ಕೋರಮಂಗಲ ಪಾಸ್‌ಪೋರ್ಟ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ: ‘ಕಸಬ್’ ಮರಣದಂಡನೆ ಉಲ್ಲೇಖ
ಬೆಂಗಳೂರು: ನಗರದಲ್ಲಿ ಹುಸಿ ಬಾಂಬ್ ಬೆದರಿಕೆಯ ಸರಣಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಇಂದು ಕೋರಮಂಗಲ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ತಮಿಳು ಭಾಷೆಯಲ್ಲಿ ಬಾಂಬ್ ಬೆದರಿಕೆ ಸಂದೇಶ ಇ-ಮೇಲ್ ಮೂಲಕ ಕಳುಹಿಸಲಾಯಿತು. ಸಂದೇಶದಲ್ಲಿ, “ಅಜ್ಮಲ್ ಕಸಬ್‌ಗೆ ಮರಣದಂಡನೆ ವಿಧಿಸಿರುವ ನಿಮ್ಮನ್ನು ಬಿಡುವುದಿಲ್ಲ. ಕಚೇರಿಯಲ್ಲಿ ಇರಿಸಿರುವ ಸ್ಫೋಟಕಗಳು ಕೆಲವೇ ಹೊತ್ತಿನಲ್ಲಿ ಸ್ಫೋಟಗೊಳ್ಳಲಿವೆ” ಎಂಬುದು ಉಲ್ಲೇಖವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಕೋರಮಂಗಲ ಪೊಲೀಸ್ ಠಾಣೆ ಸಿಬ್ಬಂದಿ, ಬಾಂಬ್ ಪತ್ತೆ ತಂಡ ಮತ್ತು ಶ್ವಾನ ದಳ ತಕ್ಷಣ ಸ್ಥಳಕ್ಕೆ ದೌಡಾಯಿಸಿದರು. ಕಚೇರಿಯಲ್ಲಿದ್ದ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಹೊರಗೆ ಕಳುಹಿಸಿ ಸಂಪೂರ್ಣ ತಪಾಸಣೆ ನಡೆಸಲಾಯಿತು. ಕೆಲಕಾಲ ಪಾಸ್‌ಪೋರ್ಟ್ ವಿತರಣಾ ಸೇವೆ ತಾತ್ಕಾಲಿಕ ಸ್ಥಗಿತಗೊಂಡಿತ್ತು.
ಸುದೀರ್ಘ ಪರಿಶೀಲನೆಯ ಬಳಿಕ ಕಟ್ಟಡದಲ್ಲಿ ಯಾವುದೇ ಸ್ಫೋಟಕ ವಸ್ತುಗಳಿಲ್ಲವೆಂದು ಖಚಿತಗೊಂಡಿದ್ದು, ಇದೊಂದು ಹುಸಿ ಬೆದರಿಕೆ ಸಂದೇಶವೆಂದು ಪೊಲೀಸರಿಂದ ಸ್ಪಷ್ಟಪಡಿಸಲಾಗಿದೆ. ಬಳಿಕ ಭದ್ರತೆ ಖಚಿತಪಡಿಸಿಕೊಂಡು ಹಂತ ಹಂತವಾಗಿ ಸಾರ್ವಜನಿಕರನ್ನು ಕಚೇರಿಗೆ ಪ್ರವೇಶಿಸಲು ಅನುಮತಿ ನೀಡಲಾಯಿತು.
