ಮೆಟ್ರೋ ದರ ಏರಿಕೆ ವಿಚಾರ ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ
ಬೆಂಗಳೂರು: ಮೆಟ್ರೋ ದರ ಏರಿಕೆ ವಿಷಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ “ನಾವು ಸತ್ಯ ಹೇಳ್ತೀವಿ” ಎಂದು ಹೇಳುತ್ತಾ ಜನರಿಗೆ ಸುಳ್ಳು ಹೇಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಮೆಟ್ರೋ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾಲು ಕೇವಲ 20 ಶೇಕಡಾ ಮಾತ್ರ ಎಂದು ರಾಜ್ಯ ಸರ್ಕಾರ ಹೇಳುತ್ತಿರುವುದನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರವೇ ಹೂಡಿಕೆ ಮಾಡುತ್ತಿದ್ದರೂ ಪ್ರತಿಯೊಂದು ವಿಚಾರಕ್ಕೂ ಕೇಂದ್ರ ಸರ್ಕಾರದ ಮೇಲೆ ದೋಷಾರೋಪಣೆ ಮಾಡುತ್ತಿದೆ ಎಂದು ಟೀಕಿಸಿದರು. “ಮೆಟ್ರೋ ದರ ನಿಗಧಿ ಮಾಡುವ ಅಧಿಕಾರ ಯಾರಿಗೆ ಇದೆ? ಎಲ್ಲವನ್ನೂ ಕೇಂದ್ರದ ಮೇಲೆ ಹಾಕುವ ಚಾಳಿ ರಾಜ್ಯ ಸರ್ಕಾರಕ್ಕೆ ಬಿಟ್ಟಿದೆ” ಎಂದು ಪ್ರಶ್ನಿಸಿದರು.
ಬೇರೆ ರಾಜ್ಯಗಳಲ್ಲಿ ಮೆಟ್ರೋ ದರ ಏರಿಕೆ ಆಗದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು, “ಇಲ್ಲಿ ನಮ್ಮದೇ ಹೆಚ್ಚಿನ ಪಾಲು ಅಂದ್ರೆ ಅಧಿಕಾರ ಯಾರ ಕೈಯಲ್ಲಿದೆ?” ಎಂದು ವ್ಯಂಗ್ಯವಾಡಿದರು. ಮುಖ್ಯಮಂತ್ರಿ ಅವರ ಹಲವಾರು ತಪ್ಪು ನಿರ್ಣಯಗಳು ಹಾಗೂ ಜನವಿರೋಧಿ ನೀತಿಗಳ ಹೊಣೆಯನ್ನು ಕೇಂದ್ರ ಸರ್ಕಾರದ ಮೇಲೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಜನರಿಗೆ ಗ್ಯಾರೆಂಟಿ ನೀಡಿದ್ದೇವೆ, ಆರ್ಥಿಕ ಶಕ್ತಿ ತುಂಬಿದ್ದೇವೆ ಎಂದು ಹೇಳಿಕೊಳ್ಳುತ್ತಿರುವುದನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ರಾಜ್ಯದ ತಲಾ ಆದಾಯ ಹೆಚ್ಚಾಗಿದೆ, ಜನ ಆರ್ಥಿಕವಾಗಿ ಶಕ್ತರಾಗಿದ್ದಾರೆ ಎಂಬುದನ್ನು ಜಾಹೀರಾತುಗಳ ಮೂಲಕ ಪದೇ ಪದೇ ಹೇಳಲಾಗುತ್ತಿದೆ ಎಂದು ಟೀಕಿಸಿದರು.
