ಕೊಪ್ಪಳದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ : ಕಿಮ್ಸ್ ಆಡಳಿತಾಧಿಕಾರಿ ಬಿ.ಕಲ್ಲೇಶ ಮನೆ ಶೋಧ

ಕೊಪ್ಪಳ  :  ಕೊಪ್ಪಳ ತಾಲೂಕು ಭಾಗ್ಯನಗರ ಪಟ್ಟಣದಲ್ಲಿನ ನವಚೇತನ ಶಾಲೆ ಮತ್ತು ನವಚೇತನ ವಿಜ್ಞಾನ ಕಾಲೇಜು, ಅಲ್ಲೇ ಇರುವ ಕಲ್ಲೇಶ ಮನೆ ಮತ್ತು ಅವರ ಅತ್ತೆ ಮನೆ ಹಾಗೂ ಕಲ್ಲೇಶ ತವರು ಗ್ರಾಮ ಯಲಬುರ್ಗಾ ತಾಲೂಕಿನ ಚಿಕ್ಕ ಮನ್ನಾಪೂರ ಗ್ರಾಮದ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಕೊಪ್ಪಳ ಮೆಡಿಕಲ್ ಕಾಲೇಜು ಸೇರಿ ಒಟ್ಟು 9 ಕಡೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಲೋಕಾಯುಕ್ತದ ರಾಯಚೂರು ಎಸ್ಪಿ ಮಾರ್ಗದರ್ಶನದಲ್ಲಿ ಲೋಕಾ ಡಿವೈಎಸ್ಪಿ ರಾಯಚೂರು ಎಸಿ ಮೊ ಲೋಕೇಶ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

 

ಕೊಪ್ಪಳ ಜಿಲ್ಲೆಯ ಸುತ್ತಲಿನ ವಿಜಯನಗರ, ಗದಗ, ಧಾರವಾಡ, ರಾಯಚೂರು, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆ ಸೇರಿ ಒಟ್ಟು 30ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಿರಂತರವಾಗಿ 12 ಗಂಟೆ ತನಿಖೆ ನಡೆದಿದೆ. ದಾಳಿ ವೇಳೆ ಅಪಾರ ಪ್ರಮಾಣದ ಹಣ, ಆಸ್ತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ವಾಲ್ಮೀಕಿ ನಿಗಮದ ಅಧಿಕಾರಿ ಆಗಿದ್ದ ಬಿ. ಕಲ್ಲೇಶ ಈ ಹಿಂದೆ ವಾಲ್ಮೀಕಿ ನಿಗಮದ ಹಗರಣದಲ್ಲಿ ಸುದ್ದಿ ಆಗಿದ್ದ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಇಡಿ ಅಧಿಕಾರಿಗಳ ವರದಿ ಆಧರಿಸಿ ಬಿ.ಕಲ್ಲೇಶ ಅಮಾನತು ಮಾಡಲಾಗಿತ್ತು. ನಂತರ ಬಿ.ಕಲ್ಲೇಶ, ಇಡಿ ಅಧಿಕಾರಿಗಳ ಮೇಲೆಯೇ ಆರೋಪ ಮಾಡಿದ್ದರು. ಇಡಿ ಅಧಿಕಾರಿಗಳು, ಸಿಎಂ ಹೆಸರು ಹೇಳುವಂತೆ ನನಗೆ ಟಾರ್ಚರ್ ನೀಡಿದ್ದರು ಎಂದು ಬಿ. ಕಲ್ಲೇಶ ದೂರು ನೀಡಿದ್ದ. ಬಿ.ಕಲ್ಲೇಶ ಕೊಪ್ಪಳ ರ ಕೊಪ್ಪಳ ಜಿಲ್ಲೆಯಲ್ಲಿ ಎಸ್ಟಿ, ಒಬಿಸಿ ಹಾಗೂ ಸಮಾಜ ಕಲ್ಯಾಣ ೧ ಇಲಾಖೆಯ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ವೇಳೆಯೂ ಕಲ್ಲೇಶ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು.

