂಬವು ವೆಂಕಟೇಶ್ ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

 

ಈ ಪ್ರಕರಣದಲ್ಲಿ ಅಮೀರ್, ಖಾಜಾಫೀರ್, ಇಂದ್ರಾವಲಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬರು ಎಸ್‌ಡಿಪಿಐ ಮುಖಂಡರಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಈ ಕುರಿತು ಎಸ್‌ಡಿಪಿಐ ಸದಸ್ಯರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಿಸಿ ವೆಂಕಟೇಶ್ ಮೇಲೆಯೂ ದೂರು ದಾಖಲಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಕುರಿತು ಪೊಲೀಸರು ಸಮಗ್ರ ತನಿಖೆ ಮುಂದುವರಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

23 hours ago

   
Image 1
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಚರಂಡಿ ಸ್ವಚ್ಛತೆ ಇಲ್ಲದೆ ನರಳುತ್ತಿರುವ ಗ್ರಾಮಸ್ಥರು – ಅಂಗನವಾಡಿ, ವಿದ್ಯುತ್ ಸಮಸ್ಯೆಗಳಿಗೂ ಉತ್ತರ ಇಲ್ಲ.

ಗುಡಿಬಂಡೆ: ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಶಿವಮೊಗ್ಗ

‘ಟಾರ್ಗೆಟ್ ನಾನು ಅಲ್ಲ, ನನ್ನ ಮಗಳು’ – ಸಿದ್ದಾಪುರ ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಮಹೇಶ್ ಸ್ಫೋಟಕ ಮಾತು

ಶಿವಮೊಗ್ಗ: ಸಿದ್ದಾಪುರ ವಸಂತ್ ನಾಯ್ಕ್ ಹತ್ಯೆ ಪ್ರಕರಣ ಸಂಬಂಧವಾಗಿ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ಗ್ರಾಮಾಂತರ

ಹೊಸಕೋಟೆ

ಹೊಸಕೋಟೆ ಫ್ಲೈಓವರ್ ಬಳಿ ಅಪಾಯಕಾರಿ ಬೈಕ್ ಸ್ಟಂಟ್; ಯುವಕರು ಭಯವಿಲ್ಲದಂತೆ ವ್ಹೀಲಿಂಗ್

ಬೆಂಗಳೂರು : ನಗರದಲ್ಲಿ ಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಉತ್ತರಕನ್ನಡ

ಕಾರವಾರ

ಸುಚಿತ್ರಾ ಮೊಬೈಲ್ ಕಂಗಾಲು: ಕೋಲಾರ, ಶಿವಮೊಗ್ಗ ಯುವಕರು ಇನ್‌ಸ್ಟಾಗ್ರಾಂ ಡಿಲೀಟ್ ಮಾಡಿ ಫೋನ್ ಸ್ವಿಚ್ ಆಫ್

ಕಾರವಾರ: ರೀಲ್ಸ್ ರಾಣಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಚಾಮರಾಜನಗರ

ಹನೂರು

ಚಿರತೆ ದಾಳಿಗೆ ನಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ಹೈಅಲರ್ಟ್, ಪಾದಯಾತ್ರೆಗೆ ಕಟ್ಟುನಿಟ್ಟಿನ ಭದ್ರತೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆ, ಹನೂರು ತಾಲೂಕು  ಮ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಳಗಾವಿ

ಮಹಿಳಾ ಅಧಿಕಾರಿಯ ಬೆಡ್ ರೂಮ್‌ನಲ್ಲಿ ಸೀಕ್ರೆಟ್ ಕ್ಯಾಮೆರಾ: ಖಾಸಗಿ ದೃಶ್ಯದಿಂದ ಬ್ಲ್ಯಾಕ್ ಮೇಲ್, ನಕಲಿ ಪತ್ರಕರ್ತರು ಬಂಧನ

ಬೆಳಗಾವಿ : ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಧಾರವಾಡ

ಹುಬ್ಬಳ್ಳಿ

ಮತಾಂತರ ಯತ್ನ ಆರೋಪ: ಆರೋಪಿಗಳ ಬಂಧನಕ್ಕೆ ಶ್ರೀರಾಮಸೇನೆ ಆಗ್ರಹ

ಹುಬ್ಬಳ್ಳಿ: ಮತಾಂತರ ಯತ್ನ, ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಆ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ಗ್ರಾಮಾಂತರ

ನೆಲಮಂಗಲ

ನೆಲಮಂಗಲದಲ್ಲಿ ಹೊತ್ತಿ ಉರಿದ ಐಷಾರಾಮಿ ಬಸ್; ಚಾಲಕ-ಸಿಬ್ಬಂದಿಯ ಚುರುಕಿನಿಂದ ತಪ್ಪಿದ ಭಾರೀ ಅನಾಹುತ

ನೆಲಮಂಗಲ: ಹನುಮಂತಪುರ–ಕೆರೆಕತ್ತಿಗನೂರು ಗೇಟ್ ಸಮೀಪ ಮಧ್ಯರಾತ್ರಿ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಳಗಾವಿ

ಮೈದಾನದ ಕ್ರಿಕೆಟ್ ಡ್ರಾಮಾ ಹೈಲೈಟ್: ಜಾರಕಿಹೊಳಿಯನ್ನು ‘ಕ್ಲೀನ್ ಬೋಲ್ಡ್’ ಮಾಡಿದ ಹೆಬ್ಬಾಳಕರ್..!

ಬೆಳಗಾವಿ : ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕರು ಇಂದು ಕ್ರಿಕೆ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಮಂಡ್ಯ

ರಾಜ್ಯಕ್ಕೆ ಏನೂ ಇಲ್ಲ, ಖಾಲಿ ಚೊಂಬು ಮೂರು ನಾಮ ಮಾತ್ರ! ಕೇಂದ್ರ ಬಜೆಟ್ ವಿರುದ್ಧ ಶಾಸಕ ಕೆ.ಎಂ.ಉದಯ್ ಕಿಡಿ

ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಓದನ್ನು ಮುಂದುವರಿಸಿ


Edited by: ಬಾನು

22 hours ago

   
Image 1