“ಜನರಿಗೆ ಯಾವುದೇ ತೊಂದರೆ ಇಲ್ಲ, ಜನ ಆರ್ಥಿಕವಾಗಿ ಚೆನ್ನಾಗಿದ್ದಾರೆ ಎಂಬ ಭ್ರಮೆಯಲ್ಲೇ ರಾಜ್ಯ ಸರ್ಕಾರ ಇದೆ. ಅದಕ್ಕಾಗಿ ಯಾವುದೇ ದರ ನಿಗಧಿ ಮಾಡಿದರೂ ಜನ ಖುಷಿಯಿಂದ ಕೊಡ್ತಾರೆ ಎನ್ನುವುದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ತಪ್ಪು ಊಹೆ” ಎಂದು ಕುಮಾರಸ್ವಾಮಿ ಹೇಳಿದರು. ಮೆಟ್ರೋ ದರ ಏರಿಕೆ ಸೇರಿದಂತೆ ಈ ಎಲ್ಲ ವಿಚಾರಗಳ ಕುರಿತು ಅಂತಿಮ ತೀರ್ಮಾನವನ್ನು ಜನರೇ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
"ಅಧಿಕಾರ ಹಂಚಿಕೆ ಒಪ್ಪಂದವಾಗಿದೆ – ಡಿಕೆಶಿ ಹೇಳಿದರೆ ಪ್ರಾಣ ಕೊಡೋದಕ್ಕೂ ಸಿದ್ದ: ಶಾಸಕ ಶಿವಗಂಗಾ ಬಸವರಾಜ್
ದಾವಣಗೆರೆ: ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ವಿಚ... ಓದನ್ನು ಮುಂದುವರಿಸಿ
ಗೌರಿಬಿದನೂರು: ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ಶಿಕ್ಷಕರ ಹಲ್ಲೆ ಎಂಟನೇ ತರಗತಿಯ ವಿದ್ಯಾರ್ಥಿ ಪ್ರಜ್ಞೆ ಕಳೆದುಕೊಂಡು ಖಾಸಗಿ ಆಸ್ಪತ್ರೆಗೆ ದಾಖಲು
ಚಿಕ್ಕಬಳ್ಳಾಪುರ : ಗೌರಿಬಿದನೂರು ನಗರದ ಖಾಸಗಿ ವಿದ್ಯಾನಿಧಿ ಶಾಲೆಯ... ಓದನ್ನು ಮುಂದುವರಿಸಿ
ಜಾತ್ರೆಗೆ ಕಡಿಯಲು ತಂದ ಆಡು ರೈತನ ಪಾಲಿಗೆ ವರ: ಒಂದೇ ಬಾರಿ 6 ಮರಿಗೆ ಜನ್ಮ
ಚಿಕ್ಕಮಗಳೂರು: ಚಂದ್ರಕಟ್ಟೆ ಪ್ರದೇಶದಲ್ಲಿ ಅಪರೂಪದ ಘಟನೆ ನಡೆದಿದೆ... ಓದನ್ನು ಮುಂದುವರಿಸಿ
ಪ್ರೇಯಸಿಯ ಖಾಸಗಿ ಕ್ಷಣಗಳ ಸೆರೆ: “ಇದು ಪ್ರೇಮವಲ್ಲ, ಅಪರಾಧ” ಎಂದ ಹೈಕೋರ್ಟ್
ಬೆಂಗಳೂರು: ಪ್ರೇಮ ಸಂಬಂಧದ ನೆಪದಲ್ಲಿ ಪ್ರೇಯಸಿಯ ಖಾಸಗಿ ಕ್ಷಣಗಳನ್... ಓದನ್ನು ಮುಂದುವರಿಸಿ
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭರ್ಜರಿ ದಾಳಿ ₹2.97 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂ... ಓದನ್ನು ಮುಂದುವರಿಸಿ
ಜಿಬಿಎ–ಬಿಬಿಎಂಪಿ ಚುನಾವಣೆ ಪೂರ್ವ ತಯಾರಿ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ವಿಶೇಷ ಸಭೆ
ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗ್ರೇಟರ್... ಓದನ್ನು ಮುಂದುವರಿಸಿ
ಬೆಂಗಳೂರು ಐಟಿ ಉದ್ಯೋಗಿಯ ಅಳಲು: ₹50,000 ಬಾಡಿಗೆ, ಆದರೆ ಐಷಾರಾಮಿ ಸೌಲಭ್ಯ ಬಳಸಲು ಸಮಯವಿಲ್ಲ
ಬೆಂಗಳೂರು: ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ದಿನದಿಂದ ದಿನಕ್ಕೆ ಏರ... ಓದನ್ನು ಮುಂದುವರಿಸಿ
ಬೆಳೆವಿಮೆ ಯೋಜನೆ ಜಾರಿಯಲ್ಲಿ ಕರ್ನಾಟಕ ನಂ.1: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವು ಮನರೇಗ... ಓದನ್ನು ಮುಂದುವರಿಸಿ
“ಮಹಾತ್ಮರನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಬಿಜೆಪಿ ಮತ್ತು ಕಾಂಗ್ರೆಸ್” – ಮುಖ್ಯಮಂತ್ರಿ ಚಂದ್ರು ಆಕ್ರೋಶ
ಪ್ರತಿ ದಿನ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಮುಖಪುಟಗಳಲ್ಲಿ ವಿಧಿ ಜಿ ರಾಮ್ ಜಿ ಯೋಜನೆಯ... ಓದನ್ನು ಮುಂದುವರಿಸಿ
ಗುಡಿಬಂಡಾ
ಚರಂಡಿ ಸ್ವಚ್ಛತೆ ಇಲ್ಲದೆ ನರಳುತ್ತಿರುವ ಗ್ರಾಮಸ್ಥರು – ಅಂಗನವಾಡಿ, ವಿದ್ಯುತ್ ಸಮಸ್ಯೆಗಳಿಗೂ ಉತ್ತರ ಇಲ್ಲ.
ಗುಡಿಬಂಡೆ: ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ... ಓದನ್ನು ಮುಂದುವರಿಸಿ