ಇ-ಮೇಲ್ ಯಾವ ಸ್ಥಳದಿಂದ ಕಳುಹಿಸಲಾಗಿದೆ ಮತ್ತು ಇದರ ಹಿಂದೆ ಇರುವ ಉದ್ದೇಶವೇನು ಎಂಬುದರ ಕುರಿತು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸ್ಯಾಂಡಲ್‌ವುಡ್‌ಗೆ ಶಾಕ್: ಸಿನಿಮಾ ನಟಿ ಕೊಲೆ ಪ್ರಕರಣದಲ್ಲಿ ಅರೆಸ್ಟ್
ಬೆಂಗಳೂರು: ಬೆಳ್ಳಿತೆರೆಯಲ್ಲಿ ಮಿಂಚುವ ಕನಸು ಕಂಡಿದ್ದ ನಟಿ ಈಗ ಭೀ... ಓದನ್ನು ಮುಂದುವರಿಸಿ
ರೇಣುಕಾ ಸ್ವಾಮಿ ಪ್ರಕರಣ: ಸಾಕ್ಷ್ಯ ತಿದ್ದುಪಡಿ ಆರೋಪಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ತಿರುಗೇಟು
ಬೆಂಗಳೂರು: ರೆಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿ ತ... ಓದನ್ನು ಮುಂದುವರಿಸಿ
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ; ನ್ಯಾಯಾಲಯ ಆವರಣ ತೆರವು, ಬಿಗಿ ಪೊಲೀಸ್ ಬಂದೋಬಸ್ತ್
ಕಲಬುರಗಿ: ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದ... ಓದನ್ನು ಮುಂದುವರಿಸಿ
‘ಆಪ್ಕಿ ಇವಿ’ ಶೋರೂಂ ವಂಚನೆ: 3,250 ಗ್ರಾಹಕರಿಗೆ ಲೋನ್ ಜಾಲದಲ್ಲಿ ಸೆರೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಲೆಕ್ಟ್ರಿಕ್ ಬೈಕ್ ವಿತರಣೆ ನೆ... ಓದನ್ನು ಮುಂದುವರಿಸಿ
ಸಿಸಿಬಿ ಮೆಗಾ ದಾಳಿ: ಅಪಾರ್ಟ್‌ಮೆಂಟ್‌ನಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಬೆಂಗಳೂರು: ನಗರದಲ್ಲಿ ಡ್ರಗ್ಸ್ ದಂಧೆಕೋರರಿಗೆ ಭಾರೀ ಹೊಡೆತ ಬಿದ್ದ... ಓದನ್ನು ಮುಂದುವರಿಸಿ
ಹೊಳೆನರಸೀಪುರ
ಕ್ರೂರ ಚಾಲಕನ ದೌರ್ಜನ್ಯ :ನಿಧಾನವಾಗಿ ಕಾರ್ ಓಡಿಸು ಎಂದದ್ದಕ್ಕೆ: ಹಾಸನದಲ್ಲಿ ಯುವಕನ ಬರ್ಬರ ಹತ್ಯೆ
ಹಾಸನ: ಹೊಳೆನರಸೀಪುರ ತಾಲೂಕು ಸೂರನಹಳ್ಳಿ ಗ್ರಾಮ ನಲ್ಲಿ ರಸ್ತೆ ಪಕ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಕಾರಲ್ಲಿದ್ದ ನವ ದಂಪತಿಗೆ ಬೆದರಿಕೆ: ಸುಲಿಗೆ ಮಾಡಿದವರನ್ನು ಬೆನ್ನುಹತ್ತಿ ಬಂಧಿಸಿದ ಗ್ರಾಮೀಣ ಪೊಲೀಸ್
ಹುಬ್ಬಳ್ಳಿ: ಹುಬ್ಬಳ್ಳಿ ತಾಲ್ಲೂಕಿನ ರೇವಡಿಹಾಳ ಗ್ರಾಮ ಬಳಿ ಖಾಲಿ... ಓದನ್ನು ಮುಂದುವರಿಸಿ
ರಾತ್ರಿ ಊಟವೇ ಅಂತಿಮವಾಯ್ತು: ನಡು ರಾತ್ರಿ ದಾಳಿ: ಊಟಕ್ಕೆ ಬಂದಿದ್ದ ವ್ಯಕ್ತಿ ಹತ್ಯೆ
ಬೆಂಗಳೂರು: ನಗರದ ಬಸವೇಶ್ವರನಗರದ ಶಿವನಹಳ್ಳಿಯಲ್ಲಿ ವ್ಯಕ್ತಿಯೊಬ್ಬ... ಓದನ್ನು ಮುಂದುವರಿಸಿ
ನಾಲ್ಕು ಅಂತಸ್ತಿನ ಮನೆಯಲ್ಲಿ ಬೆಂಕಿ: ಪತ್ನಿ ಸಾವು, ಕುಟುಂಬದ ಮೂವರು ಪಾರು
ಬೆಂಗಳೂರು: ನಗರದ ಗಾಯತ್ರಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ... ಓದನ್ನು ಮುಂದುವರಿಸಿ
ಮಡಿಕೇರಿ
ಮಾನವ–ಆನೆ ಸಂಘರ್ಷ ಮತ್ತೆ ತೀವ್ರ: 17ರ ಹರೆಯದ ವಿದ್ಯಾರ್ಥಿನಿ ದುರ್ಮರಣ
ಮಡಿಕೇರಿ : ತಾಲೂಕಿನ ಬೆಟ್ಟತೂರು ಗ್ರಾಮದಲ್ಲಿ ಶನಿವಾರ ಸಂಜೆ ಕಾಡಾ... ಓದನ್ನು ಮುಂದುವರಿಸಿ