 

ಹಣ, ಆಭರಣ ಪತ್ತೆ

ಒಟ್ಟು 9 ಕಡೆ ದಾಳಿ ಮಾಡಿರುವ ಅಧಿಕಾರಿಗಳು ಸುಮಾರು 28.24 ಲಕ್ಷ ಮೌಲ್ಯದ ಏಳು ನಿವೇಶ, ಕನಿಷ್ಠ 10 ಕೋಟಿ ರೂ. ಬೆಲೆಯ ಮನೆ, ಶಾಲೆ ಮತ್ತು ಹಾಸ್ಟೆಲ್ ಕಟ್ಟಡ, ಸುಮಾರು 3.23 ಕೋಟಿ ಮೌಲ್ಯದ 31.25 ಎಕರೆ ಕೃಷಿ ಭೂಮಿ, ಮನೆಯಲ್ಲಿ 37 ಲಕ್ಷ ರೂ. ನಗದು, ಒಟ್ಟು 1104 ಗ್ರಾಂ ಚಿನ್ನಾಭರಣ, ಮೂರೂವರೆ ಕೆಜಿ ಬೆಳ್ಳಿ ಪತ್ತೆಯಾಗಿದೆ. ಬೆಳ್ಳಿ ಹಾಗೂ ಬಂಗಾರದ ಮೌಲ್ಯವೇ ಅಂದಾಜು 1.13 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಜೊತೆಗೆ 38.60 ಲಕ್ಷ ರೂ. ಬೆಲೆಯ ಕಾರು, ಒಂದು ಬೈಕ್, ಬ್ಯಾಂಕ್ ಖಾತೆಯಲ್ಲಿ 61 ಲಕ್ಷ ರೂ. ನಗದು ಎಲ್ಲವೂ ಸೇರಿ ಸುಮಾರು 10.46 ಕೋಟಿ ಆಸ್ತಿಯ ಮಾಹಿತಿ ಲಭ್ಯವಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. ತಪಾಸಣಾ ಕಾರ್ಯ ಮುಗಿಸಿದ ಬಳಿಕ ಇಲ್ಲಿನ ಲೋಕಾಯಕ್ತ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ತಮ್ಮ ಸಂಬಂಧಿಕರ ಹೆಸರಲ್ಲಿ ಜಿಲ್ಲೆಯ ವಿವಿಧ ಕಡೆ ಜಮೀನು ಹೊಂದಿದ್ದಾರೆ. ಇನ್ನು ನವ ಚೇತನ ಕಾಲೇಜು ಕೂಡ ಪತ್ನಿ ಮತ್ತು ಸಂಬಂಧಿಕರ ಹೆಸರಲ್ಲಿ ಇವೆ. ನವ ಚೇತನ ಕಾಲೇಜು ಒಂದೇ ಸುಮಾರು 10 ಕೋಟಿ ಬೆಲೆ ಬಾಳುವ ಕಟ್ಟಡ ಮತ್ತು ಜಾಗ ಹೊಂದಿದೆ ಎಂದು ತಿಳಿದು ಬಂದಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1
ಮೈಸೂರು

ನಂಜನಗೂಡು

ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ಅಟ್ಯಾಕ್...ಮಗು ಸೇರಿ ಮೂವರಿಗೆ ಗಂಭೀರ ಗಾಯ

ನಂಜನಗೂಡು : ಜಮೀನಿಗೆ ಬೈಕ್ ನಲ್ಲಿ ತೆರಳುತ್ತಿದ್ದ ರೈತ ದಂಪತಿಗಳ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ತುಮಕೂರು

ಕುಣಿಗಲ್

ಹುಡುಗಿ ವಿಚಾರಕ್ಕೆ ಕಿರಿಕ್ - ನಡು ರಸ್ತೆಯಲ್ಲಿ ಲಾಂಗು, ಮಚ್ಚು ಹಿಡಿದು ಹೊಡೆದಾಟ!

