ಮದುವೆಯಾಗಿ ಮೂರು ತಿಂಗಳಲ್ಲೇ ಪತಿ ಕೊಲೆ: ಪ್ರಿಯಕರನ ಜೊತೆ ಸೇರಿ ಸಂಚು ರೂಪಿಸಿದ ಪತ್ನಿ ಬಂಧನ
ತುಮಕೂರು: ಜಿಲ್ಲೆಯ ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ನಡೆದ ಗುಜರಿ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಮದುವೆಯಾಗಿ ಕೇವಲ ಮೂರು ತಿಂಗಳು ಕಳೆದಿದ್ದ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಫರ್ಜಾನ (31), ಧನರಾಜ್ (24), ವೆಂಕಟೇಶ್ (24) ಮತ್ತು ದರ್ಶನ್ (24) ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಗುಜರಿ ವ್ಯಾಪಾರಿಯಾಗಿದ್ದ ಮನ್ಸೂರ್ ಪಾಷಾ ಕುಟುಂಬದವರ ನಿರ್ಧಾರದಂತೆ ಇದೇ ವರ್ಷದ ಜನವರಿಯಲ್ಲಿ ಫರ್ಜಾನ ಅವರನ್ನು ವಿವಾಹವಾಗಿದ್ದರು. ತಿಪಟೂರು ಪಟ್ಟಣದಲ್ಲಿ ವಾಸವಾಗಿದ್ದ ಮನ್ಸೂರ್ ಮಾರ್ಚ್ 4ರಂದು ಗುಜರಿ ಸಾಮಗ್ರಿ ತರಲು ಹೋಗಿ ನಾಪತ್ತೆಯಾಗಿದ್ದರು. ಬಳಿಕ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ತೋಟವೊಂದರಲ್ಲಿ ಅವರ ಶವ ಪತ್ತೆಯಾಗಿತ್ತು.
ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ ಪೊಲೀಸರು ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಮೊದಲಿಗೆ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರ ವಿಚಾರಣೆ ವೇಳೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ತನಿಖೆಯಲ್ಲಿ ತಿಳಿದುಬಂದಂತೆ ಫರ್ಜಾನ ಮತ್ತು ಧನರಾಜ್ ನಡುವೆ ಕಳೆದ ಏಳು ತಿಂಗಳಿನಿಂದ ಪ್ರೇಮ ಸಂಬಂಧ ಇತ್ತು. ಫರ್ಜಾನಗೆ ನಾಲ್ಕು ವರ್ಷಗಳ ಹಿಂದೆ ಮೊದಲ ವಿವಾಹವಾಗಿದ್ದರೂ ಅನಾರೋಗ್ಯದಿಂದ ಆಕೆಯ ಗಂಡ ಮೃತಪಟ್ಟಿದ್ದ. ನಂತರ ಒಂಟಿಯಾಗಿದ್ದ ಫರ್ಜಾನ ಅಕ್ಕನ ಮನೆಗೆಂದು ಚಿಕ್ಕಮಗಳೂರಿಗೆ ಹೋಗುತ್ತಿದ್ದ ವೇಳೆ ಸಹೋದರಿಯ ಮೂಲಕ ವೆಂಕಟೇಶ್ ಪರಿಚಯವಾಗಿದ್ದು, ಅವನ ಮೂಲಕ ಕ್ಯಾಟರಿಂಗ್ ಕೆಲಸಗಾರನಾಗಿದ್ದ ಧನರಾಜ್ ಪರಿಚಯವಾಗಿದ್ದ. ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು.
ಒಮ್ಮೆ ತಿಪಟೂರಿನ ರೈಲು ನಿಲ್ದಾಣದ ಬಳಿ ಇಬ್ಬರೂ ಸಿಕ್ಕಿಬಿದ್ದ ಬಳಿಕ ಕುಟುಂಬಸ್ಥರು ತರಾತುರಿಯಲ್ಲಿ ಫರ್ಜಾನಗೆ ಮನ್ಸೂರ್ ಪಾಷಾ ಜೊತೆ ವಿವಾಹ ಮಾಡಿಸಿದ್ದರು ಎಂದು ತಿಳಿದುಬಂದಿದೆ.
ಆದರೆ ವಿವಾಹದ ಬಳಿಕವೂ ಫರ್ಜಾನ ಧನರಾಜ್ ಜೊತೆಗಿನ ಸಂಪರ್ಕವನ್ನು ಕಡಿತಗೊಳಿಸಿರಲಿಲ್ಲ. ಹೊಸ ಸಿಮ್ ಖರೀದಿಸಿ ಮತ್ತೆ ಧನರಾಜ್ ಜೊತೆ ಸಂಪರ್ಕ ಬೆಳೆಸಿದ್ದಳು. ನಂತರ ಇಬ್ಬರೂ ಸೇರಿ ಮನ್ಸೂರ್ ಪಾಷಾವನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು.