ತುಮಕೂರು: ಯುವತಿಯ ವಿಚಾರಕ್ಕೆ ಎರಡು ಗುಂಪುಗಳ ನುಡವೆ ಮಾರಾಮಾರಿ ನ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಬಸ್‌ಗಳಲ್ಲಿ ತಂಬಾಕು ಉತ್ಪನ್ನ ಜಾಹೀರಾತಿಗೆ ನಿರ್ಬಂಧ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ, ಬಿಎಂಟ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ತಾಲ್ಲೂಕು

ಮನರೇಗಾ ಮರುಜಾರಿಗೆ ಆಗ್ರಹಿಸಿ ಚನಕೆ, ಬಾಂಡ್ಲಿ, ಸುತ್ತಿಗೆ ಹಿಡಿದು ವಿನೂತನ ಪ್ರತಿಭಟನೆ

ಬೆಂಗಳೂರು : ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ರಾಜ್ಯ ಮಹಿಳಾ ಕಾ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ತುಮಕೂರು

ನಿವೇಶನ ಸರ್ವೆಗೆ ಹಿರಿಯ ನಟಿ ಜಯಶ್ರೀ ಅಲೆದಾಡಿಸಿದ ಭೂಮಾಪನ ಅಧಿಕಾರಿ

ತುಮಕೂರು: ನಿವೇಶನ ಸಮೀಕ್ಷೆಯ ವಿಚಾರವಾಗಿ ಹಿರಿಯ ರಂಗಕರ್ಮಿ, ರಾಜ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೀದರ್

ಹುಮನಾಬಾದ

ಬೀದರ್ ನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ, ತನಿಖೆಗೆ ಖಂಡ್ರೆ ಆದೇಶ

ಬೀದರ್:  ಹುಮ್ನಾಬಾದ್ ಸಮೀಪ ಅನುಮಾನಾಸ್ಪದ ವಸ್ತು ಸ್ಫೋಟಗೊಂ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ರಾಜ್ಯ ಸರ್ಕಾರಿ ನೌಕರರು ತಿಂಗಳ ಮೊದಲ ಶನಿವಾರ `ಖಾದಿ ಬಟ್ಟೆ' ಧರಿಸೋದು ಕಡ್ಡಾಯ : ಸರ್ಕಾರ ಮಹತ್ವದ ಆದೇಶ

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಪ್ರತಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಚಿಕ್ಕಬಳ್ಳಾಪುರ

ಶಿಡ್ಲಘಟ್ಟ

ನಾನು ಕಳ್ಳತನ ಮಾಡಿಲ್ಲ, ಕೊಲೆ ಮಾಡಿಲ್ಲ ಶಿಡ್ಲಘಟ್ಟದ ಜನರಿಗಾಗಿ ತ್ಯಾಗ ಮಾಡಿದ್ದೇನೆ, ಬೇಲ್ ಪಡೆದ ರಾಜೀವ್ ಗೌಡ ಹೊಸ ವರಸೆ

ಚಿಕ್ಕಬಳ್ಳಾಪುರ: ಬ್ಯಾನರ್ ತೆರವು ವಿಚಾರಕ್ಕೆ ಸಂಬಂಧಪಟ್ಟಂತೆ ಶಿಡ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಹೋಂ ವರ್ಕ್ ಮಾಡಿಲ್ಲ ಎಂದು 4ನೇ ತರಗತಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ: ಪೋಷಕರಿಗೆ ಹೇಳಿದರೆ ಕತ್ತು ಹಿಸುಕುತ್ತೇನೆ ಎಂದು ಬೆದರಿಕೆ

ಬೆಂಗಳೂರು : ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ರದ್ದಿಗೆ ವಿರೋಧ. ಸಿಪಿಎಂ ವತಿಯಿಂದ ಉಪವಾಸ ಸತ್ಯಾಗ್ರಹ.

ಗುಡಿಬಂಡೆ: ಕೇಂದ್ರ ಸರ್ಕಾರವು ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1