ಯೋಜನೆಯಂತೆ ದರ್ಶನ್ ಮುಖಾಂತರ ಮಾರ್ಚ್ 4ರಂದು ಗುಜರಿ ವಸ್ತುಗಳಿವೆ ಎಂದು ಹೇಳಿ ಮನ್ಸೂರ್ ಪಾಷಾಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದರು. ಆತ ಬಂದ ತಕ್ಷಣ ಆರೋಪಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಕೊಲೆ ಬಳಿಕ ಆರೋಪಿಗಳು ಪರಾರಿಯಾಗಿದ್ದರೂ, ಮನ್ಸೂರ್ ಪಾಷಾಗೆ ದರ್ಶನ್ ಮಾಡಿದ ಫೋನ್ ಕಾಲ್ ಆಧರಿಸಿ ಪೊಲೀಸರು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಲಭ್ಯ – ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ: ಡಿಸಿ ಜಗದೀಶ.ಜಿ
ಬೆಂಗಳೂರು: ನಗರದಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಸಾಕಷ್ಟ... ಓದನ್ನು ಮುಂದುವರಿಸಿ
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರ್.ಕೆ.ಪುರಂ ಶಾಸಕ ಬೈರತಿ ಬಸವರಾಜ್‌ಗೆ ನ್ಯಾಯಾಲಯದಿಂದ ಜಾಮೀನು
ಬೆಂಗಳೂರು: ಭಾರೀ ಸಂಚಲನ ಮೂಡಿಸಿದ್ದ ಬಿಕ್ಲು ಶಿವ ಕೊಲೆ ಪ್ರಕರಣದಲ... ಓದನ್ನು ಮುಂದುವರಿಸಿ
1 ಗಂಟೆ ಒಳಗೆ ಬ್ಲಾಸ್ಟ್: ಬಸವಭವನಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ!
ಬೆಂಗಳೂರು: ನಗರದ ಬಸವಭವನ ಕಟ್ಟಡಗೆ ಸೈನೇಡ್ ಬಾಂಬ್ ಸ್ಫೋಟ ಮಾಡುವು... ಓದನ್ನು ಮುಂದುವರಿಸಿ
ಜಿಬಿಎ ವ್ಯಾಪ್ತಿಯಲ್ಲಿ 441 ಹೊಸ ಶೌಚಾಲಯಗಳ ನಿರ್ಮಾಣ – ಡಿ. ಕೆ. ಶಿವಕುಮಾರ್ ಪ್ರಕಟಣೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 388... ಓದನ್ನು ಮುಂದುವರಿಸಿ
ರಾಜ್ಯ ಸರ್ಕಾರ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕುತ್ತಿರುವುದು ಸುಳ್ಳಲ್ಲ – ಬಿ. ವೈ. ವಿಜಯೇಂದ್ರ ಟೀಕೆ
ಬೆಂಗಳೂರು: 2026-27ನೇ ಸಾಲಿನ ರಾಜ್ಯ ಬಜೆಟ್ ಜನರ ನಿರೀಕ್ಷೆಗಳಿಗೆ... ಓದನ್ನು ಮುಂದುವರಿಸಿ
ಅಡುಗೆ ಅನಿಲ ಪೂರೈಕೆ ವ್ಯತ್ಯಯ: ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ತಾತ್ಕಾಲಿಕ ಸ್ಥಗಿತ -ಟಿ. ಎ. ಶರವಣ
ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ... ಓದನ್ನು ಮುಂದುವರಿಸಿ
ತುಂಗಭದ್ರ ಅಚ್ಚುಕಟ್ಟು ರೈತರ ಸಂಕಷ್ಟ: 33 ಗೇಟ್‌ಗಳನ್ನು ಶೀಘ್ರ ಅಳವಡಿಸಲು ಟಿ. ಎ. ಶರವಣ ಆಗ್ರಹ
ಬೆಂಗಳೂರು: ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರ ಸಂಕಷ್ಟದ ಕುರಿ... ಓದನ್ನು ಮುಂದುವರಿಸಿ
ಬಂಡೀಪುರ–ನಾಗರಹೊಳೆಯಲ್ಲಿ ಸಫಾರಿ ತಾತ್ಕಾಲಿಕ ಬಂದ್: ಸಚಿವ ಈಶ್ವರ್ ಬಿ. ಖಂಡ್ರೆ ಸ್ಪಷ್ಟನೆ
ಬೆಂಗಳೂರು/ಚಾಮರಾಜನಗರ: ಕಳೆದ ನವೆಂಬರ್‌ನಲ್ಲಿ ಬಂಡೀಪುರ ರಾಷ್ಟ್ರೀ... ಓದನ್ನು ಮುಂದುವರಿಸಿ
ಕೇರಳ ಸರ್ಕಾರದ ಲೋಗೋ ಬಳಸಿ ನಕಲಿ ಲಾಟರಿ! 15 ಲಕ್ಷ ಬಹುಮಾನ ಎಂಬ ಮೆಸೇಜ್‌ಗೆ ಪ್ರತಿಕ್ರಿಯಿಸಬೇಡಿ
ಗದಗ: ಜಿಲ್ಲೆಯಲ್ಲಿ ನಕಲಿ ಲಾಟರಿ ಯೋಜನೆಯ ಹೆಸರಿನಲ್ಲಿ ಜನರನ್ನು ಮ... ಓದನ್ನು ಮುಂದುವರಿಸಿ
ಅಡುಗೆ ಅನಿಲ ಕೊರತೆ ಕುರಿತು ಸಂಸತ್ತಿನಲ್ಲಿ ಮಾತನಾಡಲಿ: ಡಿ.ಕೆ. ಶಿವಕುಮಾರ್
ಬೆಂಗಳೂರು: ಬೇರೆ ವಿಚಾರಗಳಲ್ಲಿ ಮಾತನಾಡುವ ಸಂಸದರು ಅಡುಗೆ ಅನಿಲ ಕ... ಓದನ್ನು ಮುಂದುವರಿಸಿ